00333: ಸಿಗರೇಟಿನ ವರ್ಣಾಶ್ರಮ..!

   

 ಚಿತ್ರ ಕೃಪೆ : ವಿಕಿಪೀಡಿಯಾ (Pictures courtesy from Wikipedia)

00333: ಸಿಗರೇಟಿನ ವರ್ಣಾಶ್ರಮ..!
______________________________

ನೋಡಬೇಕೆಂದು ಹೊರಟರೆ ಪ್ರಪಂಚದಲ್ಲಿ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ನಿಖರವಾಗಿ, ಸರ್ವಸಮ್ಮತವೆನಿಸುವಂತೆ ಗುರ್ತಿಸುವುದು ಕಷ್ಟ. ಯಾವ ಕ್ರಿಯೆಯ ಹಿನ್ನಲೆಯನ್ನೆ ನೋಡಲಿ ಅದರ ಕಾರ್ಯ-ಕಾರಣ ಸಮಷ್ಟಿತ ಸ್ಥಿತಿಯಲ್ಲಿ, ಪ್ರತಿಯೊಂದರ ಆಗುವಿಕೆಯನ್ನು ವಿವರಿಸಲು ಸಾಧ್ಯವಾಗುವುದರಿಂದ ಒಳಿತನ್ನಾಗಲಿ, ಕೆಡುಕನ್ನಾಗಲಿ ಸಂಧರ್ಭಕ್ಕೆ ತಕ್ಕ ಹಾಗೆ ಬಣ್ಣ ಹಾಕಿ ರೂಪಾಂತರಿಸಿಬಿಡಬಹುದು. ಅದೇ ರೀತಿಯಲ್ಲಿ ಬರಿ ಕೆಡುಕಿನದೆಂದೆ ಪರಿಭಾವಿಸುವ ವಿಷಯದಲ್ಲಿ ಒಳಿತಿನ ಮನೋಧರ್ಮವನ್ನು ಹುಡುಕುವುದು ಸಾಧ್ಯ; ಒಳಿತಿನಲ್ಲಿ ಕೆಡುಕನ್ನು ಸಹ.

ಸಿಗರೇಟು ಸೇವನೆ ಕೆಡುಕಿನ ಗುಂಪಿನಲ್ಲಿ ಆಯಾಚಿತವಾಗಿ ಸೇರುವ ವಿಷಯ. ಸೇದುವವರು ಮತ್ತು ಸೇದದವರು, ಇಬ್ಬರೂ ಒಪ್ಪುವ ಅಂಶವಿದು. ಆ ಸಿಗರೇಟಿನ ಮನೋಧರ್ಮದಲ್ಲು ಏನಾದರು ಒಳಿತು ಕಾಣಬಹುದೆ ? ಎಂದು ಆಲೋಚಿಸುತ್ತಿದ್ದಾಗ ಅದಕ್ಕು ಚತುರ್ವರ್ಣಾಶ್ರಮದ ಪ್ರಕ್ರಿಯೆಗು ಒಂದು ರೀತಿಯ ಸಂಬಂಧ ಕಲ್ಪಿಸಬಹುದೆನಿಸಿತು. ಆ ಅಲೋಚನೆಯ ಫಲಿತವೆ ಈ ‘ಸಿಗರೇಟಿನ ವೇದಜ್ಞಾನ’ ಕವನ.

ಸಾರಾಂಶದಲ್ಲಿ ಹೇಳುವುದಾದರೆ, ಸಿಗರೇಟು ಮತ್ತದರ ಸೇದುವಿಕೆಯ ಹವ್ಯಾಸ – ನೀತಿ ಪಾಠ ಹೇಳುವ ಬ್ರಾಹ್ಮಣನ ಪಾತ್ರ ವಹಿಸಲೂ ಸೈ; ಅಂತೆಯೆ ಭಂಡತನದಲ್ಲಿ ಕ್ಷತ್ರಿಯನ ಅವತಾರಕ್ಕೂ ಸರಿಯೆ. ವಾಣಿಜ್ಯದಲ್ಲಿ ಯಾವ ವೈಣಿಕನಿಗೂ ಕಡಿಮೆಯಿರದ ವ್ಯವಹಾರ ಜ್ಞಾನ ಪ್ರದರ್ಶಿಸಿದರೆ, ತನ್ನನ್ನು ಸೇದುವವರ ಸರ್ವನಾಶ ಮಾಡಲು ದುಡಿವ ತರದಲ್ಲಿ ಯಾವ ಶೂದ್ರ ಗಣವೂ, ಅದರ ಮುಂದೆ ನಾಚಿ ತಲೆ ತಗ್ಗಿಸಬೇಕು. ಇಷ್ಟೆಲ್ಲ ವರ್ಣಾಶ್ರಮದ ಕೀಟಲೆ ಬುದ್ಧಿ ತೋರುವ ಸಿಗರೇಟು, ಜಾತಿ ವರ್ಗದ ಬೇಧವಿಲ್ಲದೆ ಎಲ್ಲರಿಂದಲು ಸೇದಿಸಿಕೊಂಡು ‘ಜೈ’ ಅನಿಸಿಕೊಳ್ಳುವ ಜಾತ್ಯಾತೀತ ಅನ್ನುವ ವಿಪರ್ಯಾಸವಿನ್ನೊಂದು ಕಡೆ.

ಈ ಕವನವನ್ನು ಸಿಗರೇಟಿನ ಗುಣಗಾನವೆಂದು ಪರಿಗಣಿಸದೆ, ಅದರ ಕುರಿತಾದ ಒಂದು ವಿಭಿನ್ನ ಆಲೋಚನೆಯನ್ನು, ಅದಕ್ಕೊಂದು ವಿಭಿನ್ನ ವ್ಯಕ್ತಿತ್ವವನ್ನು ಆರೋಪಿಸಿದ ಬಗೆಯೆಂದು ಸ್ವೀಕರಿಸುವುದು ಒಳಿತು. ಹಿಂದೆಲ್ಲ ನುಡಿದಿರುವಂತೆ – ಇದು ಸಿಗರೇಟು ಸೇದುವುದನ್ನು ಪ್ರೋತ್ಸಾಹಿಸುವುದಕ್ಕಲ್ಲ. ಪರೋಕ್ಷವಾಗಿ ಅದರ ನಿಲುಗಡೆಯನ್ನು ಪ್ರೇರೇಪಿಸುವುದಕ್ಕೆ. ಹೀಗಾಗಿ ಬರಿಯ ಕವನದ ಚೌಕಟ್ಟಲಷ್ಟೆ ಇದನ್ನು ಸ್ವೀಕರಿಸಿ ಎನ್ನುವ ವಿನಮ್ರ ಕೋರಿಕೆಯೊಂದಿಗೆ – ಇದೋ, ಕವನದ ಸಾಲುಗಳು ನಿಮಗಾಗಿ..!

ಸಿಗರೇಟಿನ ವೇದಜ್ಞಾನ
____________________

ತನ್ನನು ತಾನೆ ಬೆಂಕಿಗಿಟ್ಟು
ತ್ಯಾಗಿಯ ಹೊದಿಕೆಯುಟ್ಟು
ಬಿಟ್ಟುಕೊಡದಾ ಒಳಗುಟ್ಟು
ನಿಧಾನ ವಿಷವೆ ಸಿಗರೇಟು! ||

ಸುಟ್ಟು ಕೊಂಡೇ ವೇದಾಂತ
ಹೇಳುವ ಮುನಿಗಳ ತಾತ
ವರ್ಣಭೇಧವಿಲ್ಲದ ಸಮತ
ಸಿಗರೇಟಿಗರೆಲ್ಲ ಒಂದೆ ಮತ! ||

ನೀತಿಪಾಠ ಹೇಳೊ ಬ್ರಾಹ್ಮಣ
ಅವನಾ ತಪ್ಪೇನಿಲ್ಲದ ಕಾರಣ
ಹುಸಿ ವಿಶ್ವಾಸದಲೆ ಆತ್ಮರಕ್ಷಣೆ
ಕ್ಷತ್ರಿಯ ಗುಣವಲ್ಲವೆ ಅವನೆಣೆ! ||

ವೃತ್ತಿಯಲಿ ವ್ಯಾಪಾರಿಯ ಗುಣ
ಪ್ರವೃತಿಯೆ ಬೆಲೆಯೇರಿಸಿ ಮಣ
ಸುಟ್ಟೆ ಧೂಮ ಹೋದರು ಪ್ರಾಣ
ತನು ಕಾಡೆ ದುಡಿ ಶೂದ್ರ ಜಾಣ! ||

ವೇದಾಶ್ರಮ ಕಟ್ಟುಪಾಡಲ್ಹಿಡಿದವ
ಅವನಲ್ಲವೆ ವರ್ಣಗಳೆಲ್ಲಾ ಬಲ್ಲವ
ಅವನನರಿತರೆ ನಿಜ ವೇದಾಧ್ಯಾಯಿ
ಬಿಟ್ಟರವನೆನ್ನುವ ನನ್ನಪ್ಪುತ ಸಾಯಿ! ||

Thanks and best regards,
Nagesha MN

ಸಿಗರೇಟು, ವೇದ, ಜ್ಞಾನ, ವೇದಜ್ಞಾನ, ವರ್ಣಾಶ್ರಮ , ವರ್ಣ, ನಾಗೇಶ, ಮೈಸೂರು, ನಾಗೇಶಮೈಸೂರು)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s