00862. ಸಿಂಧುಗೊಂದು ಸಲಾಂ..


00862. ಸಿಂಧುಗೊಂದು ಸಲಾಂ..
________________________


ಸಿಂಧು ಗೊತ್ತಾ ನಿನ್ನಿಂದ
ನಾವೆಲ್ಲಾ ಮರೆತಿದ್ದು ಕ್ರಿಕೆಟ್ಟು ?
ಹಿಡಿದು ಬ್ಯಾಡ್ಮಿಂಟನ್ನಿನ ಬ್ಯಾಟು !

ಬಿಡು ಬೇಸರ ಗೊತ್ತಿತ್ತಲ್ಲ ಮೊದಲೇ
ಸಿಕ್ಕೇ ಸಿಗುವುದೊಂದು ಒಲಂಪಿಕ್ ಪದಕ
ಚಿನ್ನ ಬೆಳ್ಳಿ ಬರಿ ಕೊಡು-ಕೊಳ್ಳೊ ಲೆಕ್ಕ !

ಕಾದೂ ಕೂತಿತ್ತಲ್ಲ ನಾಡು
ದೀಪ ಸಾಕ್ಷಿಗಳ ಜತೆ ಬಂದೆ ಸಿಂಧು
ನೋಡೆಷ್ಟೊಂದು ಜನ ನಿನಗೀಗ ಬಂಧು !

ತೊಟ್ಟೆ ಶಟಲಿನ ಬಟ್ಟೆ ಧ್ಯಾನ
ತ್ಯಜಿಸಿ ಬಣ್ಣದ ಬದುಕ ಆರಾಮ
ಸಾಧನೆ ನಗುತಿದೆ ನೋಡೀ ಆಯಾಮ !

ಗೊತ್ತಾ ನೀ ಮಾಡಿದ್ದೇನು ಹುಡುಗಿ ?
ಕೋಟಿ ಹೃದಯ ಗೆದ್ದಿದ್ದಲ್ಲ ಹಿರಿಮೆ
ನಿನ್ನ ಹೆಸರಡಿ ಒಗ್ಗೂಡಿದವೆಲ್ಲ ಮತ್ತೊಮ್ಮೆ !


– ನಾಗೇಶ ಮೈಸೂರು
(Picture received in whatsapp)