00667. ಡಾಕ್ಟರ್ ರಾಜ್ !


00667. ಡಾಕ್ಟರ್ ರಾಜ್ !
__________________

ಏಪ್ರಿಲ್ ೨೪ ರಾಜ್ ಹುಟ್ಟಿದ ಹಬ್ಬದ ನೆನಪಿಗಾಗಿ ಕೆಲವು ಹಾಯ್ಕುಗಳು.


(೦೧)
ಹಿಂದೆಯೂ ಇಲ್ಲ
ಮುಂದೂ ಇರುವುದಿಲ್ಲ
– ಡಾಕ್ಟರ ರಾಜ್ !

(೦೨)
ರಾಜ್ ಹೆಸರು
ಭದ್ರತೆ ಕನ್ನಡಕೆ.
– ಭಾಗ್ಯವಂತರು !

(೦೩)
ವೀರ ಕೇಸರಿ
ಸ್ವಾಭಿಮಾನದ ನಲ್ಲೆ
– ಬಾಲ್ಯದಿಂದಲೆ !

(೦೪)
ಕಠಾರಿ ವೀರ
ಹಾಯಾದ ಈ ಸಂಗಮ
– ಪೂರ್ವ ಸುಕೃತ !

(೦೫)
‘ನಾನಿರುವುದೆ
ನಿಮಗಾಗಿ’ ಹಾಡಿದ
– ಸ್ವರ ಮಯೂರ !

(೦೬)
ಬೆಂಕಿಯ ಚೆಂಡು
ಬಂಕಾಪುರದ ಗಂಡು
– ಇನ್ನೂ ಜೀವಂತ !

(೦೭)
‘ನಾನು’ ಹೋದರೆ
ಹೋದೆನು ಅಂದೆ ನಿಜ.
– ಹೋಗೆ ಬಿಟ್ಟೆಯಾ?

(೦೮)
ಇದ್ದರೂ ಲಕ್ಷ
ಹೋದರೂ ಲಕ್ಷ ಜನ
-ಸದಾ ಜೀವಂತ!

(೦೯)
ಬಭ್ರುವಾಹನ
ಅರ್ಜುನನ ಕಡಿದ !
– ಎಲ್ಲವೂ ನೀನೆ !!

(೧೦)
ಪುರದ ಪುಣ್ಯ
ಪುರುಷ ರೂಪದಲಿ..
– ಸರ್ವಾಂತರ್ಯಾಮಿ !

– ನಾಗೇಶ ಮೈಸೂರು

(Picture source: https://en.m.wikipedia.org/wiki/File:Actor_Rajkumar.jpg)