01186. ೩ಕೆ ಯಿಂದ ಬ್ಲಾಗ್ ಪರಿಚಯ


01186. ೩ಕೆ ಯಿಂದ ಬ್ಲಾಗ್ ಪರಿಚಯ

೩ಕೆ ಬಳಗದ ವತಿಯಿಂದ ನಿವೇದಿತಾ ಚಿರಂತನರವರು ನನ್ನ ಬ್ಲಾಗನ್ನು ಪರಿಚಯಿಸುತ್ತ ನುಡಿದಿರುವ ನಲ್ನುಡಿಗಳಿಗೆ ಹೃತ್ಪೂರ್ವಕ ನಮನಗಳೊಂದಿಗೆ…

00718. ನೇತ್ರಾವತಿ ಅತ್ತ ಸದ್ದು..(in Today’s Readoo Kannada – 16.05.2016)


00718. ನೇತ್ರಾವತಿ ಅತ್ತ ಸದ್ದು..(in Today’s Readoo Kannada – 16.05.2016

ನೇತ್ರಾವತಿ ಅತ್ತ ಸದ್ದು..

00699. ಕುಡುಕ ಗಂಡನ ಕೊಬ್ಬು..


00699. ಕುಡುಕ ಗಂಡನ ಕೊಬ್ಬು..
________________________

(ಸುಮ್ನೆ ತಮಾಷೆಗೆ ಬರೆದಿದ್ದು …😜 )

ಏನೋ ಸ್ವಲ್ಪ ಕುಡ್ಕ
ವಾಸನೆ ಸ್ವಲ್ಪ ತಡ್ಕೊ
ಕಟ್ಕೊಂಡೋಂಗೆ ಡೌಲಾ ?
ಕುಡ್ಸೋದು ನಂದೆ ಡೀಲು..

ತಡಿಯೋಕಾಗ್ದೆ ಇದ್ರೆ
ನೀನೂ ರೂಢಿ ಮಾಡ್ಕೊ
ಬಿದ್ರೆ ಒಳಗೆ ಥರ್ಟೀ
ನಿನ್ವಯಸಾಗುತ್ತೆ ಟ್ವೆಂಟಿ..!

ಕುಡೀದೆ ಇದ್ರೆ ಮದಿರೆ
ಹತ್ರ ಬರಲ್ಲಾ ನಿದಿರೆ
ನೀ ಬರ್ದಿದ್ರೂ ಹೋಗೆ
ಕನಸಿನ ಕದ ತೆರೆದಾಯ್ತೆ..

ಸುಮ್ನೆ ಬೇಡಾ ಗಾಂಚಲಿ
ಹಾಕೆ ತಟ್ಟೆ ಪಾಂಚಾಲಿ
ಕುಡಿದಿದ್ ಹತ್ಬೇಕ್ ಮೈಗೆ
ತಿನ್ದಿದ್ರೆ ಹತ್ತೋದು ಹ್ಯಾಗೆ ?

ಹಾಸಿಗೆ ನಂದು ನಿಂದು
ಬೇಡಾ ಅಂದ್ರು ಮುನಿದು
ನಾ ಬಿಡಲ್ಲವೆ ಸಾವಾಸ
ಹೆಂಡ್ತಿ ಮಕ್ಕಳಿಗುಪವಾಸ..

– ನಾಗೇಶ ಮೈಸೂರು

(Picture from : http://www.freedictionary.com – drunkard)

00528. ಏನು ಗೊತ್ತಾ, ವಿಷಯ..?


00528. ಏನು ಗೊತ್ತಾ, ವಿಷಯ..? 
___________________________

   
(photo source wikipedia – https://en.m.wikipedia.org/wiki/File:Leonid_Pasternak_-_The_Passion_of_creation.jpg)

ನಿನಗೊಂದು ವಿಷಯಾ ಗೊತ್ತಾ ..
ಈಚೆಗ್ಯಾಕೊ ಏನೂ, ಸರಿ ಬರೀತಿಲ್ಲಾ ಚಿತ್ತ.
ಬುಳಬುಳ ಜೊಂಪೆ ಬರ್ತಿತ್ತಲ್ಲ ಎಲ್ಲಾ..?
ಯಾಕೊ ಕಣಿ-ಧರಣಿ, ಕೂತಲ್ಲೆ ತಟ್ಟಿ ಬೆರಣಿ..

ಒಂದಲ್ಲ ಹತ್ತಲ್ಲ ನೂರಾರು ವಸ್ತು !
ಸಾಲುಸಾಲು ಸೀಮೆಣ್ಣೆ, ರೇಷನ್ನಿನ ಹಾಗೆ..
ನಿಂತಿತ್ತಲ್ಲ ಕೂಗಾಡಿ, ಜಗಳಕೆ ಬಿದ್ದ ತರ ?
ತಾ ನಾ ಮುಂದು, ಗುದ್ದಾಡಿದ್ದೆಲ್ಲಾ ನಿಶ್ಯಬ್ದ…

ಹುಟ್ಟುತ್ತೇನೊ ಚಿಲುಮೆ, ಅಕ್ಷರ ಮಣಿಯೊಡವೆ
ಪದಪದವಾಗೊ ಮೊದಲೆ, ಯಾಕೊ ಒಲ್ಲದ ಮದುವೆ.
ತಟ್ಟಂತೇನೊ ಬೆಟ್ಟ, ಕುಸಿದಂತೆ ಮನೆ ಮಾಡು
ಪದಗಳವಕವಕೆ ಜಗಳ, ಹುಟ್ಟೊ ಮೊದಲೆ ಹಾಡು..

ಹುಟ್ಟಿದ್ದೂ ಹಸುಗೂಸು, ಮೀರಲೊಲ್ಲ ಬಾಲ್ಯ
ಬೆಳೆಯೊ ಕೂಸಿಗು ಹುಟ್ಟಲೆ, ಏನೊ ಅಂಗವೈಕಲ್ಯ..
ಹೆತ್ತ ಹೆಗ್ಗಣ ಮುದ್ದಿಗೆ, ಕಟ್ಟಿದರು ತೋರಣ ಬಳಗ
ತಡವಿ ಮೇಲೆತ್ತಿ ಆದರಿಸೋಕಿಲ್ಲ, ಪುರುಸೊತ್ತಿನ ಜಗ ..

ಆದರು ಬರೆಯೊದಂತು ತಾನು, ನಿಲಿಸಿರಲಿಲ್ಲ ಚಿತ್ತ
ಯಾಕೊ ಇದ್ದಕಿದ್ದಂತೆ, ಅನಿಸಿಬಿಡುತೆಲ್ಲ ಬರಿ ವ್ಯರ್ಥ
ಹಠದಿ ಸಂಪು ಕೂತಿವೆ, ಹಾಕೆಲ್ಲ ಭಾವಕೆ ಬಿಗಿ ಬೀಗ
ಮನ ಕಳವಳ ಮಾತ್ರ ಹುಡುಕಿದೆ, ಕೀಲಿ ಸಿಕ್ಕೊ ಜಾಗ..

– ನಾಗೇಶಮೈಸೂರು

00527. ನಮ್ಮ ಸೌರ ಮಂಡಲ (ಮಕ್ಕಳಿಗೆ) 


00527. ನಮ್ಮ ಸೌರ ಮಂಡಲ (ಮಕ್ಕಳಿಗೆ) 
——————————————–

  
(picture source – wikipedia, https://en.m.wikipedia.org/wiki/File:Planets2013.svg)

ಬ್ರಹ್ಮಾಂಡದ ಅಗಣಿತ ವಿಸ್ತಾರಣೆ
ನಾವಿಹ ಸೌರವ್ಯೂಹ ಪುಟ್ಟ ಮನೆ
ಸೂರ್ಯನೆಂಬ ಸೊನ್ನೆಗಿಡಿದ ದೊನ್ನೆ
ನವಗ್ರಹಗಳ ಸುತ್ಸುತ್ತುವಾ ಬವಣೆ ||

ವಿಶ್ವದರಮನೆಗೆ ಈ ಸೂಜಿ ಮೊನೆ
ಸೌರಮಂಡಲವೊಂದ್ತರ ನಮೂನೆ
ನವ ಗ್ರಹಗಳ ಬಂಧಿಸಿದ ಸಿತಾರೆ
ಸೂರ್ಯನೆಂದರೆ ಜೀವನಕಾಧಾರೆ ||

ಗ್ರಹತಾರೆ ಕಲೆತ ಗುರುತ್ವಾಕರ್ಷಿತ
ಬಂಧಿಸುವ ಗೋಚರ ಸೆಳೆತ ಮಿಳಿತ
ಪ್ರತಿಗ್ರಹಕದರದೆ ವಲಯದುಂಗುರ
ಆವರವರುಂಗುರ ವಲಯ ಗ್ರಹಭದ್ರ ||

ಕೇಂದ್ರವೆ ಸೂರ್ಯ ಕೆಂಗಣ್ಣಿನಾರ್ಯ
ಸುಡು ಕೆಂಡದ ವಾಯ್ಗೋಳ ವೀರ್ಯ
ಕ್ಷೀರಪಥದೊಡನೆ ಸುತ್ತಿದರು ಸಾರ
ಸೌರಮಂಡಲ ಲೆಕ್ಕದಲಿದ್ದಂತೆ ಸ್ಥಿರ ||

ರವಿಗ್ಹತ್ತಿರದ ನೆಂಟರೆನೆ ಬುಧ ಶುಕ್ರ
ಅತಿ ಹತ್ತಿರ ಬುಧ ಜೀವನ ದುಸ್ತರ
ಎರಡನೆ ಸ್ತರ ಶುಕ್ರ ಫಳ ಫಳ ಥಳ
ಹೊಳೆವ ಗ್ರಹವೆಂದೆ ಪ್ರಸಿದ್ಧ ಬಹಳ ||

ಮೂರನೆಯವ ಮಂಗಳ ಕೆಂಪಂಗಳ
ಭುವಿಯ ಪಕ್ಕಕಿರುವ ಶುಭಮಂಗಳ
ನಾಲ್ಕನೆ ನೀಲಾತ್ಮ ಶ್ರೇಷ್ಠ ವಸುಂಧರ
ಹಸಿರು ನೀರು ಜೀವರಾಶಿ ನಿತ್ಯಂತರ ||

ಪೃಥ್ವಿಯ ನೆರೆ ಗ್ರಹ ಐದಾರನೆ ಕಕ್ಷ್ಯ
ಗುರು ಶನಿ ಸಹವಾಸ ಮುಂದಿನ ಲಕ್ಷ್ಯ
ಬೃಹತಾಕಾರ ಗುರು ಹತ್ತರ ಗುರುತ್ವ
ಬಳೆಯನಿಲ ತೊಟ್ಟಸುರ ಶನಿ ಕವಿತ್ವ ||

ದೂರದ ಕೆಳೆ ಬಳಗ ಏಳೆಂಟರದೆ ಜಗ
ಚಳಿ ಜ್ವರಕೆ ಯುರೆನಸು ನೆಪ್ಚೂನು ಲಾಗ
ಹಿಮ ಚಳಿ ದೂರದ ತಳಿ ರವಿ ಬೆಳಕಾಗ
ವಿಸ್ಮಯ ಕಿತ್ತು ಹೋಗದ ಬಂಧ ಸೆರೆ ಭಾಗ ||

ತಿಪ್ಪರಲಾಗ ಹಾಕಿ ಪ್ಲೂಟೊ ಕ್ಷುದ್ರಗ್ರಹವೆ
ಗ್ರಹವೆನ್ನಲೆ ಕಷ್ಟ ಪುಟ್ಟ ದೇಹಾಕಾರವೆ
ಗ್ರಹದ ವರ್ತನೆ ರವಿ ಸುತ್ತ ಆವರ್ತನೆ
ಅನುಮಾನವಿದ್ದು ಗ್ರಹವಾಗೊಂಭತ್ತನೆ! ||

ಇದೆ ಸೌರವ್ಯೂಹ ಚಿತ್ರದ ಬ್ರಹ್ಮಾಂಡ
ಅಪಾರ ಅನಂತದಲಿ ಸಾಸುವೆ ಬಿಡ !
ಗೊತ್ತಿಹ ಪರಿಮಿತಿಯಲಿಹ ಸಜೀವತೆ
ಬೇರಿಲ್ಲೆಲ್ಲು ಕಾಣದಿಹ ಜೀವ-ಜಾಲತೆ! ||

00526. ಯಾಕೊ ಯಾತನೆ ಸುಮ್ಮನೆ… (01)


00526. ಯಾಕೊ ಯಾತನೆ ಸುಮ್ಮನೆ… (01)
_______________________________
  
(picture source – http://edunderwood.com/wp-content/uploads/2010/09/suffer.jpg)

ಯಾಕೊ ಏನೊ ಯಾತನೆ
ಸಮ ಕೂತಲ್ಲಿ ನಿಂತಲ್ಲಿ
ಸರಿ ಒಂದೆ ಸಮನೆ
– ಕಾಡಿದ ಗೊನೆ ||

ಕಿತ್ತೊಂದೊಂದೆ ಹೂವನೆ
ಮುಡಿಗೇರಿಸಿ ಭಾವನೆ
ಹಣ್ಣಾಗೊ ಸಾಧನೆ
– ಕತ್ತರಿಸಿ ತೆನೆ ||

ಬೀಜವೃಕ್ಷ ನ್ಯಾಯದಲೆ
ತೆನೆಯಾಗಿ ಮೊದಲೆ
ಯಾತನೆಗೆ ಕವಲೆ
– ಅರಿವೆ ಕಪಿಲೆ ||

ಅರಿವಿದ್ದರೆ ಮುಗ್ದತೆ ತರ
ಯಾತನೆಯೆ ದೂರ
ಅರಿತಷ್ಟು ಆಳಕ್ಕೆ
– ನೋವಿನ ಗಾಳ ||

ಮೌಢ್ಯ ಮುಟ್ಟಾಳತನ
ವರವಾಗಿ ಜಾಣತನ
ಜ್ಞಾನಾರ್ಜನೆ ಕಣ
– ದುಃಖಕೆ ಮಣ ||

———————————————————-
ನಾಗೇಶ ಮೈಸೂರು
———————————————————–

00525. ಕೈ ಚೀಲಗಳೆಂಬ ವಿಶ್ವಕೋಶ – 03 (03)


00525. ಕೈ ಚೀಲಗಳೆಂಬ ವಿಶ್ವಕೋಶ – 03 (03)
_______________________________

 

  
(picture source http://www.123rf.com; http://www.123rf.com/photo_11383297_shopping-lady-with-tablet-pc-and-cloud-computing.html)

ಆಟೊ,ಬಸ್ಸು ಓಡಾಟ ಚಿಲ್ಲರೆ ಹಣ
ರೂಪಾಯಿ ನೋಟು ಕಾಸಿನ ಜಣ
ಕಾರ್ಡಲ್ಲೆ ತುಂಬಿದ್ದರು ಕಾಂಚಾಣ
ಪುಡಿಗಾಸಿರಬೇಕಲ್ಲ ತುರ್ತಿಗಣ್ಣ ||

ಗ್ಯಾಡ್ಜೆಟ್ಟು ಕಾಲ ವಯೋಧರ್ಮ
ಗಾನ ಸಂಗೀತ ಕೇಳುವ ಮರ್ಮ
ಪುಟ್ಟಾಟಿಕೆ ತರಹ ಹಾಡು ತರ
ಕಿವಿಗಚ್ಚಿದರೆ ಹೆಡ್ಪೋನೆ ಸಮರ ||

ಸ್ವಂತದ್ದೊಂದು ಆಫೀಸಿಗೊಂದು
ಇರಬೇಕು ಮೊಬೈಲಲಿ ಬಂಧು
ಕೈ ಪೋನಿರದಿದ್ದರೇ ಬದುಕೆಲ್ಲಿ
ಅಷ್ಟಿಷ್ಟು ಸಿಮ್ಕಾರ್ಡು ನುಸುಳಿ ||

ಸ್ಮಾರ್ಟು ಇರಲಿ ಬಿಡಲಿ ಮಂದಿ
ಚೀಲವಾಗಿ ಸದಾ ತೋಳ-ಬಂಧಿ
ಏನೆಲ್ಲ ಇರಬಹುದಾದ ಭಾಷ
ತೆರೆ ವ್ಯಕ್ತಿ ವೈಯಕ್ತಿಕ ವಿಶ್ವಕೋಶ ||

– ನಾಗೇಶ ಮೈಸೂರು