00717. ಮನಸಿನ ವ್ಯಾಪಾರ


00717. ಮನಸಿನ ವ್ಯಾಪಾರ
___________________


ಬಿಕರಿಗಿಟ್ಟಂತಿತ್ತು ಸರಕು
ಚಂದದ ಬಣ್ಣ ಬಣ್ಣದ ರಂಗೋಲಿ
ನೋಡುತಲೆ ಹುಚ್ಚೆದ್ದು ಮನ
ಬಯಸಿತ್ತು ಬಗಲಲಿಡುವ ಹಂಬಲ
ಬಿಟ್ಟರೆ ಕಳುವಾದೀತೆಲ್ಲೊ ಅಳುಕು
ಹುಚ್ಚು ಛಲದಿ ಬೆನ್ನಟ್ಟಿತು ಹೃದಯ
ಧಾರಣೆ ಎಷ್ಟು ? ಹುಚ್ಚುತನದ ಪ್ರಶ್ನೆ
ಮೆಚ್ಚಿದ್ದಕ್ಕುಂಟೆ ಬೆಲೆ ಕಟ್ಟುವ ಯೋಗ್ಯತೆ ?
ಬಿಡದು ಕೇಳದು ಹುಚ್ಚು ಕುದುರೆ ಮನ
ಮಾಡಿತೇನೇನೆಲ್ಲ ಬಿತ್ತರ ಬಿನ್ನಾಣ ಬೆಡಗು
ಕೊಂಡೇಕೊಳ್ಳುವ ಒಂದೆ ಅವಸರದಲಿ
ಕಟ್ಟಲು ನಿಂತಿತ್ತು ಜೀವದ ಪೇಟೆಧಾರಣೆ
ಯಾಕೋ ಅರಿಯದಾಯ್ತು ಜೀವಕೆ
ಸರಕದು ಮನಸು ಕುದುರದು ಬೆಲೆಗೆ
ಕೂಗುವ ದರಕೆ ಹೆದರಿ ತಬ್ಬಿಬ್ಬಾಯ್ತೋ ಏನೋ ?
ಮೆತ್ತಗೆ ಜಾರಿ ಮೂಲೆಯ ಸೇರುತ್ತ
ಬಿಕರಿಗಿಲ್ಲ ಮಾಲು ಮೌನದೆ ಸಾರುತ್ತಾ
ಕಾಣೆಯಾಗಿತ್ತು ಹುಡುಕಿಯು ಸಿಗದ ಜಗದೆ..
ಹುಚ್ಚುತನವಿಂದು ಹುಡುಕತಲೆ ಇದೆ ಅದೇ ಸರಕ
ಪ್ರೀತಿಸಿದ ವ್ಯಾಮೋಹ ಬಿಟ್ಟು ಹೋಗದ ಮಾಯೆ
ಬಿಕರಿಗೊ ಬಿಟ್ಟಿಗೊ ಸಿಕ್ಕಿತೆನ್ನುವ ಉಸಾಬರಿ
ಕಂಡಿನ್ನು ನಗುತಲಿದೆ ಭಾವದ ರೊಕ್ಕ ಮೌನದೆ
ಸಿಗುವುದೋ ಬಿಡುವುದೋ ಸರಕು..
ಆಸೆ ಮಾತ್ರ ಬಿಕ್ಕುತಿದೆ..
ಏಕಾಂತದ ಮೂಲೆಯಲಿ..
ಒಬ್ಬಂಟಿಯಾಗಿ ಕೂತು…

– ನಾಗೇಶ ಮೈಸೂರು

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

4 thoughts on “00717. ಮನಸಿನ ವ್ಯಾಪಾರ”

    1. ಕಂಡದ್ದೆಲ್ಲ ಅನ್ನುವುದಕ್ಕಿಂತ, ಕಂಡಿದ್ದರಲ್ಲಿ ಹೇಗೊ, ಏನೋ, ಏಕೋ ಮನಸ ಹೊಕ್ಕಿದ್ದು ಅನ್ನುವುದು ಸೂಕ್ತ ವ್ಯಾಖ್ಯೆ. ನಮ್ಮ ಮನಸಿಗೆ ಹಿಡಿಸಿದ್ದು ತಾನೇ ಸಿಗದಾದಾಗ ಖೇದ ತರುವುದು ? ಅದಕ್ಕೂ ಮೀರಿದ್ದನ್ನು ತೋರಿಸಿದರು ಒಪ್ಪದ ಮೊಂಡುತನ ಆ ವ್ಯಾಮೋಹದ್ದು. ಅದರೊಂದು ನೋಟದ ಪರಿ ಈ ಕವನದ್ದು 😊

      Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s