00973. ತುರುಬಿನ ಮದನಿಕೆ ಭಾರಕೆ..


00973. ತುರುಬಿನ ಮದನಿಕೆ ಭಾರಕೆ..
___________________________________


ತ್ರಿಭಂಗಿ ಮೃದಂಗ, ಏನೀ ಅಂಗಾಂತರಂಗ ?
ಝೇಂಕರಿಸುತಿದೆಯೇನೋ ಸಂಗೀತಾ ತರಂಗ
ಹೆಜ್ಜೆ ಗೆಜ್ಜೆ ತಿಲ್ಲಾನ ಕುಣಿಸಿ ಕಾಲ್ಬೆರಳಲೆ ದ್ರೋಣ
ಸ್ಪುರಿಸಿದೆಯೆಲ್ಲಾ ಭಾವ ಅಸು ನೀಗೀತೆ ಮೌನ ! ||

ಕೈಲ್ಹಿಡಿದ ಮದನನ ಬಿಲ್ಲು ಸೊಲ್ಲಾಗುತ್ತಿದೆಯಲ್ಲ !
ಮೀಟಿ ನಾಟಿದ ಬಾಣ ತೂರುತಿದೆ ಎದೆಯೊಳಗೆಲ್ಲ
ಕಟಿಬಂಧ ಕನಕಾಭರಣ ವಸ್ತ್ರ ವೈಡೂರ್ಯ ಕುಣಿತ
ಮೆಟ್ಟಿದೆಡೆಯೆಲ್ಲ ಅನುರಣಿತ ಸಂಭ್ರಮ ರಿಂಗಣಿಸುತ ||

ಭಳಿರೆ ! ಸ್ತನಭಾರ ಘನಭಾರ ಜಘನಭಾರ ತುಲಾಭಾರ
ಅವಿರತ ನಾಟ್ಯ ಮುರಿದ ಕೊರಳ್ಹಾರ ಬೆಚ್ಚಿದ ಮನಭಾರ
ಜಾರಿದ ಮನದಾಟಿ ಭೂತ ಪ್ರಸ್ತುತ ಭವಿತ ಕಾಲಾತೀತ
ಭಂಗಿಯ ಭಂಗಿ ಮತ್ತಲಿ ನೋವಿನ ದಾಹಕೆ ತಂಪೆರೆಯುತ ||

ಅರೆ ನಿಮಿಲಿತ ನೇತ್ರ ತಗ್ಗಿಸಿ ತಲೆ ಸೆಲೆ ಅಂತರ್ದರ್ಶನ
ನೋಡುಗನೆದೆಯೊಳಗೇನೋ ಕಾತರಿಸಿ ಅಂತರ್ಯಾನ
ನೀಳ ನಾಸಿಕ ಅರೆ ಬಿರಿದ ಬಿಲ್ಲಿನಧರ ತೊಂಡೆಯಾಕಾರ
ಹೋಲಿಕೆಗಳೆಲ್ಲ ವ್ಯರ್ಥ ತುಂಬು ಕೆನ್ನೆಯ ಜೇನಿನ ಧಾರಾ ||

ತುರುಬು ಕಟ್ಟಿದ ಲಲನೆ ಗುಂಗುರ ಶೃಂಗಾರ ಭೃಂಗ ಲೀಲೆ
ದಿಕ್ಕು ತಪ್ಪಿಸೆ ದುಂಬಿಯ ಕರ್ಣ ತುಂಬಿದ ಹಿರಿ ಕಿವಿಯೋಲೆ
ಹೂವ ಮುಡಿಯಲೇಕೆ ಬಿಡು ಕಲ್ಲೇ ಹೂವಾಗರಳಿದ ಬಾಲೆ
ಯೌವನಕೆ ಜವ್ವನಿಕೆ ಹೊರಲಾರದೆ ಹೊತ್ತ ಆಕಾಂಕ್ಷೆ ತಾಳೆ ||

– ನಾಗೇಶ ಮೈಸೂರು
(Photo from Internet )

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s