00780. ಅಜಗಜಾಂತರ..


00780. ಅಜಗಜಾಂತರ..

____________________________

ಅನಿಸಿಕೆಗೂ ಆಚಾರಕು ಅಜಗಜಾಂತರ..


(Picture source – http://www.indiatimes.com/health/healthyliving/5-psychological-differences-between-the-male-and-female-brain-237960-6.html)

ನಿನ್ನಂತರಂಗದ ಗುಹೆಯೊಳಗ್ಹೊಕ್ಕು ಆಳದೆ
ಆಳುವಾಸೆ ನಿನ್ನೊಳಗ ಸಾಮ್ರಾಜ್ಯದಧಿಪತಿಯಾಗಿ
ನಿನ್ನ ಮನಸನರಿಯುತ ನೀನ್ಹೇಳುವ ಮೊದಲೆ
ನಿರಂತರ ನೀನಾಗುವ ಅದಮ್ಯ ಬಯಕೆ ನನಗೆ..

ಆದರೇನು ಚಿತ್ತಶುದ್ಧಿಗೆ ಮೊತ್ತ ಅಂತಃಕರಣ ?
ಕಲಿತರೂ ಸಮೀಕರಣ ಭಾವಶುದ್ಧಿಯ ಮೊತ್ತ
ಪ್ರಕೃತಿಯ ಆದ್ಯತೆ ಅರಿತ ಪುರುಷದ ಭಾಧ್ಯತೆ
ಪುರುಷೇಂದ್ರೀಯ ಪೌರುಷದಾಸೆ ವಿಚಲಿಸುತಿನ್ನೆಲ್ಲೊ..

ಆಂತರ್ಯದ ಗುಹೆಯ ಬಾಗಿಲು ಗವಿಯನ್ಹುಡುಕಿ
ತಡವಿ ತಡಕಿ ತೆರೆದು ಕದದೊಳಗೆ ಮಿಡುಕಿ ತೋಡಿ
ಆಡಿ ಅಲ್ಲಾಡಿ ಬೆರೆತು ಕಣಕಣದೊಳಗೆ ಸಂಭ್ರಮಿಸಿ
ವಿಜೃಂಭಿಸಿ ಭೌತಿಕದೆ ಏನೊ ಸಂತೃಪ್ತಿಗೆ ಗುನುಗುತ್ತ..

ಪಡೆದು ತೃಪ್ತಿಯೊ ಅತೃಪ್ತಿಯೊ, ಕೊಟ್ಟ ಗೆಲುವ ಭ್ರಮೆ
ಕಳೆದುಕೊಂಡ ಬಿತ್ತನೆ ಬೆಳೆ ಫಸಲಾಗುವ ವೃದ್ಧಿಯ ವೃತ್ತಿ
ತೆರೆದೀತೊಳಗಿನಂತರಂಗ ಮುಲುಗಾಡಿದ ಸುಖಕೆನಿಸಿ
ಮಾತಿಗೂ ಬಿಡದೆ ಅಪ್ಪುಗೆ ಮೌನಕು ನಾಚಿಕೆ ಆರೋಪಿಸಿ..

ಬಿಸಿಯುಸಿರೊ ನಿಟ್ಟುಸಿರೊ ಅರಿಯಲಾಗದ ಅಳದಲಿ
ಮರೆಮಾಚುವ ಮುಗುಳ್ನಗೆ ಹೇಳದೆ ಆಹ್ಲಾದ, ವಿಷಾದ
ನಂಬುತದನೆ ನಂಬಿಸಿತು ಹೊರಗಿಂದೊಳಗೆ ಹೊಕ್ಕಾಯ್ತು
ಹೋಗುವ ದಾರಿ ಸಿಕ್ಕು, ರಹದಾರಿ – ಬೇಕೆನಿಸಿದಾಗ ಲಗ್ಗೆ..

– ನಾಗೇಶ ಮೈಸೂರು

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s