01169. ಸೆಖೆ – ತಿರುಗಾಟ – ವಲ್ಲಿ – ಕೀಲುನೋವು


01169. ಸೆಖೆ – ತಿರುಗಾಟ – ವಲ್ಲಿ – ಕೀಲುನೋವು
__________________________________________


ಕಾಮನೆಯ ಸೆಖೆಗೆ, ಚಳಿಯಲು ಬೆವರಿ ದೇಹ
ಮನಸಲ್ಲೋಲಕಲ್ಲೋಲ, ದಿಕ್ಕೆಟ್ಟ ತಿರುಗಾಟ..
ವಲ್ಲಿಯನ್ಹೊದ್ದ ವೃದ್ಧನ ಹಾಗೆ, ಹೊರಗನಾವರಣ
ಕೀಲುನೋವು ಯಾವ ಲೆಕ್ಕ? ಮನ್ಮಥನ ಆವರ್ತನ !

– ನಾಗೇಶ ಮೈಸೂರು
೦೮.೦೩.೨೦೧೭
#chouchoupadi
(Picture source : Creative Commons)

Advertisements

01168. ಅವಳೊಂದು…


01168.ಅವಳೊಂದು…
____________________


ಅವಳೊಂದು ಕವಿತೆ
ಕಲಿಸುವ ಮಾತೆ
ಮಾತಾಗುವ ಕಥೆ
ಬದುಕವಳ ಜತೆ !

ಅವಳಲ್ಲಿ ಅವಿತೇ
ಅವಳಾಗುವ ಹೊತ್ತೆ
ಅವಳಾಗಳು ಸ್ವಾರ್ಥಿ
ಜತೆಗಿಡೆ ಹೆಜ್ಜೆ ಸ್ಫೂರ್ತಿ..

ಯಾರಿಗಿಲ್ಲ ತಾನೆ ಆಸೆ ?
ತರತರ ಕೀರ್ತಿ ಲಾಲಸೆ
ಅವಳಿದ್ದರೆ ಹಿನ್ನಲೆ ಜೋಡಿ
ತಾನೆ ತಾನಾಗುವ ಮೋಡಿ..

ಅವಳೊಪ್ಪುವಳು ಸಕಲ
ತಾನಪ್ಪುವಳು ಅಸದಳ
ಅವಳನ್ನೊಪ್ಪಿ ನಡೆ ಚೆನ್ನ
ಹಿತದಪ್ಪುಗೆ ನುಡಿ ಸಾಕಣ್ಣ..

ಅವಳಿಗಾಗಿ ಹುಡುಕಿದೆ
ಪ್ರಕೃತಿಯಲಿ ಅಡಗಿದೆ
ಪುರುಷವಾಗೆ ಸಂಬಂಧ
ಪರುಷವಾಗೊ ಅನುಬಂಧ !

– ನಾಗೇಶ ಮೈಸೂರು
೦೮.೦೩.೨೦೧೭
(Picture source: Creative Commons)