ಪೋಷಕ, ವಯಸ್ಕ, ಬಾಲಕ..


ಪೋಷಕ, ವಯಸ್ಕ, ಬಾಲಕ.. 

Pubblished in suragi today (28.04.2016)

http://surahonne.com/?p=11484

00676. ವಿನಾಕಾರಣ..


00676. ವಿನಾಕಾರಣ..!
________________

ದೇಶದಲ್ಲೇನೆ ನಡೆದರು
ವಿಪಕ್ಷಗಳಿಗೊಂದೆ ಕಾರಣ
“ಮೋದಿ ಸರ್ಕಾರ !”🙄

ಮನೆಯಲ್ಲೇನೇ ನಡೆದರು
ಸತಿಯರಿಗೊಂದೆ ಕಾರಣ
“ಪತಿ ದೇವರ !” 😜

– ನಾಗೇಶ ಮೈಸೂರು

(Photo source: http://www.dralexandrasolomon.com/common-fights/)

00675. ಚುಚ್ಚು ಮಾತಿನ ಸೂಜಿಮದ್ದು


00675. ಚುಚ್ಚು ಮಾತಿನ ಸೂಜಿಮದ್ದು
___________________________


ಏನು ಮಾಡುವುದು ಬಿಡದೆಲೆ
ಬದುಕಲಿ ಕಾಡುವಾ ಭೂತಗಳ ?
ಬರಿ ಭವಿತದಲಾಗಿಬಿಡುವ ಬೊಗಳೆ ಮಾತು
ಭೂತದ ಹೀಯಾಳಿಕೆ ಮಾತ್ರ ಗೊತ್ತು..
ವರ್ತಮಾನದಲಿ ಬದುಕಿದ್ದು ಯಾವತ್ತು ?

ಯಾರೋ ಏನೋ ಆಗಿದ್ದ ಹೊರತು
ಸಹಿಸುವುದೆಂತು ದಿನ ನಿತ್ಯದ ಗುದ್ದು ?
ತಾಳಿದವನು ಬಾಳಿಯಾನೆ ? ಅನುಮಾನ
ಆನೆ ಬದುಕಿದ್ದರೆ ತಾನೇ ಬಾಳುವೆ ಯಾನ
ಕಟ್ಟಿಕೊಂಡ ಕೆಂಡ ಮಡಿಲ ಸುಟ್ಟ ವ್ಯಥೆಯೆ.

ಮಾತಿಗೊಂದು ಹುಡುಕಿದರೆ ಮೊನೆಚು
ತರಚು ಗಾಯಕೆಸೆದ ಉಪ್ಪಿನ ಅನುಭವ
ತಪ್ಪು ಹುಡುಕೆ ಸಿಗುವುದು ತಪ್ಪೇ ಹೌದು
ಸರಿಯನ್ಹುಡುಕೊ ಮನಸುಗಳೆ ಕಾಣದು
ಜಗವೆ ಚುಚ್ಚು ಮಾತಿನ ಸೂಜಿಮದ್ದಂತೆನಿಸಿ..

– ನಾಗೇಶ ಮೈಸೂರು

(Picture source: https://myspace.com/harsh.words)

00674. ಅರಿತೇನು ಬಂತು, ಕಲಿಯದೆ ?


00674. ಅರಿತೇನು ಬಂತು, ಕಲಿಯದೆ ?
___________________________


ಅರಿತೆ ಅರಿತೆ ಅರಿತೆ
ಬಂತೇನು ಸುಖ ?
ಅರಿತದ್ದ ಕಲಿಯದೇ ಹೋದರೆ..
ಅರಿತು ಜೀರ್ಣವಾಗೆ ಕಲಿಕೆ
ಅಜೀರ್ಣವಾಗೆ ಬದುಕೇ ನುಲಿಕೆ…

ಉರು ಉರು ಉರು
ಹೊಡೆಯುತ್ತಲೆ ಜಗದ್ಗುರು
ಕೇಳಿದ್ದೆಲ್ಲಾ ಕವಿತೆ
ಜ್ಞಾಪಕಶಕ್ತಿಯ ಪರೀಕ್ಷೆ
ಅರಿತೆ, ಏನು ಕಲಿತೆ ?

ದೊಂಬರಾಟ ಗುರುಕುಲ ಜಾಲ
ಅಂಕಿ ಅಂಶದ ಸಮ ಸಮರ
ಬೆನ್ನಟ್ಟಿ ಅಂಕದಲೇ ಶತಕ
ಮರೆತೆಬಿಡುವ ಮೈದಾನ ಕಲಿ
ಕಣ್ಣು ಬಿಟ್ಟಾಗ ಶೂನ್ಯ, ಕಲಿತಿದ್ದೇನು ?

ಅಕ್ಷರ ಜ್ಞಾನ ಮೊದಲ ಕಲಿಕೆ
ಕಲಿತಾದ ಮೇಲೆ ಅರಿವಿಗೆ
ಕಲಿಸಬೇಕು ಕಲಿಯುವ ಬಗೆ ಕುತೂಹಲ
ಜಿಜ್ಞಾಸೆ ಶೋಧನೆ ಚಿಂತನೆ ಚರ್ಚೆ
ಹೊಸತ ಸ್ವತಃ ಕಲಿಯುವ ತಾಕತ್ತು..

ಆಗಷ್ಟೆ ನಿಂತ ನೀರಾದ ಜ್ಞಾನ
ಕೊಳದಲೀಜಾಡೊ ಮತ್ಸ್ಯ ಸಂತಾನ
ಕಲಿಸುವುದು ಸೃಜಿಸೆ ಸೃಷ್ಟಿಸೆ ಹೊಸತ
ದಾಸ್ಯವಲ್ಲದ ಸ್ವತಂತ್ರ ಚಿಂತನಾ ಅದ್ಭುತ
ಸ್ವಾವಲಂಬನೆ ಸ್ವಾಯತ್ತತೆಯ ಕಲಿಸುತ್ತಾ..

– ನಾಗೇಶ ಮೈಸೂರು

(Picture source: https://en.m.wikipedia.org/wiki/File:France_in_XXI_Century._School.jpg)