00062. ಪಾಂಚಾಲಿಯ ಹಾಡು

ನಿನ್ನೆ ಪಾರ್ಥರು ಕೊಟ್ಟ ‘ಪದ್ಯ ಪಾನ’ದ ಲಿಂಕು ನೋಡಿದೆ (http://padyapaana.com/) – ‘ದ್ರೌಪದಿ ವಸ್ತ್ರಾಪಹರಣದ’ ಚಿತ್ರವಿತ್ತು (72). ಷಟ್ಪದಿ, ಛಂಧಸ್ಸು ವ್ಯಾಕರಣ ಜ್ಞಾನ ನನಗಿಲ್ಲದ ಕಾರಣ, ಆ ಪ್ರಕಾರದಲ್ಲಿ ರಚಿಸಲು ನನಗೆ ಬರದು. ಆದರೂ ಚಿತ್ರ ನೋಡಿ ಮೂಡಿದ ದ್ರೌಪದಿಯ ಭಾವಗಳಿಗೆ ಧ್ವನಿ ಕೊಡಲು ನೋಡಿದೆ – ಅದರ ಫಲಿತ ಈ ಕೆಳಗಿದೆ, ಈಗ ಸಂಪದಿಗರ ಮುಂದೆ – ನಾಗೇಶ ಮೈಸೂರು

ಪಾಂಚಾಲಿಯ ಹಾಡು
____________________

ದುರುಳ ಸೆಳೆ ಸೆಳೆದನೆ ಬಳಿ ಸಾರಿ
ಕೈ ಸೆರಗಿಗಿಟ್ಟಾ ಧೂರ್ತತನ ಭಾರಿ
ಏನು ಮಾಡಲಿತ್ತೆ ಅಸಹಾಯಕತೆ
ಆಗಬೇಕಿತ್ತೆ ಭಾರತ ಮುನ್ನುಡಿಕಥೆ!

ನನ್ನಾರ್ತನಾದಕೆ ಕೃಷ್ಣಾ ಮುರಾರಿ
ಮಾನ ಕಾಪಾಡಿದನಲ್ಲವೆ ಆಭಾರಿ
ಜಟ್ಟಿಗಳೈವರೆ ಕುಳಿತರೆ ಮುದುರಿ
ಕೇಶವಾ ನೀನಿಲ್ಲದಿರಿನ್ಯಾರ ದಾರಿ!

ದ್ಯೂತದಲಿ ಕೂತವರವರೆ ಐವರು
ಹರಿದಂಚಿದರೂ ನನ್ನೇಕೆ ಹೂತರು
ಪಣವಿಟ್ಟರು ಇಡಿಜೀವನ ಮುಡಿಪು
ಪಣಕಿಡೆ ಜೂಜಾಟಕೆ ಯಾರೆ ಕಾಪು?

ಯಾರೊ ದುರ್ಯೋಧನ ದುಷ್ಟಜನ
ರಾಜಕೀಯಕೇಕೆಳೆಯೆ ಹೆಣ್ಗಳ ಮನ
ಲಜ್ಜೆಯೆ ಅಭರಣವಾದವರ ಜೀವನ
ಬಿಚ್ಚಲ್ಹೀಗೆಲ್ಲ ಸರಿಯೆ ಹೆಣ್ಣಲ್ಲ ಕವನ!

ಬಟ್ಟೆಯ ಬಿಚ್ಚೆ ಹುಚ್ಚುಚ್ಚೆ ಮನಸ್ವೇಚ್ಛೆ
ಯುಗಕೆಲ್ಲ ಸ್ಪೂರ್ತಿ ದುಷ್ಕರ್ಮಿ ಕೆಚ್ಚೆ
ಮೌನದೀ ಕೂತರೇಕೆಲ್ಲ ಮಹಾ ರಥಿ
ಉತ್ತೇಜಿಸಿದಂತಲ್ಲವೆ ಭವಿತಸಂತತಿ?

ಓದಲೇಕಿಷ್ಟಾಸೆ ಬೆತ್ತಲಿಸೀ ಗುಂಪಲೆ
ತಾಯ್ತಂಗಿಸತಿಗಳಿಗಿಷ್ಟೆ ಕಟ್ಟಿದ ಬೆಲೆ
ಬ್ರಹ್ಮಸೃಷ್ಟಿಯನೆ ನಮ್ಮುದರಕೆ ಕಟ್ಟಿ
ನಾವ್ಹೆತ್ತು ಅನುಭವಿಸಲೇಕಿ ದುರ್ಗತಿ?

ಸದ್ಯ ಜೀವಂತ ಮುರಾರಿಗೆ ಹೃದಯ
ಸಜ್ಜನರಿನ್ನೂ ಅಷ್ಟಿಷ್ಟಿದ್ದವರಾ ವಿಷಯ
ಹೇಗೊ ಬದುಕಿತೆ ದ್ವಾಪರದ ದ್ರೌಪತಿ
ಕಲಿಯುಗದಲಿ ಹೆಣ್ಣಿಗೆ ಏನಪ್ಪಾ ಗತಿ?

– ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

(Some comments in sampada)

Submitted by makara on June 21, 2013 – 9:54pm
ಪಾರ್ಥರಸಾರಥಿಗಳ ಮಾತಿಗೆ ನನ್ನದೂ ಸಹಮತವಿದೆ. ಶಾಸ್ತ್ರೀಯ ಸಂಗೀತದ ಶೈಲಿಗೆ ಒಂದು ಸೊಗಸಿರುತ್ತದೆ; ಅದೇ ರೀತಿ ಜಾನಪದ ಗೀತೆಗಳಿಗೆ ತಮ್ಮದೇ ಸೊಗಡು ಸೊಗಸು ಇರುತ್ತದೆ. ಅವುಗಳ ಕೋನಗಳಲ್ಲಿ ಅವುಗಳಲ್ಲಿ ಚೆನ್ನಾಗಿರುತ್ತವೆ. ಆದ್ದರಿಂದ ನಿಮ್ಮದು ವ್ಯಾಕರಣ ಬದ್ಧ ಅಥವಾ ಛಂದೋಬದ್ಧವಾಗಿಲ್ಲವೆಂದು ಬೇಸರಿಸುವ ಅಗತ್ಯವಿಲ್ಲ. ಕಾವ್ಯಕ್ಕೆ ವ್ಯಾಕರಣದ ದೋಷವಿಲ್ಲ ಎಂದು ಬೇಂದ್ರೆಯವರು ಹೇಳುತ್ತಿದ್ದರು ಎನ್ನುವುದನ್ನು ಸಂಪದದ ಒಂದು ಲೇಖನದಲ್ಲಿ ಓದಿದ ನೆನಪು. ಇರಲಿ, ಬಿಡಿ ಒಟ್ಟಿನಲ್ಲಿ ಸುಂದರವಾದ ಕವನಕ್ಕೆ ಧನ್ಯವಾದಗಳು, ನಾಗೇಶರೆ. ಮೂರನೇ ಪಂಕ್ತಿಯ ಎರಡನೇ ಸಾಲಿನ ’ಹೂತರು’ ಶಬ್ದವನ್ನು ಸ್ವಲ್ಪ ವಿವರಿಸಿ. ದ್ಯೂತದಲಿ ಕೂತವರವರೆ ಐವರು ಹರಿದಂಚಿದರೂ ನನ್ನೇಕೆ ಹೂತರು

Submitted by nageshamysore on June 21, 2013 – 10:13pm
ಶ್ರೀಧರರೆ, ಪೂರ್ಣತೆಗಾಗಿ ಪೂರ್ತಿ 4 ಸಾಲನ್ನು ವಿವರಿಸಿದ್ದೇನೆ – ನಾಗೇಶ ಮೈಸೂರು ದ್ಯೂತದಲಿ ಕೂತವರವರೆ ಐವರು ಹರಿದಂಚಿದರೂ ನನ್ನೇಕೆ ಹೂತರು ಸಾರಾಂಶ: (ದ್ರೌಪದಿಯ ಮಾತಿನಲ್ಲಿ) – ಜೂಜಿಗೆ ಕೂತ ಈ ಐವರು ಪತಿಗಳಿಗೂ, ನನ್ನನ್ನೆ ಸಮವಾಗಿ ಹರಿದು ಹಂಚಿದೆ ಭೇಧ ಭಾವ ಮಾಡದೆ; ಅಂತಿದ್ದರೂ ನಾನೊಂದು ಜೀವವಿರುವ, ಮನಸಿರುವ, ಘನತೆ, ಗೌರವವಿರುವ ಹೆಣ್ಣು ಎಂಬುದನ್ನೂ ಮರೆತು, ನ್ನನ್ನ ವ್ಯಕ್ತಿತ್ವವನ್ನು ಎಲ್ಲರ ಕಣ್ಣು ಮುಂದೆಯೆ (ಸಾರ್ವಜನಿಕವಾಗಿ) ಲೆಕ್ಕಕ್ಕಿಲ್ಲದ ಹಾಗೆ ಹೂತು ಹಾಕಿಬಿಟ್ಟರಲ್ಲಾ?(ನನ್ನನ್ನು ಜೂಜಿಗೆ ಪಣಕ್ಕಿಡುವ ವಸ್ತುವೆಂಬಂತೆ ಪರಿಗಣಿಸಿ) ಪಣವಿಟ್ಟರು ಇಡಿಜೀವನ ಮುಡಿಪು ಪಣಕಿಡೆ ಜೂಜಾಟಕೆ ಯಾರೆ ಕಾಪು? ನಾನು ಇಡಿ ಜೀವನವನ್ನು ಇವರಿಗಾಗಿಯೆ ಪಣವಿಟ್ಟರೂ (ಮುಡಿಪಾಗಿಟ್ಟರು), ಅಂತಹ ಇವರುಗಳೆ ಗಣನೆಯಿಲ್ಲದವರಂತೆ ನನ್ನನ್ನು ಜೂಜಾಟಕೆ ‘ಪಣ’ವಾಗಿಟ್ಟರಲ್ಲಾ, ಇನ್ಯಾರು ನನ್ನ ರಕ್ಷಿಸುವರೆಂದು ನಂಬಲಿ ?

(ಸಂಪದದಲ್ಲಿ ಪ್ರಕಟಿಸಿದ ಬರಹ)
Sampada: 21.06.2013

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s