00670. ನಾನೆಂಬ ಕಣರೂಪಿ ಮೊತ್ತ


00670. ನಾನೆಂಬ ಕಣರೂಪಿ ಮೊತ್ತ
_________________________


(Picture source: https://en.m.wikipedia.org/wiki/File:Helium_atom_QM.svg)

ನಾನೆಂಬ ಕಣರೂಪಿ ಮೊತ್ತ
ಅಣುಅಣು ಕಣವಾದ ಸಮಷ್ಟಿ
ನೋಡೀ ಅಚ್ಚರಿ ಜಗ ನಿಯಮ
ಕೈ ಕಾಲು ಮನ ಹೃದಯ ಸಂಗಮ !

ಯಾರೋ ಕಲಸಿಟ್ಟನ್ನ ಸೊಬಗು
ಯಾವ ಸಂಭ್ರಮದ ಬೆಡಗು ಬಸಿದು
ಸೋಸಿ ಬಗ್ಗಡ ಬೆರೆಸೋ ಮದ್ದೇನೊ ಕಾಣೆ
ಜೀವ ರೂಪಲಿ ಭೌತಿಕ ಲೌಕಿಕ ಜಾಗರಣೆ !

ಅಲೌಕಿಕ ಅಭೌತಿಕ ಒಳಗಿಟ್ಟ ಗುಟ್ಟು
ಅಂತರಂಗ ಬಹಿರಂಗದ ಒಗಟಲಿ ಹೊಸೆದು
ಕುಣಿಸೊ ಕುಣಿದಾಡಿಸೊ ಒಳಗ ಹೊರಗಣ ಜಾಲ
ಇದ್ದೂ ಇರದಂತೆ ಕಡಿವಾಣ ಬಡಿದಾಟದ ಕಾಲ !

ಕದನ ಕುತೂಹಲ ಮನ ಒಂದೇ ಏನು ಪ್ರತಿ ಕಣ ?
ಜೀವ ನಿರ್ಜೀವ ರೂಪದ ವಿಶ್ವ ಸಮಗ್ರತೆ ಪಾಕ
ನಾನಾರು, ನಾನೆಲ್ಲಿ ನೀಲಿ ಗಗನದ ನೀಲಿ ಕೆಂಪು ಮಣ್ಣಲ್ಲಿ ?
ಹಾರುವ ಹಕ್ಕಿ ಬಿಚ್ಚಿದ ರೆಕ್ಕೆ ಒಳಗೇನೊ ಬಿಡಿಸದ ಒಗಟಲ್ಲಿ..

ಹೊರಟ ಯಾತ್ರೆ ಹುಡುಕಾಟ ಕಣಕೂಟದ ಜಂಜಾಟ
ಪ್ರತಿ ಕಣದ ಗಮನ ಎತ್ತಲೋ, ಒಂದಾಗಿಸೊ ಕಸರತ್ತಲಿ
ಒಂದಾಗುವುದೆ ನಾನು, ನಾನೆಂಬ ಅಪರಿಚಿತ ಅತಿಥಿ
ನನ್ನರಿವಾಗಿಸಿ ನನ್ನನ್ನೆ, ಬಿಡಿಸಿಟ್ಟು ತೊಳೆಯಂತೆ ಮುಕುತಿ..

– ನಾಗೇಶ ಮೈಸೂರು

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

6 thoughts on “00670. ನಾನೆಂಬ ಕಣರೂಪಿ ಮೊತ್ತ”

  1. ಧನ್ಯವಾದಗಳು 😊. ಪರದಾಟವೊ ಹೊಡೆದಾಟವೊ ಹೋರಾಟವೊ – ಒಟ್ಟಾರೆ ಅದು ನಿರಂತರವೆನ್ನುವುದು ಸತ್ಯ. ಅದರ ವ್ಯಾಪ್ತಿಯನ್ನು ಕಣರೂಪಕ್ಕೆ ಬಿಡಿಬಿಡಿಯಾಗಿ ಅನ್ವಯಿಸಿದಾಗ ಅದೆಷ್ಟು ಗೊಂದಲ, ದ್ವಂದ್ವಗಳ ಮೊತ್ತ ಅನಿಸಿದಾಗ ಮೂಡಿದ ಪದಭಾವವಿದು. ಕುತೂಹಲವೆಂದರೆ ಪ್ರತಿಕಣದಲ್ಲೂ ಇದೆ ಭಾವವಿರುತ್ತದಾ ? ಅಥವಾ ಒಟ್ಟಾರೆ ನಿವ್ವಳ ಮೊತ್ತ ಮಾತ್ರ ಹೊರಗೆ ಪ್ರಕಟವಾಗುತ್ತದಾ ? ಎನ್ನುವುದು. 😊

   Liked by 1 person

   1. “ನಾನು” ಎಂಬುದೆ ಕಗ್ಗಂಟು
    ದೇಹ ನಾನಲ್ಲ
    ಉಸಿರು ನಾನಲ್ಲ
    ಯಾರು ನೀನು?
    ಪ್ರತಿ ಭಾವನೆಗಳ
    ಕಣ ಕಣದಲ್ಲೂ
    ಮನಸ್ಸಿನ ತಾಕಲಾಟ
    ಸುಃಖ ದುಃಖಗಳ ಮೂಲ
    ಸಂತೃಪ್ತಿ ಎಂಬುದು
    ತಿರುಕನ ಕನಸು!

    ಮನಸ್ಸಿನ ವ್ಯಾಪ್ತಿ ಅನಂತ. ಬಿಡಿಸುವ ಪ್ರಯತ್ನ ಅಸಾಧ್ಯ. Super ಕವನ👌💐

    Liked by 1 person

    1. ತಿರುಕನ ಕನಸು ಅಂತ ಗೊತ್ತಿದ್ದೂ, ಬಿಡದೆ ಹಿಂದೆ ಓಡುವ ಮಾಯೆಗೆ ಇನ್ನೇನೆನ್ನಬೇಕೊ ? ಇನ್ನೊಂದಷ್ಟು ಕವನ ಬರೆದು ಸುಮ್ಮನಾಗಬೇಕು ಅಂತ ಕಾಣುತ್ತೆ. ಥ್ಯಾಂಕ್ಸ್ 😊

     Liked by 1 person

     1. ಕವನದ ಗೀಳು ಅಂಟಿಸಿಕೊಂಡು.ಆಗೋಗಿದೆ ಬರಿತಾನೆ ಇರಬೇಕು. ಬಿಡೋಕಂತೂ ಜನ್ಮದಲ್ಲಿ ಸಾಧ್ಯವಿಲ್ಲ. ನೀ ಮಾಯೆಯೊ, ನಿನ್ನೊಳು ಮಾಯೆಯೊ ಗೊತ್ತಿಲ್ಲದ ಪ್ರಪಂಚ ಪರವೇಶಿಸಿ ಆಗಿದೆ. ಸಾಗಲಿ ದೋಣಿ.‌‌‌..‌‌…‌‌‌☺

      Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s