00916. ಕನ್ನಡ ಸಿರಿಗನ್ನಡಿ…


00916. ಕನ್ನಡ ಸಿರಿಗನ್ನಡಿ…
_________________________________________

(ಕನ್ನಡ ರಾಜ್ಯೋತ್ಸವ – 31 ದಿನ ಬಾಕಿ !)


ಕನ್ನಡಂ ಸಿರಿಗನ್ನಡಂ ಕನ್ನಡಿ ನಲ್ನುಡಿ ಗಾರುಡಿ
ಗದ್ಯಂ ಪದ್ಯಂ ಹೃದ್ಯಂ ಕನ್ನಡಿಗರೆದೆ ಗರ್ಭಗುಡಿ
ಗೂಢಂ ನಿಗೂಢಂ ಹೃದಯವೈಶಾಲ್ಯ ಮೂಲಂ
ಗಾಢಾಲಿಂಗನ ಗಾಢಂ, ಮನಕುಲವೊಂದೇ ವಲಂ ||

ನೇತ್ರೆ ಕಾವೇರಿ ಕಪಿಲ ಹಾರಂಗಿ ತುಂಗಾ ಭದ್ರಂ
ತೀರ ಸಾಗರ ಕರಾವಳಿ ನಾಗರೀಕತೆ ಸುಭದ್ರಂ
ಮಲೆನಾಡು ಬಯಲುಸೀಮೆ ಉತ್ತರದಕ್ಷಿಣ ಧ್ರುವಂ
ದ್ರಾವಿಡ ಮುಕುಟ ವಿನೀತಂ ಕೊಡುಗೈ ಕರ್ಣ ವಂಶಂ ||

ತುಳುನಾಡು ಕೊಂಕಣಿ ಕೊಡವ ನೆಲದ ಗಮನೀಯಂ
ಘಮಘಮಿಪ ಏಲಕ್ಕಿ ಕಾಫಿ ಗಜದಂತ ಗಂಧ ಸುಗಂಧಂ
ಆಗುಂಬೆ ಶರಾವತಿ ಜೋಗಂ ಸಹ್ಯಾದ್ರಿ ಸಹಯೋಗಂ
ಯಾಣ ಭಸ್ಮಾಸುರ ತಾಣಂ ಮುರುಡೇಶ್ವರ ಶಿವ ದೇಗುಲಂ ||

ಶೃಂಗೇರಿ ಹೊರನಾಡು ಕೊಲ್ಲೂರು ಕುಕ್ಕೆ ಧರ್ಮಸ್ಥಳಂ
ಉಡುಪಿ ಮೇಲ್ಕೋಟೆ ಬೀಜಾಪುರ ಶ್ರವಣ ಬೆಳಗೊಳಮ್
ಚಿತ್ರದುರ್ಗ ಶಿವಗಂಗಾ ಶಿವಸಮುದ್ರ ರಾಮನಗರಂ
ಚೆನ್ನಪಟ್ಟಣಂ ಬೆಳಗಾವಿ ಕಾಕನ ಕೋಟೆ ಬಂಡೀಪುರಂ ||

ಮೈಸೂರು ಮಂಗಳೂರು ಬೆಂಗಳೂರು ಉದ್ಯಾನವನಂ
ಹುಬ್ಬಳಿ ಧಾರವಾಡ ಕನ್ನಡ ಸೊಗ ಬಸವೇಶ್ವರ ಜಯಂ
ದಾಸಂ ಸರ್ವಜ್ಞಮ್ ಕುವೆಂಪು ಕಾರಂತ ಮಾಸ್ತಿ ಅಸ್ತಿತ್ವಂ
ಮುದ್ದಣ ಕುಮಾರವ್ಯಾಸ ನೃಪತುಂಗ ಅಮುಕ್ತ ವಿವರಂ ||

– ನಾಗೇಶ ಮೈಸೂರು
19.09.2016

(ಯಾವುದೇ ಸಿದ್ಧತೆಯಿಲ್ಲದೆ ಮನಸಿಗೆ ತೋಚಿದ ಹೆಸರುಗಳನ್ನೂ ಬಳಸಿದ್ದೇನೆ – ಸಾಂಕೇತಿಕವಾಗಿ. ಉದ್ದೇಶಪೂರಿತವಾಗಿ ಯಾವುದನ್ನು ಸೇರಿಸಿಲ್ಲ ಅಥವಾ ಬಿಟ್ಟಿಲ್ಲ. ಹೀಗಾಗಿ ಬಿಟ್ಟು ಹೋಗಿರುವ ಎಷ್ಟೋ ಹೆಸರುಗಳಿಗಾಗಿ ಕ್ಷಮೆ ಇರಲಿ. ಆಗಲೇ ಹೇಳಿದಂತೆ ಹೆಸರುಗಳಿಲ್ಲಿ ಸಾಂಕೇತಿಕ ಮತ್ತು ಪ್ರಾತಿನಿಧಿಕ ಮಾತ್ರ 😊🙏)

(Photo from internet / Facebook)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s