01190. ರೆಕ್ಕೆ- ಮ್ಲಾನ – ಕಳಂಕ – ಬೆಳ್ಳಿ


01190. ರೆಕ್ಕೆ- ಮ್ಲಾನ – ಕಳಂಕ – ಬೆಳ್ಳಿ

ರೆಕ್ಕೆ ಬಿಚ್ಚಿ ಹಾರು, ಮುಕ್ತಹಕ್ಕಿಯ ತೆರದೆ ಪ್ರಾಯದಲ್ಲಿ
ಯಾಕ್ಹೀಗೆ ಮ್ಲಾನವಾದನ ? ಬದಿಗಿಡು ಚಿಂತೆ ಸಹಜ
ಹತ್ತದಂತೆ ಕಳಂಕ, ನಿಭಾಯಿಸಬೇಕು ಯೌವನ ಬಯಕೆ
ಮುನ್ನೆಚ್ಚರಿಕೆಯಿದ್ದರೆ ಸಾಕು, ಬದುಕಿಗದೆ ಬೆಳ್ಳಿ ರೇಖೆ

– ನಾಗೇಶ ಮೈಸೂರು
೩೦.೦೩.೨೦೧೭
chouchoupadi

01189. ಪ್ರಕೃತಿಯವಳೇ ಯುಗಾದಿ


01189. ಪ್ರಕೃತಿಯವಳೇ ಯುಗಾದಿ
_____________________________


ಮೃದುಲ ಭಾವದ ಮಧುರ
ಅನುಭೂತಿಯದೇನೋ ಸದರ
ತೆರೆದೆದೆಯ ಪದರಪದರ
ಹುಡುಕಿದೆ ನಿನ್ನದೆ ಕೊರಳ ಸ್ವರ

ಅದು ಯುಗಾದಿ ಇದು ಉಗಾದಿ
ಉಗಮಾಗಮ ನಿನ್ನದೆ ಸನ್ನಿಧಿ
ನೀ ತೊಟ್ಟ ಬಾಣ ತೊಡದ ಮಾತು
ಕೊಡುವ ಹೊತ್ತಿಗೆ ಕಾದ ವಕಾಲತ್ತು

ನೀನರಿಯೆ ನಿನದೆ ಮೋಡಿ
ಮಾಡಿಟ್ಟ ಹಾವಳಿ ಬೇಗುದಿ
ಹೇಳಲೆಂತು? ಕೇಳುವವಳಿಲ್ಲ
ಕೇಳುವಳೊ ಬಿಡುವಳೊ ಗೊತ್ತಿಲ್ಲ !

ತಪ್ಪೆಲ್ಲಾ ನನದೇ ಮೊತ್ತ ಗೊತ್ತಾ ?
ಹೊರಿಸಲೆಂತು ನಿನ್ನ ಪಾಲಿಗೆ ಸ್ವಾರ್ಥ
ಹೊತ್ತೆಲ್ಲವ ನಾ ಕುಸಿದರು ಹರುಷ
ನೀ ಹಗುರಾದರದೆ ಜೀವಕೆ ಪರುಷ

ತಪ್ಪೋ ಸರಿಯೋ ಗೊಂದಲ ಸಂದಿಗ್ದ
ಬಿಡಿಸಲೊಗಟ ಹೆಣಗಾಡುವುದನುಚಿತ
ಅನಿಸಿದ್ದನು ಮಾತಾಗಿಸಿದ್ದು ಹೃದಯ
ತಪ್ಪೆನಿಸಿದರು ಕ್ಷಮಿಸು ದೇವರ ನ್ಯಾಯ

– ನಾಗೇಶ ಮೈಸೂರು
೩೦.೦೩.೨೦೧೭
(Picture from social media)

01188. ಉಗಾದಿ ಚಿತ್ತ


01188. ಉಗಾದಿ ಚಿತ್ತ
________________

Ll
(೦೧)
ಉಗಾದಿ ಚಿತ್ತ
ಬೇವು ಬೆಲ್ಲ ಗಂಟದು
– ಬಿಡದ ನಂಟು

(೦೨)
ವರ್ಷದುಡುಕು
ಗಂಟಲಿಗಿಳಿಯದು
– ಕಡುಬು ನೀರೆ

(೦೩)
ಬೇವಾಗಿ ಚಿತ್ತ
ಬೆದರಿದ ಹೊತ್ತಲಿ
– ಬೆಲ್ಲವೂ ಕಹಿ

(೦೪)
ಬೇವಿನ ಕಡ್ಡಿ
ಸಹನೀಯ ಬಸಿರು
– ಬೇವಿನ ಹೂವು

(೦೫)
ಬೆಲ್ಲದ ಮಾತು
ಬೇವ ಮನದಿಂಗಿತ
– ಒಗರೊಗರು

(೦೬)
ಬೇವಲ್ಲಿ ಬೆಲ್ಲ
ಸಿಹಿಯಾಗದ ಖಳ
– ಲೋಕದ ರೀತಿ

(೦೭)
ಬೆಲ್ಲ ಬೇವಲ್ಲ
ಬೇವು ಬೆಲ್ಲದ ಜಾಲ
– ಬೇವಿಂದ ಬೆಲ್ಲ

(೦೮)
ಬೇವು ಬೇವಾಗಿ
ಕಾಡುವುದಕ್ಕೆ ಮತ್ತೆ
– ಬೆಲ್ಲಕೆ ಮನ್ನಣೆ

(೦೯)

ಬೇವು ಬೆಲ್ಲದ
ಅಡಿಪಾಯ ಪ್ರಕೃತಿ
– ದಿರಿಸುಡುತ್ತ

– ನಾಗೇಶ ಮೈಸೂರು
(Picture from social media / whatsapp received)

01187. ಲಕೋಟೆ – ದವತಿ – ಟೋಪಿ – ನೀರಡಿಕೆ


01187. ಲಕೋಟೆ – ದವತಿ – ಟೋಪಿ – ನೀರಡಿಕೆ

ಸಖಿ, ಯುಗಾದಿ ಪತ್ರವೊಂದ ಬರೆದಿಟ್ಟೆ ಲಕೋಟೆಯೊಳಗೆ
ಧೂರ್ತ ದವತಿಗು ಈರ್ಷೆ, ಜಾರಿ ಬಿತ್ತೇ ಚೆಲ್ಲುತ ಕಪ್ಪು ಮಸಿ
ಅಂದುಕೊಂಡಿದ್ದಾಗಬಿಡದೆ, ಟೋಪಿ ಹಾಕೊ ಅನಿರೀಕ್ಷಿತಗಳು
ನೆನಪ ಮೆಲುಕಿಗೆ ನೀರಡಿಕೆ, ಮರಳಿ ಯತ್ನ ಬೇವಲ್ಲಿ ಬೆಲ್ಲಕೆ !

– ನಾಗೇಶ ಮೈಸೂರು
೨೮.೦೩.೨೦೧೭

01186. ೩ಕೆ ಯಿಂದ ಬ್ಲಾಗ್ ಪರಿಚಯ


01186. ೩ಕೆ ಯಿಂದ ಬ್ಲಾಗ್ ಪರಿಚಯ

೩ಕೆ ಬಳಗದ ವತಿಯಿಂದ ನಿವೇದಿತಾ ಚಿರಂತನರವರು ನನ್ನ ಬ್ಲಾಗನ್ನು ಪರಿಚಯಿಸುತ್ತ ನುಡಿದಿರುವ ನಲ್ನುಡಿಗಳಿಗೆ ಹೃತ್ಪೂರ್ವಕ ನಮನಗಳೊಂದಿಗೆ…

01185. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೨: ಅವರವರ ಭಾವಕ್ಕೆ ಅವರವರ ಭಕುತಿಗೆ


01185. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೨
ಅವರವರ ಭಾವಕ್ಕೆ ಅವರವರ ಭಕುತಿಗೆ
http://kannada.readoo.in/2017/03/ಅವರವರ-ಭಾವಕ್ಕೆ-ಅವರವರ-ಭಕುತ#

01184. ಕೊಳ – ಕಿರುಕುಳ – ಪಟ್ಟು – ಜಿಲೇಬಿ


01184. ಕೊಳ – ಕಿರುಕುಳ – ಪಟ್ಟು – ಜಿಲೇಬಿ


ಕೂತಳು ಮಂಕಾಗಿ ಲಲನೆ, ಕೊಳದ ಮುಂದೆ – ಇನಿತಿಲ್ಲ ಚಲನೆ
ಚಲಿಪ ಮತ್ಸ ನಳನಳಿಪ ಹೂ, ತಂಗಾಳಿಯೂ ಕಾಡಿ ಕಿರುಕುಳ
ವಿದಾಯದ ಯಾತನೆ ಮೊನೆ, ಬಿಡದೆ ಚುಚ್ಚಿ ಹಿಡಿದಂತೆ ಪಟ್ಟು
ಜಿಲೇಬಿಯಂತ ನೆನಪೆಲ್ಲವ ಕಬಳಿಸಿ, ಬೇವುಣಿಸಿ ಬಿಕ್ಕುವ ಕ್ಷಣ !

– ನಾಗೇಶ ಮೈಸೂರು
೨೬.೦೩.೨೦೧೭
(Picture source : internet / social media)

#chouchoupadi