00131. ಮಳೆಯಾಗುತ ಸಾಂಗತ್ಯ….


ಮಳೆಯಾಗುತ ಸಾಂಗತ್ಯ….
________________________

ಮಳೆಗಳಿಗೂ ಭಾವನೆಗಳಿಗೂ ಅವಿನಾಭಾವ ಸಂಬಂಧ. ಭಾವನೆಯ ಹೂರಣವೆ ಪ್ರೀತಿ, ಪ್ರೇಮ, ಮುನಿಸು, ದ್ವೇಷಾಸೂಯೆಗಳ ಸಂಕಲನ. ಹೀಗಾಗಿ ಮಳೆ ಬಂದಾಗ ಭಾವ ಪುಳಕಿತವಾದಷ್ಟೆ ಸಹಜವಾಗಿ, ಹೂರಣದ ಪದರಗಳು ಉದ್ದೀಪನಗೊಳ್ಳುತ್ತವೆ. ಸನಿಹ ಮುನಿಸಾಗುವುದಾಗಲಿ, ಮುನಿಸ ಮರೆತ ಸಿಹಿ ಮನಸಾಗುವುದಾಗಲಿ – ಚೆಲ್ಲಾಡಿದ ಹನಿಗಳ ಪ್ರೇರೇಪಣೆ ಯಾವ ರೀತಿಯ ಉದ್ಘೋಷವನೆಬ್ಬಿಸಿ, ಮನದಾವ ಮೂಲೆಯ ಅನುರಣಿತವನ್ನು ಅಲುಗಾಡಿಸಿ ಧೂಳೆಬ್ಬಿಸುವುದೊ ಅರಿವಾಗದು. ಗೊತ್ತಾಗುವುದೇನಿದ್ದರೂ, ಒಳಗಿನಿಂದಾವುದೊ ಲಹರಿ; ಝಿಲ್ಲೆನುವ ಝರಿಯಾಗಿ ತಟ್ಟನೆ ಚಿಮ್ಮಿ ಹರಿದು ಅಲ್ಲಿಯವರೆಗೆ ಆವರಿಸಿದ್ದ ಭಾವದ ತೆರೆಗೆ ಅಪ್ರಸ್ತುತತೆಯ ಮುಸುಕೆಳೆದು, ಹೊಸತಿನ ಹುರುಪು, ಉಲ್ಲಾಸ, ಹರ್ಷಗಳನ್ನು ಕಟ್ಟಿಕೊಡುವ ಹರಿಕಾರನಾಗಿಬಿಡುತ್ತದೆ.

https://nageshamysore.wordpress.com/00131-%e0%b2%ae%e0%b2%b3%e0%b3%86%e0%b2%af%e0%b2%be%e0%b2%97%e0%b3%81%e0%b2%a4-%e0%b2%b8%e0%b2%be%e0%b2%82%e0%b2%97%e0%b2%a4%e0%b3%8d%e0%b2%af/

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

00128. “ಬೀರಿನ” ದೇವರು ಒಳಗಿಳಿದರೆ ಶುರು !


00128. “ಬೀರಿನ” ದೇವರು ಒಳಗಿಳಿದರೆ ಶುರು !
_____________________________

ಈಗಿನ ಆಧುನಿಕ ಸಮಾಜದ ಸಾಮಾಜಿಕ ಪರಿಸರದಲಿ ‘ಸಾಮಾಜಿಕ ಕುಡಿತದ’ ಹೆಸರಿನಲ್ಲಿ ಸಾಧಾರಣ ಬಹುತೇಕರು ‘ಬೀರಬಲ್ಲ’ರಾಗಿರುವುದು ಎದ್ದು ಕಾಣುವ ಪ್ರಕ್ರಿಯೆ. ‘ಕುಡಿಯದ’ ಖಂಡಿತವಾದಿಗಳೂ ಸಹ, ಬೀರಬಲ್ಲರಾಗದಿದ್ದರೂ ಬೀರ’ಬಲ್ಲವ’ರಾಗಿರುವುದಂತೂ ಖಚಿತ. ಕೆಲವು ತೂಕದ ಬೀರಬಲ್ಲರು ಕುಡಿದರೂ ಇರುವೆ ಕಚ್ಚದ ಹಾಗೆ ಸಮತೋಲನದಲ್ಲಿರಬಲ್ಲ ಘನಿಷ್ಟರಾದರೆ, ಮತ್ತೆ ಕೆಲವರು ತಮ್ಮ ‘ಲಿಮಿಟ್’ ತಿಳಿದುಕೊಂಡು, ಅದು ಮೀರದಂತೆ ಹತೋಟಿ ಕಾಯ್ದುಕೊಂಡು ಸಂಭಾಳಿಸುವವರು. ಮತ್ತುಳಿದ ‘ಬೀರ್ದಾಸರು’ ಸಿಕ್ಕಿದವರಿಗೆ ಸೀರುಂಡ ಎಂದುಕೊಂಡು ಸಿಕ್ಕಿದ್ದೆಲ್ಲ ಉಡಾಯಿಸಿ ಮಾತು, ಮನಸು, ದೇಹ – ಎಲ್ಲವನ್ನು ಸಡಿಲಬಿಟ್ಟು ಬೀರಾಡಿ, ತೂರಾಡುತ, ಹಾರಾಡುವ ಪರಿಯೂ ಅಷ್ಟೆ ಸಾಮಾನ್ಯವಾಗಿಹ ದೃಶ್ಯ…….

https://nageshamysore.wordpress.com/00128-%e0%b2%ac%e0%b3%80%e0%b2%b0-%e0%b2%a6%e0%b3%87%e0%b2%b5%e0%b2%b0%e0%b3%81-%e0%b2%92%e0%b2%b3%e0%b2%97%e0%b2%bf%e0%b2%b3%e0%b2%bf%e0%b2%a6%e0%b2%b0%e0%b3%86-%e0%b2%b6%e0%b3%81%e0%b2%b0/

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ಮನದಿಂಗಿತಗಳ ಸ್ವಗತಕ್ಕೆ ಸ್ವಾಗತ!


ಅಂತರಂಗದ ಆಲಾಪಗಳಿಗೊಂದು ಮಾಧ್ಯಮ ಸಿಕ್ಕರೆ, ಸದಾಗಲೂ ಹೊರಸೂಸುವ ತವಕವೆ ಹೆಚ್ಚಂತೆ – ಈ ಮನದಿಂಗಿತದ ಸ್ವಗತಗಳ ಹಾಗೆ!

ಆತ್ಮೀಯರೆ, ಬರಹಗಳ ಸಂಖ್ಯೆ ಬೆಳೆಯುತ್ತಿರುವುದರಿಂದ ಒಂದು ಪುಟ್ಟ ಪರಿವಿಡಿ ಮಾಡಿಡುವ ಅಗತ್ಯ ಕಾಣುತ್ತಿದೆ – ಕನಿಷ್ಠ ಲೇಖನವೊ, ಕಾವ್ಯವೊ, ಹಾಸ್ಯವೊ, ಪ್ರಬಂಧವೊ – ಇತ್ಯಾದಿಯ ಇಂಗಿತ ಓದುವ ಮುನ್ನ ಸಿಗುತ್ತದೆ. ಇದು ಉಪಯೋಗವಾದೀತೆಂದು ಹಾರೈಸುತ್ತೇನೆ. ಪರಿವಿಡಿಯನ್ನು ‘ಹೋಮ್’ ಪಕ್ಕದಲ್ಲಿ ಮೊದಲ ಸಾಲಿನಲ್ಲಿ “0000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ (NEW)” ಈ ತಲೆಬರಹದಡಿ ಸೇರಿಸಿದ್ದೇನೆ. ಅದರ ಮೇಲೆ ಕ್ಲಿಕ್ ಮಾಡಿ, ಕೆಳಗೆ ಸ್ಕ್ರಾಲ್ ಮಾಡಿದರೆ, ಪಟ್ಟಿಯ ವಿವರಣೆ ಕಾಣುತ್ತದೆ.

ಸೂಚನೆ: ಇಲ್ಲಿರುವ ಬರಹಗಳ (ಲೇಖನ, ಕಾವ್ಯ, ಕಥೆ, ಹಾಸ್ಯ ಬರಹ, ಪ್ರಬಂಧ, ವಿಡಂಬನೆ ಇತ್ಯಾದಿ) ಸಂಪೂರ್ಣ ಹಕ್ಕು ಲೇಖಕರಿಗೆ ಸೇರಿದ್ದು (ನಾಗೇಶ ಮೈಸೂರು). ಇಲ್ಲಿರುವ ಬರಹಗಳ ಭಾಗಾಂಶ ಅಥವಾ ಪೂರ್ಣಾಂಶವನ್ನು ಯಾವುದೆ ಉದ್ದೇಶಕ್ಕೆ ಬಳಸಬೇಕಿದ್ದಲ್ಲಿ (ಅನುವಾದವೂ ಸೇರಿದಂತೆ) ಲೇಖಕರಿಂದ ಉದ್ದೇಶವನ್ನು ವಿವರಿಸಿ ಪೂರ್ವಾನುಮತಿ ಪಡೆಯಬೇಕು.

ವಿಶೇಷ ಸೂಚನೆ: ಶ್ರೀ ಲಲಿತಾ ಸಹಸ್ರ ನಾಮಕ್ಕೆ ಶ್ರೀಯುತ ಶ್ರೀಧರ ಬಂಡ್ರಿಯವರಿತ್ತ ವಿವರಣೆಯ ಆಧಾರದ ಮೇಲೆ (ಮೂಲ ಶ್ರೀಯುತ ರವಿಯವರ ಆಂಗ್ಲ ಮೂಲ), ಪ್ರತಿ ನಾಮಾವಳಿಗೂ ಸರಳಗನ್ನಡದಲ್ಲಿ ಕಾವ್ಯ ರೂಪ ನೀಡಲೆತ್ನಿಸುತ್ತಿದ್ದೇನೆ. ಆ ಕಾವ್ಯಗಳನ್ನು ಈ ಕೊಂಡಿಯ ಮೂಲಕ ನೋಡಬಹುದು. ಪ್ರತಿ ನಾಮದ ಕಂತಿನ ಸಾಲಿನ ಮೇಲೆ ಕ್ಲಿಕ್ ಮಾಡಿ ಕೆಳಗೆ ಸ್ಕ್ರಾಲ್ ಮಾಡಿದರೆ, ಕಾವ್ಯಗಳು ಮತ್ತು ಮೂಲ ವಿವರಣೆಯ ಕೊಂಡಿ ಕಾಣಿಸಿಕೊಳ್ಳುತ್ತದೆ. ಸದ್ಯಕ್ಕೆ ಈ ಯೋಜನೆ ಇನ್ನೂ ಚಾಲ್ತಿಯಲ್ಲಿರುವುದರಿಂದ ಪ್ರತಿದಿನವೂ ಹೊಸ ಕಂತು ಸೇರಿಸುವುದನ್ನು ಕಾಣಬಹುದು. ದಯವಿಟ್ಟು ನೋಡಿ / ಓದಿ ಅಭಿಪ್ರಾಯ ತಿಳಿಸಿ.

https://ardharaatriaalaapagalu.wordpress.com/

ಧನ್ಯವಾದಗಳೊಂದಿಗೆ,
– ನಾಗೇಶ ಮೈಸೂರು

ಜಗಮಗಿಸೊ ಅರಮನೆ, ಇದರ ಹಿತ್ತಲಲೆ ನಮ್ಮನೆ, ನಾವಲ್ಲಿಲ್ಲಿರೋದು ಸುಮ್ಮನೆ!


20130328-172108.jpg

ಮನದಿಂಗಿತಗಳ ಸ್ವಗತ!


ಇಲ್ಲಿರುವ ಬರಹ, ಅಭಿಪ್ರಾಯಗಳೆಲ್ಲ ನನ್ನ ಸ್ವಂತದವು. ಯಾರಿಗಾದರೂ, ಏನಾದರೂ, ಏನಕ್ಕಾದರು ಹೋಲಿಕೆಯಿದ್ದಲ್ಲಿ ಅದು ಕೇವಲ ಕಾಕತಾಳೀಯ. ಅಲ್ಲದೆ ಇದರಲ್ಲಿ ಬರುವ ಅಭಿಪ್ರಾಯಗಳು ಸಮಗ್ರತೆಯ ದೃಷ್ಟಿಯಿಂದ ಪರಿಗಣಿತವೆ ಹೊರತು, ಬೇರ್ಪಡಿಸಲ್ಪಟ್ಟ ಅಥವಾ ತಿರುಚಿದ ತೀರ್ಮಾನಗಳ ಪರಿಧಿಯಲ್ಲಿ ಊರ್ಜಿತವಲ್ಲ. ಬರಹದಲ್ಲಿ ಎಷ್ಟೊ ವಿಷಯಗಳು ಹೇಳದೆ ಬಿಟ್ಟ ಸಾಧ್ಯತೆಗಳಿರುವುದರಿಂದ, ಅಸಂಪೂರ್ಣತೆಯಿಂದಾಗಿ ತಪ್ಪು ಕಲ್ಪನೆ, ತೀರ್ಮಾನಗಳನ್ನು ಮಾಡುವ ಸಾಧ್ಯತೆಗಳಿರಬಹುದು. ಆ ರೀತಿಯ ಗೊಂದಲ ಕಂಡುಬಂದಲ್ಲಿ, ಸ್ವತಃ ಸಂಪರ್ಕಿಸಿ ಸರಿಯಾದ ಹಿನ್ನಲೆಯನರಿತು ಅರ್ಥೈಸಬೇಕೆಂದು ಕೋರಿಕೆ (ಅಂಥಹ ವಸ್ತು ವಿಷಯಗಳೇನಾದರೂ ಇದ್ದಲ್ಲಿ).