01541. ಜೀವನ ಚಕ್ರ


01541. ಜೀವನ ಚಕ್ರ

____________________

ಬೆಳೆಯುವುದುದ್ದುದ್ದ

ಮಲಗುವುದಡ್ದಡ್ಡ

ಅದೆ ಬದುಕು.

ನಿಂತಿದ್ದೇ ಬೆಳೆಸಬೇಕು

ಅವಳ ಬೆಳೆದದ್ದೆ ಮಲಗಿಸಬೇಕು

ಜೋಗುಳ ದನಿ ಮಾತ್ರ ಬೇರೆ;

ನಿಂತೆಡೆ ಜನನ ತರಂಗ

ಮಲಗಿದ್ದೆಡೆ ಮರಣ ಮೃದಂಗ

ಕಟ್ಟಿದ ಬಂಧ ಕೋನದ ಸರಕು.

ಎದೆ ಹಾಲು ಮುತ್ತಿಡಲಿಲ್ಲ ನಿರೀಕ್ಷೆ

ಕೇಳದೆ ಕೊಡುತಿರುವ ಮಾತಾ ದೀಕ್ಷೆ

ಕೊಟ್ಟವಚಿ ಅಪ್ಪಪ್ಪಿ ಕಾಪಿಟ್ಟ ಕಂದ

ತುಂಟತನ ಭಂಡತನ ಭರಿಸಿ ಸಂಪೂರ್ಣ

ಕೃಶವಾದಾಗ ಕಾಯ ತಾನೇ ಹಸುಳೆ

ಬೆಳೆದಾ ಶಿಶು ಮಡಿಲಲಿಟ್ಟು ಹಾಡೀತೆ ?

ಸಂಸಾರ ಚಕ್ರ ಮತ್ತದೆ ಅನುರಣ

ಚಕ್ರವಾಕಗಳಂತೆ ಕಾಲದನುಸರಣೆ

ಶೈಶವ ಬಾಲ್ಯ ಪ್ರಾಯ ವೃದ್ಧಾಪ್ಯ ಕಸು

ಹಸುಗೂಸಿನಿಂದ ಅಸು ನೀಗುವತನಕ

ಮತ್ತದೆ ಸಂದಿಗ್ದ ಸಿಗುವುದೊ? ಬಿಡುವುದೊ?

ಒಂದೆಡೆ ನಿರೀಕ್ಷೆಯ ಕಾರುಬಾರು ಮತ್ತೊಂದೆಡೆ ತಕರಾರು !

– ನಾಗೇಶ ಮೈಸೂರು

(Nagesha Mn)

(Picture source from internet / social media received via Suma B R & Prasanna Prasanna – thank you both ! 🙏👍😊)

01540. ಅವನ ಕೆತ್ತಿದನಿವ ಪರಬ್ರಹ್ಮ..


01540. ಅವನ ಕೆತ್ತಿದನಿವ ಪರಬ್ರಹ್ಮ..

___________________________________

ಬ್ರಹ್ಮನಿವನ ಕೆತ್ತಿದ

ಇವನವನನ್ನೆ ಕೆತ್ತಿಹನಲ್ಲ !

ಸೃಜಿಸಿದಾತನ ಸೃಜಿಸಿದ

ಪರಬ್ರಹ್ಮ ಇವನಲ್ಲವೆ ? ||

ಅವನಿದ್ದರೇನು ಅಮೂರ್ತ?

ವಿವರಣೆ ಜಗ ಕಲ್ಪನಾತೀತ

ಉಳಿಯೊಂದಿರೆ ಕರಸೇವೆ

ಪರಿಕಲ್ಪನೆಯೆಲ್ಲಾ ಮೂರ್ತ ! ||

ಮರವೊ ಲೋಹವೊ ಮಣ್ಣೊ

ಪಂಚಭೂತ ಮಿಳಿತ ಕಣ್ಣೊ

ಕಣ್ಣು ಮೂಗು ಬಾಯಿ ಸೂತ್ರ

ಶಿಲ್ಪಶಾಸ್ತ್ರ ವಸ್ತ್ರ ವೈವಿಧ್ಯ ಪರಾ ||

ವಯೋವೃದ್ಧ ಕಲೆ ಸಮೃದ್ಧ

ಸ್ವಾನುಭವ ಸ್ವಯಂಭು ಸ್ವತಃ

ಬೊಮ್ಮನವನ ಮಾದರಿಯಿವ

ಕರಕುಶಲ ತಂತ್ರದ ಸಜೀವ ||

ಯುಗದಾ ಕೊನೆಗೊಮ್ಮೆ ಕಲ್ಪ

ಆಯಾಸಕೆ ಮಲಗುವ ಅವ

ಇವನುದರಕಿದೆ ಅಡಿಪಾಯ

ಕಸುಬಾಗಿ ಕಾಪಾಡೊ ದೈವ ||

– ನಾಗೇಶ ಮೈಸೂರು

(Nagesha Mn)

(೩ಕೆ – ನಮ್ಮ ಚಿತ್ರ ನಿಮ್ಮ ಕವನ ೫೪ ಕ್ಕೆ ಹೊಸೆದ ಕವನ)