00845. ಕಗ್ಗಕೊಂದು ಹಗ್ಗ – 19


00845. ಕಗ್ಗಕೊಂದು ಹಗ್ಗ – 19
___________________________

ಮಂಕುತಿಮ್ಮನ ಕಗ್ಗ – 19 ರ ಟಿಪ್ಪಣಿ ರೀಡೂ ಕನ್ನಡದಲ್ಲಿ

00844. ಹುತ್ತಗಳೇ ಸುತ್ತಾ..


00844. ಹುತ್ತಗಳೇ ಸುತ್ತಾ..
__________________


ನಾಗರಗಳ ಹುತ್ತ
ನಾಗರ ಹಾವೇ ಸುತ್ತ ಮುತ್ತ
ಇಲ್ಲೀ ತನಕ ಎಲ್ಲಿತ್ತಾ ?
ಮನದಾ ಹುತ್ತದೆ ಬಚ್ಚಿತ್ತಾ ?

ಇದ್ದರು ಕಾಣದ ಚಿತ್ತ
ಹೇಗೋ ಮುಸುಕಲಿ ಬದುಕಿತ್ತಾ
ಹೇಳಿದ ಹೇಳದ ಮಾತೆಲ್ಲ
ಸಹನೀಯವಾಗಿಸಿ ಗೊಂದಲ..

ಸಜ್ಜನಿಕೆಯ ಸಂಭಾವಿತ
ನೋಯಿಸದಂತೆ ನುಡಿದು ಹಿತ
ಸಂಭಾಳಿಸುತಿದ್ದ ಅವಸರ
ಇಂದೆಲ್ಲಿ ಮಾಯಾ ಸಡಗರ ?

ಇಂದಾಗಿವೆ ಬೆರಳ ತುದಿ
ಲೇಖನಿ ಮಸ್ತಿಷ್ಕದ ಬೇಗುದಿ
ಬಂದದ್ದೆಲ್ಲಾ ಬಿಕ್ಕಳಿಸುತ್ತಾ
ಅನಾವರಣ ಕದಡುತ ಸ್ವಾಸ್ಥ್ಯ..

ವೇಗವೆ ಮಾದ್ಯಮವಿಂದು
ವಾದಾವಿವಾದ ಚರ್ಚೆಯೆ ಬಂಧು
ಒಗ್ಗೂಡಿಸುವ ಸಾಮಾಜಿಕ ತಾಣ
ವಿಭಜಿಸುತಿಹ ಕೃತಿಮಕೆ ನಿತ್ರಾಣ..

ಸರಿ ಬಯಲಿತ್ತು ಅಂತರ್ಜಾಲ
ಬರಿ ಹುತ್ತಗಳಿಗೀಗಾವಾಸ ನೆಲ
ವಾಣಿಜ್ಯ ಘನ ಯಾಂತ್ರಿಕ ವಿಧಾನ
ಕಟ್ಟಲೆಲ್ಲಿಲ್ಲಿ ಧರ್ಮಕರ್ಮದಾಸ್ಥಾನ..?

– ನಾಗೇಶ ಮೈಸೂರು

(Picture from : http://hallihyda.blogspot.sg/2013/06/blog-post.html)

ಹುತ್ತ,ಸುತ್ತ,ಸುತ್ತಾ,ನಾಗೇಶ,ಮೈಸೂರು,ನಾಗೇಶಮೈಸೂರು,nagesha,mysore, nageshamysore