02038. ಹುಚ್ಚು ಹಿಡಿಸುವ ರೂಪ


02038. ಹುಚ್ಚು ಹಿಡಿಸುವ ರೂಪ
_________________________


ಹುಚ್ಚು ಹಿಡಿಸುವ ರೂಪ
ಹಿಡಿಯದವ ಅಪರೂಪ
ಸುಮ್ಮ ಬಚ್ಚಿಟ್ಟುಕೊಳ್ಳುವ ಭೂಪ
ಒಳಗೊಳಗೆ ಮಂಡಿಗೆ ಶಾಪ !

ಕೆತ್ತಿದ ಶಿಲ್ಪದ ಕುಸುರಿ
ಕುಂಚದೆ ಬಣ್ಣಾ ಸವರಿ
ಸೌಂದರ್ಯಾಶ್ವದ ಮೇಲೇರಿ
ವಿಶ್ವಚಿತ್ತದ ಹಮ್ಮಿನ ಸವಾರಿ !

ತಿದ್ದಿ ತೀಡಿದ ರೂಪು
ತುಟಿ ಮೂಗು ಕಣ್ಣಿಂಪು
ನಾಸಿಕ ಚಂಪಕ ಬರಿ ನಾಟಕ
ಅವಳಿಗವಳೆ ಹೋಲಿಕೆ ದ್ಯೋತಕ !

ನಡು ಮೈಮಾಟ ನೀಳ
ನೆಟ್ಟ ಕಣ್ಣೋಟಗಳೆ ಕರಾಳ
ಮೋಹಕ ಭಂಗಿಯಲೆ ಕವಾಯತು
ಶಿಖೆ ಶಿಖರದೆತ್ತರ ಕೇಶ ರುಜುವಾತು !

ದಿರಿಸುಟ್ಟವಳ ಸೊಬಗಾಳ
ಹವಳದ ತುಟಿ ಮನೆಹಾಳ
ವಸ್ತ್ರ ಪೈಪೋಟಿಯಲಿ ತನುವರ್ಣ
ಸಿಕ್ಕರೆ ಸಾಕೆಂದ ಸೇವೆಗವಳ ಚರಣ !

– ನಾಗೇಶ ಮೈಸೂರು
೧೦.೦೫.೨೦೧೭
(For both mass and class 😛😁)

(Photo from Thunturu Mounamaleyali FB profile)

Advertisements