01173. ತೊಡಗಿಸಿಕೊಂಡಿಹ ಯುದ್ಧದಲ್ಲಿ..


01173. ತೊಡಗಿಸಿಕೊಂಡಿಹ ಯುದ್ಧದಲ್ಲಿ..
___________________________


ಇದು ನನ್ನದೇ ಯುದ್ಧ
ನಾನೊಬ್ಬನೇ ಇದರ ಯೋಧ
ಶೋಧನೆಯೊ ವೇದನೆಯೊ ಗುರಿ
ಮುಟ್ಟುವ ಅನಿವಾರ್ಯ ಹೆಗಲಲ್ಲಿ..

ಬೇಡವೆಂದೆ ಯುದ್ಧ ನಾನು
ಬಿಡಬೇಕಲ್ಲ ? ಕರ್ಮ ಮಾಡೆಂದರು
ಯಾರೊ ಕೊಟ್ಟರು ಬಿಲ್ಲು ಬಾಣ ರಥ
ಕಲಿಯುವುದೆ ಕಂಡಲ್ಲಿಗೆ ಬಾಣ ಹೂಡಿ..

ನಾಗಾಲೋಟ ರಥಾಶ್ವ ವೇಗ
ಸಾರಥಿಯಿಲ್ಲ ಕುದುರೆ ಹಂಗಿಲ್ಲ ಸ್ವತಂತ್ರ
ಹೊಡೆದಾಡದಿರೆ ಹೊಡೆದುಹಾಕುವ ಪರಿ
ನಿಲ್ಲಿಸುವಂತಿಲ್ಲ ಮುಂದುವರೆಸೆ ಕಸುವಿಲ್ಲ..

ಕಾರ್ಯ ಕಾರಣ ಹಿನ್ನಲೆ ಶೂನ್ಯ
ಅರಿಯಲೆಲ್ಲಿ ಬಿಡದು ಧಾಳಿಯ ಖಳ
ಕಾದುತಲೆ ಕಲಿವ ಜಾಣ್ಮೆ ಬರಿಯ ಕದನ
ಶಾಂತವನದ ನಡುವಿನಲ್ಲೆ ತೊಡಿಸಿ ಶಸ್ತ್ರಾಸ್ತ್ರ..

ಒಪ್ಪಿಕೊಂಡಾಯ್ತು ಯುದ್ಧ ಸ್ವಗತ
ಅಪ್ಪಿಕೊಂಡ ಮೇಲೆ ಮಿಕ್ಕಿದ್ದೆಲ್ಲ ಗೊಣಗಾಟ
ಆದರೂನು ಬಿಡದೆ ಕಾಡಿದೆ ಈ ಒಂದು ಪ್ರಶ್ನೆ
ನನ್ನೇಕೆ ಇಳಿಸಿದೆ ಹೋರಾಟದೀ ರಣರಂಗಕೆ ?

– ನಾಗೇಶ ಮೈಸೂರು
೧೨.೦೩.೨೦೧೭
(Picture source: internet / social media)

01172. ಮಂಕುತಿಮ್ಮನ ಕಗ್ಗ ೫೦ ರ ನನ್ನ ಟಿಪ್ಪಣಿ – ರೀಡೂ ಕನ್ನಡದಲ್ಲಿ..


01172. ಮಂಕುತಿಮ್ಮನ ಕಗ್ಗ ೫೦ ರ ನನ್ನ ಟಿಪ್ಪಣಿ – ರೀಡೂ ಕನ್ನಡದಲ್ಲಿ..
ತರ್ಕಾತೀತ-ಗ್ರಂಥಾತೀತ ಅನುಭವ ನೆಲೆಯಾಗಲಾರದೆ ಸತ್ಯಕೆ ?