00659.ಯಾರೋ ಕಟ್ಟಿದ ಭೂಮಿ…….(01/02)


00659.ಯಾರೋ ಕಟ್ಟಿದ ಭೂಮಿ…….(01/02)
___________________________________
(ಯಾರೋ ಕಟ್ಟಿದ ಭೂಮಿ ದಿಗಿಲುಟ್ಟಿಸಿ ಸ್ವಾಮಿ)

  
(Picture source from : https://en.m.wikipedia.org/wiki/File:The_Earth_seen_from_Apollo_17.jpg)

ಯಾರೋ ಕಟ್ಟಿಸಿಬಿಟ್ಟ ಭೂಮಿ
ದಿಗಿಲುಟ್ಟಿಸಿ ಕಳವಳ ಸ್ವಾಮಿ
ಇರುವುದೆ ಇದ್ದಂತೆ ಆಸಾಮಿ ?
ಹೊತ್ತೋಗದೆಲೇ ತ್ಸುನಾಮಿ! ||

ಈಚೆಗೆ ಜಾಗತಿಕ ಶಾಖವಂತೆ
ಇಂಗಾಲದ ಹೆಜ್ಜೆ ಗುರುತಂತೆ
ಹಸಿರುಮನೆ ಪರಿಣಾಮ ಕಥೆ
ನಮಗೋ ದಿನ ದಿನದ ಚಿಂತೆ 😔||

ಆತಂಕವಾದಿಗಳ ಭೀತಿ ಮದ
ಎಲ್ಲಾಗುವುದೊ ಸ್ಪೋಟ ಸದಾ
ಭೀಕರತೆ ಸಂತೆ ಒಳಗಿಟ್ಟಪಾದ
ಗುಟುಕು ಗುಟುಕಾಗಿ ನುಂಗಿದ 😟||

ಪ್ಲಾಸ್ಟಿಕ್ಕುಮಯ ಜಗ ಹೃದಯ
ಆಧುನಿಕ ನಾಗರಿಕತೆ ಸಮಯ
ವಿದ್ಯುನ್ಮಾನ ತ್ಯಾಜ್ಯ ಪರಿಚಯ
ಪರಿಸರವೆ ಅಡವಿಟ್ಟಾ ವಿಷಯ😒 ||

ಎಸೆದಾಟದ ಕಸ ಕುಪ್ಪೆ ಗುಪ್ಪೆ
ಬೆಳೆಯುತಲೆ ತಟವಟ ತಪ್ಪೆ
ನಮ್ಮಾತ್ಮವಂಚನೆ ಮನ ಕಪ್ಪೆ
ಹೊಸತ ರೋಗಾಣು ಬಂದಪ್ಪೆ 😭||

– ನಾಗೇಶ ಮೈಸೂರು

ಕವಿ ಭಾವ: ಯಾರೊ ಪುಣ್ಯಾತ್ಮರು ಕಟ್ಟ್ಕೊಟ್ಟು ಹೋದ ಭೂಮಿಯಲ್ಲಿ ನಾವು ಜೀವನ ನಡೆಸಲು ಏನೆಲ್ಲ ಅಡ್ಡಿ ಆತಂಕಗಳು! ಕೆಲವು ಮಾನವ ಪ್ರೇರಿತ ಹಾಗೂ ಪೋಷಿತವಾದರೆ, ಇನ್ನು ಕೆಲವು ಪ್ರಕೃತಿ, ನಿಸರ್ಗದ ಆವೇಶದುರಿತ. ಅಂತ ಕೆಲವು ಆತಂಕಗಳ ಪಟ್ಟಿ – ಯಾರೊ ಕಟ್ಟಿಸಿದ ಭೂಮಿ….

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

2 thoughts on “00659.ಯಾರೋ ಕಟ್ಟಿದ ಭೂಮಿ…….(01/02)”

  1. ಹೌದು..ನಾವು ಕಷ್ಟಪಟ್ಟು ಕಟ್ಟಿದ್ದಾದರೆ ಕಾಪಾಡಿಕೊಳ್ಳುವ ಎಚ್ಚರಿಕೆ ಇರುತ್ತಿತ್ತು. ನೀವು ಹೇಳಿದ ಎಲ್ಲಾ ಸಮಸ್ಯೆಗಳು ನಮ್ಮ ಬೇಜವಾಬ್ದಾರಿತನದಿಂದ ಸೃಷ್ಟಿಯಾಗಿರುವವು… ಅದಕ್ಕೆ ಬೆಲೆ ನಮ್ಮ ಮಕ್ಕಳು ತೆರುವ ಸ್ಥಿತಿ.
    ಚನ್ನಾಗಿದೆ

    Liked by 1 person

    1. ನಿಜ ಇವೆಲ್ಲಾ ಮನುಕುಲದ ಸ್ವಯಂಕೃತಾಪರಾಧಗಳೆ. ನಮ್ಮ ಮುಂದುನ ಪೀಳಿಗೆ ಇದರ ದಂಡ ಕಟ್ಟುವಂತಾಗುವುದು ಇಲ್ಲಿನ ದುರಂತ. ಹಾಗಾಗದಂತೆ ಏನಾದರು ದಾರಿ ಕಂಡೀತೆ ? ಎನ್ನುವುದು ಮನದಾಸೆಯ ಪಲುಕು. ಮೆಚ್ಚುಗೆಗೆ ಧನ್ಯವಾದಗಳು 🙂

      Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s