02037. ಶಿಖರಾಗ್ರ


02037. ಶಿಖರಾಗ್ರ
___________________________________
(ಆಂಗ್ಲ ಮೂಲ: ಕ್ರಿಸ್ಟಿನಾ ರೊಸೆಟ್ಟಿ – ಅಪ್ ಹಿಲ್)


ದಾರಿಯಿದೆಯೇ ಶಿಖರದ ಅಡ್ಡಾದಿಡ್ಡಿ ಹಾದಿಯ ಪೂರಾ ?
ಹೌದು, ತುತ್ತ ತುದಿವರೆಗೂ.
ದಿನದ ಪಯಣ, ದಿನಪೂರ್ತಿ ಹಿಡಿಯುವುದೇ ?
ಮುಂಜಾವಿಂದ ಮುಸ್ಸಂಜೆವರೆಗೂ, ನನ್ನ ಗೆಳೆಯ.

ಆದರಲ್ಲೊಂದು ತಂಗುದಾಣವಿದೆ ತಾನೇ ಇರುಳಿಗೆ ?
ಒಂದು ಸೂರಂತೂ ಉಂಟು ಕಾಲಗತಿ ಮಂದವಾಗೋ ಹೊತ್ತಲಿ.
ಗಾಢಾಂಧಕಾರವದನು ಬಚ್ಚಿಡದು ತಾನೆ ನನ್ನ ಮುಖಕೆ ?
ನೀನಾ ನೆಲೆದಾಣ ಕಾಣದೆ ಮುನ್ನಡೆಯಲಶಕ್ಯ.

ಇರುಳಲಿ ನಾ ಭೆಟ್ಟಿಯಾಗಬಹುದೇ ಮಿಕ್ಕಿತರ ದಾರಿಹೋಕರ ?
ಅಹುದು ನಿನಗೂ ಮೊದಲೇ ಹೋಗಿ ತಂಗಿರುವವರ.
ಆ ನೆಲೆ ಕಂಡಾಗ ನಾ ಕದ ತಟ್ಟಬೇಕೊ, ಇಲ್ಲಾ ಕೂಗಬೇಕೋ ?
ಅವರು ಆ ಬಾಗಿಲಲಿ ನಿನ್ನ ನಿಲ್ಲಿಸಿ ಕಾಯಿಸುವುದಿಲ್ಲ.

ಪಯಣದೇ ದಣಿದು ಬಂದ ನನಗೆ, ಸಿಗಬಹುದೇ ಸೌಖ್ಯಾರಾಮ ?
ದುಡಿತಕ್ಕೆ ತಕ್ಕಂತೆ ಕೂಲಿ ನೀ ಕಾಣುವೆ ನಿವ್ವಳ ಮೊತ್ತದೆ.
ಅಲ್ಲಿರುವುದೇ ತಲ್ಪ ನನಗೆ, ನನ್ನಂತೆ ಹುಡುಕುವೆಷ್ಟೋ ಜನಕೆ?
ಖಂಡಿತ, ಬಂದವರೆಲ್ಲರಿಗೊಂದೊಂದು ಮಂಚ ಗಟ್ಟಿ.


– ಅನುವಾದ : ನಾಗೇಶ ಮೈಸೂರು
೧೦.೦೫.೨೦೧೭
(ಕೆಟ್ಟ ಪದಾನುವಾದ ಅನಿಸಿದರೆ ಕ್ಷಮೆಯಿರಲಿ. ಹುಟ್ಟು-ಸಾವು-ಜೀವನ ಪಯಣದ ಅನೇಕ ಸಾಂಕೇತಿಕಗಳ ಒಟ್ಟಾರೆ ಸಮಷ್ಟಿಯ ಕವಿತೆ ಇದು..)

(Picture source: This work is licensed under a Creative Commons Attribution-NonCommercial-ShareAlike 3.0 Unported License)

_________________________________

(ಒರಿಜಿನಲ್ poem ..)

Up-Hill

By Christina Rossetti

Does the road wind up-hill all the way?
Yes, to the very end.
Will the day’s journey take the whole long day?
From morn to night, my friend.

But is there for the night a resting-place?
A roof for when the slow dark hours begin.
May not the darkness hide it from my face?
You cannot miss that inn.

Shall I meet other wayfarers at night?
Those who have gone before.
Then must I knock, or call when just in sight?
They will not keep you standing at that door.

Shall I find comfort, travel-sore and weak?
Of labour you shall find the sum.
Will there be beds for me and all who seek?
Yea, beds for all who come.

Thanks to Rajkumar Madiwalar where I found this English version of the poem.

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s