01171. ತಾಳಲಾಗದೆ ಮೊರೆಯಿಟ್ಟೆ…


01171. ತಾಳಲಾಗದೆ ಮೊರೆಯಿಟ್ಟೆ…
___________________________


ನಾನಂದುಕೊಂಡಿದ್ದೆ
ನೀಡಿದನವ ಜೀವನದ ಭಿಕ್ಷೆ
ಅರಿಯಲಿಲ್ಲ ಕರ್ಮದ ಪರಿ
ಅವ ಪಾಪಗಳಿಗೆ ನೀಡಿದ ಶಿಕ್ಷೆ..

ಕೊಟ್ಟರೂ ಕಷ್ಟಗಳ
ಮುಕ್ತವಾಗಿಸದಿಹನೆ ನೋವ
ಅಂತೆಂದುಕೊಂಡಿದ್ದೆ ಮಸಲ
ನೀಡಿದನವ ಒಂದರ ಹಿಂದೊಂದು..

ಕಾಣಬೇಕಿದೆ ಜೀವ ನೆಮ್ಮದಿ
ಹೊಸತೇನಿಲ್ಲ ಮಾಯದ ಗಾಯ
ಮರೆತು ಕಣ್ಮುಚ್ಚಲೂ ಬಿಡದು
ಮಮ ಮಾಯಾಬಂಧ ಒಗಟಲಿ..


ನನ್ನನ್ನೆ ಸೃಜಿಸಿದನವನು
ನನ್ನೆ ಮರೆಸಿಬಿಟ್ಟ ಕಾನೂನು
ಮಾಡಿದ್ದು ಮಾಡಿಸಿದ್ದವನು
ಎನ್ನುವಂತಿಲ್ಲ ಅವನೇ ನಾನು…

ಹೋಗಲಿ ಬಿಡು ನನ್ನ ದೊರೆ
ಇಲ್ಲಿಯವರೆಗಿತ್ತೆ ದೃಢ ನಂಬಿಕೆ
ಭರವಸೆ ಹುಸಿಯೊ ದಿಟವೊ
ನೀಡುತಿರು ಧಾರಾಳ ನಿರಂತರ..


– ನಾಗೇಶ ಮೈಸೂರು
೧೧.೦೩.೨೦೧೭
(Picture source: internet / social media)

Advertisements