00677. ಮೋದಿ ಸರ್ಕಾರ !


00677. ಮೋದಿ ಸರ್ಕಾರ ! 
____________________

(Published in nilume on 28.04.2016 : https://www.facebook.com/groups/nilume/permalink/1011524092229949/?pnref=story)

ಅಕ್ಕಿ ಬೆಂದಿದಿಯೊ ಇಲ್ಲವೋ ನೋಡಲು ಅಗುಳು ನೋಡಿದರೆ ಸಾಕು ಅಂತಾರೆ. ಕೇಂದ್ರ ಸರ್ಕಾರದ ಮಂತ್ರಿಮಂಡಲ ವಿವಾದ, ಹಗರಣಗಳಿಗೆಡೆಗೊಡದೆ ದೇಶ-ಜನಹಿತ ಕಾರ್ಯಗಳತ್ತ ಗಮನ ಹರಿಸಿರುವುದು ನಿಜಕ್ಕೂ ನಿರಾಳತೆ ತರುವ ಸಂಗತಿ. ಒಂದು ದಕ್ಷ ನಾಯಕತ್ವವಿದ್ದರೆ ಇಡಿ ತಂಡ ಹೇಗೆ ಕ್ರಿಯಾಶೀಲವಾಗಿ ಪ್ರವರ್ತಿಸಬಹುದೆನ್ನುವುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತಿವೆ. ಅಂತಹ ಕೆಲವು ತುಣುಕುಗಳನ್ನು ಹೈಕುಗಳ ರೂಪದಲ್ಲಿ ಕಟ್ಟಿದ ತುಣುಕುಗಳಿವು. ಇಲ್ಲಿರುವ ವಿಷಯ ಗೊತ್ತಿರುವುದೇ ಆದರು ಅದರ ಹಿಂದೆ ಇರುವ ಆಳವಾದ ಚಿಂತನಾಶಕ್ತಿ ಮತ್ತು ದೃಢ ನಾಯಕತ್ವದ ಏಕ ತಂಡ ಮನೋಭಾವದ ಸಮಗ್ರ ಚಿತ್ರಣವನ್ನು ಎತ್ತಿ ತೋರಿಸುವುದು ಮುಖ್ಯ ಉದ್ದೇಶ.

ಪ್ರಾಮಾಣಿಕತೆ
ಮಂತ್ರಿ ಮಂಡಲ ಪೂರ
– ಮೋದಿ ಸರ್ಕಾರ.

ರಕ್ಷಣಾ ಖಾತೆ
ಗುಂಡು ತಡೆ ಜಾಕೆಟ್ಟು
– ಮೋದಿ ಸರ್ಕಾರ.

ಇಂಧನ ಖಾತೆ
ಹಳ್ಳಿ ಹಳ್ಳಿ ವಿದ್ಯುತ್
– ಮೋದಿ ಸರ್ಕಾರ.

ವಿದೇಶ ಮಂತ್ರಿ
ಎಲ್ಲಿದ್ದರೂ ಕಾಪಿಗೆ
– ಮೋದಿ ಸರ್ಕಾರ.

ರೈಲು ಸಚಿವ
ಬುಲೆಟ್ಟು ಟ್ರೇನು ಗಟ್ಟಿ
– ಮೋದಿ ಸರ್ಕಾರ.

ಗೃಹ ಸಚಿವ
ಬಗ್ಗದ ಮನೋಭಾವ
– ಮೋದಿ ಸರ್ಕಾರ.

ವಿದ್ಯೆಯ ಖಾತೆ
ಸೊಸೆ ಭಾರತ ಮಾತೆ
– ಮೋದಿ ಸರ್ಕಾರ.

ವಾಣಿಜ್ಯ ಖಾತೆ
ಮೇಕ್ ಇನ್ ಇಂಡಿಯ
– ಮೋದಿ ಸರ್ಕಾರ.

ಪ್ರಧಾನ ಮಂತ್ರಿ
ದೇಶ ವಿದೇಶ ಗರ್ವ
– ಮೋದಿ ಸರ್ಕಾರ.

ಮಂತ್ರಿ ಮಂಡಲ
ಸ್ವಚ್ಛ ಭಾರತ ಯಾತ್ರೆ
– ಮೋದಿ ಸರ್ಕಾರ.

– ನಾಗೇಶ ಮೈಸೂರು

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

9 thoughts on “00677. ಮೋದಿ ಸರ್ಕಾರ !”

  1. ಸಬ್ಸಿಡಿ ಗ್ಯಾಸು
    ಬಡ ಬಗ್ಗರಿಗೆ ಮಾತ್ರ
    -ಮೋದಿ ಸಕಾ೯ರ.

    ಪ್ಲಾಸ್ಟಿಕ್ ಚೀಲ
    ಹೊರ ಹಾಕುವ ಕಾಯ್ದೆ
    -ಮೋದಿ ಸಕಾ೯ರ.

    ದೇಶ ಕಂಡರಿಯದ
    ಸ್ವಚ್ಛತೆ ಕಾರ್ಯಕ್ರಮ ಎಲ್ಲೆಡೆ
    -ಮೋದಿ ಸಕಾ೯ರ.

    ಇರಬೇಕು ಇಂಥವರು
    ನೂರು ಕಾಲ ನಮ್ಮೊಂದಿಗೆ
    -ದೇಶ ಸುಭೀಕ್ಷೆಗೆ.

    ಸರೀನಾ ಈ ದಡ್ಡಿಯು ಬರೆದ ಹಾಯ್ಕು?

    Liked by 1 person

    1. ಸುಪರ್ ಆಗಿದೆ ! ಇದನ್ನೇ ಹಾಯ್ಕು ಮಾಡೋಕೆ ಒಂದೇ ಒಂದು ಅಡ್ಜೆಸ್ಟ್ ಮಾಡಿದ್ರೆ ಸಾಕು:
      ಮೊದಲ ಸಾಲು ಮತ್ತು ಕೊನೆ ಸಾಲು: ಒಟ್ಟು ಐದಕ್ಷರ ಇರಬೇಕು. ಮಧ್ಯದ ಸಾಲು ಏಳಕ್ಷರ ಇರಬೇಕು.
      ಹಾಯ್ಕು ಬೇಡ ಅನ್ನೋದಾದ್ರೆ ಹೀಗೆ ಸುಪರ್ ಆಗಿದೆ 😊

      Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s