01045. ಮಂಕುತಿಮ್ಮನ ಕಗ್ಗ ೪೦ ರ ಟಿಪ್ಪಣಿ


01045. ಮಂಕುತಿಮ್ಮನ ಕಗ್ಗ ೪೦ ರ ಟಿಪ್ಪಣಿ

ಮಂಕುತಿಮ್ಮನ ಕಗ್ಗ ೪೦ ರ ಟಿಪ್ಪಣಿ, ರೀಡೂ ಕನ್ನಡದಲ್ಲಿ…
ಸಂಧ್ಯೆಯಾ ಮುಸುಕಲಿ ಮಿಂಚಂತೆ ಬಂದು ಹೋಗುವನೇನು ?

01044. ನಿತ್ಯನೂತನ- ಮರಳು – ಹಕ್ಕಿ – ಗೋಲ


01044. ನಿತ್ಯನೂತನ- ಮರಳು – ಹಕ್ಕಿ – ಗೋಲ

ಲೇ ನಿತ್ಯ, ನೂತನ ಕೇಳ್ರೆ ನನ್ನ ಮಾತು
ಮರಳು ಮಾತು ಅನಿತ್ಯ, ಅಲ್ಲ ವಿನೂತನ
ಹಕ್ಕಿ ಹಾಡಿದರೂ ನಿತ್ಯ, ನೂತನ ಗೊತ್ತಾ ಗಾಯನ ?
ಅಂತಿರಬೇಕು ಭೂಗೋಲದಲಿ ನಿತ್ಯವಾಗಿಸಿ ನೂತನ !

– ನಾಗೇಶ ಮೈಸೂರು
01.01.2017
chouchoupadi

01043. ದೈವದ ಸುತ್ತ


01043. ದೈವದ ಸುತ್ತ
______________


(೦೧)
ಕುಡಿ ಕುಣಿದು
ದಣಿವಾಗೋ ಹೊತ್ತಲಿ
– ನೆನಪಾಗಲಿ

(೦೨)
ಹೊಸತ ಸಿಹಿ
ಸವಿವವರೆ ಎಲ್ಲ
– ಕಹಿ ಅವಗೆ

(೦೩)
ತೇಗು ಮೆಲುಕು
ಕುಡಿದ ಗುಂಗು ಮಂಕು
– ಹುಡುಕವನ

(೦೪)
ಕುಡಿ ಕುಣಿದು
ಕುಪ್ಪಳಿಸಿ ದಣಿದು
– ಒಮ್ಮೆ ಸ್ಮರಿಸು

(೦೫)
ಮೊರೆ ಖಚಿತ
ಢಿಕ್ಕಿಯಾದ ಹೊತ್ತಲಿ
– ಓ ಭಗವಂತ

(೦೬)
ನೆನಪಾಗಿದ್ದು
ಸಂಕಟ ಬಂದ ಹೊತ್ತು
– ನಾಮಸ್ಮರಣೆ

(೦೭)
ಕಾಲದ ಗಡಿ
ದಾಟಿಸೊ ನಿಯಾಮಕ
– ನೀ ಗಡಿಯಾರ

(೦೮)
ಮರಳಿ ಗೂಡು
ಸೇರೇ ಸುಲಭ ಅಲ್ಲ
– ಭೂತ ಕಾಲಕೆ

(೦೯)
ನಿಸರ್ಗದಲಿ
ನವ ಋತುವನಿಟ್ಟ
– ಚಾಣಾಕ್ಷ ದೈವ

(೧೦)
ಆರಾಧಿಸುತ
ಏನೆಲ್ಲವ ಮರೆತೆ
– ಅಯೋಗ್ಯ ಮನ

– ನಾಗೇಶ ಮೈಸೂರು
೦೧.೦೧.೨೦೧೭

01042. ಭೂತ – ಪ್ರಸ್ತುತ – ಭವಿತ


01042. ಭೂತ – ಪ್ರಸ್ತುತ – ಭವಿತ
___________________________


(೦೧)
ಹದಿನೇಳರ
ತೆಕ್ಕೆಗೆ ಸಿಕ್ಕಿ ಚೂರು
– ಆ ಹದಿನಾರು.

(೦೨)
ಹರೆಯ ಸುಗ್ಗಿ
ಹದಿನಾರಕ್ಕೆ ಮಗ್ಗಿ
– ಹದಿನೇಳಕ್ಕೆ.

(೦೩)
ಯಥಾಪ್ರಕಾರ
ಪ್ರತಿಜ್ಞೆ ಪ್ರತಿಕಾರ
– ಮರುಕಳಿಸಿ.

(೦೪)
ಯಾರೂ ನೋಡಿಲ್ಲ
ಹದಿನೇಳರ ಗರ್ಭ
– ಹದಿನಾರಲ್ಲಿ.

(೦೫)
ಬೀಜ ಬಿತ್ತದೆ
ಹದಿನಾರಾಗುವುದೆ
ತಾ ಹದಿನೇಳು ..

(೦೬)
ಉತ್ತಿ ಬಿತ್ತಿದ್ದು
ಉಚಿತ ಫಲಾಫಲ
ದೈವ ನಿಯಮ..

(೦೭)
ಭೂತದ ಸಸಿ
ವರ್ತಮಾನದ ಗಿಡ
ಭವಿತ ಮರ..

(೦೮)
ಹದಿನಾರಕ್ಕೆ
ಸೊಕ್ಕು ಹದಿನೇಳಕ್ಕೆ
– ಕಲಿತು ಬಿಡು..

(೦೯)
ಯಾವ ಕವಿಯೂ
ಬಿಡದ ಅವಕಾಶ
– ಹೊಸ ವರುಷ..

(10)
ಓ ಹದಿನೇಳು
ನಿದ್ದೆಯಿಂದ ಎದ್ದೇಳು
– ದೂರದ ಹಾದಿ.

– ನಾಗೇಶ ಮೈಸೂರು
01.01.2017

01041. ಕವಿಶೈಲದಾಚೆ..


01041. ಕವಿಶೈಲದಾಚೆ..
__________________


ಬತ್ತಿ ಉರಿಸುತಿದೆ ಕವಿಶೈಲ
ಏರು ಏದುಸಿರು ಬಿಸಿಲ ಬಲ
ಪ್ರಖರ ಕವಿ ಕಾಂತಿ ಅಚಲ
ಹಚ್ಚಿ ದೀವಿಗೆಯ ಚಿರಕಾಲ..

ಯಾರಾತ್ಮದ ದನಿ ಮುಕುಟ
ಕವಿತೆ ಪಿಸುಗುಟ್ಟುವ ನಿಕಟ
ಹಸಿರು ವನರಾಜಿ ಪ್ರಶಾಂತಿನಿ
ಬಸಿರು ಭಾವನೆಗಳ ಸಂದಣಿ..

ನಿದಿರೆ ಮುದ್ರೆ ತಪೋವನ
ತಾಪಸಿಯವಶೇಷ ತಿಲ್ಲಾನ
ಮನನರ್ತನ ಬೃಹನ್ನಳೆ ಸಖ್ಯ
ಕಲ್ಲು ಮಣ್ಣು ಬಂಡೆ ಕಂಬಕು ಲಾಲಿತ್ಯ..

ಪುನಶ್ಚೇತನ ಅಂತರಂಗಿಕ ಸಮ್ಮೋಹ
ಕಿಡಿ ಪಸರಿಸಿ ಕವಿ ಚೇತನದ ದಾಹ
ನಮಿಸಿ ಮನ ನವಿರು ಸ್ಪರ್ಶದ ಪ್ರೇರಕ
ಮತ್ತೆ ಮತ್ತೆ ಗತದತ್ತ ಚರಿತೆ ಚುಂಬಕ..

ಧಾರಾಕಾರ ಸುರಿಮಳೆ ಸುಳಿಗಾಳಿ ವಾಸನೆ
ಬಡಿದೆಬ್ಬಿಸಿದ ಹೃದ್ಘೋಷದ ಅನುರಣನೆ
ಹೊತ್ತಿಸಿದೆ ಸ್ಫೂರ್ತಿಯ ಕಿಚ್ಚು ಕಾವ್ಯದ ಸೊಗ
ಮುಗ್ದ ನಗುವಿನ ಮಗುವಾಗುತಿದೆ ಬೆಳಗಿಸಿ ಜಗ..

– ನಾಗೇಶ ಮೈಸೂರು
೩೦.೧೨.೨೦೧೬

01040. ಹದಿನಾರದಿನೇಳದಿನೆಂಟು..


01040. ಹದಿನಾರದಿನೇಳದಿನೆಂಟು..
______________________


ಹದಿನೇಳು
ಮೈ ಮುರಿದೇಳು
ಹದಿನಾರಿನ್ನು ಪಾಳು
ಹರೆಯದ ಗೋಳು..

ಹದಿನೇಳು
ಏಯ್! ಸ್ವಲ್ಪ ತಾಳು
ಸಿಕ್ಕು ಜಿಗಟು ಬಾಳು
ದೇಕುತ್ತಿಹೆ ಸೇರೆ ನಿನ್ನ ಬಗಲು..

ಹದಿನೇಳು
ಹದಿಹರೆಯ ತೆಳು
ಬರದಿದ್ದರೂ ಹೊಗಳು
ಬಾರದಿರಲಿ ತೆಗಳು…

ಹದಿನೇಳು
ಕರಗಿಸಿಬಿಡು ಧೂಳು
ಕಾವಲು ನಾಯಂತೆ ಬೊಗಳು
ಬರಬೇಕೆಲ್ಲ ಒಳ್ಳೆ ದಿನಗಳು…

ಹದಿನೇಳು
ಹದಿ’ನಾರು’ ಬಿಟ್ಟೇಳು
ಹದಿ’ನೆಂಟ’ಕೆ ಕುಂಟಲು
ಬೇಕಿದೆ ಸದ್ದಿರದ ಗಂಟಲು..

ಹದಿನೇಳು
ಷೋಡಶಿ ಕೈಬಿಟ್ಟಳು
ಪಕ್ವತೆಯೀಗ ನಿನ್ನಯ ಕೊರಳು
ಬಲ್ಲೆ ಕೊಡಲೊಲ್ಲೆ ನೀ ಬಿಟ್ಟಿ ಕೂಳು..

ಹದಿನೇಳು
ಬಾಯಿಬಿಟ್ಟು ಹೇಳು
ಹಾಕಿಸಿ ಮುಕ್ತ ಹೆಜ್ಜೆಗಳು
ಫ್ರೌಢ ಹದಿನೆಂಟಕೆ ತೆರಳು..

– ನಾಗೇಶ ಮೈಸೂರು
೦೧.೦೧.೨೦೧೭
(ಹದಿನೇಳರ ಶುಭಾಶಯಗಳು 😊🙏👍💐)

(Picture – Creative Commons)