01166. ಐದು – ಆರು – ಸ್ವರ್ಣ – ಸರಿ


01166. ಐದು – ಆರು – ಸ್ವರ್ಣ – ಸರಿ


ಮುತ್ತೈದೆ ಭಾಗ್ಯಗಳಂತೆ ಐದು
ಗಂಡೊಂದು ಹೆಣ್ಣಾಗುವ ಆರು
ಐದಾರರ ಭಾಗ್ಯಕೆ ಸ್ವರ್ಣ ಗೌರಿಗೆ
ಸರಿ ಪೂಜಿಸೆ ಕಾಯ್ವಳಂತೆ ಬಿಡದೆ !

– ನಾಗೇಶ ಮೈಸೂರು
೦೫.೦೩.೨೦೧೭
(Picture : internet / social media)
#chouchoupadi

Advertisements

01165. ಅನ್ನದ ಕೂಗು..


01165. ಅನ್ನದ ಕೂಗು..
____________________


ಇಂದು ಇಲ್ಲ
ನಿನ್ನೆಯೂ ಇಲ್ಲ
ಮೊನ್ನೆಯೂ ಇರಲಿಲ್ಲ
ಅನ್ನ ಅನ್ನ ಅನ್ನಾ ಅನ್ನದ ಋಣ..

ಅಕ್ಕಿ ಕಾಳು ಅಗಳು
ತಿನ್ನುವವನ ಹೆಸರಲು
ತಂದಿಕ್ಕುವ ಭಾಗ್ಯ ಬೊಗಸೆ
ಅನ್ನಾ ತಿನ್ನುವ ಋಣವೆಲ್ಲಿದೆಯೊ ?

ತಂದು ಹಾಕಿದ್ದುಂಟು
ತಿಂದು ತೇಗುವರುಂಟು
ಬೇಯಿಸರಲ್ಲ ಹೊತ್ತ ಕೂಳು
ಬೆಂದು ಬೆಂಡಾಗಿ ಹುಡುಕಾಡಿ ಅನ್ನಕೆ..


ಕಂಡಕಂಡದ್ದೆಲ್ಲ ಕೊಂಡು
ಮಡದಿ ಮಕ್ಕಳು ಮರಿಯುಂಡು
ದಣಿದು ಬಂದ ಹೊತ್ತಲಿ ನೀರಿಗೂ ಬರ
ನೀರ ತಂದಿಕ್ಕುವ ನೀರೆ ಅನ್ನದವತಾರ ..

ಕಾಣದ ಲೋಕದಲ್ಲಿಂದು
ಹಿಡಿಯನ್ನವೆ ಅಮೃತವರ್ಷ
ಕೂತುಣಿಸುವವರಿಗೇನು ಕೊರತೆ ?
ಬಿಡದ ಸ್ವಾಭಿಮಾನ ಮೌನವುಣಿಸುತ..


– ನಾಗೇಶ ಮೈಸೂರು
೦೫.೦೩.೨೦೧೭

(Picture source: Creative Commons)

01164. ಕಗ್ಗ ೪೯ರ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ


01164. ಕಗ್ಗ ೪೯ರ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ…