01124. ಕಾಯುತಿದೆ ಸ್ವಗತ


01124. ಕಾಯುತಿದೆ ಸ್ವಗತ
_____________________


ಚಿಲುಕದ ಸದ್ದಾಯಿತು
ಮತ್ತೆ ತಲೆಯೆತ್ತಿ ನೋಡಿದೆ
ಹಾಳು ಗಾಳಿ ಕದ ಸರಿಸಿತ್ತು
ಅವನ ಸದ್ದಿಲ್ಲ ಸುಳಿವಿಲ್ಲ..

ಹೆಜ್ಜೆ ಗುರುತಿಗೂ ಗದ್ದಲ
ಬಿಡದೆ ಆವರಿಸಿ ನೆಲವೆಲ್ಲ
ಇಡಲೆಲ್ಲಿ ಅಳಿಸದ ಹಾಗೆ ?
ಅತ್ತರು ಕಥೆ ಮುಗಿದಿಲ್ಲ..

ಹೇಳಿ ಹೋಗಲಿಲ್ಲ ಜನ
ಕೂರ್ಮದ ಜನ್ಮ ಅನಿಸಿತ್ತು
ಚಿಪ್ಪೊಳಗಿಕ್ಕದೆ ತಲೆ ಕಾಲು
ಬಾವಿ ಕಪ್ಪೆಯಾದರು ಸಾಕಿತ್ತು..

ಮಾಡಿದ್ದಾದರೂ ನಾನೇನು ?
ನಾನಾಗುವೆನೆಂದ ಸ್ವಗತ
ನೀನಾಗುವುದೆಂತು? ನಾನಲ್ಲ
ಅರಿಯದೆ ನಡೆದಿದ್ದಷ್ಟೇ ದಿಟ..

ಹಾಳಾದ ಮನಸ ಚಟ
ಬಂದರು ಬರಬಹುದಾರೊ
ತಂತಾನೆ ಅನಿಸಿ ತೆರೆದಿಟ್ಟ
ಬಾಗಿಲಲು ಹವೆ ನಿಟ್ಟುಸಿರು..

– ನಾಗೇಶ ಮೈಸೂರು
೦೫.೦೨.೨೦೧೭

(Picture source: internet / social media)