01141. ಜನರಲ್ ಸರ್ಜನ್ನರ ಸಂದಿಗ್ದ ಸ್ಥಿತಿ ..


01141. ಜನರಲ್ ಸರ್ಜನ್ನರ ಸಂದಿಗ್ದ ಸ್ಥಿತಿ ..
_______________________________

ಹಿನ್ನಲೆ: ನಿನ್ನೆ ಒಂದು ಫೇಸ್ಬುಕ್ ಪೋಸ್ಟಿನಲ್ಲಿ ಡಾ. ನಾಜ್ ರವರು ಜನರಲ್ ಸರ್ಜನ್ನಿನ ಬಗ್ಗೆ ಬರೆದ ಇಂಗ್ಲಿಷ್ ಕವನವೊಂದನ್ನು ನೋಡಿದ್ದೆ. (ಯಾರ ಪೋಸ್ಟ್ ಅಂತ ನೆನಪಾಗುತ್ತಿಲ್ಲ ಕ್ಷಮಿಸಿ, ಕವಿತೆ ಕಾಪಿ ಮಾಡಿಕೊಂಡು ಮರಳಿ ಬರುವಷ್ಟರಲ್ಲಿ ಪೇಜು ರಿಫ್ರೆಶ್ ಆಗಿಹೋಗಿತ್ತು) . ಅದನ್ನು ಕನ್ನಡಕ್ಕೆ ಅನುವಾದಿಸುವ ಪ್ರಯತ್ನದ ಫಲಿತ ಇಲ್ಲಿದೆ. ಮೂಲ ಪೋಸ್ಟ್ ಹಾಕಿದ್ದವರು (ಅವರು ವೈದ್ಯರೇ ಇರಬೇಕು) ಯಾರೆಂದು ಗೊತ್ತಿದ್ದರೆ ಕಾಮೆಂಟು ಹಾಕಿ, ಒಂದು ಥ್ಯಾಂಕ್ಸ್ ಹೇಳಬೇಕವರಿಗೆ. ಇಂಗ್ಲಿಷಿನ ಮೂಲ ಕವಿತೆ ಕೆಳಗೆ ಸೇರಿಸಿದ್ದೇನೆ.

ಜನರಲ್ ಸರ್ಜನ್ನರ ಸಂದಿಗ್ದ ಸ್ಥಿತಿ ..
_______________________________


ಸರ್ಜರಿಯ ಚಾಕು ಕೈಯಲಿ,
ಏನೆಲ್ಲ ನಿವಾರಿಸುವ ಕುಶಲತೆ ಮೆದುಳಲ್ಲಿ
ಸರ್ಜನ್ನರು ಅವರುಗಳು..
ವಿಭಿನ್ನ ವಿಶಿಷ್ಟ ಉನ್ನತ ಮಾದರಿ ಸಂಕುಲ.

ನಿನ್ನಿನ ವರ್ಷಗಳ ಆಪತ್ಬಾಂಧವರವರು
ಯಾವ ವೀರ ಸೇನಾನಿಯ ಕದನಕು ಕಮ್ಮಿಯಿರದವರು.
ಕಳೆದುಹೋದ ಮುಗುಳ್ನಗೆಯ ಮರಳಿಸುತಿದ್ದರು
ಇರಲಿ ಯಾವುದೇ ವ್ಯಾಧಿ ತಲೆ ಬುರುಡೆಯಿಂದ ಪೈಲ್ಸಿನವರೆಗೂ

ಶಿಸ್ತುಬದ್ಧ ಸುಸಜ್ಜಿತ ಎಚ್ಚರಿಕೆಯ ನಡೆ ಅವರದು,
ಆಗಿದ್ದರೇನು ಕೊನೆಯಿಲ್ಲದ ಕರ್ತವ್ಯದ ಗಂಟೆಗಳು,
ಮುಖದಲದೆ ಮಂದಹಾಸ, ಅವಿತಿಟ್ಟೆಲ್ಲಾ ದಣಿವು….
ಕಾರಣವಲ್ಲಾ ವಿನಾಃಕಾರಣ ವೃತ್ತಿಯಲ್ಲ ಆತ್ಮೀಯ ಪ್ರವೃತ್ತಿ

ಆ ಶಕ್ತಿಯುತ ಚಾಕು ಮೂನೆಚಿಲ್ಲ ಮೊದಲಂತೆ
ಕಳುವಾಗುತಿದೆ ಹೊಳಪು ಕ್ರಮೇಣ…ಕಾಲದ ವ್ರಣದಲಿ
ನಿನ್ನೆ ಮೊನ್ನೆ ತಾನೇ ಇಂದಿನ ಹಳತೇ ಹೊಸದಾಗಿರುತ್ತಿತ್ತು
ಅವನು ಮಾಡಿದ್ದೆಲ್ಲಾ ಯಾಕೋ ಇದ್ದಕ್ಕಿದ್ದಂತೆ ಮಸುಕಾಗಿ ಮಬ್ಬಲ್ಲಿ.

ಇಂದಿನ ಸನ್ನಿವೇಶ ಅದೆಷ್ಟು ಬಡಪಾಯಿ
ನೋಡುತ ತೃಣದಲ್ಪವನೆ ಹಿಗ್ಗಿಸುತ ಹೆಚ್ಚೆಚ್ಚು ಅಗಲವಿಲ್ಲದ ಆಳ
ನಖಶಿಕಾಂತ ಹರಿದು ಹಂಚಿ ರೋಗಿಯ ವಿಭಜಿಸಿ ತಜ್ಞರ ನ್ಯಾಯ
ಸಜ್ಜನ ಜನರಲ್ ಸರ್ಜನನಿಂದು ಕಳೆದುಕೊಂಡಿದ್ದಾನೆ ಮನೋಸ್ಥೈರ್ಯ..

ಸಂಕೀರ್ಣ ಸಮಾಜದ ಜತೆಗೆ ಕಠಿಣ ಕಾನೂನಿನ ಕಾಟ
ಸಿಕ್ಕಷ್ಟೂ ಸೀರುಂಡೆ ಕೆಲವರದು ಮಸೂರವಿಟ್ಟರೂ ಶೂನ್ಯ ಮಿಕ್ಕವರದು
ಅನುಭವಿಸಿ ನರಳುವ ರೋಗಿ ಪಾಡು, ಕಾಡದೆ ಬಿಡದು ಸರ್ಜನ್ನನ..
ಅವನ ಉತ್ತೇಜಿಸಿ ಗಟ್ಟಿಗೊಳಿಸುವುದಷ್ಟೆ ನಮ್ಮ ಮುಂದಿರುವ ಕಾರ್ಯ.

ಕೊಡಿರವನಿಗೆ ಬಲ ಮತ್ತವನಿಗೆ ನೀಡುತ ಕೌಶಲ
ಕರತಲಾಮಲಕ ಸಿದ್ಧಹಸ್ತ , ತಾನಾಗುವ ಶರವೇಗದಲ್ಲಿ.
ಬೆನ್ನ ತಟ್ಟಿ ಒಮ್ಮೆ ಹುರಿದುಂಬಿಸೆ ಸಾಕು ಉಬ್ಬಿಸಲಿಕ್ಕೆ ಆತ್ಮವಿಶ್ವಾಸ
ಕೈಲಿ ಚಾಕು ಹಿಡಿದ ಜನರಲ್ ಸರ್ಜನನ ಮರಳಿ ತನ್ನಿರದೆ ಸುವರ್ಣಪಥಕೆ.

ಆಂಗ್ಲ ಮೂಲ: ಡಾ. ನಾಜ್
ಅನುವಾದ : ನಾಗೇಶ ಮೈಸೂರು
(Picture source: Creative Commons)

೧೫.೦೨.೨೦೧೭

ಮೂಲ ಕವಿತೆ ಇಂಗ್ಲಿಷಿನಲ್ಲಿ :
Plight of a general surgeon
______________________________

Scalpel in the hand,
And healing Skill in the mind
Surgeons they are …
A noble breed of a different kind.

Saviours of the yester year
No less a battle like the mighty soldier.
Bringing back that lost smile
Name any ailment from the scalp to the ಪೈಲ

Moves of his are so meticulous ,
Working hours though endless,
Smile he carries, hides all exhaustion …
‘Cause his profession is his only passion

The mighty scalp is no more sharp
Losing its shine slowly..in the time warp
Old now was new just yesterday
Things he did have just faded away.

Situation today is so hapless
Seeing more n more of less and less
Dividing the patient bit by bit
The Surgeon general today has lost his grit.

Society so diverse and the laws so hard
Some get so much and others nothing
Pt suffers and so , the surgeon too…
Empowering the surgeon is all we need to do.

Society so diverse and the laws so hard
Some get so much and others nothing
Pt suffers and so , the surgeon too…
Empowering the surgeon is all we need to do.

Give him the power and give him the skill
Mastering the art , sooner he will.
Boost the confidence with a pat on his back
And ..Bring the scalpel holding surgeon general … back on the track.

Dr. Naaz

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s