01201. ಕಾಯಬೇಕು – ಕರುಣೆ – ಮೃಗ – ಬೈತಲೆ


01201. ಕಾಯಬೇಕು – ಕರುಣೆ – ಮೃಗ – ಬೈತಲೆ

(೦೧) ಕಾಯದ ಮಾಯ !
_______________________

ಕಾಯಬೇಕು ಭೌತಿಕ ಕಾಯಬೇಕು ಜೀವಾತ್ಮಕೆ
ಪರಮಾತ್ಮದ ಕರುಣೆ ಜತೆಗೂಡಬೇಕು ಇಹ ಜೀವನಕೆ
ಖಗ ಮೃಗ ಜಗದೆ ಮಾನವ ಜನ್ಮ ಪೂರ್ವ ಪುಣ್ಯ
ಮೋಹದೆ ಮೈಮರೆತೀಯ, ಬೈತಲೆ ತೆಗೆದಂತಲ್ಲ ಪರದ ದಾರಿ !

(೦೨) ಸಹನೆ
________________

ಕಾಯಬೇಕು ತನು ಕಾಯಬೇಕು, ಪಕ್ವವಾಗುವತನಕ
ಕಾಯಬೇಕು ಬೆಳೆಸುವ ಬದುಕ, ಕರುಣೆ ದಕ್ಕುವ ತನಕ
ನಡೆ ನುಡಿ ತಾಳ್ಮೆ ಭಯವಿಲ್ಲದ ಮೃಗದಂತಾಗೆ ಅಸಂಬದ್ಧ
ಬಾಚಿಯು ಗಾಳಿಗೆ ಕೆದರಿ, ಕೆಟ್ಟ ಬೈತಲೆಯಂತೆ ಬಾಳೆ ಪ್ರಕ್ಷುಬ್ಧ !

ನಾಗೇಶ ಮೈಸೂರು
೦೭.೦೪.೨೦೧೭
#chouchoupadi

Advertisements