02093. ಎಚ್ಚೆತ್ತ ಹೊತ್ತಲಿ..


02093. ಎಚ್ಚೆತ್ತ ಹೊತ್ತಲಿ..
____________________


ಈ ಕತ್ತಲು
ಈ ನೀರವತೆ
ಈ ಏಕತಾನದ ಸದ್ದು
ಹೃದಯದ್ದಲ್ಲ.

ಯಾರದೋ ಗಾರುಡಿ
ಇನ್ನಾರದೋ ಮೋಡಿ
ಬೆಳಕಿಗೂ ಸಾಲ
ಚಂದಿರ ನಕ್ಕ ಹಾಲ..

ಅಲ್ಲಿಲ್ಲೊಂದು ಮಿನುಗು
ಆಸೆಗೂ ಗುನುಗು
ಅವಳಾರೋ ತೀರದೆ
ಕಾದಿರಬಹುದೇ ?

ಬಟ್ಟ ಬಯಲಲಿ ಪುಟ್ಟ
ಹಣತೆ ಹಚ್ಚುತಿದೆ ಆಸೆ
ನೋಡು ನೋಡುತೆ ನೂರು
ಸಾವಿರ ಲಕ್ಷ ಕೋಟಿ ಅಗಣಿತ!

ಚುಕ್ಕೆ ಜೋಡಿಸುತ
ರಂಗೋಲೆ ಹಾಕಿದರು
ಯಾಕೋ ಅದೇ ಚಿತ್ರ
ಚಿತ್ತ ತುಂಬಿದ ಸರಕು.

ಈ ಏಕಾಂತ
ಈ ಏಕಾಂಗಿ ಗಳಿಗೆ
ಈ ಕಾಡುವ ಮೌನ
ಮನಸೇ ನೀ ಕೊರಮ..!

– ನಾಗೇಶ ಮೈಸೂರು
೦೪.೦೭.೨೦೧೭
(Picture source internet / social media)

02092. ಇನ್ನೊಂದಿಷ್ಟು..


02092. ಇನ್ನೊಂದಿಷ್ಟು..
__________________


(೦೧)
ಕಿಲಕಿಲನೆ
ನಕ್ಕಾಗ ಮೋಡ
ತುಂತುರು ಗಾಢ !

(೦೨)
ಹಾಳು ಗಾಳಿ
ಕಚಗುಳಿಯಿಟ್ಟು ಪರಾರಿ
ನಕ್ಕವಳ ನಗೆ ಮಳೆ !

(೦೩)
ತಂಗಾಳಿ ಸರ
ಎರವಲು ಪಡೆದ ಮೋಡ
ಎರಚಲು ಸುಖ !

(೦೪)
ಮಳೆ ಒನಕೆ
ಭುವಿ ಬೀಸುಗಲ್ಲು
ಗಾಳಿ ಬೀಸುವಳು !

(೦೫)
ತುಂತುರಲ್ಲ ಶ್ರೇಷ್ಠ ;
– ನೆಲದೆ ಪುಟಿದು ಮೇಲೆದ್ದ
ಕುರುಚಲು ಹನಿ!

– ನಾಗೇಶ ಮೈಸೂರು
೦೩.೦೭.೨೦೧೭
(picture source : internet / social media)

02091. ತುಂತುರಲಿ ನೈವೇದ್ಯ


02091. ತುಂತುರಲಿ ನೈವೇದ್ಯ
__________________


ತುಂತುರ ನೈವೇದ್ಯ – ೦೧
_________________________

ತುಂತುರು ಹನಿ
ಹನಿಯಲ್ಲಾ..
ಬೆಂಕಿಯ ಕಿಡಿ ;
ಭುಗಿಲೆಬ್ಬಿಸೆ ವಿರಹ !

– ನಾಗೇಶ ಮೈಸೂರು
#ತುಂತುರ_ನೈವೇದ್ಯ

ತುಂತುರ ನೈವೇದ್ಯ – ೦೨
_________________________

ತುಂತುರು ತಂಬೆಲರು..
ಒಗಟು ಬೆಳಕ ಮಳೆ….
ಜಿಗುಟು ನಿಸರ್ಗದಾಟ……
ಜಾಣ ನಿಪುಣ ಜಿಪುಣ !

– ನಾಗೇಶ ಮೈಸೂರು
#ತುಂತುರ_ನೈವೇದ್ಯ

ತುಂತುರ ನೈವೇದ್ಯ – ೦೩
_________________________

ಕವಿಯುತ್ತ ಮೋಡ
ಮಬ್ಬಾಗಿಸೊ ಮುನ್ನುಡಿ
ಹೊದ್ದವಳ ಮದ್ದಾಗಿ
ಮಳೆಯಾಗೆ ಸೋಗು !

– ನಾಗೇಶ ಮೈಸೂರು
#ತುಂತುರ_ನೈವೇದ್ಯ

ತುಂತುರ ನೈವೇದ್ಯ – ೦೪
_________________________

ಕಟ್ಟಿಕೊಂಡಿದೆ ಬಚ್ಚಲು
ಕೋಲೊಂದು ಮೇಟಿ
ಮೋಡಗಟ್ಟಿದೆ ಮನಸು
ಕೋಲಲ್ಲ ಕೋಲದ ಧಾಟಿ !

– ನಾಗೇಶ ಮೈಸೂರು
#ತುಂತುರ_ನೈವೇದ್ಯ

ತುಂತುರ ನೈವೇದ್ಯ – ೦೫
_________________________

ಇರು ಇರು ಉರುವಲು
ಒದ್ದೆಯಾಗದೆ ಒರಟಾಗಿ
ಮುನಿದವಳ ಅಪ್ಪುಗೆ
ದಕ್ಕದಿರೆ ನಿನಾದರೂ ಸುಡು !

– ನಾಗೇಶ ಮೈಸೂರು
#ತುಂತುರ_ನೈವೇದ್ಯ

ತುಂತುರ ನೈವೇದ್ಯ – ೦೬
_________________________

ಜಾಣ ಮಳೆ ನಿಸರ್ಗ
ಬರಿ ನೀರೇ ಬಂಡವಾಳ
ಕವಿ ಕಾವ್ಯ ಕವಿತೆ ಕೊಳ
ತುಂಬಿಸಿ ಬಿಂಬಿಸೊ ಸ್ವರ್ಗ !

– ನಾಗೇಶ ಮೈಸೂರು
#ತುಂತುರ_ನೈವೇದ್ಯ

ತುಂತುರ ನೈವೇದ್ಯ – ೦೭
_________________________

ಸಾಕಪ್ಪ ಸಾಕು ಬಿಡು
ಅದೇ ಹನಿ ತುಂತುರು
ಎಳೆದಷ್ಟೂ ಹರಿದು ಕಿರಿದು
ಪಸೆಯಾರದ ಬರಗಾಲ !

– ನಾಗೇಶ ಮೈಸೂರು
#ತುಂತುರ_ನೈವೇದ್ಯ

ತುಂತುರ ನೈವೇದ್ಯ – ೦೮
_________________________

ಬಲಗಾಲಿಟ್ಟು ಬಾ ತುಂತುರು
ಬರಲೆಂದೆಲ್ಲಾ ಅತ್ತರು
ಅತ್ತುಕೊಂಡೇ ಬರುವ ಗಂಗೆ
ತುಂತುರಲಿದೆಯೇನು ಒಳಗೆ ?

– ನಾಗೇಶ ಮೈಸೂರು
#ತುಂತುರ_ನೈವೇದ್ಯ

ತುಂತುರ ನೈವೇದ್ಯ – ೦೯
_________________________

ನಿಸರ್ಗದಾಕೆ ಕೈ ಮೀರಿ
ಉಡಲೊಲ್ಲದಾಗ ದಿರಿಸು
ತುಂತುರಾಗಿ ಕಲಿಸಿ ಪಾಠ
ತೊಡಿಸುವಳೆಲೆ ಹೂ ಹಾಸು !

– ನಾಗೇಶ ಮೈಸೂರು
#ತುಂತುರ_ನೈವೇದ್ಯ

ತುಂತುರ ನೈವೇದ್ಯ – ೧೦
_________________________

ಹನಿ ಹನಿ ನೀರು
ಹನಿ ಹನಿ ಜೇನು
ಹನಿ ಹನಿ ನೀನು
ಹನಿಯಲ್ಲ ಸಂದಣಿ !

– ನಾಗೇಶ ಮೈಸೂರು
#ತುಂತುರ_ನೈವೇದ್ಯ

– ನಾಗೇಶ ಮೈಸೂರು
೦೨.೦೭.೨೦೧೭

#ತುಂತುರ_ನೈವೇದ್ಯ
(Picture source – internet / social media)

02090.ಮಂಕುತಿಮ್ಮನ ಕಗ್ಗ ೦೬೬:’ದುಂದುಗಾರನವನೆಂದರೆ, ನೀ ಮಂದದೃಷ್ಟಿಯವನಾಗುವೆ ಮರುಳೆ..!’


02090.ಮಂಕುತಿಮ್ಮನ ಕಗ್ಗ ೦೬೬:’ದುಂದುಗಾರನವನೆಂದರೆ, ನೀ ಮಂದದೃಷ್ಟಿಯವನಾಗುವೆ ಮರುಳೆ..!’
ಮಂಕುತಿಮ್ಮನ ಕಗ್ಗ ೬೬ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ