00912. ಏನೂ ಬೇಡ ಸುಮ್ಮನಿರು..


00912. ಏನೂ ಬೇಡ ಸುಮ್ಮನಿರು..
______________________


ಪ್ರೀತಿಸು ಇಲ್ಲಾ ದ್ವೇಷಿಸು
ಎರಡರಲೊಂದವನ ಮೂಸೆ
ರಾಜಕಾರಣ ವಿಪರ್ಯಾಸ ||

ನಿರ್ಲಿಪ್ತತೆ ಸಲ್ಲದು ತಟಸ್ಥತೆ
ನಿರ್ಲಕ್ಷಿಸಲಾಗದ ಪ್ರಭಾವಳಿ
ಗುಂಪು ಗದ್ದಲ ಸರಿತಪ್ಪ ಹಾವಳಿ ||

ಭಕ್ತನಾಗು ಇಲ್ಲ ಟೀಕಿಸುವವ
ವಿಚಾರ ವಿಕಾರ ಲೆಕ್ಕಿಸದ ನಡೆ
ಹುಳುಕಾಟ ಎಲ್ಲೆಡೆ ಹುಡುಕಾಟ ||

ಭ್ರಷ್ಟಾಚಾರ ಇಲ್ಲಾ ಶಿಷ್ಟಾಚಾರ
ಬರಿ ತಪ್ಪೇ ಹುಡುಕಿದರೆ ಘೋರ
ಆದರೂ ಬಿಡದ ಗ್ರಹಚಾರ ಗತಿ ||

ಹದ್ದಿನ ಕಣ್ಣಲಿ ಕಾಯುವ ಪರಿ
ಕೋಟೆಯಾಗುತಿದೆ ತಪ್ಪಿಗೆ ಬಿಡದೆ
ಎಚ್ಚರಿಸುತ ಗಳಿಗೆ ಕ್ಷಣ ಕ್ಷಣಗಣನೆ ||

ಆಯ್ಕೆಯಾದ ಕಾಲಗಣನೆ ಮುಕ್ತ
ಬಿಟ್ಟುಬಿಡಬೇಕು ಕೊಡಬೇಕು ತಾವು
ಸಹಜದಲ್ಲಾಗಲಿ ಬೇನೆ ಪ್ರಸವ ||

ಆಗಲು ಪ್ರಸ್ತುತ ಹಚ್ಚದೆ ಬೆಂಕಿ
ಉರಿವ ಮನೆಯ ಗಳವ ಬಿಟ್ಟು
ತಂತಮ್ಮ ಪರಿಧಿ ಪ್ರಭಾವಕೆ ದುಡಿತ ||

ಎಲ್ಲಕು ಎಲ್ಲರಿಗು ಕೂಡಿ ಕಾಲ
ಬಂದಾಗ ಸಂಕಲನ ವ್ಯವಕಲನ
ಮಾಡಿದ್ದುಣಿಸುವುದು ಮಹಾರಾಯ ||

ಏನೂ ಬೇಡ ಸುಮ್ಮನಿರು ಸಹನೆ
ಕಟ್ಟದೆ ಎಲ್ಲೆಲ್ಲೋ ಮನೆ ಸುಮ್ಮನೆ
ಮನ ಅನಿಕೇತನವಾಗಲಿ ಮನಸಾರೆ ||

– ನಾಗೇಶ ಮೈಸೂರು
18.09.2016
(Picture source internet / Facebook )

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s