02036. ಬೆನ್ನು ಹಾಕಿ ನಡೆದೇ..


02036. ಬೆನ್ನು ಹಾಕಿ ನಡೆದೇ..
________________________


ನಡೆದೆ
ನೀ ನಡೆದೆ
ಬೆನ್ನು ಹಾಕೀ ನಡೆದೇ ಬಿಟ್ಟೆ..

ಹುಟ್ಟಿದ ತುರಂಗ
ಹೆತ್ತವಳರಿವಳಿದ ಹೊತ್ತು
ಬೆನ್ನು ಹಾಕಿ ನೆತ್ತಿಯ ಬುಟ್ಟಿಯಲಿದ್ದೆ

ಬಾಯಲೆ ಜಗವ
ಕಂಡವಳ ನಗು ಮೊಗವ
ಭಂಢತನದೆ ಬಿಟ್ಟು ಬೆನ್ನು ಹಾಕಿ ನಡೆದೇ..

ನಂದನ ಬಾಲನ
ಮುದ್ದಾಡಿದ ಜಗವ ಬಿಟ್ಟೆ
ಕಂಸನ ಧ್ವಂಸ ಜಪಿಸಿ ಬೆನ್ನು ಹಾಕಿ ನಡೆದೇ..

ಪಾಪ ಬಾಲೆಯರು
ಅಬಾಲ ವೃದ್ಧ ಪಾಮರರು
ನಿರ್ಮಲ ಬಂಧಕು ಬೆನ್ನು ಹಾಕಿ ನಡೆದೇ

ವಯಸಲಿ ದೊಡ್ಡಾಕೆ
ಮನಸಲಿತ್ತೋ ಎಷ್ಟೊಂದು ಶಾಖೆ ?
ಆ ರಾಧೆಗೂ ಬೆನ್ನು ಹಾಕಿ ನಡೆದದ್ದು ಪ್ರೇಮವೇ ?

ಮಥುರೆಗೆ ನಡೆದೆ
ಕದನ ರಾಜಕಾರಣದೆ
ಕರ್ಮಕೆ ಬಿಟ್ಟೆಲ್ಲ ಅಂಟಿಕೊಳದೆ ನಡೆದೇ ಇದ್ದೇ..

ಬಿಡಲಿಲ್ಲ ಯಾದವರ
ಮಾಧವ ಎಂದ ಜನರ
ಬೇಡನ ಬಾಣದ ನೆಪದೆ ಭವಕು ಬೆನ್ನು ಹಾಕಿ ಬಿಟ್ಟೆ..

ಆದೆ ನೋಡು ವಿಸ್ಮಯ
ಬಿಟ್ಟು ಹೋದೆ ನೆರಳ ಜಾಡಲಿ
ಮುರಳಿಯ ಗುಂಗಾಗಿ ನೆನಪು ಮನದಲ್ಲಿ ಸತತ..

ಬಿಟ್ಟರೂ ಬಿಡಲಿಲ್ಲ
ಬೆನ್ನು ಹಾಕಿ ನಡೆದರೂ..
ಹಿಂಬಾಲಿಸೆ ಜಗಕೆ ಕಾಣುವೊಂದು ಬೆನ್ನಿರಬೇಕಲ್ಲ !

– ನಾಗೇಶ ಮೈಸೂರು
೧೦.೦೫.೨೦೧೭

(ಫೋಟೋ Thunturu Mounamaleyali ರವರ FB ಪೋಸ್ಟ್ ನಲ್ಲಿ ಸಿಕ್ಕಿದ್ದು )