00920. ಕೊಡಗಿನ ಕಾವೇರಿ, (ಶರಪಂಜರದಲ್ಲಿ )


00920. ಕೊಡಗಿನ ಕಾವೇರಿ, (ಶರಪಂಜರದಲ್ಲಿ )
________________________________


ಕಾವೇರಿ … ಕಾವೇರಿ….ಕಾವೇರಿ …

ಕೊಡಗಿನ ಕಾವೇರಿ.. ಕಾವೇರಿ
ನೀನೇಕಿಷ್ಟು ಹಠಮಾರಿ ?
ಕನ್ನಡ ಕುಲನಾರಿ .. ಕಾವೇರಿ
ನೀನ್ಯಾಕಾದೆ ಇಷ್ಟು ಕುಲಮಾರಿ ? || ಕೊಡಗಿನ ||

ಗಂಧದ ಸೀಮೆಯ ಸೌಂದರ್ಯ ಸಿರಿಯೆ … ಆಹಾ
ಯಾಕೆ ನೀನಾದೆ ಈ ನೆಲದ ಕಿರಿಕಿರಿಯೆ ?
ನೆರೆಮನೆ ಬಾಳಿನ ಭಾಗ್ಯದ ನಿಧಿಯೆ .. ಆಹಾ
ಯಾರಲ್ಲಳುವುದೆ ನೀನ್ಹೀಗೆ ತೊರೆದ್ಹರಿಯೆ || ಕೊಡಗಿನ ||

ನೀನೇ ಹುಟ್ಟಿದ ನಿನ್ನ ತವರಿಗೆ ಕೈ ಕೊಟ್ಟೆ
ಯಾರನ್ನೇ ಕೇಳ್ನೋಡು ಉರಿಯುತ್ತಿದೆ ಹೊಟ್ಟೆ
ಆಗದೆ ನೀನೆಮ್ಮ ಜೀವನಾಡಿ ಜೀವನದಿ ನಾರಿ
ಯಾಕಾದೆ ನಮ್ಮ ಪಾಲಿಗೆ ಶರಪಂಜರದ ಕಾವೇರಿ ? || ಕೊಡಗಿನ ||

ದೂರದಿ ಕೇಳುತಿದೆ ಮೊರೆಯುವ ನಿನ್ನಯ ವಾಣಿ
ನಾ ಬಂದೆ ನಾ ಹೋದೆ ನಾ ಗೆದ್ದೆ ಹುಚ್ಚಿನ ದೋಣಿ
ಕಟ್ಟಿಕೊಂಡವಳು ನಿನ್ನ ಬಿಟ್ಟು ಬದುಕಲೆಂತು ರೈತ
ಇದ್ದವರಿಗೆ ಇಲ್ಲ ಕೊಟ್ಟು ಕೊಳ್ಳುವುದೇನನು ಸ್ವಾರ್ಥ || ಕೊಡಗಿನ ||

– ನಾಗೇಶ ಮೈಸೂರು
22.09.2016
(Picture from internet / Facebook)

(Really is not to blame river Mother Kaveri – at the end it is really we people who are responsible..)

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s