00680. ಗುಟ್ಟು, ಸುದ್ಧಿ, ಇತ್ಯಾದಿ (ಹಾಯ್ಕು ೩೦.೦೪.೨೦೧೬)


00680. ಗುಟ್ಟು, ಸುದ್ಧಿ, ಇತ್ಯಾದಿ (ಹಾಯ್ಕು ೩೦.೦೪.೨೦೧೬)
__________________________________________

(೦೧)
ಹೇಳಬಾರದು
ಹೇಳಬಾರದ ಗುಟ್ಟ
– ಕೇಳದ ನಿದ್ದೆ.

(೦೨)
ಕದ್ದು ಕೇಳಿದ
ಗುಲ್ಲು ರೋಚಕ ಸುದ್ಧಿ
– ನಮ್ಮದಲ್ಲದ್ದು.

(೦೩)
ಪಿಸುಗುಟ್ಟುತ
ಯಾರಿಗೂ ಹೇಳಬೇಡ
– ಎಂದು ನಕ್ಕಳು.

(೦೪)
ಅಡಿಗೆ ಮನೆ
ಕುಟುಂಬ ಸುದ್ಧಿ ಜಾಲ
– ಸಮಯವಿಲ್ಲ.

(೦೫)
ಮನೆಕೆಲಸ
ಮುಗಿಸಿ ಹರಟುತ್ತ
– ಗುಟ್ಟಿನಡಿಗೆ.

(೦೬)
ಮಾತಾಡೆ ಹಿತ
ಜತೆಗಿರದವಳ
– ಸುದ್ಧಿ ಸುಲಭ.

(೦೭)
ಎರಡು ಜಡೆ
ಮಾತಾಡೆ ನೆಟ್ಟಗಿತ್ತೆ
– ಮೂರನೆ ಜಡೆ.

(೦೮)
ಗಾಸಿಪ್ಪು ಸಿಪ್ಪು
ಸೊಪ್ಪು ಹಾಕುವ ಜಗ
– ಹೊಸ ಬಾಟಲಿ.

(೦೯)
ಗುಟ್ಟ ಮಾತಲಿ
ಗಂಡಸರೇನು ಕಮ್ಮಿ
– ಎಲ್ಲಾ ಬಾರಲಿ.

(೧೦)
ಹೆಣ್ಣೇನು ಕಮ್ಮಿ
ಬಾರು ಗೀರು ಹಂಗಿಲ್ಲ
– ಕಾರುಬಾರಲೆ.

– ನಾಗೇಶ ಮೈಸೂರು

00679. ಧುತ್ತನೆ ಮಳೆ – ಆಶಾವಾದ


00679. ಧುತ್ತನೆ ಮಳೆ – ಆಶಾವಾದ
__________________________________

[In nilume on 29.04.2016: ಮಳೆ ನಿಲ್ಲದ ಹಾಗೆ ಸುರಿಯುತ್ತಿರಬೇಕು ಒಂದೇ ಸಮನೆ – ಭಾವೋತ್ಕರ್ಷದ ಮುಸಲಧಾರೆಯ ಹಾಗೆ.. ಅದೇ ನನಗಿಷ್ಟ ..( ಪ್ರಕೋಪಕ್ಕೆಡೆಗೊಡದ ಹಾಗೆ ಅನ್ನುತ್ತಿದ್ದಾನೆ ಮರೆಯಿಂದ ಡೊಂಕುತಿಮ್ಮ 😜 )]

ಧುತ್ತನೆ ಆರಂಭವಾದ ಮಳೆಯೊಂದು ತೆರೆದಿಟ್ಟುಕೊಂಡ ಬಗೆಯನ್ನು ಚಿತ್ರಿಸುತ್ತಲೆ, ಅದು ಸತತವಾಗಿ, ನಿರಂತರವಾಗಿ ಸುರಿಯುತ್ತಲೆ ಇರಬೇಕೆಂದು ಬಯಸುತ್ತದೆ ಕವಿಮನ; ನಿಂತ ಮಳೆ ಪಿಚ್ಚನೆಯ ಭಾವದ ಪ್ರತಿನಿಧಿಯಾಗಿ ನೀರವತೆಯನ್ನು ತುಂಬುವ ವಿಕಲ್ಪವಾದರೆ, ಸತತ ಸುರಿಯುವ ಮಳೆ ಆಶಾವಾದ ಸಂಕೇತವಾಗಿ ಕಾಣುತ್ತದೆ ಕವಿಯ ಕಣ್ಣಿಗೆ. ಅದು ‘ಧೋ’ ಎಂದು ಸುರಿಯುತ್ತಿರುವ ತನಕ ಕವಿ ಮನ ಗರಿ ಬಿಚ್ಚಿದ ಹಕ್ಕಿ – ಇದು ಕೇವಲ ಒಂದು ಪಾರ್ಶ್ವದ ನೋಟವಾದರೂ (ಮಳೆಯ ವಿಕೋಪ ಮತ್ತೊಂದು ಪಾರ್ಶ್ವ). ಅದರ ಆಲಾಪದ ತುಣುಕು ಈ ಪದ್ಯ.

ಧುತ್ತನೆ ಮಳೆ…
_____________________

ಎಲ್ಲಿತ್ತೋ ಮೋಡ
ಕಪ್ಪನೆ ಕಾಡ
ಕವಿದು ಮುಗಿಲು ಬೆಟ್ಟ ಗುಡ್ಡ ..
ಕಲ್ಲೆತ್ತರ ಕಟ್ಟಡ;
ಸಂಜೆಗತ್ತಲಿನ ನಾಡ ||

ಧುತ್ತನೆ ಮಳೆರಾಯ
ಸುರಿದ ಪ್ರಾಯ
ತೊಳೆದಾಗಸ ಮೋಡ ಖೆಡ್ಡ..
ಗುಡಿ ಕಟ್ಟಡ ನಡ;
ಕವಿಸುತ ಕತ್ತಲ ಗೂಡ ||

ಮಳೆ ಸದ್ದು ಅವಿರತ
ಹಿನ್ನಲೆ ಸಂಗೀತ
ಮಿಂಚು ಗುಡುಗಿನ ಹಿಮ್ಮೇಳ..
ವಾದ್ಯಗೋಷ್ಠಿ ತಾಳ;
ಸುಸ್ತಾಗದ ನಿಸರ್ಗದ ಬಹಳ ||

ನಿಲಬಾರದು ಸುರಿತವಿದು
ನಿಲದೆ ಮಳೆ ಸದ್ದು
ಅವಿರತ ಸುರಿತ ಆಶಾವಾದ..
ನಿಂತರೆ ಪಿಚ್ಚೆನಿಸಿದ ;
ಸುರಿಯುತಲೇ ಜೀವಂತಿಕೆ ಸದಾ ||

– ನಾಗೇಶ ಮೈಸೂರು

(picture source : http://e2ua.com/WDF-1783423.html)

00678. ಕಗ್ಗ ೦೫ ರ ಟಿಪ್ಪಣಿ


00678. ಕಗ್ಗ ೦೫ ರ ಟಿಪ್ಪಣಿ
______________________

ಕಗ್ಗ ೦೫ ರ ಟಿಪ್ಪಣಿ : ಇಂದಿನ ರೀಡೂ ಕನ್ನಡದಲ್ಲಿ..(೨೯.೦೪.೨೦೧೬)

ಕಗ್ಗಕೊಂದು ಹಗ್ಗ ಹೊಸೆದು… – 5

00677. ಮೋದಿ ಸರ್ಕಾರ !


00677. ಮೋದಿ ಸರ್ಕಾರ ! 
____________________

(Published in nilume on 28.04.2016 : https://www.facebook.com/groups/nilume/permalink/1011524092229949/?pnref=story)

ಅಕ್ಕಿ ಬೆಂದಿದಿಯೊ ಇಲ್ಲವೋ ನೋಡಲು ಅಗುಳು ನೋಡಿದರೆ ಸಾಕು ಅಂತಾರೆ. ಕೇಂದ್ರ ಸರ್ಕಾರದ ಮಂತ್ರಿಮಂಡಲ ವಿವಾದ, ಹಗರಣಗಳಿಗೆಡೆಗೊಡದೆ ದೇಶ-ಜನಹಿತ ಕಾರ್ಯಗಳತ್ತ ಗಮನ ಹರಿಸಿರುವುದು ನಿಜಕ್ಕೂ ನಿರಾಳತೆ ತರುವ ಸಂಗತಿ. ಒಂದು ದಕ್ಷ ನಾಯಕತ್ವವಿದ್ದರೆ ಇಡಿ ತಂಡ ಹೇಗೆ ಕ್ರಿಯಾಶೀಲವಾಗಿ ಪ್ರವರ್ತಿಸಬಹುದೆನ್ನುವುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತಿವೆ. ಅಂತಹ ಕೆಲವು ತುಣುಕುಗಳನ್ನು ಹೈಕುಗಳ ರೂಪದಲ್ಲಿ ಕಟ್ಟಿದ ತುಣುಕುಗಳಿವು. ಇಲ್ಲಿರುವ ವಿಷಯ ಗೊತ್ತಿರುವುದೇ ಆದರು ಅದರ ಹಿಂದೆ ಇರುವ ಆಳವಾದ ಚಿಂತನಾಶಕ್ತಿ ಮತ್ತು ದೃಢ ನಾಯಕತ್ವದ ಏಕ ತಂಡ ಮನೋಭಾವದ ಸಮಗ್ರ ಚಿತ್ರಣವನ್ನು ಎತ್ತಿ ತೋರಿಸುವುದು ಮುಖ್ಯ ಉದ್ದೇಶ.

ಪ್ರಾಮಾಣಿಕತೆ
ಮಂತ್ರಿ ಮಂಡಲ ಪೂರ
– ಮೋದಿ ಸರ್ಕಾರ.

ರಕ್ಷಣಾ ಖಾತೆ
ಗುಂಡು ತಡೆ ಜಾಕೆಟ್ಟು
– ಮೋದಿ ಸರ್ಕಾರ.

ಇಂಧನ ಖಾತೆ
ಹಳ್ಳಿ ಹಳ್ಳಿ ವಿದ್ಯುತ್
– ಮೋದಿ ಸರ್ಕಾರ.

ವಿದೇಶ ಮಂತ್ರಿ
ಎಲ್ಲಿದ್ದರೂ ಕಾಪಿಗೆ
– ಮೋದಿ ಸರ್ಕಾರ.

ರೈಲು ಸಚಿವ
ಬುಲೆಟ್ಟು ಟ್ರೇನು ಗಟ್ಟಿ
– ಮೋದಿ ಸರ್ಕಾರ.

ಗೃಹ ಸಚಿವ
ಬಗ್ಗದ ಮನೋಭಾವ
– ಮೋದಿ ಸರ್ಕಾರ.

ವಿದ್ಯೆಯ ಖಾತೆ
ಸೊಸೆ ಭಾರತ ಮಾತೆ
– ಮೋದಿ ಸರ್ಕಾರ.

ವಾಣಿಜ್ಯ ಖಾತೆ
ಮೇಕ್ ಇನ್ ಇಂಡಿಯ
– ಮೋದಿ ಸರ್ಕಾರ.

ಪ್ರಧಾನ ಮಂತ್ರಿ
ದೇಶ ವಿದೇಶ ಗರ್ವ
– ಮೋದಿ ಸರ್ಕಾರ.

ಮಂತ್ರಿ ಮಂಡಲ
ಸ್ವಚ್ಛ ಭಾರತ ಯಾತ್ರೆ
– ಮೋದಿ ಸರ್ಕಾರ.

– ನಾಗೇಶ ಮೈಸೂರು