01163. ನನ್ನ ನೆರಳಿನ ವೃತ್ತಾಂತ


01163. ನನ್ನ ನೆರಳಿನ ವೃತ್ತಾಂತ
_____________________

ನನ್ನ ನೆರಳಿನ ಸುತ್ತ
ನನ್ನದೇ ಬದುಕಿನ ವೃತ್ತ
ಬೆಂಬಿಡದೆ ಹಿಂಬಾಲಿಸೋ ವೃಥಾ
ಬಚ್ಚಿ ಬಿಚ್ಚಿಟ್ಟು ಹಗಲಿರುಳಿನ ಹುತ್ತ..

ನನದೇ ವೃತ್ತಾಂತ
ಬಣ್ಣಬಣ್ಣದ ಸವಿ ನೆನಪಿತ್ತ
ಕಪ್ಪು ಬಿಳಿ ಡಬ್ಬದಲಿಟ್ಟು ಬೀಗ
ನೆರಳಾಗಿ ಅನುಕರಿಸೋ ಜಗ..

ಬ್ರಹ್ಮದಂತೆ ನೆರಳಂತೆ
ಶೂನ್ಯಾತಿಶೂನ್ಯದ ಕಂತೆ
ಕಾಣಿಸಲಿರಬೇಕು ಬೆಳಕಿನ ಗಡಿಕಿಡಿ
ಕಂಡರೂ ಹಿಡಿಯಲಾಗದ ಗಡಿಬಿಡಿ..!

ಹೆತ್ತ ಕೂಸಂತೆ ಕಂಕುಳಿಗಿಲ್ಲ
ಅಂತೆಂದು ಬಿಟ್ಟು ಹೋಗುವುದಿಲ್ಲ
ನಂಟಿದು ಕರ್ಮದ ಹಾಗೆ ದೇಹಕಂಟಿ
ತಾವರೆಗಂಟಿದ ನೀರಂತೆ ನಿರ್ಲಿಪ್ತದ ತುಂಟಿ..

ಧುತ್ತನೆ ಮಾಯ, ಪ್ರತ್ಯಕ್ಷ
ಇದ್ದು ಇರದವನಂತೆ ದೀಕ್ಷಾ
ಬೆಳಕಿನ ಕುದುರೆಯ ಬೆನ್ನೇರಿ ಸವಾರಿ
ತನ್ನಿಚ್ಛೆ ಬಂದಂತೆ ನೋಟ, ಸಿಕ್ಕದೆ ಪರಾರಿ !

– ನಾಗೇಶ ಮೈಸೂರು
೦೪.೦೩.೨೦೧೭
(Picture by my phone camera)

01162. ಚಾಲಾಕು – ಚಾಕು – ಶ್ರಾವಣ – ಅಜ್ಜಿ


01162. ಚಾಲಾಕು – ಚಾಕು – ಶ್ರಾವಣ – ಅಜ್ಜಿ

ಮೊಮ್ಮಗ ಗುಂಡನ ಚಾಲಾಕು ಬುದ್ಧಿ ತೀಕ್ಷ್ಣ
ತರಕಾರಿ ಹೆಚ್ಚುವ ಚಾಕುವಿನಲ್ಲೆ ಹೆದರಿಸುವ
ಆಷಾಢದ ಬೇಗೆ ಕಾಯಲೊಲ್ಲ ಶ್ರಾವಣದ ತನಕ
ಪಿಟಿಪಿಟಿ ಅಜ್ಜಿಗೆ ಏಮಾರಿಸಿ ಅತ್ತೆಮನೆ ಹಿತ್ತಲ ಕಾಯ್ವ !

– ನಾಗೇಶ ಮೈಸೂರು
೦೪.೦೩.೨೦೧೭
#chouchoupadi