00771. ಮೊದಲ ಸ್ಪರ್ಶ


00771. ಮೊದಲ ಸ್ಪರ್ಶ
___________________

ಪ್ರೇಮಿಗಳಲ್ಲಿ ಪ್ರತಿಯೊಂದು ಸಣ್ಣ ವಸ್ತು ವಿಷಯವು ಪ್ರಮುಖ್ಯವಾಗಿಬಿಡುತ್ತದೆ – ಅದರ ಭೌತಿಕ ಮೌಲ್ಯದ ಲೆಕ್ಕಾಚಾರವಿಡದೆ. ಪ್ರತಿಯೊಂದು ಹೊಸ ಅನುಭವ ಕಟ್ಟಿಕೊಡುವ, ರೋಮಾಂಚನ ನೀಡುವ ಅದ್ಭುತವಾಗಿಬಿಡುತ್ತದೆ.. ತೀರ ನಿರ್ಲಕ್ಷಿಸಬಹುದಾದ ಸಂಗತಿಯೂ ದೊಡ್ಡದಾಗಿ ಮುನಿಸು, ಮೌನಗಳಿಗೆ ಕಾರಣವಾಗುವುದು ಸಹಜವೇ.

ಆಕಸ್ಮಿಕವಾಗಿ ಉಂಟಾದ ‘ಪ್ರೀತಿ’ಯ ಮೊದಲ ಸ್ಪರ್ಶ ಹುಟ್ಟಿಸುವ ರಸಭಾವ ಈ ಕೆಳಗಿನ ಪದ್ಯದ ಸಾರ.. ಅದು ಪದಗಳಲ್ಲಿ ಕವಿತೆಯಾಗದಿದ್ದರು, ಮನದ ಭಾವದ ಲಲಿತೆಯಾಗುವುದು ಬಹುತೇಕರ ಅನುಭವ ಎನ್ನಬಹುದೇನೋ..

ನಿನ್ನ ಮೊದಲ ಬೆರಳ ಸ್ಪರ್ಶ
___________________


ನಿನ್ನ ಮೊದಲ ಬೆರಳ ಸ್ಪರ್ಶ
ತಂದ ಮಧುರ ರೋಮಾಂಚನ
ಹಿಡಿಯದಾವ ಪದ ಕಸರತ್ತು
ಬರಿ ತಗುಲುತಲೆ ತನು ಅದುರಿ..

ಆಕಸ್ಮಿಕಕದೆಂತ ಅನುಭೂತಿ ?
ಅನುಭವ ಅನುಭಾವ ಗಣತಿ
ಪ್ರಣತಿಯಾಗಿ ರೋಮ ರೋಮದೆ
ಹಚ್ಚಿಕೊಂಡವಲ್ಲೆ ದೀಪದ ಸಾಲೆ..

ಹಚ್ಚಿದ ಬೆಳಕು ಬೆಚ್ಚಗಾಗಿಸಿತು
ಮೈ ನವಿರೇಳುತೆಲ್ಲ ಹೊಚ್ಚ ಹೊಸತು
ನಿನಗೂ ಇತ್ತೇನು ಅದೇ ಭಾವ ?
ಓದಬಿಡದಲ್ಲ, ಮರೆಮಾಚಿದ ಕಿರುನಗೆ..

ಬೆಸೆದಿತ್ತಲ್ಲಿಯತನಕ ಬರಿ ಭಾವ
ಮಾತುಗಳಲೆ ಹೃದಯ ಕಾವ್ಯ
ನಿಸ್ತಂತು ನಡುವಿನಂತರಕೆ ಕಾತರ
ತುಂಬಲೆಂದೆ ಸಂಚು ಮಿಂಚಿನ ಸಂಚಾರ..!

ನೋಡಂದಿನ ಮಾಂತ್ರಿಕ ಸ್ಪರ್ಶ
ಇಂದಿರದಿದ್ದರು ನೆನಪೇ ಪರುಷ
ತಂಪಾಗಿ ತಗುಲಿ ಬೆಚ್ಚಾಗಾಗಿ ಮನ
ಅನುರಣಿಸುತಿದೆ ಅದನೇ ಮತ್ತೆ ಮತ್ತೆ ..

– ನಾಗೇಶ ಮೈಸೂರು

(Picture source: http://luna.typepad.com/weblog/2009/09/and-than-there-was-the-womanit-was-love-at-first-touch-rather-than-first-sight-for-i-had-met-her-several-times-before-with.html)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s