00796. ಅಪ್ಪನೆಂಬೊ ವಸ್ತು..


00796. ಅಪ್ಪನೆಂಬೊ ವಸ್ತು..
____________________

ಅಮ್ಮ ಆಡುತ್ತಾರೆ, ಅಪ್ಪಾ ಕಾಡುತ್ತಾರೆ.. ಯಾಕೆ ?


ದುಂಬಾಲು ಬಿದ್ದು ಕಾಡಿಸಿದ್ದು
ಪೀಡಿಸಿ ಕಾಸು ಪೀಕಿದ್ದು
ಇತ್ತದ್ದೇನೊ ಅಮ್ಮನೇ ನಿಜ
ತೆತ್ತದ್ದು ಮಾತ್ರ ಅಪ್ಪ..

ಹೋಗಿದ್ದು ಗೊತ್ತು ಶಾಲೇಗೆ
ಸಮವಸ್ತ್ರ ಕೌಪೀನ ಶೂಸು
ಪುಸ್ತಕ ಜಾಮಿಟ್ರಿ ಬಾಕ್ಸು ಕಂಡಿದ್ದು
ಕಾಣದ್ದು ಸ್ಕೂಲಿನ ಫೀಸು ಕಟ್ಟಿದ್ದು..

ಸಭೆ ಸಮಾರಂಭ ಪ್ರವಾಸ
ಏನಾದರೊಂದು ನೆಪದ ಕಾರಣ
ಅಂಜುತಂಜುತಲೆ ಕೇಳಿದ್ದವನ ಕಾಸು
ಇಲ್ಲಾ ಎಂದದ್ದೆ ನೆನಪಿಲ್ಲದ ವಸ್ತು..

ಹತ್ತು ಕೇಳೆ ಆರು ಕೊಟ್ಟರೆ ಅಮ್ಮ
ಮೂರಕ್ಕೇ ಆರಿತ್ತವನು ಅಪ್ಪಾ
ಯಾಕೊ ಮಾತಾಡದ ಬಿಗಿ ಮುಖ
ಭೀತಿ ಮರೆಮಾಚಿ ಮುಸುಕ ಪ್ರೀತಿ..

ಅಪ್ಪನ ದಿನ ನೆನೆಯಲೂ ಮುಜುಗರ
ದಿನ ನಿತ್ಯದ ದೇವರ ಮರೆತವರಾರು ?
ಹೇಳಲಿ ಬಿಡಲಿ ಅಚಲ ಬಂಡೆಯ ಕಾಯ
ಕಾಯುತ್ತಲೇ ಇರುವ ಮೌನದ ಜೀವ..

– ನಾಗೇಶ ಮೈಸೂರು


Picture 1: http://arvintripod.tripod.com/rajk.html
Picture 2: http://trendyfeeds.com/best-bollywood-movies-of-father-son-relation/