00082. ಭಾರತಿಮನ, ಭಾರತಿತನ!

ಭಾರತಿಮನ, ಭಾರತಿತನ!
——————————————–

ನಾವು ಭಾರತೀಯರು
ನಮಗೆ ನಮದೆ ಕಲ್ಚರು
ರಾಜ್ಯರಾಜ್ಯ ಕೂಡಿ ಕಟ್ಟಿದ
ಒಂದೇ ಗೂಡಿನ ಫ್ಯೂಚರು !

ಯುನಿಟಿ ಇನ್ ಡೈವರ್ಸಿಟಿ
ನಮ್ಮೊಳಗಿನ ಮಂತ್ರವು
ವಿವಿಧತೆಗೆ ಏಕತೆ ಕಟ್ಟಿ
ಕನ್ನಡದ ಕಾರ್ಯತಂತ್ರವೂ!

ಎಷ್ಟು ಜನ ಎಷ್ಟೊಂದು ಭಾಷೆ
ಎಷ್ಟೊಂದು ತರ ತಿನ್ನೋ ತಿನಿಸೆ
ಇನ್ನೆಷ್ಟೊ ಬಗೆ ದಿರಿಸು ಮೋಹ
ಒಳಗೆಲ್ಲರಲು ಒಂದೇ ಮನಸಾ!

ಇಷ್ಟೊಂದು ವೈವಿಧ್ಯದ ಕಥೆ
ಸಂವಹನಕೆಷ್ಟು ಸಂಕೀರ್ಣತೆ
ನಡೆಸೋದ್ಹೇಗಪ್ಪ ಈ ಏಕತೆ
ಎಷ್ಟೊಂದು ಬಗೆಯ ವಿವಿಧತೆ ?

ಬೇಕಲ್ಲವೇ ಕಾರ್ಯತಂತ್ರ
ಯೋಜನೆಗಳ ಕಟ್ಟೋ ಮಂತ್ರ
ಆಗದಂತೆ ಗತಿ ಅತಂತ್ರ
ದಶ ದಶಕಗಳ ನೀತಿ ಸೂತ್ರ!

ಏಯ್! ಕೊಂಚ ತಾಳು ಮನ
ಏಕಾಗಬೇಕು ಬರಿ ಸಂಕೀರ್ಣ
ಶತ ಶತಕಗಳ ಚರಿತ್ರೆಯಲ್ಲೇ
ಅಡಗಿಲ್ಲವೇ ತುಸು ಸಂವಹನ?

ನಾವ್ ಕನ್ನಡಿಮನ ಕನ್ನಡತನ
ಹಂಚುತ ನಮ್ ಒಳ್ಳೆಯತನ
ಒಗ್ಗೂಡಿಸೆ ದೇಶದೆಲ್ಲರ ಗಮನ
ನಮನ ಭಾರತಿಮನ, ಭಾರತಿತನ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
VKnewz published on 15.08.2013

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s