01493. ಅಹಮಿಕೆಯೆಂಬಿ ಜುಟ್ಟು…


01493. ಅಹಮಿಕೆಯೆಂಬಿ ಜುಟ್ಟು…

_________________________________

ತಟ್ಟು ಚಪ್ಪಾಳೆ ಹಾಳು ಅಹಮಿಕೆ ಬಿಟ್ಟು

ಇನ್ನೆಷ್ಟು ದಿನ ಈ ಚಿಟಿಕೆಯ ಸಹವಾಸ?

ಸಾಕಾಗದೇನು ಬರಿ ಮುಸುಕಿನ ಗುದ್ದಾಟ?

ಪ್ರಕ್ಷುಬ್ಧ ಮೌನಾ ಕಲಹ, ಸದ್ದುಗದ್ದಲವೆ ವಾಸಿ ||

ಅಹಮಿಕೆಯೆಂಬೀ ಜುಟ್ಟ ಕಟ್ಟಿ ಸೊಗದೆ

ಯಾಕೆ ನೀಡಿರುವೆ ಚಂಚಲ ಚಿತ್ತದ ಕೈಗೆ ?

ಮನ ಮರ್ಕಟ ಮೊದಲೆ ಕುಡಿದಂತೆ ಮದಿರೆ

ತಾನಾದರೆ ಚಾಲಕ ಚಾಟೀಯೇಟಿನ ಬಾಸುಂಡೆ ||

ನಿಜ ಅಹಮಿಕೆ ಅಲಂಕಾರ ತನ್ನತನ ಸರಿ

ಕಟ್ಟಲಿ ಬಿಚ್ಚಲಿ ಮುಡಿ ಸೊಗವಿರುವಂತೆ ನಗೆ

ಕಟ್ಟಿದ ಶಿಸ್ತಂತೆ ಬಿಚ್ಚಿದ ಕೇಶದಾ ಸಾಮ್ರಾಜ್ಯ

ಎಲ್ಲವೂ ಸರಿಯೆ ಬುಡದ ಬೇರಾಗಿರೆ ಸುಭದ್ರ ||

ಸ್ವೇಚ್ಛೆಯಲಿ ಹಾರಾಡ ಬಿಟ್ಟು ಬಯಲಲಿ

ಘರ್ಷಿಸಿ ಸುತ್ತ ಸಂಘರ್ಷಗಳ ಸರಮಾಲೆ

ಕಹಿ ಗೆಲುವ ಜಯಮಾಲೆಗೆ ಮತ್ತಷ್ಟು ಹಗೆ

ಪಾತಾಳಕೆ ದೂಡೆ ತಬ್ಬಲಿಯಾಗಲ್ಲಿ ಅಲೆವೆ ||

ಹಾಕೊಂದು ರೇಖೆಮಿತಿ, ರೇಖಾಲೇಖ ಪರಿಧಿ

ಕೊಡುಕೊಳ್ಳು ವ್ಯವಧಾನ ಇದ್ದರದೆ ಸಂವಿಧಾನ

ಅಹಮಿಕೆಯಾಗೆ ಗತ್ತು ಸೌಂದರ್ಯಕಾಗದೆ ಕುತ್ತು

ಚಂದ ಹೊಂದಾಣಿಕೆ ಬದುಕು ಕೊಟ್ಟು ಪಡೆಯಬೇಕು ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via face book friends)