01538. ಅಕ್ಕಾ ನೋಡಿಲ್ಲಿ..


01538. ಅಕ್ಕಾ ನೋಡಿಲ್ಲಿ..

___________________________

ಅಟ್ಟದ ಮೇಲಿತ್ತೆ ಅಕ್ಕ

ಆ ತಾತನ ಕಾಲದ್ದು

ದಪ್ಪ ಕಪ್ಪು ರಟ್ಟಿನ ಹೊದಿಕೆ

ಕಪ್ಪುಬಿಳುಪು ಚಿತ್ರದ್ದು ||

ಅಕ್ಕಾ ! ನೋಡಿಲ್ಲೀ ಚಿತ್ರ

ಅಪ್ಪನೆಷ್ಟು ಹುಡುಗ !

ಅಯ್ಯೊ ! ಇದು ಅಮ್ಮನದೆ?

ನೋಡು.. ಗುರುತೇ ಸಿಗದು ! ||

ಯಾರಿದು ಅಜ್ಜಿ ತಾತರೆ?

ನೋಡಿದೆಯ ಮೀಸೆ ಗತ್ತು !

ಗುಮ್ಮನ ಹಾಗೆ ಅಜ್ಜಿ

ಮಂಗಿಯ ತರ ಕೂತ ಮಸ್ತು ! ||

ಇಲ್ಲಿ ನೋಡೆ ಮಕ್ಕಳ ಸೈನ್ಯ?

ಕುಟುಂಬದಲ್ಲೆ ಕ್ರಿಕೆಟ್ಟು ಟೀಮೆ !

ಚಿಕ್ಕಪ್ಪ ದೊಡ್ಡಪ್ಪ ಮಾವರ ಲೆಕ್ಕ

ಅವರ ಸಂಸಾರ ಸೇರೆ ಜೋರೆ ||

ಅರೆ! ಇದು ನೀನು ನಾನು ಅವಳು

ಪುಟಾಣಿಗಳ ಪೋಟೊ ನಮದು..

ತುಂಡು ಲಂಗ ಸೀರೆ ಮೊಗ್ಗಿನ ಜಡೆ

ಅತ್ತು ಅಣ್ಣನ ಜೊತೆ ಸೊಟ್ಟ ನಿಂತದ್ದು ! ||

– ನಾಗೇಶ ಮೈಸೂರು

(Nagesha Mn)(Picture source : Internet / social media received via FB friends – thank you 😊👍🙏- can’t remember who sent exactly, if you are the one please comment! )