00043. ಮಾತಿಗೊಬ್ಬರ ….

ಮಾತಿಗೊಬ್ಬರ ….
________________

ಸಿಗಬೇಕು ಮಾತಿಗೊಬ್ಬರ
ಸಿಕ್ಕು ಮಾತೆ ಗೊಬ್ಬರ
ಇರದೆ ಬರಿ ಮಾತಿನಬ್ಬರ
ಸೊಗಸಾದ ಮಾತಿನ ಸರ! ||

ಮಾತೆ ಜನ್ಮ ಚೇತೋಹಾರಿ
ಮಾತೆ ತಾನೆ ರಹದಾರಿ
ಮಾತಲೆ ಮನೆ ಮಾತಾಗಿರಿ
ಮಾತೆ ತಾನೆ ಮೌನದ ಗುರಿ! ||

ಸುಲಲಿತಪ್ರಸವ ಮಾತಡಿಕೆ
ಮಾತಣಿಸುವ ನೀರಡಿಕೆ
ಮಾತುಣಿಸುವ ಮನ ಹಸಿವೆ
ಸರಿ ಬೌದ್ಧಿಕತೆ ಮಾತಾಗಿಸುವೆ! ||

ಮನ ಮಾತಿನ ಮಧುರ ವೀಣೆ
ನುಡಿಮಾತೆಷ್ಟೊ ತನ್ನಂತಾನೆ
ಮೆದುಳಲಿತ್ತೆ ಮಾತ ತಿರುಗಣೆ
ಬಾಯಾಗೊ ಮುನ್ನ ಮಾತಾಣೆ! ||

ಆಡಿದ ಮಾತು ಹೂಡಿದ ಬಾಣ
ನೆತ್ತರಿಲ್ಲದ ಮಾತವನೆ ಜಾಣ
ಮಾತಿದ್ದೂ ಮುಗ್ದ ತಪ್ಪದ ಸಂದಿಗ್ದ
ಮಾತೆ ನಿಯತಿಯಂಟಿಸಿ ಪ್ರಾರಬ್ದ! ||

– ನಾಗೇಶ ಮೈಸೂರು

(ಸಂಪದದಲ್ಲಿ ಪ್ರಕಟಿಸಿದ ಬರಹ)
March 7, 2013 – 11:22am

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s