00045. ಗುಬ್ಬಣ್ಣನ ಸ್ವಗತಗಳು

ಗುಬ್ಬಣ್ಣನ ಸ್ವಗತಗಳು
___________________________

ಕಣ್ಮುಚ್ಚಿ ಕುಡಿದಾ ಹಾಲು
———————————————
ಕಣ್ಮುಚ್ಚಿ ಕುಡಿದಾ ಹಾಲು, ಬೆಕ್ಕಿಗಹುದು ಮೇಲು
ಕದ್ದು ಮುಚ್ಚಿದ ಪ್ರಣಯ, ತರುವುದೆ ಬರಿ ಗೋಳು
ಪ್ರೇಮಾಪ್ರೀತಿ ಯಾರ್ಕೇಳದ ಅಹವಾಲೆ ಗುಬ್ಬಣ್ಣ!

ಹಾದಿ ವಾಹನ
———————————————
ಹಾದಿ ವಾಹನ ಬಹಳ, ಜೀವ ತೆಗೆವ ಖೂಳ
ಯಾರು ಗುದ್ದಲೂ, ನೇರ ಸ್ವರ್ಗಕೇ ಸಲೀಸಣ್ಣ
ನಮ್ಮ ಕ್ಷೇಮ, ನಮ್ಮ ಕೈಲಿರಬೇಕಣ್ಣ, ಗುಬ್ಬಣ್ಣ!

ಬಡ್ಡಿ ಕಟ್ಟದ ಸಾಲ
———————————————–
ಬಡ್ಡಿ ಕಟ್ಟದ ಸಾಲ, ಹನುಮಂತನ ಬಾಲ
ಕಟ್ಟಿದರು ಅಷ್ಟಿಷ್ಟು, ಅಲುಗಾಡದ ಅಸಲ
ಕಡ ತಂದು ನಿ, ತಿಂದು ಕೆಡಬೇಡ, ಗುಬ್ಬಣ್ಣ!

ಆಫೀಸಿನ ಕೆಲಸ
————————————
ಆಫೀಸಿನ ಕೆಲಸ ಆಫೀಸಲೆ ಹೂತು
ಮನೆಯಲಾಡಿರೆ ಬರಿ ಮನೆ ಮಾತು
ಮನೆಮಡದಿಮಕ್ಕಳ ಸೌಖ್ಯ ಗುಬ್ಬಣ್ಣ!

ಬಾಸು ಮೆಚ್ಚಿದರೆ
—————————————–
ಆಫೀಸಲಿ ಬಾಸು ಮೆಚ್ಚಿದರೆ ಬಲು ಲೇಸು
ಮೆಚ್ಚದಿರೆ ಹೆಚ್ಚು ಕೆಲಸದ ಜತೆ ಬಿಡಿಗಾಸು
ಮೆಚ್ಚು ಕುಚ್ಚಾಗೆ ಬಡ್ತಿಗೂ ಸೊಗಸು ಗುಬ್ಬಣ್ಣ!

ಬಾಸುಗಳ ಸಹವಾಸ
——————————————-
ಬಾಸುಗಳ ಸಹವಾಸ ಮೋಸದ ತವರಂತೆ
ಮಾಡಿದ್ದೆಲ್ಲಾ ಮಾಡೂ ಹೆಸರೆಲ್ಲಾ ಅವರಂತೆ
ಬಿಸಿತುಪ್ಪ ನುಂಗದುಗುಳದ ಪಾಡು ಗುಬ್ಬಣ್ಣ!

(ಆಫೀಸು / ಬಾಸುಗಳ ಕ್ಷಮೆ ಕೋರಿ)
ನಾಗೇಶ ಮೈಸೂರು, ಸಿಂಗಾಪುರದಿಂದ

ಗುಬ್ಬಣ್ಣನ ಸ್ವಗತಗಳು (ತ್ರಿಪದಿ)
——————————————–
March 18, 2013 – 4:57pmnageshamysore

ಪರ್ಸುಗಳ ಬಿಚ್ಚಿದರೆ ಹರ್ಷಿಸದ ಸತಿ ಯಾರು
ಕಾಸು ತೆತ್ತೂ ತಲೆ ಸುತ್ತದ ರಮಣರು ಯಾರು
ಪೆಚ್ಚು ನಗುತೆ ರೊಚ್ಚ ಮರೆ ಮಾಚುವರೆ ಗುಬ್ಬಣ್ಣ!

– ನಾಗೇಶ ಮೈಸೂರು

(ಸಂಪದದಲ್ಲಿ ಪ್ರಕಟಿಸಿದ ಬರಹ)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s