00777. ಎಲ್ಲ ಮೀರಿದ ಗೆಳತಿ ನೀ…


00777. ಎಲ್ಲ ಮೀರಿದ ಗೆಳತಿ ನೀ…
________________________________

ಪ್ರಕೃತಿಗೆ ಪುರುಷ ಬರೆದ ಪುರವಣಿ, ವಿಶ್ವಸೃಷ್ಟಿಯ ನಿತ್ಯೋತ್ಸವದ ಉರವಣಿ…ಪ್ರಕೃತಿ ಹೆಣ್ಣೊ, ಹೆಣ್ಣೆ ಪ್ರಕೃತಿಯೊ ? ಪುರುಷನ ಆರಾಧನೆ ಮಾತ್ರ ಅವಿರತ..

ಎಲ್ಲ ಮೀರಿದ ಗೆಳತಿ ನೀ…
________________________________


ನೀನೆ ಭುವಿಯಾಗಿರುವೆ ಗೆಳತಿ, ಭುವನ ಸುಂದರಿ ಸಖಿ
ಧರಣಿ ಮಿಡುಕಿದಳೇಕೊ, ಗಣಿಸುತಲಿ ನಿನ್ನನೆ ಸವತಿ
ಚಂದ್ರಮನ ಮೊಗದಲದೇನೊ, ಅಸಹನೆ ಸಿಡುಕು
ಚಂದ್ರಮುಖಿ ನಿನ್ನ ವದನ, ತಂದಂತೇನೊ ಕೀಳರಿಮೆ !

ಕ್ಷಮಯಾ ಧರಿತ್ರಿ ನೀ, ಕ್ಷಮಿಸಿಬಿಡು ಅವನೀ ಪಾಡು
ಸಿಕ್ಕಸಿಕ್ಕವರೆಲ್ಲ ಮಾಡಿಟ್ಟವಳ, ಬೆತ್ತಲೆ ಸಹಜ ಸಿಟ್ಟು
ವರ್ಷಾಂತರಗಳ ವಯೋವೃದ್ಧೆ, ನಿನ್ನಂತಹ ತರುಣಿ
ಕಣ್ಣಿಗೆ ಬಿದ್ದಾಗ ಸಹಜ, ನೆನಪಾಗದಿಹುದೇ ಪ್ರಾಯ…?

ಇನ್ನು ಶಶಿಯ ಮಾತು ಬಿಡು, ಮೊದಲೇ ಮಂಕಾಗಿ
ಎರವಲು ದ್ಯುತಿಗೆ ಕಾದು, ಕ್ಷಯವೃದ್ಧಿ ಹಗಲಿರುಳು
ಮಾಸಕೊಮ್ಮೆ ಹುಣ್ಣಿಮೆ, ಪೂರ್ಣಚಂದ್ರನಾಗುವ ಭಾಗ್ಯ
ನಿತ್ಯ ಪೌರ್ಣಿಮೆ ಮೊಗದ, ನಿನ್ನ ಕಂಡಾಗ ಅಸೂಯೆಯೆ..!

ಇನ್ನು ನಿನ್ನ ನಗೆಯ ಕಾಂತಿಗೆ, ಸೋತು ಸುಸ್ತಾಗಿ ರವಿ
ನಗುವನ್ನೇ ಮರೆತ ಮಂಕು, ದೀಪವಾಗಿ ಮೋಡದಲಿ
ಮರೆಯಲಡಗಿ ತನ್ನನ್ನೇ, ಬಚ್ಚಿಟ್ಟುಕೊಂಡು ಮಾನವನು
ಉಳಿಸಿಕೊಳ್ಳುವ ವಿಫಲ, ಯತ್ನದಲಿ ಇಣುಕಿ ನಿರಾಶೆ..

ಮಿಕ್ಕೆಲ್ಲ ಗ್ರಹ ತಾರೆ ನೀಹಾರಿಕೆ, ನೆರೆದಿವೆ ಕುತೂಹಲ
ಏನೀ ಸೃಷ್ಟಿಯ ಅದ್ಭುತ? ಎಂದೆನ್ನುತ ಬಣ್ಣಿಸಿ ನಿನ್ನನ್ನೆ
ಚಲನೆಯ ಮರೆತಂತೆ, ನಿನ್ನ ರೆಪ್ಪೆಯ ಅದುರಲಿ ಕರಗಿ
ನಿನ್ನೆ ವಿಶ್ವದ ಸೃಷ್ಟಿಯ, ಮೂಲಬೀಜವೆಂದು ಅರಾಧಿಸಿವೆ..

– ನಾಗೇಶ ಮೈಸೂರು

(Picture source: http://www.freestockphotos.name/wallpaper/2120/woman-with-painted-birds-and-butterflies-images-photography.html)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

8 thoughts on “00777. ಎಲ್ಲ ಮೀರಿದ ಗೆಳತಿ ನೀ…”

    1. ಎಲ್ಲೋ ಒಂದೆರಡು ಹಳೆದು – ಮಿಕ್ಕಿದ್ದೆಲ್ಲ ಹೊಸದು. ಈಚೆಗೆ ನಞ್ ಫೇಸ್ಬುಕ್ ಅಕೌಂಟ್ ಇರೋದ್ರಿಂದ್ರ, ಅವರಿಗೆ (ಅದರಲ್ಲೂ ಯುವ ಜನತೆಗೆ) ಹಿಡಿಸೊ ವಸ್ತು ಹುಡುಕಿ ಬರೀತಾ ಇದೀನಿ. ವಸ್ತುವಿನ ಎಳೆ ಸರಿಯಾದ್ದು ಸಿಕ್ಕಿದರೆ ಹದಿನೈದು ನಿಮಿಷಕ್ಕೊಂದು ಕವನ ಆಗುತ್ತೆ – ಹಳೆದೆ ಹುಡುಕಬೇಕು ಅಂತೇನಿಲ್ಲ 😁 ಅದು ನಾ ಬರೆಯೋದು ಲೈಟ್ ಶೈಲಿ, ಸೀರಿಯಸ್ ಥಾಟ್ಸ್ ಜಾಸ್ತಿ ಇರಲ್ಲ ಆಲ್ವಾ? ಜಸ್ಟ್ ಟೈಮ್ ಪಾಸ್ 😊

      Liked by 1 person

      1. ಹಳಗನ್ನಡಕ್ಕೆ ಸ್ವಲ್ಪ ಹೋಲುತ್ತೆ ನಿಮ್ಮ ಬರಹ ಯಾಕೆ? ಕನ್ನಡಕ್ಕೆ ಆಯುಷ್ಯ ಕಡಿಮೆ. ಇಂಗ್ಲಿಷ್ ರವರಿಗೆ ಎಲ್ಲರೂ ಮಣೆ ಹಾಕೋದು. ಏನೊ ಬರೆಯೊ ಉತ್ಸಾಹ ಬರಿಬೇಕಷ್ಟೆ.

        Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s