00280. ಕಥೆ: ಪರಿಭ್ರಮಣ..(67) (ಅಂತಿಮ ಕಂತು)


00280. ಕಥೆ: ಪರಿಭ್ರಮಣ..(67) (ಅಂತಿಮ ಕಂತು)
___________________________________

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, ಮೈಸೂರು, nageshamysore, Nagesha Mysore, nagesha

‘ ..ಆದರೆ, ಅದ್ಯಾವ ಸಂಸ್ಕಾರ ಪ್ರೇರಣೆಯೊ, ಅಥವಾ ಪದೇ ಪದೇ ಬಿಡದೆ ಎಚ್ಚರಿಸುತ್ತಿದ್ದ ನನ್ನ ಅಮ್ಮನ ಎಚ್ಚರಿಕೆಯ ನುಡಿಗಳೊ – ನಾನೆಂದು ಸಲಿಗೆಯ ಗಡಿಯಾಚೆಯ ಸ್ವೇಚ್ಛೆಯ ಬಲೆಗೆ ಬೀಳದಂತೆ ಎಚ್ಚರವಾಗಿದ್ದೆ… ಎಲ್ಲಾ ಕಡೆ ಓಡಾಡುತ್ತಿದ್ದೆವು, ಸಿನಿಮಾ ಪಾರ್ಕು ಎಂದೆಲ್ಲಾ ಸುತ್ತಾಡುತ್ತಿದ್ದೆವು ಎನ್ನುವುದು ನಿಜವಾದರು, ಅದು ಕೈ ಕೈ ಹಿಡಿದು ಒತ್ತಾಗಿ ಕೂರುವ ಮಟ್ಟಕ್ಕೆ ಬಿಟ್ಟರೆ ಅದಕ್ಕು ಮೀರಿದ ಹೆಚ್ಚಿನ ಒಡನಾಟಕ್ಕಿಳಿಯಲು ತಾವೀಯಲಿಲ್ಲ… ಅದೇನಕ್ಕು ಹೋಗಬಾರದು ಎನ್ನುವ ವಿವೇಚನೆಗಿಂತ ಮದುವೆಗೆ ಮೊದಲು ಏನು ಮಾಡಿದರು ನೈತಿಕವಾಗಿ ಸರಿಯಲ್ಲ ಎನ್ನುವ ಭಾವನೆಯೆ ಹೆಚ್ಚು ಪ್ರಬಲವಾಗಿತ್ತು.

( ಪರಿಭ್ರಮಣ..67ರ ಕೊಂಡಿ – https://nageshamysore.wordpress.com/00280-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-67-%e0%b2%85%e0%b2%82%e0%b2%a4%e0%b2%bf%e0%b2%ae-%e0%b2%95%e0%b2%82%e0%b2%a4%e0%b3%81/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00279. ಕಥೆ: ಪರಿಭ್ರಮಣ..(66) (ಅಂತಿಮ-ಪೂರ್ವ ಕಂತು)


00279. ಕಥೆ: ಪರಿಭ್ರಮಣ..(66) (ಅಂತಿಮ-ಪೂರ್ವ ಕಂತು)

ಸರಿಯಾಗಿ ಅದೆ ಹೊತ್ತಿನಲ್ಲಿ ಯಾವುದೋ ಯುದ್ಧ ಗೆದ್ದ ವಿಜಯೋತ್ಸಾಹದಲ್ಲಿ ಪೋನ್ ಕೆಳಗಿಡುತ್ತಿದ್ದ ಶ್ರೀನಿವಾಸ ಪ್ರಭು.. ಇಂಡೋನೇಶಿಯ ಸುಲಭದ ಪ್ರಾಜೆಕ್ಟಲ್ಲ ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು.. ಹೊರಗಿನ, ಒಳಗಿನ ಜನರೆಲ್ಲ ಸೇರಿ ಏಳೆಂಟು ಜನಗಳಾದರೂ ಬೇಕಾಗಿದ್ದ ಪ್ರಾಜೆಕ್ಟಿಗೆ ಇಬ್ಬರು ಮೂವರು ಸಾಕು ಎನ್ನುವ ಹೊಸ ಥಿಯರಿ ಉರುಳಿಸಿದ್ದ – ರೋಲ್ ಔಟ್ ಪ್ರಾಜೆಕ್ಟ್ ಎನ್ನುವ ನೆಪದಲ್ಲಿ.. ಆದರೆ ನೈಜದಲ್ಲಿ ಅದು ರೋಲೌಟ್ ಪ್ರಾಜೆಕ್ಟ್ ಆಗಿರಲೆ ಇಲ್ಲಾ ! ಅಲ್ಲಾವ ಟೆಂಪ್ಲೇಟ್ ಕೂಡಾ ಇರಲಿಲ್ಲ ‘ಕಾಪಿ – ಪೇಸ್ಟ್’ ತರಹದ ಸುಲಭದ ಕೆಲಸ ಮಾಡಲು. ಅದೆಲ್ಲಾದಕ್ಕೂ ಜತೆಯಾಗಿ ಐದಾರು ತಿಂಗಳಲ್ಲಿ ಮುಗಿಸಬೇಕೆಂದರೆ – ಅದನ್ನು ಮಾಡಹೊರಟವ ಸತ್ತಂತೆಯೆ ಲೆಕ್ಕ..! ಹೇಗಾದರೂ ಶ್ರೀನಾಥನನ್ನ ಇದಕ್ಕೆ ಸಿಕ್ಕಿಸಿಬಿಟ್ಟರಾಯ್ತು…….

( ಪರಿಭ್ರಮಣ..66ರ ಕೊಂಡಿ – https://nageshamysore.wordpress.com/00278-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-66/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00278. ಕಥೆ: ಪರಿಭ್ರಮಣ..(65)


00277. ಕಥೆ: ಪರಿಭ್ರಮಣ..(65)

ಹೀಗೆ ತನ್ನನುಭವದ ಪರಾಮರ್ಶೆಯಲ್ಲಿ, ತುಲನಾತ್ಮಕ ವಿಶ್ಲೇಷಣೆಯಲ್ಲಿ ಕಳೆದು ಹೋಗಿದ್ದ ಶ್ರೀನಾಥನಿಗೆ ಬಸ್ಸಿನ ಚಲನದಿಂದಾದ ಜೊಂಪಿನ ಮಂಪರು ಜತೆಗೆ ಸೇರಿಕೊಂಡು ತೂಕಡಿಸುವಂತಾಗಿ ಅವನ ಅರಿವಿಲ್ಲದೆಯೆ ನಿದಿರಾದೇವಿಯ ಮಡಿಲಿಗೆ ಜಾರಿಹೋಗಿದ್ದ. ಆ ನಿದಿರೆಯಲ್ಲೂ ಮನದಾಳದ ಆಧ್ಯಾತ್ಮವು ಸಂಪಾದಿಸಿಕೊಂಡಿದ್ದ ಪ್ರಶಾಂತ ಭಾವವೆ ಪ್ರಖರವಾಗಿ ಒಡಮೂಡಿ, ಯಾವುದೆ ತಾಕಲಾಟ, ತೊಳಲಾಟಗಳಿಲ್ಲದ ಸುಖಕರ ಪಯಣವನ್ನಾಗಿಸಿಬಿಟ್ಟಿತ್ತು. ಆ ಗಾಢತೆಯ ಪ್ರಭಾವದ ಮಂಪರಿನಿಂದ ಮತ್ತೆ ಹೊರಬಿದ್ದು ಪ್ರಾಪಂಚಿಕ ಜಗದ ಆವರಣಕ್ಕೆ ಮರಳಲು ಬಸ್ಸು ಬ್ಯಾಂಕಾಕಿನ ಬಸ್ ಸ್ಟ್ಯಾಂಡನ್ನು ತಲುಪಿ, ಬ್ರೇಕು ಹಾಕಿ ಪೂರ್ತಿ ನಿಲ್ಲಿಸಿದಾಗಷ್ಟೆ ಸಾಧ್ಯವಾಗಿತ್ತು. ತೆರೆಯಲೇ ಆಗದ ಭಾರವಾದ ಕಣ್ಣುಗಳನ್ನು ಬಲು ಕಷ್ಟದಿಂದ ತೆರೆಯುತ್ತ, ಆಕಳಿಸಿ ಮೈ ಮುರಿಯುತ್ತ ಮೇಲೆದ್ದ ಶ್ರೀನಾಥನಿಗೆ ಕೆಳಗಿಳಿಯುವ ಹೊತ್ತಲ್ಲಷ್ಟೆ ಅರಿವಾಗಿದ್ದು – ತಾನೆ ಬಸ್ಸಿನಿಂದಿಳಿಯುತಿರುವ ಕೊನೆಯ ಪ್ರಯಾಣಿಕ ಎಂದು. ತನ್ನ ಪುಟ್ಟ ಚೀಲವನ್ನು ಹೆಗಲಿಗೆರಿಸಿಕೊಂಡು ಅಲ್ಲೆ ಸಿಕ್ಕಿದ್ದ ಟ್ಯಾಕ್ಸಿಯನ್ನು ನಿಲ್ಲಿಸಿ ತನ್ನ ಸರ್ವೀಸ್ ಅಪಾರ್ಟ್ಮೆಂಟ್ ಸೇರಿಕೊಂಡಾಗ ಮತ್ತೆ ಏಕಾಂತದ, ಏಕಾಂಗಿತನದ ಗೂಡೊಳಕ್ಕೆ ಹೊಕ್ಕಿಕೊಳ್ಳುತ್ತಿರುವೆನೇನೊ ? ಎಂಬ ಅಳುಕಿನಿಂದಲೆ ಒಳಗೆ ಪ್ರವೇಶಿಸಿದರೂ, ಒಳ ನಡೆದು ದೀಪ ಹಾಕುತ್ತಿದ್ದಂತೆ ಏನೊ ಸಾತ್ವಿಕ ಭಾವ ತನ್ನ ಸುತ್ತಲೂ ಪಸರಿಸಿಕೊಂಡಿರುವುದರ ಅನುಭವವಾಗಿತ್ತು; ಆ ಗಳಿಗೆಯಲ್ಲಿ ಮೊದಲಿನ ಏಕಾಂಗಿತನದ ಭಾವ ಹತ್ತಿರ ಸುಳಿಯದೆ ಖೇದವೂ ಅಲ್ಲದ ಹರ್ಷವೂ ಅಲ್ಲದ ನಿರ್ಲಿಪ್ತಭಾವ ಮನೆ ಮಾಡಿಕೊಂಡಿರುವುದನ್ನು ಕಂಡು ಪೂರ್ತಿ ನಿರಾಳವಾಗಿತ್ತು ಶ್ರೀನಾಥನಿಗೆ. ಆ ಪ್ರಶಾಂತ ನಿರ್ಲಿಪ್ತತೆ ತಂದ ನಿರಾಳ ಭಾವದಲ್ಲೆ ಅಡಿಗೆ ಮನೆಯಲ್ಲಿದ್ದ ನೆಸ್ಟ್ ಲೆ ಥ್ರೀ-ಇನ್-ವನ್ ಕಾಫಿಯ ಸ್ಯಾಷೆ ಯನ್ನು ಕುದಿಯುವ ಬಿಸಿನೀರಿಗೆ ಬೆರೆಸಿ ‘ಕ್ಷಿಪ್ರ ಕಾಫಿ’ ತಯಾರಿಸಿ ಆ ಕಾಫಿ ಲೋಟವನ್ನು ಕೈಲಿಡಿದು ಬಾಲ್ಕನಿಗೆ ಬಂದು ನಿಂತ. ಆಗ ತಟ್ಟನೆ, ‘ಅರೆರೆ… ಬಹುದಿನಗಳ ನಂತರ ಈ ಬಾಲ್ಕನಿಗೆ ಬಂದು ನಿಂತಿದ್ದಲ್ಲವೆ ?’ ಎನಿಸಿತು. ……….

( ಪರಿಭ್ರಮಣ..65ರ ಕೊಂಡಿ – https://nageshamysore.wordpress.com/00276-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-64/)

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00276. ಕಥೆ: ಪರಿಭ್ರಮಣ..(64)


00276. ಕಥೆ: ಪರಿಭ್ರಮಣ..(64)

‘ಅದನ್ನು ಅರ್ಥೈಸಲು ತುಸು ಇನ್ನೂ ಆಳಕ್ಕಿಳಿಯಬೇಕಾಗುತ್ತದೆ ಕುನ್. ಶ್ರೀನಾಥ… ಅದು ಸೂಕ್ತವಾಗಿ ಅರ್ಥವಾಗಲಿಕ್ಕೆ, ಪೂರ್ವಾತ್ಯ ಮತ್ತು ಪಾಶ್ಚಿಮಾತ್ಯರ ಆಲೋಚನಾ ಕ್ರಮಗಳಲ್ಲಿ ಸಾಮಾನ್ಯವಾಗಿ ಎದ್ದು ಕಾಣುವ ವ್ಯತ್ಯಾಸಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ವಿವರಿಸುತ್ತೇನೆ… ಸೃಜನಶೀಲತೆಯ ವಿಷಯಕ್ಕೆ ಬಂದರೆ ಪೂರ್ವಾತ್ಯರು ಮತ್ತು ಪಾಶ್ಚಿಮಾತ್ಯರ ಚಿಂತನಾ ಕ್ರಮ ಒಂದೆ ರೀತಿ ಇರುವುದಿಲ್ಲ… ಉದಾಹರಣೆಗೆ ಪಾಶ್ಚಿಮಾತ್ಯರ ಅಧ್ಯಯನದಲ್ಲಿ ಯಾವುದನ್ನೆ ಸಂಶೋಧಿಸ ಹೊರಟರು, ಅವರು ಹಿಡಿಯುವ ಹಾದಿ ಪಕ್ಕಾ ನಿಖರತೆಯ ಹಾದಿ. ಅಲ್ಲಿ ಹತ್ತು ಸಾಧ್ಯತೆಯ ದಾರಿಗಳಿದ್ದರೆ ಪ್ರತಿಯೊಂದನ್ನು ಒಂದೊಂದಾಗಿ ಪರಾಮರ್ಶಿಸಿ, ಸೂಕ್ತವಾಗಿಲ್ಲದ್ದನ್ನು ತ್ಯಜಿಸಿ ಅಂತಿಮ ತೀರ್ಮಾನಕ್ಕೆ ತಲುಪುತ್ತಾರೆ. ಅದರ ಮುಂದಿನ ಹೆಜ್ಜೆಯೂ ಅದೇ ರೀತಿಯಲ್ಲಿ ಸಾಗುತ್ತದೆ, ಅಂತಿಮ ಪರಿಹಾರ ದೊರಕುವತನಕ… ಹೀಗೆ ಎಲ್ಲಕ್ಕು ನಿಖರ, ಖಚಿತ ಸಾಕ್ಷ್ಯವಿರಬೇಕು ಎನ್ನುವುದು ಅಲ್ಲಿಯ ಮೂಲತತ್ವ. ಅದೇ ನಮ್ಮ ಪೂರ್ವಾತ್ಯ ಸಂಸ್ಕೃತಿಯಲ್ಲಿ ನೋಡು – ಸಾಕ್ಷ್ಯಾಧಾರಿತದಷ್ಟೆ ಪ್ರಬಲವಾಗಿ, ನಂಬಿಕೆಗಳನ್ನು, ಪವಾಡ ಸದೃಶ್ಯತೆಯನ್ನು ಸುಲಭವಾಗಿ ನಂಬುತ್ತೇವೆ. ಎಲ್ಲವನ್ನು ಬರಿಯ ನಿಖರ ಸಾಕ್ಷ್ಯದಲ್ಲಿಯೆ ಸಾಧಿಸಿ ತೋರಿಸಬೇಕಿಲ್ಲ. ನಮ್ಮ ಎಷ್ಟೊ ನಂಬಿಕೆಯ ತರ್ಕಗಳು ಪಾಶ್ಚಿಮಾತ್ಯರ ದೃಷ್ಟಿಯಲ್ಲಿ ನಂಬಲರ್ಹ ತರ್ಕಗಳಾಗದೆ, ಮೂಢನಂಬಿಕೆಗಳಾಗಿ ತೋರಿಕೊಂಡರು ಅಚ್ಚರಿಯೇನಿಲ್ಲ..’…….

( ಪರಿಭ್ರಮಣ..64ರ ಕೊಂಡಿ – https://nageshamysore.wordpress.com/00276-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-64-2/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00275. ಕಥೆ: ಪರಿಭ್ರಮಣ..(63)


00275. ಕಥೆ: ಪರಿಭ್ರಮಣ..(63)

‘ನಿಜ ಹೇಳಬೇಕೆಂದರೆ ಅವೆರಡು ಸರಳ ಭೌತಿಕ ಕಾಯಕಗಳಲ್ಲೂ ಅಷ್ಟೊಂದು ಗಹನ ತತ್ವಸಿದ್ದಾಂತದ ಕಸುವು ತಳುಕು ಹಾಕಿಕೊಂಡಿರುತ್ತದೆಂದು ನಾನು ಖಂಡಿತ ಊಹಿಸಿರಲಿಲ್ಲ ಮಾಸ್ಟರ.. ನನಗದೊಂದು ರೀತಿಯ ಕಣ್ಣು ತೆರೆಸಿದ ಅನುಭವವೆಂದರೂ ತಪ್ಪಾಗಲಾರದು…’ ತನ್ನ ಕಸ ಗುಡಿಸಿದ ಮತ್ತು ಹೊಂಡಕ್ಕೆ ನೀರು ತುಂಬಿಸಿದ ಅನುಭವಗಳನ್ನು ನೆನೆಸಿಕೊಂಡು, ಮತ್ತೆ ಮೆಲುಕು ಹಾಕುತ್ತ ನುಡಿದ ಶ್ರೀನಾಥ.

‘ ಅದರಲ್ಲಿ ಅಚ್ಚರಿ ಪಡಲಾದರೂ ಏನಿದೆ ಕುನ್. ಶ್ರೀನಾಥ ? ನಿನಗರಿವಾದಂತೆ ಪ್ರತಿಯೊಂದು ಅಸ್ತಿತ್ವವೂ ಪಂಚಭೂತಗಳಿಂದಾದ ವಿವಿಧ ಸ್ವರೂಪಗಳೇ ತಾನೆ? ಅರ್ಥಾತ್ ಅವೆಲ್ಲವೂ ಶಕ್ತಿಯ ವಿವಿಧ ರೂಪಗಳೆ ಅಲ್ಲವೆ? ಆ ಶಕ್ತಿ ಪ್ರಕಟರೂಪದಲ್ಲಿರುವುದೊ, ಅಡಗಿಸಿಟ್ಟ ಜಡದೇಹಿಯಾಗಿ ಕೂತಿರುವುದೊ ಎನ್ನುವ ಅಪ್ರಸ್ತುತ ಜಿಜ್ಞಾಸೆಯನ್ನು ಬದಿಗಿಟ್ಟರೆ, ಒಟ್ಟಾರೆ ಅಲ್ಲಿ ಅಸ್ತಿತ್ವದಲ್ಲಿರುವ ಅಂತರ್ಗತ ಶಕ್ತಿಯಿರುವುದು ಖಚಿತವಾಗುವುದರಿಂದ, ಅದರ ಸಾಮರ್ಥ್ಯಕ್ಕೆ ಅಚ್ಚರಿ ಪಡುವಂತದ್ದೇನು ಇರುವುದಿಲ್ಲ…’ ಅವನ ಅನಿಸಿಕೆಯನ್ನೆ ತುಸು ತಾತ್ವಿಕ ಮಟ್ಟಕ್ಕೇರಿಸಲು ಯತ್ನಿಸುತ್ತ ನುಡಿದರು ಮಾಂಕ್. ಸಾಕೇತ್……

( ಪರಿಭ್ರಮಣ..63ರ ಕೊಂಡಿ – https://nageshamysore.wordpress.com/00275-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-63/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00274. ಕಥೆ: ಪರಿಭ್ರಮಣ..(62)


00274. ಕಥೆ: ಪರಿಭ್ರಮಣ..(62)

ಈ ಬಾರಿ ಮೊದಲಿನ ಹಾಗೆ ಹತ್ತತ್ತೆಜ್ಜೆಗೆ ಗುಪ್ಪೆ ಮಾಡಿ ಹಲವಾರು ಕಡೆ ಗುಡ್ಡೆ ಹಾಕುವ ಬದಲು, ಬರಿ ಆರಂಭದ, ಮಧ್ಯದ ಮತ್ತು ತುದಿಯ ಮೂರು ಕಡೆ ಮಾತ್ರ ಗುಡ್ಡೆ ಹಾಕಲು ನಿರ್ಧರಿಸಿ ಗಾಳಿಗೆ ಹಾರಲಾಗದಂತೆ ಅಡ್ಡವಿರುವ ಎಡೆ ಯಾವುದಾದರು ಇದೆಯೆ ಎಂದು ನೋಡಿದವನಿಗೆ, ಮೊದಲ ಎಡೆಗಂತು ಹೆಬ್ಬಾಗಿಲಿನ ಪಕ್ಕದ ಎತ್ತರದ ಗೋಡೆಯ ಬದಿಯೆ ಸೂಕ್ತ ಎನಿಸಿತು. ‘ಅಲ್ಲಿ ಎಷ್ಟೆ ಗಾಳಿ ಬೀಸಿದರು ಆ ಗೋಡೆಯ ತಡೆಯೆದುರು ಕುಗ್ಗಿ ಮಣಿಯಲೇಬೇಕು. ಆಗ ಅದರಡಿಯ ಗುಡ್ಡೆಯೂ ಅಷ್ಟಿಷ್ಟು ಅಲ್ಲಲ್ಲೆ ಹಾರಾಡಿದರು ಮತ್ತೆ ಹೆಕ್ಕಿದ ಹಾದಿಗೆ ಬೀಳಲು ಆಗದು… ಬೀಸುತ್ತಿರುವ ಗಾಳಿಯೂ, ಗೋಡೆಯ ಕಡೆಗೆ ಬೀಸುತ್ತಿರುವುದರಿಂದ ಅವು ಮತ್ತೆ ಮತ್ತೆ ಗೋಡೆಗೆ ಬಡಿದುಕೊಂಡು, ಅಲ್ಲೆ ಬೀಳಬೇಕೆ ಹೊರತು ಕಳೆದ ಬಾರಿಯಂತೆ ಚೆದುರಿ ಚೆಲ್ಲಾಪಿಲ್ಲಿಯಾಗಲಿಕ್ಕೆ ಸಾಧ್ಯವಿಲ್ಲ. ಇಲ್ಲಿ ಒಂದೆ ಒಂದು ತೊಡಕೆಂದರೆ ಕಸವನ್ನು ಸುಮಾರು ದೂರ ಗುಡಿಸಬೇಕು……

( ಪರಿಭ್ರಮಣ..62ರ ಕೊಂಡಿ – https://nageshamysore.wordpress.com/00274-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-62/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00273. ಕಥೆ: ಪರಿಭ್ರಮಣ..(61)


00273. ಕಥೆ: ಪರಿಭ್ರಮಣ..(61)

ಅಂದು ಕೂಡ ಎಂದಿನಂತೆ ಬೆಳಗಿನ ನಿತ್ಯದ ಕಾರ್ಯಕ್ರಮಗಳನ್ನೆಲ್ಲ ಮುಗಿಸಿ ಎಂಟೂವರೆಯಷ್ಟೊತ್ತಿಗೆ ಆ ದಿನದ ಆಹಾರವನ್ನು ಸೇವಿಸಿ ‘ಕುಟಿ’ಯತ್ತ ಹೆಜ್ಜೆ ಹಾಕುತ್ತಿದ್ದ ಶ್ರೀನಾಥ. ಮೂರು ದಿನಗಳಿಂದಲೂ ಬರಿಯ ಒಂದು ಹೊತ್ತಿನ ಆಹಾರ ಸೇವನೆಯಿಂದಾಗಿ ಬಳಲಿ ಕುಸಿದು ಹೋಗಬಹುದೇನೊ ಎಂದುಕೊಂಡಿದ್ದವನಿಗೆ ಅಚ್ಚರಿಯಾಗುವಂತೆ ಯಾವುದೊ ಹೇಳಲಾಗದ ಲವಲವಿಕೆ ಮೈ ತುಂಬಿಕೊಂಡಿದ್ದಂತೆ ಭಾಸವಾಗುತ್ತಿತ್ತು. ಆ ನಡೆವ ರೀತಿಯ ಸುಗಮತೆಯಲ್ಲೆ ಬಹುಶಃ ತುಸು ದೇಹದ ತೂಕವೂ ವರ್ಜ್ಯವಾಗಿರಬಹುದೆಂದು ಅನಿಸಲಿಕ್ಕೆ ಆರಂಭವಾಗಿದ್ದರೂ, ಅದಿನ್ನು ದೈಹಿಕವಾಗಿ ಗಮನೀಯ ಮಟ್ಟ ಮುಟ್ಟುವಷ್ಟು ಪ್ರಗತಿ, ಮೂರೆ ದಿನಗಳಲ್ಲಿ ಕಾಣಲು ಸಾಧ್ಯವಿಲ್ಲವೆಂಬ ಅಂಶವೂ ಮನವರಿಕೆಯಾಗಿ ಬಹುಶಃ ಆ ದಿಕ್ಕಿನತ್ತ ಸಾಗುತ್ತಿರುವ ಹಂತದಲ್ಲಿರಬಹುದೆಂದುಕೊಂಡು ಮುನ್ನಡೆದಿದ್ದವನಿಗೆ ಎಲ್ಲೊ ಓದಿದ್ದ ಮತ್ತೊಂದು ಅಂಶವೂ ನೆನಪಾಗಿತ್ತು… ಕೇವಲ ಆಹಾರ ಬಿಟ್ಟು ಉಪವಾಸ ಮಾಡಲಾರಂಭಿಸಿದ ಮಾತ್ರಕ್ಕೆ ದೇಹದ ತೂಕ ಏಕಾಏಕಿ ಕಡಿಮೆಯಾಗುವುದಿಲ್ಲ. ದೇಹದ ಜೈವಿಕ ಗಡಿಯಾರ ಹೊತ್ತಿಗೆ ಸರಿಯಾಗಿ ‘ಹಸಿವು’ ಎಂದು ಸೂಚನೆ ಕೊಡತೊಡಗಿದಂತೆ ಹೊಟ್ಟೆಯು ತಾಳ ಹಾಕುವುದು ಸಹಜ ಕ್ರಿಯೆಯಾದರು, ಅದಕ್ಕೆ ತಕ್ಷಣವೆ ಉಣ್ಣಲಿಡದಿದ್ದರೆ ತುಸು ಹೊತ್ತಿನ ನಂತರ ಆ ಹಸಿವೆ ಹಿಂಗಿ ಹೋದ ಅನುಭವವಾಗುವುದು ಮಾಮೂಲಿ ಪ್ರಕ್ರಿಯೆ. ಏಕೆಂದರೆ, ಯಾವಾಗ ಹೊರಗಿನಿಂದ ಬರಬೇಕಾದ ಆಹಾರ ಬರಲಿಲ್ಲವೊ, ಆಗ ದೇಹದಲ್ಲಿ ಶೇಖರವಾಗಿರುವ ಹೆಚ್ಚಿನ ಕೊಬ್ಬನ್ನೆ ಬಳಸಿಕೊಂಡು ಆ ಗಳಿಗೆಯ ಹಸಿವೆಯನ್ನು ತಾತ್ಕಾಲಿಕವಾಗಿ ಹಿಂಗಿಸಿ, ತನ್ನ ಚಟುವಟಿಕೆಗೆ ಬೇಕಾದ ಶಕ್ತಿಯನ್ನು ಒದಗಿಸಿಕೊಳ್ಳುತ್ತದೆ ಚಾಣಾಕ್ಷ ದೇಹದ ಕಾರ್ಖಾನೆ. ಇದೊಂದು ರೀತಿ, ಮರಿ ಹಾಕಿದ ಬೆಕ್ಕು ತನ್ನ ಮರಿಯನ್ನೆ ತಿಂದುಹಾಕುವ ಹಾಗೆ, ಶೇಖರಿತ ಕೊಬ್ಬಿನ ಕೋಶಗಳನ್ನೆ ತಿಂದುಹಾಕಿ, ಆ ಶಕ್ತಿಯಿಂದ ಮಿಕ್ಕ ಕೋಶಗಳ ನಿರ್ವಹಣೆಯ ಕಾರುಬಾರು ನಡೆಸಿದ ಹಾಗೆ. ಇದೆ ಪ್ರಕ್ರಿಯೆ ಸದಾ ಕಾಲ ಪದೇಪದೇ ನಡೆಯುತ್ತಿದ್ದರೆ, ಅದು ಅಸಿಡಿಟಿಯ ರೂಪವಾಗಿ ಗ್ಯಾಸ್ಟಿಕ್ಕಿನಂತಹ ತಲೆನೋವಿಗೆ ಕಾರಣವಾಗುತ್ತದೆನ್ನುವುದು ಬೇರೆ ವಿಷಯ. ಅದಕ್ಕೆ ಆ ಹಸಿವಿನ ಹೊತ್ತಲ್ಲಿ ಏನೂ ತಿನ್ನಲು ಅವಕಾಶವಿರದಿದ್ದರೆ, ಕೊಂಚ ನೀರಾದರೂ ಕುಡಿದು ಆ ಉರಿವ ಕೋಶಗಳನ್ನು ಶಮನಗೊಳಿಸುವುದುಚಿತ ಎನ್ನುತ್ತಾರೆ. ಆದರಿಲ್ಲಿ ದಿನಕ್ಕೊಂದೆ ಹೊತ್ತು ತಿನ್ನುವ ನಿರ್ಬಂಧವಿದ್ದರು ಯಾವುದೆ ರೀತಿಯ ತೊಡಕಾಗದಂತೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗಿತ್ತು. ‘ಪ್ರಾಯಶಃ ಭೌತಿಕ ಚಟುವಟಿಕೆಗಳಿಗಿಂತ ಹೆಚ್ಚು ಧ್ಯಾನದಂತಹ ಮಾನಸಿಕ ಕ್ರಿಯೆಗಳಲ್ಲಿ ತಲ್ಲೀನವಾಗಿದ್ದ ಕಾರಣ ದೇಹಕ್ಕೆ ಹೆಚ್ಚು ಬಾಹ್ಯಶಕ್ತಿಯ ಅಗತ್ಯ ಬೀಳಲಿಲ್ಲವೇನೊ’ ಎಂದುಕೊಳ್ಳುತ್ತಲೆ ‘ಕುಟಿ’ಯ ಮೆಟ್ಟಿಲು ಹತ್ತುತ್ತ ಮಾಂಕ್ ಸಾಕೇತರು ನೀಡಿದ್ದ ನಕ್ಷೆಯ ಪ್ರತಿಯನ್ನು ಕೈಗೆತ್ತಿಕೊಂಡ ಶ್ರೀನಾಥ. ….

( ಪರಿಭ್ರಮಣ..61ರ ಕೊಂಡಿ – https://nageshamysore.wordpress.com/00273-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-61/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00272. ಕಥೆ: ಪರಿಭ್ರಮಣ..(60)


00272. ಕಥೆ: ಪರಿಭ್ರಮಣ..(60)

ಎಲ್ಲೆಲ್ಲೊ ಮುಳುಗಿ ತೇಲಾಡಿ ದಿಗ್ಬ್ರಮಿಸಿ ಸಂಭ್ರಮಿಸುತ್ತಿದ್ದ ಶ್ರೀನಾಥನ ಮನಸಿಗೆ ಅಂದು ತನ್ನ ಅಂತರ್ಯಾನದ ಮೂರನೆಯ ಮತ್ತು ಕಡೆಯ ದಿನದ ಮುಕ್ತಾಯದ ಹೊಸ್ತಿಲಲ್ಲಿದ್ದ ಅರಿವು ಯಾಕೊ ಭೀತಿಯ ಪಲುಕೆಬ್ಬಿಸದೆ ಹೇಳಲಾಗದ ಆತ್ಮವಿಶ್ವಾಸ ಮತ್ತು ಧನ್ಯತೆಯ ಭಾವ ತುಂಬಿದ ಪ್ರಶಾಂತತೆಯನ್ನುಂಟುಮಾಡಿತ್ತು. ಇನ್ನು ಮುಂದಿನ ಎರಡು ದಿನ ಕೂತು ಚಿಂತನೆಯ ಧ್ಯಾನದಲ್ಲಿ ತೊಡಗದೆ ಭೌತಿಕ ಶ್ರಮದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂಬ ಆದೇಶ ಈಗಾಗಲೆ ಮಾಂಕ್ ಸಾಕೇತರಿಂದ ಇತ್ತಾಗಿ ಈ ಮೂರನೆಯ ದಿನದೊಳಗೆ ಎಲ್ಲಾ ಧ್ಯಾನಾವೃತ್ತ ಚಟುವಟಿಕೆಯನ್ನು ಮುಗಿಸಿಬಿಡಬೇಕಿತ್ತಾದರು ಅದು ಒತ್ತಡದಂತೆ ಕಾಡುವ ಆತಂಕವಾಗದೆ, ಎಲ್ಲವು ತಂತಮ್ಮ ಪ್ರಕ್ಷೇಪಿತ ಹಾದಿಯಲ್ಲಿ ಹರಿದಾಡಿ, ಸಮಯಕ್ಕೆ ಸರಿಯಾಗಿ ತಾರ್ಕಿಕ ಅಂತ್ಯವನ್ನು ಕಾಣುವುದೆಂಬ ಬಲವಾದ ನಂಬಿಕೆ ನಿರಾಳವಾಗಿರುವಂತೆ ಮಾಡಿತ್ತು. ಅಲ್ಲದೆ ಅವನಿಗದು ಮೂರನೆ ದಿನದಂತೆ ಕಾಣದೆ ವಾರಗಟ್ಟಲೆ, ತಿಂಗಳುಗಟ್ಟಲೆ ಅಲ್ಲಿದ್ದುಕೊಂಡೆ ಈ ಚಿಂತನಾಯೋಗದಲ್ಲಿ ತಲ್ಲೀನನಾಗಿರುವನೇನೊ ಎನ್ನುವ ಭ್ರಮೆಯನ್ನುಂಟುಮಾಡುವಷ್ಟು ಪ್ರಬಲ ಪರ್ಯಾವರಣವನ್ನು ಸೃಷ್ಟಿಸಿಬಿಟ್ಟಿತ್ತು ಅವನ ಸುತ್ತೆಲ್ಲ……

( ಪರಿಭ್ರಮಣ..60ರ ಕೊಂಡಿ – https://nageshamysore.wordpress.com/00272-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-60/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00271. ಕಥೆ: ಪರಿಭ್ರಮಣ..(59)


00271. ಕಥೆ: ಪರಿಭ್ರಮಣ..(59)

ಕಾಲದ ಕಾಲು ಚೀಲ ತೊಟ್ಟೆ ಹುಟ್ಟುವ ಜೀವಿಗೆ ಹುಟ್ಟು ಸಾವು ಎಂಬುದು ಕಾಲದೆರಡು ತುದಿಗಳಲ್ಲಿರುವ ಆದ್ಯಾಂತಿಮ ಮೈಲಿಗಲ್ಲುಗಳಾದರು ಎರಡರ ನಡುವಿನ ಪಯಣಕ್ಕೆ ಈ ಕಾಲದ ಕಾಲುಚೀಲವೆ ಮೂಲಶಕ್ತಿ ದ್ರವ್ಯ. ಅದನ್ನು ರಾಜಸ-ತಾಮಸ-ಸಾತ್ವಿಕ ಸಮತೋಲನದಡಿ ವಿಭಾಗಿಸಿ, ಬೇಕಿದ್ದೆಡೆಯೆಲ್ಲ ಮತ್ತಷ್ಟು ಮರು ವಿಭಾಗಿಸಿ ಕಾಲದ ಹಾಸಿನ ಮೇಲೆ ಮುನ್ನಡೆಸಿದೆ ಸೃಷ್ಟಿ ನಿಯಮ. ಹುಟ್ಟಿಂದಲೆ ಬಂದಿತೊ, ಅಥವಾ ಬೆಳೆಯುತ್ತಾ ಅಳವಡಿಸಿಕೊಂಡಿತೊ ಒಟ್ಟಾರೆ ರಾಜಸ-ತಾಮಸ-ಸಾತ್ವಿಕ ಶಕ್ತಿಗಳ ಸಂಯೋಜನೆ ನಮ್ಮ ಪ್ರಕಟ ವ್ಯಕ್ತಿತ್ವವಾಗಿ ಕಾಣಿಸಿಕೊಂಡಿವೆ. ರಾಜಸ ಮತ್ತು ಸಾತ್ವಿಕ ಅಂಶ ಹೆಚ್ಚಿದ್ದರೆ ಧನಾತ್ಮಕತೆಯತ್ತ, ತಾಮಸ ಮತ್ತು ರಾಜಸ ಅಂಶ ಹೆಚ್ಚಿದ್ದರೆ ಋಣಾತ್ಮಕತೆಯತ್ತ ಸಮತೋಲದ ಸ್ಥಿತಿಯನ್ನು ಜರುಗಿಸಿ ಅದರಂತೆ ಗುಣಾವಗುಣವನ್ನು ನಿರ್ದೇಶಿಸುತ್ತಿದೆ. ಅಂದರೆ ಅಜ್ಞಾನದ ಅಂಶ ಹೆಚ್ಚಾದರೆ ಅವಗುಣದತ್ತ ಸುಜ್ಞಾನದ ಅಂಶ ಹೆಚ್ಚಾದರೆ ಸುಗುಣದತ್ತ ತಕ್ಕಡಿಯನ್ನು ವಾಲಿಸುತ್ತ ಮುನ್ನಡೆಸುತ್ತಿದೆ. ಒಂದು ಹೊತ್ತಿನಲ್ಲಿ ನಾವೆಸಗುವ ಕಾರ್ಯದ ಗುಣಲಕ್ಷಣಚಹರೆ, ಆ ಹೊತ್ತಿನಲ್ಲಿ ಯಾವ ಗುಣಾಂಶ ಹೆಚ್ಚು ಪ್ರಭಾವ ಬೀರುತ್ತಿತ್ತು ಎನ್ನುವುದರ ಮೇಲೆ ಅವಲಂಬಿಸಿರಬೇಕು…….

( ಪರಿಭ್ರಮಣ..59ರ ಕೊಂಡಿ – https://nageshamysore.wordpress.com/00271-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-59/)

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00270. ಕಥೆ: ಪರಿಭ್ರಮಣ..(58)


00270. ಕಥೆ: ಪರಿಭ್ರಮಣ..(58)
__________________________

ಊಹನಾತೀತ ತಾತ್ವಿಕ ಲೋಕದಲ್ಲಿ ವಿಹರಿಸುತ್ತಿದ್ದ ಶ್ರೀನಾಥನಿಗೆ ಅಚ್ಚರಿಯಾಗುತ್ತಿತ್ತು – ತನಗೆ ಬರುತ್ತಿರುವ ಈ ವಿಚಾರಗಳ ಪುಂಖಾನುಪುಂಖ ಲಹರಿಯನ್ನು ಕಂಡು. ಮೊದಲಿಗೆ ಅವನಿಗೆ ಆ ವಿಷಯಗಳ ಕುರಿತಾದ ಸರಳ ಕಲ್ಪನೆಯ ವಿನಃ ಮತ್ತೇನೂ ಪಾಂಡಿತ್ಯವಾಗಲಿ, ಅರಿವಾಗಲಿ ಇರಲಿಲ್ಲ. ಕೆಲವು ಮೂಲ ಭೂತ ಸಿದ್ದಾಂತಗಳ ಅರಿವು, ಅಲ್ಲಿಲ್ಲಿ ಕೇಳಿದ, ಓದಿದ, ನೋಡಿದ್ದ ವಿಷಯಗಳ ಸ್ಮರಣೆಯಷ್ಟೆ ಅವನಿಗಿದ್ದ ಬಂಡವಾಳ. ಆದರೆ ಮಾಂಕ್ ಸಾಕೇತರು ಹೇಳಿದ್ದಂತೆ ಸರಿಯೊ, ತಪ್ಪೊ ಲೆಕ್ಕಿಸದೆ ತನಗೆ ಸರಿ ಕಂಡಂತೆ ವಿಶ್ಲೇಷಿಸುತ್ತ ಮುನ್ನಡೆದಿದ್ದನಷ್ಟೆ. ಅಲ್ಲದೆ ಅವರು ಕೊನೆಯಲ್ಲಿ ಹೇಳಿದ್ದ ‘ ಸರಿಯೊ ತಪ್ಪೊ ಎನ್ನುವುದಕ್ಕಿಂತ ಗೊಂದಲ, ಸಂಶಯ ನಿವಾರಣೆಯಾದ ಮನಸ್ಥಿತಿ ಮುಖ್ಯ – ತಪ್ಪಾದ ತೀರ್ಮಾನದ ಆಧಾರದಲ್ಲೆ ಆಗಿದ್ದರೂ ಸರಿ..’ ಎಂದಿದ್ದ ಮಾತು ಅಪಾರ ಧೈರ್ಯವನ್ನಿತ್ತಿತ್ತು. ‘ತಾನೇನು ಯಾವುದೊ ರಿಸರ್ಚು ಮಾಡಿ, ಥೀಸೀಸ್ ಬರೆಯಲು ಹೊರಟಿಲ್ಲವಲ್ಲ, ಬರಿಯ ಅಂತರ್ಸ್ವಚ್ಚತೆಯ ಪ್ರಕ್ರಿಯೆಯ ಉದ್ದೇಶಕ್ಕೆ ಮಾತ್ರ ತಾನೆ’ ಎಂದಂದುಕೊಂಡು ಹೊರಟ ಮೇಲೆ ಎಲ್ಲವೂ ನಿರಾಳವಾಗಿತ್ತು, ಕನಿಷ್ಠ ಚಿಂತನೆಯ ಮಟ್ಟಿಗೆ…..

( ಪರಿಭ್ರಮಣ..58ರ ಕೊಂಡಿ – https://nageshamysore.wordpress.com/00267-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-58/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00269. ಕಥೆ: ಪರಿಭ್ರಮಣ..(57)


00269. ಕಥೆ: ಪರಿಭ್ರಮಣ..(57)

ಹೀಗೆ ಹಂಚಿ ಹೋದ ಶಕ್ತಿ ಪ್ರಮಾಣ ಬೇರೆಯಾದ ಕಾರಣದಿಂದಲೆ ಬೇರೆ ಬೇರೆ ಕಾಯಗಳು, ವಸ್ತುಗಳು ಬೇರೆ ಬೇರೆ ಸಾಂದ್ರತೆಯ ಶಕ್ತಿಯನ್ನು ಪಡೆದುಕೊಂಡವೆ? ಉದಾಹರಣೆಗೆ ಬರಿಯ ಸೌರವ್ಯೂಹವನ್ನೆ ಪರಿಗಣಿಸಿದರೆ ಅತ್ಯಂತ ಬಲಶಾಲಿಯಾದವನು ಸೂರ್ಯ – ಇಡೀ ಸೌರ ಮಂಡಲವನ್ನೆ ತನ್ನ ಬಿಗಿ ಮುಷ್ಟಿಯಲ್ಲಿ ಭದ್ರವಾಗಿ ಹಿಡಿದಿಟ್ಟುಕೊಂಡವನು. ಅವನೆ ಶಕ್ತಿಯ ಅಕರವಾಗಿ ಪ್ರಖರವಾಗಿ ಧಗಧಗಿಸುತ್ತಿರುವವನು. ಅವನ ಸುತ್ತ ನೆರೆದಿರುವ ಗ್ರಹಾದಿ ಬಳಗಗಳೆಲ್ಲ ಮೊದಲಿಗೆ ಅವನ ಭಾಗವೆ ಆಗಿದ್ದು, ಸ್ಪೋಟದ ಅನುಕ್ರಮಣತೆಯಿಂದಾಗಿ ಸಿಡಿದು ಅವನ ಸುತ್ತಲೆ ಎಸೆಯಲ್ಪಟ್ಟವೊ ಏನೊ?……..

( ಪರಿಭ್ರಮಣ..57ರ ಕೊಂಡಿ – https://nageshamysore.wordpress.com/00266-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-57/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00265. ಕಥೆ: ಪರಿಭ್ರಮಣ..(56)


00265. ಕಥೆ: ಪರಿಭ್ರಮಣ..(56)

ನಿಜ ಹೇಳಬೇಕಾದರೆ ದ್ವಂದ್ವ ಸಿದ್ದಾಂತಕ್ಕೆ ಬೆಳಕನ್ನು ಮೀರಿಸಿದ ಮಾತ್ತೊಂದು ಸೂಕ್ತ ಉದಾಹರಣೆಯೆ ಇಲ್ಲವೆಂದು ಹೇಳಬೇಕು… ಈ ಬೆಳಕಿನ ಜತೆ ಜಿಜ್ಞಾಸೆಯ ಜಗಳಕ್ಕಿಳಿಯಬೇಕಾದರೆ, ಕತ್ತಲೆಯನ್ನು ಹೊರಗಿಟ್ಟು ಜೂಟಾಟವಾಡಲಿಕ್ಕೆ ಸಾಧ್ಯವೆ ಇಲ್ಲ. ಆದರೆ, ಕತ್ತಲು ಎನ್ನುವುದು ಬೆಳಕಿನ ಅವಿಭಾಜ್ಯ ಅಂಗವೇನೂ ಅಲ್ಲವಲ್ಲ? ನಿಜ ಹೇಳುವುದಾದರೆ ಬೆಳಕಿನಲ್ಲಿರುವುದು ಬರಿ ಬೆಳಕೆ ಹೊರತು ಕತ್ತಲಲ್ಲ. ಉರಿಯುವ ಸೂರ್ಯ ಮಂಡಲದ ಅಂತರಾಳದ ನಿಗಿನಿಗಿ ಕೆಂಡ ಹೊರದೂಡುವುದು ಬರಿ ಬೆಳಕಿನ ಅಚ್ಚೆಯೊತ್ತಿದ ಶಾಖವೆ ಹೊರತು ಕತ್ತಲಲ್ಲ. ಆದರೆ ಆ ಶಾಖ, ಬೆಳಕು ಭೂಮಿಯಂತಹ ಆಕಾಶ ಕಾಯದ ಮೇಲೆ ಬಿದ್ದು ಪಾರ್ಶ್ವದಲಷ್ಟೆ ಆವರಿಸಿಕೊಂಡಾಗ, ಆ ವಸ್ತುವಿನ ತನ್ನದೆ ಆದ ಪ್ರಕ್ಷೇಪಿತ ನೆರಳಷ್ಟೆ ಕತ್ತಲಾಗಿ ಬಿತ್ತರಗೊಳ್ಳುವುದಲ್ಲವೆ ?

(ಪರಿಭ್ರಮಣ..56ರ ಕೊಂಡಿ – https://nageshamysore.wordpress.com/00265-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-56/)

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00264. ಕಥೆ: ಪರಿಭ್ರಮಣ..(55)


00264. ಕಥೆ: ಪರಿಭ್ರಮಣ..(55)

ಅವರು ಹೋದತ್ತಲೆ ಕೈ ಜೋಡಿಸಿಕೊಂಡು ನಮಿಸುತ್ತ ನಿಂತ ಶ್ರೀನಾಥನ ಮನದಲ್ಲಿ ಮಾತ್ರ ಮೊದಲಿಗಿಂತ ಹೆಚ್ಚಿನ, ಶಾಂತ ಸಾಗರದ ಪ್ರಶಾಂತ ಭಾವ ತುಂಬಿಕೊಂಡಿದ್ದರೂ, ಈಗ ಮೊದಲಿದ್ದ ಆತಂಕದ ಜಾಗದಲ್ಲಿ ಅತೀವ ಕುತೂಹಲ ತುಂಬಿಕೊಂಡಿತ್ತು – ಈ ನಾಲ್ಕಾರು ದಿನಗಳಲ್ಲಿ ಏನೇನು ಪರಿವರ್ತನೆಯ ಪದರಗಳ ಅನಾವರಣವಾಗಲಿದೆಯೊ, ಏನೊ? ಎಂದು. ಅದಕ್ಕು ಮಿಗಿಲಾಗಿದ್ದ ಮತ್ತೊಂದು ನೈತಿಕ ಹಾಗೂ ಸಾತ್ವಿಕ ಕುತೂಹಲವೆಂದರೆ – ಅವನಾಗಲೆ ಅನುಭವಿಸತೊಡಗಿದ್ದ ಒಂದು ಹೊಸ ತರದ ಮಾನಸಿಕ ಪ್ರಶಾಂತತೆ. ಆಗಿನ್ನು ಕೇವಲ ಆರಂಭ ಹಂತದ ಪ್ರಶಾಂತತೆಯನ್ನು ಮಾತ್ರ ಅನುಭವಿಸುತ್ತಿದ್ದರೂ, ಅದೆ ಅದ್ಭುತದ ಪರಮೋನ್ನತ ಶಿಖರವೆನ್ನುವಂತೆ ಭಾಸವಾಗತೊಡಗಿತ್ತು….

https://nageshamysore.wordpress.com/00263-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-55/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00263. ಕಥೆ: ಪರಿಭ್ರಮಣ..(54)


00263. ಕಥೆ: ಪರಿಭ್ರಮಣ..(54)

‘ ಅಂದರೆ ಧ್ಯಾನ, ಚಿಂತನೆ ಬಿಟ್ಟು ಮತ್ತೇನೊ ಮಾಡಬೇಕಿರುವಂತೆ ಕಾಣುತ್ತಿದೆ…?’ ಏನಿರಬಹುದೆಂಬ ಆಲೋಚನೆಯಲ್ಲೆ ಎತ್ತಲೊ ನೋಡುತ್ತ ನುಡಿದಿದ್ದ ಶ್ರೀನಾಥ.

‘ ನಿಜ ಹೇಳಬೇಕೆಂದರೆ ಆ ಕಾರ್ಯಕ್ರಮದ ಯಾದಿ ಈಗಾಗಲೆ ಸಿದ್ದವಾಗಿ ಹೋಗಿದೆ ಕುನ್. ಶ್ರೀನಾಥಾ… ಮೂರನೆ ದಿನ ಕಳೆಯಲಿ ಆಮೇಲೆ ಹೇಳುತ್ತೇನೆ..’ ಎಂದರು ಮಾಂಕ್ ಸಾಕೇತ್. ಅವರ ದನಿಯಲ್ಲಿದ್ದುದ್ದು ತೆಳು ಹಾಸ್ಯವೊ, ಛೇಡಿಕೆಯೊ ಅರಿವಾಗದ ಗೊಂದಲದಲ್ಲೆ ಶ್ರೀನಾಥ,

‘ಅದನ್ನು ಈಗಲೆ ಹೇಳಬಾರದ್ದೆಂಬ ನಿಯಮವಿದ್ದರೆ ಹೇಳುವುದು ಬೇಡ..ತಿಳಿಯುವ ಕುತೂಹಲವೇನೊ ನನಗಿದೆಯಾದರೂ ಈಗಲೆ ತಿಳಿಯಬೇಕೆಂಬ ಅವಸರವೇನೂ ಇಲ್ಲಾ..’ ಎಂದ……

https://nageshamysore.wordpress.com/00263-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-54/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00262. ಕಥೆ: ಪರಿಭ್ರಮಣ..(53)


00262. ಕಥೆ: ಪರಿಭ್ರಮಣ..(53)

ಈಗ ಬದಲಾದ ದೃಶ್ಯದ ಅಖಾಡ ನೇರ ಮತ್ತೊಂದು ಶಾಲೆಯ ಅವರಣಕ್ಕೆ ಜಿಗಿದುಬಿಟ್ಟಿದೆ… ಮತ್ತೆ ಅದೇ ಹತ್ತಾರು ಹುಡುಗರ ಗುಂಪು..ಬೆಳೆದು ದೊಡ್ಡವರಾದ ಹದಿನೈದು, ಹದಿನಾರರ ಆಸುಪಾಸಿನ ಚಿಗುರು ಮೀಸೆ ಮೊಳೆಯುತ್ತಿರುವ ಹುಡುಗರ ದಂಡು.. ಅಂದೇನೊ ಶಾಲೆಗೆ ರಜೆಯ ದಿನವಾದರು ಇವರುಗಳು ಮಾತ್ರ ತರಗತಿಯ ರೂಮಿನಲ್ಲಿ ಬಂದು ಸೇರಿದ್ದಾರೆ, ಮಿಕ್ಕೆಲ್ಲಾ ಕಡೆ ಶಾಲೆಗೆ ಶಾಲೆಯೆ ನಿರ್ಜನವಾಗಿ ‘ಬಿಕೋ’ ಅನ್ನುತ್ತಿದ್ದರೂ.. ಅವರೆಲ್ಲ ರಜೆಯಾದರೂ ಅಲ್ಲಿ ಸೇರಿರುವುದು, ಆ ನಾಳೆಗೆ ಆಚರಿಸ ಹೊರಟಿರುವ ಸರಸ್ವತಿ ಪೂಜೆಯ ಸಿದ್ದತೆಗಾಗಿ……

https://nageshamysore.wordpress.com/00262-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-53/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00261. ಕಥೆ: ಪರಿಭ್ರಮಣ..(52)


00261. ಕಥೆ: ಪರಿಭ್ರಮಣ..(52)

ಮಧ್ಯಾಹ್ನದ ಸಮಯ ಕಳೆಯುತ್ತಿದ್ದಂತೆ ಬೆಳಿಗ್ಗೆ ತಿಂದಿದ್ದೆಲ್ಲ ಅರಗಿ, ಕರಗಿ ಹೊಟ್ಟೆಯೆಲ್ಲ ಖಾಲಿಯಾದಂತಾಗಿ ಇದ್ದಕ್ಕಿದ್ದಂತೆ ಒಳಗಿನಿಂದ ಚುರುಗುಟ್ಟುವ ಮೆಲುವಾದ ಪ್ರಕ್ರಿಯೆ ಆರಂಭವಾಗಿತ್ತು. ಸಾಧಾರಣವಾಗಿ ಅದು ಲಂಚಿನ ಹೊತ್ತಾದ ಕಾರಣ ದೇಹದೊಳಗಿನ ಜೈವಿಕ ಗಡಿಯಾರ ಈಗಾಗಲೆ ತನ್ನ ಪ್ರಭಾವ ತೋರಿಸಲು ಆರಂಭಿಸಿತ್ತು. ಮಾಮೂಲಿ ಊಟದ ಹೊತ್ತೆಂಬುದು ಒಂದು ಕಾರಣವಾದರೆ ಆ ದಿನವೆಲ್ಲ ಮತ್ತೆ ಊಟ ಸಿಗದೆಂಬ ಅರಿವು ಅಗತ್ಯಕ್ಕಿಂತ ಹೆಚ್ಚಿನ ಒತ್ತಡವಾಗಿ ಪರಿಣಮಿಸಿ ಹಸಿವೆಯ ಪರಿಮಾಣವನ್ನು ಹೆಚ್ಚಿಸತೊಡಗಿತ್ತು……

https://nageshamysore.wordpress.com/00259-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-52/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00258. ಕಥೆ: ಪರಿಭ್ರಮಣ..(51)


00258. ಕಥೆ: ಪರಿಭ್ರಮಣ..(51)
________________________

‘ಅದರೆ ಮಾಸ್ಟರ, ಆ ಸರ್ವೋಚ್ಛ ಸಮತೋಲನವನ್ನು ಪಡೆಯುವ ಬಗೆಯೆಂತು? ಬರಿ ದ್ವಂದ್ವಗಳೆ ಮೂಲ ವಸ್ತುವೆಂದ ಮೇಲೆ ಅದರಿಂದಲೆ ಸಮತೋಲನವನ್ನು ಹೊರಡಿಸುವುದು ಸಾಧ್ಯವೆ? ಆಸೆಯೆ ದುಃಖಕ್ಕೆ ಮೂಲ ಎನ್ನುವಾಗ ಸಹ ಆ ಆಸೆಯ ಸುಖ ಮತ್ತು ಅದನ್ನು ಅಧಿಗಮಿಸಲಾಗದ ದುಃಖ ಎರಡೂ ತಕ್ಕಡಿಯ ಎರಡು ಬದಿಯನ್ನು ಸರಿದೂಗಿಸಬೇಕು.. ಸಾಮಾನ್ಯ ಮಾನವರ ಎಟುಕಿಗೆ ಇದು ಅಷ್ಟು ಸುಲಭವಾಗಿ ನಿಲುಕುವುದೆ?’ ಕೇಳಿದ ಶ್ರೀನಾಥ.

‘ ಇಲ್ಲಾ ಕುನ್. ಶ್ರೀನಾಥ…ಬಹುತೇಕ ಸಾಮಾನ್ಯರಾರೂ ಈ ಸಮತೋಲನವನ್ನು ಅಷ್ಟು ಸುಲಭದಲ್ಲಿ ಗಳಿಸಲಾಗದು. ಅದರಿಂದಲೆ ಸದಾ ಒಂದಲ್ಲ ಒಂದು ತೊಳಲಾಟದಲ್ಲಿ ನರಳುತ್ತಲೆ ಇರುವ ವಿಕೃತ ಪರಿಸ್ಥಿತಿಯುಂಟಾಗುತ್ತದೆ – ಆ ಅಸಮತೋಲನವೆ ಅಸಂತೃಪ್ತಿಯ ಮೂಲ ಸರಕಾಗುತ್ತ. ಆ ಚಕ್ರ ಕೊನೆಗೊಳ್ಳುವುದೆ ಇಲ್ಲ – ಏಕೆಂದರೆ ಬಹುತೇಕರು ಆ ಚಕ್ರದಿಂದ ಹೊರಬಂದ ಸಮತೋಲನ ಸ್ಥಿತಿಯ ವೇದಿಕೆಯನ್ನು ತಲುಪುವುದೆ ಇಲ್ಲ. ಅದೆ ನನ್ನಂತಹ ಭಿಕ್ಕುಗಳನ್ನು ನೋಡು – ನಾವು ಗಳಿಸಬೇಕಾದ ಸಮತೋಲನದಲ್ಲಿ ಒಂದು ಕಡೆ ಆಸೆಯೆಂಬ ಪ್ರವೃತ್ತಿ ಶೂನ್ಯ ತೂಕವಾಗಬೇಕು – ಶೂನ್ಯವೆಂದರೆ ಏನೂ ಬೇಡದ ಎಲ್ಲವೂ ಇರುವ ಪರಿಸ್ಥಿತಿ; ಮತ್ತೊಂದೆಡೆ ಆಸೆಯ ಪ್ರಲೋಭನೆಗಳನ್ನು ಧಿಕ್ಕರಿಸಿದ್ದರಿಂದುಂಟಾಗುವ ದುಃಖವನ್ನು ಶೂನ್ಯವನಾಗಿಸಬೇಕು – ಅದು ಕೂಡ ಏನೂ ಇರದಿದ್ದರೂ ಎಲ್ಲವೂ ಇರುವ ದುಃಖರಹಿತ ಸ್ಥಿತಿ……

https://nageshamysore.wordpress.com/00257-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-51/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00256. ಕಥೆ: ಪರಿಭ್ರಮಣ..(50)


00256. ಕಥೆ: ಪರಿಭ್ರಮಣ..(50)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

00256. ಕಥೆ: ಪರಿಭ್ರಮಣ..(50)

ಅವನ ಮಾತಿಗೆ ತಕ್ಷಣ ಉತ್ತರಿಸದೆ ಬರಿಯ ಮುಗುಳ್ನಕ್ಕರು ಮಾಂಕ್ ಸಾಕೇತ್ …. ನಂತರ ತಮ್ಮಲ್ಲೆ ಹೇಳಿಕೊಳ್ಳುವವರಂತೆ, ‘ಸರಿ..ಸರಿ..ಇಲ್ಲಿಂದಲೆ ಆರಂಭವಾಗಿ ಹೋಗಲಿ ಜ್ಞಾನೋದಯದ ಚೈತ್ರ ಯಾತ್ರೆ.. ಪರಿಭ್ರಮಣದಲ್ಲಿರುವ ಚಕ್ರಕ್ಕೆ ಯಾವುದು ಪ್ರಥಮ, ಯಾವುದು ಅಂತಿಮ? ಎಲ್ಲಾ ಬರಿಯ ಆರೋಹಣ ಅವರೋಹಣಗಳ ನಿರಂತರ ಆವರ್ತನ ತಾನೆ? ..’ ಎನ್ನುತ್ತ ಮತ್ತವನ ಕಡೆ ತಿರುಗಿ ಅವನನ್ನೆ ಆಳವಾದ ಆದರೆ ಮೃದುಲ ದೃಷ್ಟಿಯಲ್ಲಿ ನೋಡುತ್ತ, ‘ ನಿಜ ಹೇಳಬೇಕೆಂದರೆ ಯಾರಲ್ಲೂ ಯಾವ ಅತೀತ ಶಕ್ತಿಗಳೂ ಇರುವುದಿಲ್ಲ….

https://nageshamysore.wordpress.com/00256-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-50/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00255. ಕಥೆ: ಪರಿಭ್ರಮಣ..(49)


00255. ಕಥೆ: ಪರಿಭ್ರಮಣ..(49)

( ಪರಿಭ್ರಮಣ..48ರ ಕೊಂಡಿ – https://nageshamysore.wordpress.com/00250-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-48/ )

ಬೆಳಗಿನ ಏಳಕ್ಕೆಲ್ಲ ‘ವಾಟ್ ಪಃ ನಾನಾಚಟ್’ ದ್ವಾರವನ್ನು ತಲುಪಿದ ಶ್ರೀನಾಥ ಒಂದರೆಗಳಿಗೆ ಅಲ್ಲಿನ್ನ ನೈಸರ್ಗಿಕ ಸಹಜ ಪರಿಸರವನ್ನು ಕಂಡು ಸುಂದರ ಹಳ್ಳಿಯೊಂದರ ಭತ್ತದ ಗದ್ದೆಯ ನಡುವೆ ನಿಂತಂತಹ ಅನುಭವಾಗಿ ಅರೆಗಳಿಗೆ ಮೈ ಮರೆತಂತಾಗಿ ಹೋದ ಟುಕ್ ಟುಕ್ ನಲ್ಲಿ ಕುಳಿತಿದ್ದ ಹಾಗೆಯೆ…..

https://nageshamysore.wordpress.com/00252-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-49/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00251. ಕಥೆ: ಪರಿಭ್ರಮಣ..(48)


00251. ಕಥೆ: ಪರಿಭ್ರಮಣ..(48)

ಹೊರಡುವ ಸಿದ್ದತೆಯನುಸಾರವಾಗಿ ಚೆಕ್ ಲಿಸ್ಟ್ ಮಾಡಿಕೊಂಡು ಅದರಲ್ಲಿ ಈಗಾಗಲೆ ಇರುವುದನ್ನು ಬಿಟ್ಟು ಮಸ್ಕಿಟೊ ಕಾಯಿಲ್ ನಂತಹ ಮಿಕ್ಕ ವಸ್ತುಗಳನ್ನೆಲ್ಲ ಹತ್ತಿರದ ಸುಪರ ಸ್ಟೋರೊಂದರಲ್ಲಿ ಖರೀದಿಸಿ ಪ್ಯಾಕೆಟೊಂದರಲ್ಲಿ ಸುತ್ತಿ ಎತ್ತಿಟ್ಟುಕೊಂಡ ಶ್ರೀನಾಥ, ವನ್ಯಾಶ್ರಮಧಾಮದ ವಿಳಾಸಕ್ಕೆ ಪತ್ರ ಬರೆಯಲು ಕುಳಿತ. ಬರೆಯಲು ಹೋಗುವಾಗಲೆ ಯಾಕೊ ಕೈ ನಡುಗಿದಂತೆ ಅದುರಿ ಅಳುಕುಂಟಾಗಿಸಿ ಕಾಡಿದಾಗ ‘ಛೆ! ಈ ಹಾಳು ಕಂಪ್ಯೂಟರು, ಇ ಮೇಯಿಲುಗಳ ಸಹವಾಸದಿಂದ ಅಲ್ಪ ಸ್ವಲ್ಪ ಇದ್ದ ಬರೆಯುವ ಹವ್ಯಾಸವೂ ತಪ್ಪಿ ಹೋಗುತ್ತಿದೆ…

https://nageshamysore.wordpress.com/00250-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-48/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00249. ಕಥೆ: ಪರಿಭ್ರಮಣ..(47)


00249. ಕಥೆ: ಪರಿಭ್ರಮಣ..(47)

‘ಮಾಂಕ್ ಹುಡ್’ ಸನ್ಯಾಸ ದೀಕ್ಷೆ ನೀಡುವ ಕಾಡಿನ ಮಧ್ಯದ ಆ ವನ್ಯಾಶ್ರಮಧಾಮದ ಕುರಿತು ಹುಡುಕುತ್ತ ಹೋದಂತೆ ಆಸಕ್ತಿದಾಯಕ ಮಾಹಿತಿಗಳು ಒಂದೊಂದಾಗಿ ಬಿಚ್ಚಿಕೊಳ್ಳತೊಡಗಿತ್ತು ಶ್ರೀನಾಥನ ಕಣ್ಣೆದುರಲ್ಲೆ. ಬರಿಯ ಮೇಲ್ನೋಟದ ಮಾಹಿತಿಗೆಂದು ಹುಡುಕಲಾರಂಭಿಸಿದ್ದವನ ಮನ, ಓದೋದುತ್ತ ಕೆರಳಿದ ಆಸಕ್ತಿಗೆ ಶರಣಾಗಿ ಪೂರ್ತಿ ವಿವರವನ್ನು ಅವಲೋಕಿಸತೊಡಗಿತ್ತು – ಒಂದೆ ಓಘದಲ್ಲಿ……

https://nageshamysore.wordpress.com/00249-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-47/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00248. ಕಥೆ: ಪರಿಭ್ರಮಣ..(46)


00248. ಕಥೆ: ಪರಿಭ್ರಮಣ..(46)

( ಪರಿಭ್ರಮಣ..45ರ ಕೊಂಡಿ – https://nageshamysore.wordpress.com/00242-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-45/ )

ಪೋನಿನಲ್ಲಿ ಅವರ ದನಿ ಕೇಳಿ ಬರುತ್ತಿದ್ದಂತೆ, ‘ಸವಾಡಿ ಕಾಪ್’ ಎಂದ ಶ್ರೀನಾಥ.

ಅತ್ತ ಕಡೆಯಿಂದ ನೀಳ ನಿಟ್ಟುಸಿರು ಬೆರೆತ ದನಿಯಲ್ಲಿ ಮತ್ತೆ ತೇಲಿ ಬಂದಿತ್ತು ಭಿಕ್ಕು ಸಾಕೇತರ ದನಿಯಲ್ಲಿ, ಮತ್ತದೆ ‘ಅಮಿತಾಭ’ ಉವಾಚ. ಅರೆಗಳಿಗೆಯ ಮೌನದ ನಂತರ ಅವರೆ ಕೇಳಿದ್ದರು –

‘ಅಂತು ಕೊನೆಗೂ ನನ್ನನ್ನು ಸಂಪರ್ಕಿಸಬೇಕೆಂದು ನಿರ್ಧರಿಸಿಬಿಟ್ಟೆ…?’

…….

https://nageshamysore.wordpress.com/00247-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-46/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00246. ಕಥೆ: ಪರಿಭ್ರಮಣ..(45)


00246. ಕಥೆ: ಪರಿಭ್ರಮಣ..(45)

ಹಾಗೆನ್ನುತ್ತಿದ್ದಂತೆ ಅವನಿಗಿನ್ನೂ ಏನಾಗಿದೆಯೆಂಬ ವಿವರ ಗೊತ್ತಾಗಿಲ್ಲವೆಂದರಿವಾಗಿ, ಏನಾಯಿತೆಂದು ವಿಶದವಾಗಿ ವಿವರಿಸತೊಡಗಿದಳು ಮೆತ್ತನೆಯ ಮೆಲುವಾದ ದನಿಯಲ್ಲಿ. ನಿಜಕ್ಕೂ ನಡೆದ್ದದ್ದೇನೆಂದರೆ ಮೂರ್ನಾಲ್ಕು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಸಣ್ಣಗೆ ಜ್ವರ ಬಂದಂತಾಗಿ ಮೈ ಬೆಚ್ಚಗಾದಾಗ ಮಾಮೂಲಿ ಜ್ವರವಿರಬಹುದೆಂಬ ಅನಿಸಿಕೆಯಲ್ಲಿ ಹತ್ತಿರದ ಮಾಮೂಲಿ ಡಾಕ್ಟರಲ್ಲಿ ತೋರಿಸಿ ಔಷಧಿಯನ್ನು ಕುಡಿಸಿದ್ದರು. ಆ ರಾತ್ರಿ ಕೊಂಚ ಹುಷಾರಾದಂತೆ ಕಂಡ ಮಗುವಿಗೆ ಯಾಕೊ ಬೆಳಗಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಕುಡಿದಿದ್ದೇನೂ ದಕ್ಕದೆ ಎಲ್ಲವು ವಾಂತಿಯಾಗತೊಡಗಿತ್ತು……

ಪರಿಭ್ರಮಣ..45ರ ಕೊಂಡಿ – https://nageshamysore.wordpress.com/00242-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-45/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00242. ಕಥೆ: ಪರಿಭ್ರಮಣ..(44)


00242. ಕಥೆ: ಪರಿಭ್ರಮಣ..(44)

ತಡವಾಗಿ ಹೋದ ಖಿನ್ನ ಭಾವದಲ್ಲೆ ಅವಸರವಸರವಾಗಿಯೆ ಮುಖಕ್ಕಿಷ್ಟು ಬೆಚ್ಚಗಿನ ನೀರು ತೋರಿಸಿ, ಸರಸರನೆ ಬಟ್ಟೆ ಧರಿಸಿಕೊಂಡು ಲಂಚಿನ ಹೊತ್ತಿನ ಒಳಗಾದರೂ ಆಫೀಸಿಗೆ ಸೇರಿಕೊಂಡು ಬಿಡಲೆಂದು ಹೊರಟಿದ್ದ ಶ್ರೀನಾಥ, ತಾನಿರುವ ಅಪಾರ್ಟ್ಮೆಂಟಿನ ಮುಖ್ಯ ದ್ವಾರಕ್ಕೆ ಬಂದವನೆ ಅವಾಕ್ಕಾಗಿ ನಿಂತುಬಿಟ್ಟ… ಅಪಾರ್ಟ್ಮೆಂಟಿನೊಳಗಡೆಯೆ ಇದ್ದು ಹೊರಗೇನಾಗುತ್ತಿದೆಯೆಂದು ಗೊತ್ತಾಗದ ಬಹು ಅಂತಸ್ತಿನೆತ್ತರದಲ್ಲಿನ ಗ್ರಹಿಕೆಯಲ್ಲಿ, ಬರಿ ಮಳೆಯ ವಿಶ್ವರೂಪವಷ್ಟೆ ಕಾಡಿತ್ತೆಂದು ಭಾವಿಸಿದ್ದವನಿಗೆ ನೆಲಮಟ್ಟದಲ್ಲಿ ಅದು ಉಂಟು ಮಾಡಿರಬಹುದಾದ ಅವಾಂತರ ದುರಂತ ಅನಾಹುತಗಳ ಪರಿಮಾಣದ ತೃಣ ಮಾತ್ರದ ಕಲ್ಪನೆಯೂ ಇರಲಿಲ್ಲ. ದೈನಂದಿನ ನಗರ ಜೀವನದಲ್ಲಿ ಅಷ್ಟೊಂದು ತೀವ್ರವಾಗಿ ಘಾಸಿಯುಂಟು ಮಾಡಬಹುದಾಗಿದ್ದ ಮಳೆಯ ರೌದ್ರಾವತಾರವನ್ನು ತನ್ನ ಅದುವರೆಗಿನ ಜೀವಮಾನದಲ್ಲಿ ಅವನೆಂದೂ ನೋಡಿರಲಿಲ್ಲ – ಅಷ್ಟೊಂದು ವಿಧ್ವಂಸಕ ಮಟ್ಟದಲ್ಲಿ ಚೆಲ್ಲಾಟವಾಡಿ ಬಿಟ್ಟಿತ್ತು ಮಳೆಗಾಳಿಗಳ ಜೋಡಿಯಾಟದ ಸರಸ ಸಲ್ಲಾಪ…..

https://nageshamysore.wordpress.com/00234-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-44/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00241. ಕಥೆ: ಪರಿಭ್ರಮಣ..(43)


00240. ಕಥೆ: ಪರಿಭ್ರಮಣ..(43)

ಚಂಡಿ ಹಿಡಿದಂತೆ ಎಡಬಿಡದೆ ಸುರಿಯುತ್ತಿದ್ದ ಮಳೆಯಲ್ಲೂ ಚಳಿ ಜ್ವರ ಹಿಡಿದವನ ಹಾಗೆ, ತನ್ನ ಅಪಾರ್ಟ್ಮೆಂಟಿನ ಹಜಾರದಲಿದ್ದ ಸೋಫಾದ ಮೇಲೆ ಮುದುರಿಕೊಂಡೆ ಮಲಗಿದ್ದ ಶ್ರೀನಾಥ. ತಲೆಯೆಲ್ಲಾ ಪೇರಿಸಿಟ್ಟ ಕಂಗಾಣದ ಯಾವುದೋ ಅಸಾಧಾರಣ ಹೊರೆಯ ಭಾರದಿಂದ ನರಳಿ, ಬಳಲಿ ಸಿಡಿಯುವಂತಾಗಿ ಮೇಲೇಳಲು ಮನಸಾಗದೆ ಹಾಗೆ ಬಿದ್ದುಕೊಂಡಿದ್ದರೂ, ನಿದಿರೆ ಮಾತ್ರ ಹತ್ತಿರ ಸುಳಿದಿರಲಿಲ್ಲ……

https://nageshamysore.wordpress.com/00240-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-43/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00239. ಕಥೆ: ಪರಿಭ್ರಮಣ..(42)


00239. ಕಥೆ: ಪರಿಭ್ರಮಣ..(42)

‘ಸಾರಿ ಕುನ್.ಲಗ್, ನಾನು ಧೂಮಪಾನ ಮಾಡುವುದಿಲ್ಲ..ನನಗೆ ಅದರ ಅಭ್ಯಾಸವಿಲ್ಲ..’ ಎಂದು ನಯವಾಗಿಯೆ ನಿರಾಕರಿಸುತ್ತ ನುಡಿದಿದ್ದ ಶ್ರೀನಾಥನನ್ನು ಮತ್ತೆ ನಗುವ ದನಿಯಲ್ಲೆ ಒತ್ತಾಯಿಸುತ್ತ, ‘ನಾನೂ ಕೂಡ ಸಿಗರೇಟು ಸೇದುವುದಿಲ್ಲ.. ಈ ವಿಶೇಷ ಸಂದರ್ಭದಲ್ಲಿ ಸುಮ್ಮನೆ ನೆನಪಿಗೆ ಮತ್ತು ಅನುಭವಕ್ಕಿರಲೆಂದು ಒಂದೆ ಒಂದನ್ನು ಸೇದುತ್ತಿದ್ದೇನೆ ಅಷ್ಟೆ..ಅದರಲ್ಲೂ ಇದು ಸಿಗರೇಟಲ್ಲ … ವಿಶೇಷವಾಗಿ ಮಾಡಿದ ಸ್ಥಳೀಯ ಹುಕ್ಕ, ಇಲ್ಲಿನ ಲೋಕಲ್ ಸ್ಪೆಷಲ್.. ಅಟ್ ಲೀಸ್ಟ್ ಟ್ರೈ ಒನ್ಸ್..’……

ಪರಿಭ್ರಮಣ..42ರ ಕೊಂಡಿ – https://nageshamysore.wordpress.com/00238-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-42/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00238. ಕಥೆ: ಪರಿಭ್ರಮಣ..(41)


00238. ಕಥೆ: ಪರಿಭ್ರಮಣ..(41)

ಸುತ್ತಲ ವಾದ್ಯ ಗೋಷ್ಟಿಯ ವಾತಾವರಣ, ಅಬ್ಬರ, ಗದ್ದಲಗಳ ಹಿಮ್ಮೇಳಗಳ ಜತೆ ಮುಕ್ತವಾಗಿ ಹರಿಯುತ್ತಿದ್ದ ಮದ್ಯಪಾನದ ‘ಮದಿರೆ’ ಸಂಗಮದಲ್ಲಿ ಎಲ್ಲರು ಬೇರೆಲ್ಲಾ ಚಿಂತೆ ಮರೆತು ಹೆಚ್ಚು ಕಡಿಮೆ ಮೈ ಮನವನೆಲ್ಲ ಪೂರ್ತಿ ಸಡಿಲಿಸಿ ಆ ಹೊತ್ತಿನ ಮಟ್ಟಿಗಾದರೂ ಯಾವ ಕಟ್ಟುಪಾಡು, ಅಂಕೆ ಶಂಕೆಗಳಿಲ್ಲದೆ ಅಸ್ವಾದಿಸುತ್ತಾ ವಿಶ್ರಮಿಸಿಕೊಳ್ಳುವುದೆಂದು ನಿರ್ಧರಿಸಿಕೊಂಡುಬಿಟ್ಟಂತಿತ್ತು……

https://nageshamysore.wordpress.com/00237-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-41/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00236. ಕಥೆ: ಪರಿಭ್ರಮಣ..(40)


00236. ಕಥೆ: ಪರಿಭ್ರಮಣ..(40)

ಇವರಾಡುತ್ತಿದ್ದ ಮಾತುಗಳನ್ನೆಲ್ಲ ಕೇಳುತ್ತಿದ್ದ ಸುರ್ಜಿತ್ ತಾನು ನಡುವೆ ಬಾಯಿ ಹಾಕುತ್ತ, ‘ಎಲ್ಲಾ ಸರಿ, ಎಲ್ಲಾ ಕಲ್ಚರುಗಳಲ್ಲೂ ಕುಡಿಯೋಕೆ ಮುಂಚೆ ‘ಚಿಯರ್ಸ’ ಅಂತಲೊ, ‘ಗನ್ಬೇ’ ಅಂತಲೊ ಅಥವಾ ಅವರವರ ಭಾಷೆಯಲ್ಲಿ ಏನಾದರೂ ‘ಕೋರಸ್’ ನಲ್ಲಿ ಹೇಳ್ತಾರಲ್ಲಾ, ಅದು ಯಾಕೆ?’ ಎಂದು ಚಿನಕುರುಳಿ ಪಟಾಕಿ ಸಿಡಿಸಿದ್ದ…..

https://nageshamysore.wordpress.com/00235-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-40/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00234. ಕಥೆ: ಪರಿಭ್ರಮಣ..(39)


00234. ಕಥೆ: ಪರಿಭ್ರಮಣ..(39)

ಬಸ್ಸು ಮತ್ತೆ ಕಾಂಚನಾಬುರಿ ಪ್ರಾಂತ್ಯದ ಸರಹದ್ದಿನಲ್ಲೆ ಚಲಿಸಿ ‘ಕೌಯಾಯ್’ ಅನ್ನು ತಲುಪುತ್ತಿದ್ದಂತೆ, ಈ ಬಾರಿ ಕಾನನದ ಪರಿಸರದ ಬದಲು ಶುದ್ಧ ಗ್ರಾಮೀಣ ವಾತಾವರಣ ಕಾಣಿಸಿಕೊಂಡಿತ್ತು. ಅವರು ಹೋಗಿ ತಲುಪಿದ್ದ ಜಾಗ ಅವರೆಲ್ಲ ಉಳಿದುಕೊಳ್ಳಲಿದ್ದ ರೆಸಾರ್ಟಿಗೆ ಸೇರಿದ್ದ ಭಾಗವಾದ ಕಾರಣ, ಅದನ್ನು ಹಳ್ಳಿಯ ವಾತಾವರಣ ಎನ್ನುವುದಕ್ಕಿಂತ ಆ ರೀತಿ ಕಾಣುವ ಹಾಗೆ ಪರಿವರ್ತಿಸಿದ್ದರೆನ್ನುವುದೆ ಹೆಚ್ಚು ಸೂಕ್ತವಾಗಿತ್ತು…..

( ಪರಿಭ್ರಮಣ..39ರ ಕೊಂಡಿ – https://nageshamysore.wordpress.com/00234-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-39/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00233. ಕಥೆ: ಪರಿಭ್ರಮಣ..(38)


00233. ಕಥೆ: ಪರಿಭ್ರಮಣ..(38)

ಅದೆಷ್ಟು ಹೊತ್ತು ಹಾಗೆ ನಿಂತಿದ್ದನೆನ್ನುವ ಪರಿವೆಯೂ ಇಲ್ಲದ ಹಾಗೆ ಆ ನಿಸರ್ಗ ಲಾಸ್ಯದ ರುದ್ರ ರಮಣೀಯ ಕಲಾಪದಲ್ಲಿ ಮುಳುಗಿಹೋಗಿದ್ದ ಶ್ರೀನಾಥನನ್ನು ಯಾವುದೊ ಬಗೆಯ ಅಮಾನುಷ ಭಾವೋನ್ಮೇಶವೊಂದು ಆವರಿಸಿಕೊಂಡಂತಾಗಿ, ಅತಿಶಯವಾದ ಹೇಳಲಾಗದ ಧನ್ಯತೆಯ ಭಾವವೊಂದು ಮೈ ಮನ ತುಂಬಿಕೊಂಡುಬಿಟ್ಟಿತ್ತು……

( ಪರಿಭ್ರಮಣ..38ರ ಕೊಂಡಿ – https://nageshamysore.wordpress.com/00233-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-38/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00232. ಕಥೆ: ಪರಿಭ್ರಮಣ..(37)


00232. ಕಥೆ: ಪರಿಭ್ರಮಣ..(37)

ಶ್ರೀನಾಥ ಬಂದು ತಲುಪುವಷ್ಟೊತ್ತಿಗಾಗಲೆ ಮಿಕ್ಕೆಲ್ಲರೂ ಆಗಲೆ ಅಲ್ಲಿಗೆ ಬಂದು ಸೇರಿಯಾಗಿತ್ತು. ಆ ಜಾಗದ ಸಮತಟ್ಟಾಗಿದ್ದ ವಿಸ್ತಾರದ ಮಧ್ಯದಲ್ಲಿ ಗುಡ್ಡೆ ಹಾಕಿದ್ದ ಒಣಕಟ್ಟಿಗೆ ತುಂಡನ್ನು ಸಣ್ಣ ಒಣರೆಂಬೆ ಕಡ್ಡಿಗಳ ಜತೆಗೂಡಿಸಿ ಹೊತ್ತಿಸಿ ಫೈರ್ ಕ್ಯಾಂಪಿನ ಬೆಂಕಿಯನ್ನು ಹಾಕಿದ್ದರು. ಚಟಪಟನೆ ಉರಿಯುತ್ತಿದ್ದ ಆ ಬೆಂಕಿಯ ಬೆಳಕಿನ ಸುತ್ತಲು ನೆರೆದಿದ್ದ ಹಲವರು ಚಳಿ ಕಾಯಿಸುವವರಂತೆ ಕುಕ್ಕರುಗಾಲಲ್ಲಿ ಕೂತಿದ್ದರೆ ಮಿಕ್ಕ ಮತ್ತಲವರು ಬೀಸುತ್ತಿದ್ದ ಗಾಳಿಗೆ ತಡೆಯೊಡ್ಡಿ ಬೆಚ್ಚಗೆ ಮಾಡಿಕೊಳ್ಳಲು ಕೈ ಕಟ್ಟಿಕೊಂಡು ನಿಂತಿದ್ದು ಕಂಡಾಗ…..

https://nageshamysore.wordpress.com/00227-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-37/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00230. ಕಥೆ: ಪರಿಭ್ರಮಣ..(36)


00230. ಕಥೆ: ಪರಿಭ್ರಮಣ..(36)

ಗಡದ್ದಾಗಿ ಊಟ ಮುಗಿಸಿದವರನ್ನು ಹೊತ್ತು ಅಲ್ಲಿಂದ ಮತ್ತೆ ಹೊರಟ ಬಸ್ಸು ನೇರ ನಡೆದದ್ದು ‘ಕಾಂಚನಾಬುರಿ’ಯತ್ತ. ಐತಿಹಾಸಿಕ ಮಹತ್ವದ ಈ ಪಟ್ಟಣದಲ್ಲಿರುವ ಕೆಲ ಸ್ಥಳಗಳಿಗೆ ಭೇಟಿ ನೀಡಬೇಕೆಂದಿರುವ ಉದ್ದೇಶವೇನೊ ಎಂದುಕೊಳ್ಳುತ್ತಿದ್ದ ಶ್ರೀನಾಥನಿಗೆ, ಅದು ಸರಿಯಾದ ಊಹೆಯೊ ಅಲ್ಲವೊ ಎಂದು ಗೊತ್ತಾಗುವ ಮೊದಲೆ ಮತ್ತೊಂದು ಕಡೆ ನಿಂತುಕೊಂಡುಬಿಟ್ಟಿತ್ತು ಬಸ್ಸು – ಈ ಬಾರಿ ದೊಡ್ಡದೊಂದು ದ್ರಾಕ್ಷಿ ತೋಟದ ಮುಂದೆ…..

https://nageshamysore.wordpress.com/00230-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-36/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00229. ಕಥೆ: ಪರಿಭ್ರಮಣ..(35)


00229. ಕಥೆ: ಪರಿಭ್ರಮಣ..(35)

‘ವಾಟ್ ಫೋ’ಗೆ ಹೋಗಿ ಬಂದ ಘಟನೆ ಪಡೆದುಕೊಂಡ ಅನಿರೀಕ್ಷಿತ ತಿರುವಿನಿಂದಾಗಿ ಅದೇನು ನಿಜಕ್ಕೂ ನಡೆದಿತ್ತೊ, ಇಲ್ಲವೊ ಎಂದು ಶ್ರೀನಾಥನಿಗೆ ಅನುಮಾನ ಹುಟ್ಟಿಸಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ. ಇಡೀ ಪ್ರಕರಣವೆ ಒಂದು ರೀತಿಯ ‘ಟ್ರಾನ್ಸ್’ನಲ್ಲಿದ್ದಾಗಿನ ಅನುಭವದಂತೆ ಭಾಸವಾಗಿ ಹೋಗಿತ್ತು…….

https://nageshamysore.wordpress.com/00225-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-35/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00227. ಕಥೆ: ಪರಿಭ್ರಮಣ..(34)


00227. ಕಥೆ: ಪರಿಭ್ರಮಣ..(34)

ಶ್ರೀನಾಥನಿಗೆ ಈಗ ಎದೆ ಧಸಕ್ಕೆಂದಿತು.. ‘ಈತನೇನೊ ತನ್ನ ಮನಸನ್ನೆ ಪುಸ್ತಕದಂತೆ ಓದುತ್ತಿರುವನಲ್ಲಾ’ ಎಂದು. ತನ್ನ ಮನಸಿನ ಮೇಲೆ ಮೂಡಿಬರುತ್ತಿರುವ ಆಲೋಚನೆಗಳೆಲ್ಲ ತನ್ನಲ್ಲಿ ಪ್ರಕಟಗೊಳ್ಳುವ ಹೊತ್ತಿನಲ್ಲೆ ಅವನಲ್ಲೂ ಅನಾವರಣಗೊಳ್ಳುತ್ತಿರಬಹುದೆ ಎಂದು ಅನುಮಾನ ಹುಟ್ಟಿ, ಏನು ಯೋಚಿಸಲೂ ಭೀತಿ ಪಡುವಂತಾಯ್ತು – ಆಲೋಚಿಸಿದ್ದೆಲ್ಲ ಅವನಿಗೆ ನಿಸ್ತಂತುವಾಗಿ ನೇರ ತಲುಪುತ್ತಿರಬಹುದೇನೊ ಎನ್ನುವ ಅನುಮಾನದಲ್ಲಿ….

( ಪರಿಭ್ರಮಣ..34ರ ಕೊಂಡಿ – https://nageshamysore.wordpress.com/00224-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-34/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00225. ಕಥೆ: ಪರಿಭ್ರಮಣ..(33)


00225. ಕಥೆ: ಪರಿಭ್ರಮಣ..(33)

ಈ ‘ಮಾಂಕ್ ಹುಡ್’ ಅಥವಾ ‘ಬೌದ್ಧ ಸನ್ಯಾಸಿ ದೀಕ್ಷೆ’ ಎನ್ನುವುದು ಪ್ರತಿಯೊಬ್ಬ ಥಾಯ್ ಸಂಪ್ರದಾಯಸ್ಥ ಪುರುಷನ ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ನಡೆಯಲೇಬೇಕಾದ ಪ್ರಕ್ರಿಯೆ. ಹಿಂದೆ ಪ್ರತಿಯೊಬ್ಬ ಬಾಲಕ ಅಥವ ಯುವಕರು ಸೂಕ್ತ ಅಥವ ಪ್ರಾಪ್ತ ವಯಸಿಗೆ ಬರುತ್ತಿದ್ದಂತೆ, ಅವರನ್ನು ಈ ‘ವಾಟ್ ಪೋ’ ರೀತಿಯ ಬೌದ್ಧ ದೇವಾಲಯಗಳಿಗೆ ಕೆಲ ವರ್ಷಗಳ ಕಾಲ ಅಲ್ಲೆ ನೆಲೆಸಿ ವಾಸಿಸಿಕೊಂಡಿರುವಂತೆ ನಿಬಂಧಿಸಿ ಕಳಿಸಿಬಿಡುತ್ತಿದ್ದರಂತೆ…….

https://nageshamysore.wordpress.com/00223-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-33/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00222. ಕಥೆ: ಪರಿಭ್ರಮಣ..(32)


00222. ಕಥೆ: ಪರಿಭ್ರಮಣ..(32)

ಆಮೇಲಿನದೆಲ್ಲ ಕನಸಿನಲ್ಲಿ ನಡೆದಂತೆ ಚಕಚಕನೆ ನಡೆದು ಹೋಗಿತ್ತು. ಕುನ್. ಸೋವಿ ಕನಸು ಮನಸಲೂ ನೆನೆಸದಿದ್ದ ರೀತಿಯಲ್ಲಿ ಗುರಿ ಸಾಧನೆಯಾಗಿ ಹೋಗಿತ್ತು ! ಈ ರೀತಿಯ ಸಿಸ್ಟಮ್ಮಿನ ಬದಲಾವಣೆಯಾದಾಗ ಎಲ್ಲವು ನೆಟ್ಟಗೆ ನಡೆಯುವುದಿರಲಿ, ಮೊದಲ ಒಂದೆರಡು ವಾರ ಯಾವುದು, ಏನು, ಎತ್ತ ಎಂದು ತಿಳಿದುಕೊಳ್ಳುವ ಒದ್ದಾಟದಲ್ಲೆ ಕಳೆದು ಹೋಗಿಬಿಡುತ್ತದೆ…

https://nageshamysore.wordpress.com/00222-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-32/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00221. ಕಥೆ: ಪರಿಭ್ರಮಣ..(31)


00221. ಕಥೆ: ಪರಿಭ್ರಮಣ..(31)

ಮರುದಿನ ಬೆಳಗಿನಿಂದಲೆ ವೇರ್ಹೌಸಿನಲ್ಲಿ ಕೂತು ಹೆಣಗಾಡತೊಡಗಿದ್ದರು ಶ್ರೀನಾಥ, ಸೌರಭ್ ದೇವ್ ಮತ್ತು ಕುನ್. ಸೋವಿ; ಮೂವ್ವರು ಒಟ್ಟಾಗಿ ಎಷ್ಟು ಪ್ರಯತ್ನಿಸಿದರೂ ಒಂದೆ ಒಂದು ಪೋಸ್ಟಿಂಗನ್ನು ಸಹ ಯಶಸ್ವಿಯಾಗಿ ಮಾಡಲು ಸಾಧ್ಯವಾಗಲಿಲ್ಲ. ಒಟ್ಟಾರೆಯಾಗಿ ಆ ತಿಂಗಳಿನ ಲೆಕ್ಕದಲ್ಲಿ ಮಿಕ್ಕಿದ್ದುದು ಬರಿ ಐವತ್ತು ಪೋಸ್ಟಿಂಗುಗಳು ಮಾತ್ರವಷ್ಟೆ ಆದರೂ ಥಾಯ್ ಬಾತಿನ ಲೆಕ್ಕಾಚಾರದಲ್ಲಿ ಅದರ ಒಟ್ಟು ಮೌಲ್ಯ ತಿಂಗಳ ವಹಿವಾಟಿನ ಶೇಕಡಾ ಹತ್ತರಿಂದ ಹನ್ನೆರಡರಷ್ಟಿತ್ತು….

https://nageshamysore.wordpress.com/00221-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-31/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00220. ಕಥೆ: ಪರಿಭ್ರಮಣ..(30)


00220. ಕಥೆ: ಪರಿಭ್ರಮಣ..(30)

ಕಾತುರದ ತುದಿಯಲ್ಲಿ ಕೂರಿಸಿದ್ದಂತೆ ನಿಧಾನವಾಗುರುಳುತ್ತಿದ್ದ ಆ ಹಗಲಲ್ಲಿ, ಅಂದಿನ ಮಧ್ಯಾಹ್ನ ಮೂರು ಗಂಟೆಯವರೆಗೂ ಏನೂ ನಡೆಯಲಿಲ್ಲ. ಈಗ ಪ್ರತಿದಿನದಂತೆ ಕಾಫಿ ಟೀ ತಂದುಕೊಡುತ್ತಿದ್ದ ಕುನ್. ಸು ಇಲ್ಲವಾಗಿದ್ದ ಕಾರಣ ತೀರಾ ಕುಡಿಯಲೇಬೇಕೆನಿಸಿದಾಗೆಲ್ಲ ಕೆಳಗಿಳಿದು ರೆಸ್ಟೊರೆಂಟಿಗೆ ಹೋಗಿ ಬರುತ್ತಿದ್ದ ಶ್ರೀನಾಥ….

https://nageshamysore.wordpress.com/00220-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-30/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00219. ಕಥೆ: ಪರಿಭ್ರಮಣ..(29)


00219. ಕಥೆ: ಪರಿಭ್ರಮಣ..(29)

ತಿಂಗಳ ಕೊನೆಯ ಮೂರು ದಿನಗಳು ಹತ್ತಿರವಾದಂತೆಲ್ಲ ಶ್ರೀನಾಥನ ಎದೆ ಬಡಿತ ಹದ ತಪ್ಪಿದಂತೆ ಭಾಸವಾಗುತ್ತಿತ್ತು. ಸಿಸ್ಟಂ ಡೌನ್ ಆಗಬಹುದೆಂಬ ಊಹಾತ್ಮಕ ಅನಿಸಿಕೆಯ ಆಧಾರದ ಮೇಲೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡೇನೊ ಆಗಿದ್ದರೂ, ನೂರಕ್ಕೆ ನೂರು ಅಂದುಕೊಂಡಿದ್ದ ರೀತಿಯೆ ಘಟಿಸಬೇಕೆನ್ನುವ ಗ್ಯಾರಂಟಿಯೇನೂ ಇರಲಿಲ್ಲ….

https://nageshamysore.wordpress.com/00219-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-29/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00218. ಕಥೆ: ಪರಿಭ್ರಮಣ..(28)


00218. ಕಥೆ: ಪರಿಭ್ರಮಣ..(28)

ಅಲ್ಲೇನೊ ವ್ಯವಸ್ಥೆ ಮಾಡಿ ಮಿಕ್ಕ ಆಫೀಸಿನ ಗಡಿಬಿಡಿಯತ್ತ ಗಮನವೀಯುವುದರ ನಡುವೆಯೆ ಒಂದು ದಿನ ಅಕೌಂಟಿಗ್ ಡಿಪಾರ್ಟ್ಮೆಂಟಿನಲ್ಲಿದ್ದ ಕುನ್. ವಂಚಾಯ್ ನ ವಯಸಾಗಿದ್ದ ತಂದೆ ತೀರಿಕೊಂಡರೆಂದು ಗೊತ್ತಾಗಿ, ಒಂದು ದಿನ ಮಧ್ಯಾಹ್ನ ಎಲ್ಲರೂ ಅಲ್ಲಿಗೆ ಭೇಟಿಯಿತ್ತು ಬರಲು ಹೋಗಬೇಕಾಗಿ ಬಂದಿತ್ತು….

https://nageshamysore.wordpress.com/00218-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-28/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00216. ಕಥೆ: ಪರಿಭ್ರಮಣ..(27)


00216. ಕಥೆ: ಪರಿಭ್ರಮಣ..(27)

ಆ ಮಾತಿಗೆ ಬದಲಾಡದೆ ತುಸು ಹೊತ್ತು ಮೌನವಾಗಿದ್ದ ಕುನ್. ಸೋವಿ, ‘ ವಿಚಿತ್ರವೆಂದರೆ ಕಸ್ಟಮರನಾದ ನನ್ನ ಬಳಿ ಎಲ್ಲಾ ಅದ್ಭುತವಾಗಿ, ಅಮೋಘವಾಗಿ ನಡೆಯುತ್ತಿದೆಯೆಂದು ತೋರಿಸಿಕೊಳ್ಳಬೇಕು.. ಬದಲಿಗೆ ನಾವು ದೋಷಗಳನ್ನು ಹುಡುಕಿ ಎತ್ತಿ ತೋರಿಸಲಿಲ್ಲವೆಂದು ನನ್ನನ್ನೆ ದೂರುತ್ತಿದ್ದಂತಿತ್ತು!’ ಎಂದ ತುಸು ಅಚ್ಚರಿಗೊಂಡ ದನಿಯಲ್ಲಿ…..

https://nageshamysore.wordpress.com/00217-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-27/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00215. ಕಥೆ: ಪರಿಭ್ರಮಣ..(26)


00215. ಕಥೆ: ಪರಿಭ್ರಮಣ..(26)

ಆದರೆ ಶ್ರೀನಿವಾಸ ಪ್ರಭುವಿನ ಕುಟಿಲ ಮನ ಹೇಗಾದರೂ ಶ್ರೀನಾಥನ ಕಾಲೆಳೆದು ಕಿತ್ತಾಟಕಿಳಿಯುವಂತೆ ಪ್ರೇರೇಪಿಸಲು ಉತ್ಸುಕವಾಗಿತ್ತು. ಆ ನಿಟ್ಟಿನಲ್ಲಿ ಹೊಸ ಮಾರ್ಗಗಳೇನಿವೆಯೆಂದು ಹುಡುಕುತ್ತ ಸಂಬಂಧಿಸಿದ ಹಾಗು ಸಂಬಂಧಿಸದ ಎಲ್ಲಾ ಪ್ರಕ್ರಿಯೆಗಳಲ್ಲು ಅಡ್ಡಗಾಲಿರಿಸತೊಡಗಿದ್ದ….

https://nageshamysore.wordpress.com/00215-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-26/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00214. ಕಥೆ: ಪರಿಭ್ರಮಣ..(25)


00214. ಕಥೆ: ಪರಿಭ್ರಮಣ..(25)

ಒಂದು ಬಗೆಯ ವಿಚಿತ್ರ ಸಮ್ಮೋಹನ ಸ್ಥಿತಿಯಲ್ಲಿ ಸಿಲುಕಿ ಕದಡಿ ಹೋಗಿತ್ತು ಶ್ರೀನಾಥನ ಮನ. ಅಲ್ಲಿಯವರೆಗೂ ಅವಳೊಡ್ಡಬಹುದಾಗಿದ್ದ ಸಂಕಟದ ಪರಿಕಲ್ಪನೆ ಯಾತನೆಗೆ ಮೂಲವಾಗಿದ್ದರೆ, ಈಗ ಅವಳೊಡ್ಡಿದ್ದ ಔದಾರ್ಯದ ಉರುಳಿನಲ್ಲಿ ಸಿಕ್ಕಿಬಿದ್ದ ವೇದನೆ ಇನ್ನು ಘೋರವಾಗಿತ್ತು. ಆ ನಡುವೆಯೂ ಒಂದೆ ಒಂದು ಸಮಾಧಾನದ ವಿಷಯವೆಂದರೆ, ಅವನು ಭೀತಿಗೊಂಡಿದ್ದ ಮಟ್ಟಕ್ಕೆ ಈ ವಿಷಯ ಉಲ್ಬಣಗೊಳ್ಳುವ ಸಾಧ್ಯತೆ ಇನ್ನು ಸಂಪೂರ್ಣವಾಗಿ ಇಲ್ಲವಾಗಿದ್ದು….

https://nageshamysore.wordpress.com/00212-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-25/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00211. ಕಥೆ: ಪರಿಭ್ರಮಣ..(24)


00211. ಕಥೆ: ಪರಿಭ್ರಮಣ..(24)

ಅಂದಿನ ದಿನವೆಲ್ಲ ಹೇಗೊ ಚಡಪಡಿಕೆಯಲ್ಲೆ ಕಳೆದು ಅರೆಬರೆ ಮನದಲ್ಲೆ ಸಿದ್ದತೆಯತ್ತ ಗಮನ ನೀಡಿದ್ದ ಶ್ರೀನಾಥನಿಗೆ ಕನಿಷ್ಠ ಮರುದಿನವಾದರೂ ಅವಳು ತಪ್ಪಿಸಿಕೊಳ್ಳದೆ ಆಫೀಸಿಗೆ ಬಂದರೆ ಸಾಕಪ್ಪಾ ಅನಿಸಿಬಿಟ್ಟಿತ್ತು. ಶ್ರೀನಿವಾಸ ಪ್ರಭುವಿನ ಆಗಮನಕ್ಕೆ ಮೊದಲು ಅವಳೊಡನೆ ಒಮ್ಮೆಯಾದರೂ ಮಾತನಾಡದಿದ್ದರೆ ಸಮಧಾನವಿರುತ್ತಿರಲಿಲ್ಲದ ಕಾರಣ ಅದೊಂದು ನಿರಂತರ ಆತಂಕವಾಗಿ ಕಾಡಲಾರಂಭಿಸಿತ್ತು. ಮರುದಿನ ಶುಕ್ರವಾರವಾದ ಕಾರಣ ಆ ದಿನವೂ ಅವಳು ಬರಲಿಲ್ಲವೆಂದರೆ ಇನ್ನು ಸೋಮವಾರದವರೆಗೂ ಕಾಯಬೇಕಾಗುತ್ತಿತ್ತು.

https://nageshamysore.wordpress.com/00211-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-24/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00210. ಕಥೆ: ಪರಿಭ್ರಮಣ..(23)


00210. ಕಥೆ: ಪರಿಭ್ರಮಣ..(23)

ಸುಮಾರು ಹೊತ್ತು ಅಲುಗದ ಶಿಲೆಯಂತೆ ತದೇಕಚಿತ್ತನಾಗಿ ದಿಟ್ಟಿಸುತ್ತ ಕುಳಿತ ಶ್ರೀನಾಥನಿಗೆ ಈಗ ಎಲ್ಲಿಲ್ಲದ ಕಳವಳ ಆರಂಭವಾದಂತಾಗಿ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲೇನೊ ಶೂನ್ಯ ಆವರಿಸಿಕೊಂಡ ಭಾವ ಮೈತುಂಬಿಕೊಂಡಿತ್ತು. ಒಳಗಿನ ಹೇಳಿಕೊಳ್ಳಲಾಗದ ಯಾವುದೊ ಸಂಕಟ ವೇದನೆಯ ರೂಪ ತಾಳಿಕೊಂಡು ಬಂದಂತೆ, ಇಡಿ ದೇಹದ ಒಳಗೆಲ್ಲಾ ಅಂಗಗಳು ಕಳಚಿ ಬಿದ್ದುಹೋದ ಹಾಗೆ ಭ್ರಮೆಯುಡಿಸಿ, ಖಾಲಿಖಾಲಿಯಾದ ಕಳವಳದ ಅನುಭೂತಿಯಾಗಿ ಕಾಡತೊಡಗಿತು…..

https://nageshamysore.wordpress.com/00210-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-23/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00209. ಕಥೆ: ಪರಿಭ್ರಮಣ..22


00209. ಕಥೆ: ಪರಿಭ್ರಮಣ..22

‘ ಸದ್ಯಕ್ಕೆ ಅಜೈಲಿನ ವಾದ ಪಕ್ಕಕ್ಕಿಡೋಣ.. ಅದರ ಬಗ್ಗೆ ಮಾತಾಡಲು ಹೊರಟರೆ ಮತ್ತೊಂದು ಹೊಸ ಅಧ್ಯಾಯವನ್ನೆ ತೆರೆಯಬೇಕಾಗುತ್ತದೆ. ಸದ್ಯಕ್ಕೆ ನಮ್ಮ ‘ವಾಟರ್ ಫಾಲ್ ‘ ವಿಧಾನದತ್ತ ಗಮನ ಕೊಡೋಣ… ಈ ‘ಅನಿಸಿಕೆಯ ಅಸ್ಪಷ್ಟತೆ’ ಒಂದು ಸೈದ್ದಾಂತಿಕ ತೊಂದರೆಯಾದರೆ ಇನ್ನು ಪ್ರಾಜೆಕ್ಟಿನ ಕಾರ್ಯ ರೀತಿಯದು ಮತ್ತೊಂದು ಬಗೆಯ ತೊಡಕು..’……..

https://nageshamysore.wordpress.com/00209-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-22/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00208. ಕಥೆ: ಪರಿಭ್ರಮಣ..21


00208. ಕಥೆ: ಪರಿಭ್ರಮಣ..21

ವೇರ್ಹೌಸಿನ ಮೂಲೆಯೊಂದರತ್ತ ನಡೆದು ಷೆಲ್ಪುಗಳಿಂದ ಸರಕನ್ನು ಆಯ್ದುಕೊಳ್ಳುತ್ತಿದ್ದ ಸಿಬ್ಬಂದಿಯೊಬ್ಬಾತನ ಕೆಲಸವನ್ನು ಗಮನಿಸುತ್ತ ಹೊಸ ಸಿಸ್ಟಂ , ಪಿಕ್ ಸ್ಲಿಪ್ ಫಾರಂಗಳು ಹೇಗೆ ಕೆಲಸ ಮಾಡುತ್ತಿವೆಯೆಂದು ಸ್ವತಃ ಪರಿಶೀಲಿಸುತ್ತ ನಿಂತಿದ್ದ ಶ್ರೀನಾಥ. ಅದು ಗೋ ಲೈವ್ ನಂತರದ ಮೂರನೇ ದಿನ. ಕಡೆಗಳಿಗೆಯ ‘ಆಘಾತ’ಗಳನ್ನೆಲ್ಲ ನಿವಾರಿಸಿಕೊಂಡು ಮುಳುಗುವಂತಿದ್ದ ಹಡಗನ್ನು ಹೇಗೊ ತೇಲಿಸಿ……

https://nageshamysore.wordpress.com/00206-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-21/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00205. ಕಥೆ: ಪರಿಭ್ರಮಣ..(20)


00205. ಕಥೆ: ಪರಿಭ್ರಮಣ..(20)

ಕುನ್. ಸೋವಿಯ ಮಾತಿನಲ್ಲಿದ್ದ ಆತಂಕಕ್ಕೆ ಕಾರಣವಿರದೆ ಇರಲಿಲ್ಲ. ಸರಾಸರಿ ದಿನಕ್ಕೆ ನೂರರಿಂದ ನೂರೈವತ್ತು ಇನ್ವಾಯ್ಸ್ ಪ್ರಿಂಟ್ ಮಾಡುವ ವಾತಾವರಣದಲ್ಲಿ ಕನಿಷ್ಟ ಒಂದು ಇನ್ವಾಯ್ಸಿಗೆ ಹದಿನೈದೇ ನಿಮಿಷ ಹಿಡಿದರೂ ನೂರಕ್ಕೆ ೧೫೦೦ ನಿಮಿಷ; ಅಂದರೆ ದೈನಂದಿನ ಸರಾಸರಿ ೨೫ ಗಂಟೆ ! ಈಗ ಅರ್ಧ ಮುಕ್ಕಾಲು ಗಂಟೆಯಲ್ಲಿ ಎಲ್ಲಾ ಪ್ರಿಂಟಿಂಗ್ ಮುಗಿಸಿ ನಂತರದ ಸಮಯವನ್ನು ವೇರ್ಹೌಸಿನ ಭೌತಿಕ ಚಟುವಟಿಕೆಗೆ ಬಳಸುವ ಪದ್ಧತಿ ಅನುಸರಣೆಯಲ್ಲಿದ್ದು ಕಂಪ್ಯೂಟರಿನ ಮುಂದೆ ಕಳೆಯುವ ಸಮಯ ತೀರಾ ಕಡಿಮೆ. ಆದರೆ ಈ ಹೊಸ ಪದ್ಧತಿ ಅನುಷ್ಠಾನಗಿಳಿಸಿದರೆ ದಿನದಲ್ಲಿನ ಎರಡು ಶಿಫ್ಟಿನ ಪೂರ್ತಿ ಯಾರಾದರೊಬ್ಬರು ಕಂಪ್ಯೂಟರಿನ ಮುಂದೆ ಸದಾ ಕೂತು ಪ್ರಿಂಟು ಹಾಕುತ್ತಿರಬೇಕು…

https://nageshamysore.wordpress.com/4058-2/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00202. ಕಥೆ: ಪರಿಭ್ರಮಣ..(19)


00202. ಕಥೆ: ಪರಿಭ್ರಮಣ..(19)

ಇಷ್ಟೆಲ್ಲಾ ವೈಯಕ್ತಿಕ ಹೊಯ್ದಾಟಗಳ ನಡುವೆಯೆ ಪ್ರಾಜೆಕ್ಟಿನ ಚಟುವಟಿಕೆಗಳು ಟೆಸ್ಟಿಂಗ್-ಟ್ರೈನಿಂಗಿನ ಹಂತ ದಾಟಿ ‘ಗೋಲೈವ್’ (ನೈಜ್ಯ ‘ಶುಭಾ’ರಂಭದ ಗಮ್ಯ) ದಿನವನ್ನು ಸಮೀಪಿಸುತ್ತಿತ್ತು. ಹೀಗಾಗಿ ಶ್ರೀನಾಥನ ಜತೆ ತಂಡದ ಮಿಕ್ಕವರಿಗೂ ಕೈತುಂಬಾ ಕೆಲಸ. ಟೆಸ್ಟಿನಲ್ಲಿ ಹಿಡಿದು ಹಾಕಿದ್ದ ಕೈ ಕೊಟ್ಟಿದ್ದ ಪ್ರೋಗ್ರಾಮುಗಳ ರಿಪೇರಿ ಮತ್ತು ಮರು ಪರೀಕ್ಷಣೆ, ಹಳೆ ಸಿಸ್ಟಂ ಮಾಹಿತಿಯನ್ನು ಸೋಸಿ ಹೊಸದಕ್ಕೆ ಸಾಗಿಸುವ ತಲೆ ಚಿಟ್ಟು ಹಿಡಿಸುವ ಪರಿಪರಿ ‘ಪರಾಕ್ರಮ’, ಕೊನೆ ಗಳಿಗೆಯಲ್ಲಿ ಕೈ ಕೊಟ್ಟ ಅಂಶಗಳ ಮೂಲ ಕಾರಣ ಹುಡುಕಿ, ಬೆನ್ನಟ್ಟಿ ಸರಿಪಡಿಸಿ ಸಕ್ರಮಗೊಳಿಸುವ ಕರ್ಮ; ಇದೆಲ್ಲದರ ನಡುವೆ, ಯಾವ ಹೊತ್ತಿನಲ್ಲಿ ಯಾವ ‘ಮರ್ಫಿ’ ಬಂದು ಕಾಡುವನೊ ಎಂಬ ಆತಂಕವನ್ನು ಅನುಭವಿಸುತ್ತಲೇ, ತಂಡದೆಲ್ಲರ ಪ್ರಯತ್ನಗಳ ಮೊತ್ತವನ್ನು ಏಮಾರಿಸಿ, ಹಾಗೇನಾದರೂ ಅನಿರೀಕ್ಷಿತ ‘ಮರ್ಫಿ’ ಬಂದರೆಗಿದರೆ ಅದನ್ನು ಎದುರಿಸುವ ಅಂತಿಮ ಮಾರ್ಗವಾಗಿ, ಕಂಡು ಕಾಣದ ಎಲ್ಲಾ ದೈವಗಳಿಗೆ ಅಂತರಂಗಿಕ ಪ್ರಾರ್ಥನೆ, ಕೋರಿಕೆ – ಹೀಗೆ….

https://nageshamysore.wordpress.com/00201-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-19/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00201. ಕಥೆ: ಪರಿಭ್ರಮಣ..(18)


00201. ಕಥೆ: ಪರಿಭ್ರಮಣ..(18)
_________________________
[ಭಾಗ 4. ಆರೋಹಣ (ಅಂತಿಮ ಭಾಗ)]

ಮುಂದಿನ ದಿನಗಳಲ್ಲಿ ಕೆಲಸದ ಒತ್ತಡ ಹಾಗು ನಿರಂತರ ಚಟುವಟಿಕೆಗಳ ಭರಪೂರದಿಂದಾಗಿ ಎಡಬಲ ನೋಡಲಾಗದ ಪರಿಸ್ಥಿತಿ; ಕೆಲವು ಕೊನೆಗಳಿಗೆಯ ಅನಿರೀಕ್ಷಿತ ತೊಡಕುಗಳು ಉದ್ಭವಿಸಿ, ಅವುಗಳನ್ನೆಲ್ಲ ನಿವಾರಿಸಿಕೊಂಡು ಅಂತಿಮ ಗಮ್ಯಕ್ಕೆ ಧಕ್ಕೆ ಬರದ ರೀತಿ ಮುನ್ನಡೆಯುವಲ್ಲಿ ಅಪಾರ ಸಮಯ ವ್ಯಯಿಸಬೇಕಾಗಿ ಬಂದು, ನಿದ್ರೆಯ ಹೊತ್ತು ಬಿಟ್ಟರೆ ಮಿಕ್ಕೆಲ್ಲಾ ಹೊತ್ತು ಆಫೀಸೆ ಎನ್ನುವಂತಾಗಿತ್ತು. ಎಂದಿನಂತೆ ಕುನ್.ಸು ಜತೆಗಿನ ಕಾಫಿ, ಚಹಾದ ವ್ಯವಹಾರ ನಡೆದುಕೊಂಡು ಹೋಗುತ್ತಿದ್ದರೂ, ಆ ದಿನದ ಘಟನೆಯ ನಂತರ ಸೂಕ್ಷ್ಮವಾಗಿ ಗಮನಿಸಿದರೆ ಅವಳಲ್ಲೇನೋ ಬದಲಾವಣೆ ಆಗಿರುವಂತೆ ಕಾಣಿಸುತ್ತಿತ್ತು. ……

https://nageshamysore.wordpress.com/00200-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-18/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00199. ಕಥೆ: ಪರಿಭ್ರಮಣ..(17)


00199. ಕಥೆ: ಪರಿಭ್ರಮಣ..(17)

ಆದರೂ ಅವನ ನೋಟದರಿವಿನಿಂದಲೆ ಕೆಂಪಾಗಿ ಹೋಗಿದ್ದ ಅವಳ ಮುಖ ಅವಳನ್ನು ಇನ್ನಷ್ಟು ಸೌಂದರ್ಯವತಿಯಾಗಿ ಕಾಣುವಂತೆ ಮಾಡಿತ್ತು; ಸಾಲದ್ದಕ್ಕೆ ಹಾಕಿದ್ದ ದಿರುಸಿನಿಂದ ಇನ್ನಷ್ಟು ಚಿಕ್ಕ ವಯಸ್ಸಿನವಳ ಹಾಗೆ ಕಾಣಿಸುತ್ತಿದ್ದಳು ಬೇರೆ. ಇನ್ನು ಹಾಗೆ ಕೂತಿದ್ದರೆ ಚಂಚಲವಾಗಿ ಹರಿದ ಮನದ ಓಘಕ್ಕೆ ಅಣೆಕಟ್ಟು ಹಾಕಲು ಸಾಧ್ಯವಾಗದೆಂಬ ಸಂಯಮದ ಅರಿವು ಎಚ್ಚರಿಸಿ ಸಿದ್ದತೆಯ ಅಗತ್ಯವಿದ್ದ ರೂಮಿನತ್ತ ಹೊರಡಲು ಎದ್ದು ನಿಂತ….

https://nageshamysore.wordpress.com/0018x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-17/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00197. ಕಥೆ: ಪರಿಭ್ರಮಣ..(16)


00197. ಕಥೆ: ಪರಿಭ್ರಮಣ..(16)

ಮಳೆಯಿಂದ ತಂಪಾದ ವಾತಾವರಣದಲ್ಲಿ ಎದುರಿಗಿದ್ದ ಕಾಫಿ ಬಾರೊಂದರ ಹೊರಗೆ ಹಾಕಿದ್ದ ಟೇಬಲ್ಲೊಂದನು ಹಿಡಿದು ಒಂದು ‘ಕೆಫೆ ಲತೇ’ ಕಾಫಿಗೆ ಆರ್ಡರು ಮಾಡಿದ ಶ್ರೀನಾಥ. ಅಲ್ಲಿ ಸಿಗುತ್ತಿದ್ದ ಕಹಿ ಕಾಫಿಗಳಲ್ಲಿ ಇದೊಂದು ಮಾತ್ರ ಸೊಗಸಾದ, ಹಿತವಾದ ಸುವಾಸನೆಯೊಂದಿಗೆ ಕುಡಿಯಲು ಮುದವೆನಿಸುತ್ತಿದ್ದ ಕಾಫಿಯಾದ ಕಾರಣ ಶ್ರೀನಾಥ ಸಾಧಾರಣ ಇದನ್ನೆ ಆರ್ಡರು ಮಾಡುತ್ತಿದ್ದುದೆ ಹೆಚ್ಚು. ಇದು ಸಿಗದ ಕಡೆ ಮಾತ್ರ ‘ಕಪುಚಿನೋ’ ಮೊರೆ ಹೋಗುತ್ತಿದ್ದುದು….

https://nageshamysore.wordpress.com/0018x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-16/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00189. ಕಥೆ: ಪರಿಭ್ರಮಣ..(15)


00189. ಕಥೆ: ಪರಿಭ್ರಮಣ..(15)

(ಪರಿಭ್ರಮಣ..(14)ರ ಕೊಂಡಿ – https://nageshamysore.wordpress.com/0018x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-14/ )

ತನಗಾದ ಆಘಾತದಿಂದ ಚೇತರಿಸಿಕೊಳ್ಳಲಾಗದೆ ಗರ ಬಡಿದವನ ಹಾಗೆ ಬೆಪ್ಪನಂತೆ ಒಬ್ಬನೆ ಅದೆಷ್ಟು ಹೊತ್ತು ನಿಂತಿದ್ದನೊ ಏನೊ… ಆ ಗಳಿಗೆಯಲ್ಲಿ ಮುಂದೇನು ಮಾಡಬೇಕೆಂದು ತೋಚದಾ, ಪ್ರಜ್ಞೆಯಿರದೆಲ್ಲೊ ಪೂರ್ತಿ ಕಳುವಾಗಿ ಹೋದಂತೆನಿಸುವ ಅಯೋಮಯ ಸ್ಥಿತಿ.. ಅದೇನು, ಹೀಗೆ ಮತ್ತೆ ಮತ್ತೆ ಬೇಸ್ತು ಬಿದ್ದೆನಲ್ಲಾ ಎಂಬ ಕೀಳರಿಮೆಯೊ, ಈಜಲು ಬರದೆ ನೀರಲ್ಲಿ ಪೂರ್ತಿ ಮುಳುಗಿದ ಮೇಲೆ ಇನ್ನು ಚಳಿಯೇನು, ಮಳೆಯೇನು? ಎನ್ನುವ ಅಭಾವ ವೈರಾಗ್ಯವೊ, ಆಘಾತದ ದಿಗ್ಭ್ರಮೆಯಿಂದುದಿಸಿದ ಏನೂ ಮಾಡಲರಿಯದ ದಿಗ್ಮೂಢತೆಯ ಮೂರ್ಖತನವೊ – ತನಗಾದ ಏಟಿನ ಕುರಿತು, ಪೆಟ್ಟು ತಿಂದಂತೆ ವಿಲವಿಲ ಒದ್ದಾಡುತ್ತಿದ್ದ ಆತ್ಮಾಭಿಮಾನದ ಚಡಪಡಿಕೆಯ ಬಗ್ಗೆ ಚಿಂತಿಸದೆ, ಆ ಹೊತ್ತಿನಲ್ಲೂ ‘ಅವಳಷ್ಟು ಪರಿಚಿತಳಂತೆ ಕಂಡಳಲ್ಲ? ಎಲ್ಲಿ ನೋಡಿದ್ದೆ ಅವಳನ್ನ ?’ ಎಂದೆ ಆಲೋಚಿಸುತ್ತ ನಿಂತವನ ಮನಸ್ಥಿತಿಗೆ ಅವನಿಗೆ….

https://nageshamysore.wordpress.com/0018x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-15/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00187. ಕಥೆ: ಪರಿಭ್ರಮಣ..(14)


00187. ಕಥೆ: ಪರಿಭ್ರಮಣ..(14)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

(ಪರಿಭ್ರಮಣ..(13)ರ ಕೊಂಡಿ – https://nageshamysore.wordpress.com/0018x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-13/ )

ಇಂಗ್ಲೀಷ್ ಸಬ್ಟೈಟಲುಗಳಿದ್ದ ಕೆಲವು ಥಾಯ್ ಡೀವಿಡಿಗಳು ಸಿಕ್ಕಿದ್ದ ಕಾರಣದಿಂದ ಬರಿಯ ಆಂಗ್ಲ ಸಿನಿಮಾಗಳನ್ನೆ ನೋಡಿ ಬೇಸತ್ತಿದ್ದ ಮನಕ್ಕೆ ಕೊಂಚ ಆಹ್ಲಾದಕರ ಬದಲಾವಣೆಯೂ ಸಿಕ್ಕಿದಂತಾಗಿತ್ತು. ಆದರೆ ಟಿವಿಯ ಪುಟ್ಟ ಪರದೆಯನ್ನೆ ಒಂದೆ ಸಮನೆ ನೋಡುತ್ತಾ ವೇಗವಾಗಿ ಬದಲಾಗುತ್ತಿದ್ದ ಭಾಷಾಂತರವನ್ನು ಭಾವಾಂತರಿಸಿಕೊಳುವಷ್ಟು ಹೊತ್ತಿಗೆ ದೃಶ್ಯವೆ ಮುಗಿದು ಮುಂದೋಡಿರುತ್ತಿತ್ತು; ….

https://nageshamysore.wordpress.com/0018x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-14/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00185. ಕಥೆ: ಪರಿಭ್ರಮಣ..(13)


00185. ಕಥೆ: ಪರಿಭ್ರಮಣ..(13)

(ಕಿರು ಟಿಪ್ಪಣಿ: ಸಮಸ್ತ ಕನ್ನಡಿಗರಿಗೆ ಈ ಜಯ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು. ಇದೆ ಸಂಧರ್ಭದಲ್ಲಿ ಪರಿಭ್ರಮಣದ ಈ 13ನೆ ಕಂತಿನಲ್ಲಿ ಥಾಯಿ ಸಂಸ್ಕೃತಿಯ ಎರಡು ಪ್ರಮುಖ ಹಬ್ಬಗಳ ಕುರಿತಾದ ವಿವರಣೆಯನೂ ಸೇರಿಸುತ್ತಿದ್ದೇನೆ – ಥಾಯ್ ಹೊಸ ವರ್ಷವೂ ಸೇರಿದಂತೆ)

(ಪರಿಭ್ರಮಣ..(12)ರ ಕೊಂಡಿ – https://nageshamysore.wordpress.com/0018x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-12/ )

ಇದಕ್ಕಿಂತಲೂ ವಿಶಿಷ್ಠವಾದ ಮತ್ತೊಂದು ಬಗೆಯ ಅನುಭವವೂ ಶ್ರೀನಾಥನಿಗಾಗಿತ್ತು. ಹೀಗೆ ನಡುವಲೊಮ್ಮೆ ಭಾರತದಿಂದ ಪ್ರವಾಸಕ್ಕೆ ಬಂದಿದ್ದ ಹಿರಿಯ ಸಹೋದ್ಯೋಗಿಯೊಬ್ಬರು ಸಿಂಗಪುರ, ಮಲೇಶಿಯಾ ಮುಖೇನ ಬ್ಯಾಂಕಾಕಿಗೂ ಭೇಟಿಯಿತ್ತಿದ್ದರು….
https://nageshamysore.wordpress.com/0018x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-13/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00184. ಕಥೆ: ಪರಿಭ್ರಮಣ..(12)


00184. ಕಥೆ: ಪರಿಭ್ರಮಣ..(12)

(ಪರಿಭ್ರಮಣ..(11)ರ ಕೊಂಡಿ – https://nageshamysore.wordpress.com/3544-2/)

ಶ್ರೀನಾಥ ಮತ್ತು ಜತೆಗಿದ್ದ ಭಾರತೀಯ ಸಹೋದ್ಯೋಗಿಗಳಿಗೆ ಜೀವನವೇನು ಅಲ್ಲಿ ಹೂವಿನ ಹಾಸಿಗೆ ಎನ್ನುವಂತಿರಲಿಲ್ಲ. ಊಟಾ ತಿಂಡಿಯಿಂದ ಹಿಡಿದು ಭಾಷೆ, ನಡುವಳಿಕೆಯತನಕ ಒಂದಲ್ಲ ಒಂದು ವಿಧದ ಹೊಂದಾಣಿಕೆ ಮಾದಿಕೊಳ್ಳಲೇಬೇಕಾದ ಅನಿವಾರ್ಯ ಇದ್ದೆ ಇರುತ್ತಿತ್ತು. ಹೀಗಾಗಿ ಯಾವುದೆ ವಿಷಯವಿದ್ದರು ಅವರವರ ನಡುವೆ ಚರ್ಚಿಸಿ ಒಮ್ಮತಕ್ಕೆ ಬರದೆ ಬೇರೆ ದಾರಿಯೂ ಇರುತ್ತಿರಲಿಲ್ಲ…..
https://nageshamysore.wordpress.com/0018x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-12/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00182. ಕಥೆ: ಪರಿಭ್ರಮಣ..(11)


00182. ಕಥೆ: ಪರಿಭ್ರಮಣ..(11)

ಪ್ರಾಜೆಕ್ಟಿನ ನೈಜ್ಯಾಂತಿಮ ಉದ್ಘಾಟನಾ ಗಡುವು ಹತ್ತಿರವಾಗುತ್ತಿತ್ತು. ಅಂತೆಯೆ ಸಿದ್ದತೆಗಳೂ ಭರ ವೇಗದಲ್ಲಿ ಓಡತೊಡಗಿ ತಲೆ ಕೆರೆಯಲೂ ಪುರುಸೊತ್ತಿಲ್ಲದ ಪರಿಸ್ಥಿತಿ. ಆ ಉದ್ಘಾಟನಾ ಪೂರ್ವ ಸಿದ್ದತೆಗಳಲ್ಲಿ ಒಂದು ಮುಖ್ಯ ಘಟ್ಟ – ಸಂಬಂಧಪಟ್ಟವರಿಗೆಲ್ಲ ನೀಡಬೇಕಾದ ಪರಿಪಕ್ವ ತರಬೇತು ಮತ್ತು ಪರೀಕ್ಷಣಾ ಪರಿಸರದಲ್ಲಿ ನಡೆಸಬೇಕಾದ ಅಣಕು ಪರೀಕ್ಷೆಗಳ ಆವರ್ತನಗಳು. ಈ ಕೆಲಸವೆ ಸುಮಾರು ತಿಂಗಳೆರಡರತನಕ ವ್ಯಾಪಿಸಿಕೊಳ್ಳುತ್ತಿದುದರಿಂದ ಅದಕ್ಕೆ ಬೇಕಾದ ಸಕಲ ಪೂರ್ವ ಸಿದ್ದತೆಗಳು ಸಮರೋಪಾದಿಯಲ್ಲಿ ಜರುಗಬೇಕಿತ್ತು…..https://nageshamysore.wordpress.com/3544-2/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00180. ಕಥೆ: ಪರಿಭ್ರಮಣ..(10)


00180. ಕಥೆ: ಪರಿಭ್ರಮಣ..(10)

ಅಲ್ಲಿನವರ ಊಟ ತಿಂಡಿಯ ರೀತಿ ನೋಡಿದ್ದವನಿಗೆ ಅವಳು ಭಾರತೀಯ ತಿನಿಸುಗಳನ್ನು ಇಷ್ಟಪಡುವಳೊ ಇಲ್ಲವೊ ಅನುಮಾನವಿತ್ತು. ಅದರಲ್ಲೂ ಯಾವುದಾದರೊಂದು ಮಾಂಸವಿಲ್ಲದ ಊಟ ರುಚಿಸೀತೆ ಅನ್ನುವ ಸಂಶಯವೂ ಕಾಡಿತ್ತು. ಆ ಅಳುಕಲ್ಲೆ ಒಂದೆರಡು ತರದ ದೋಸೆ ಮತ್ತು ನಾನ್ ಆರ್ಡರ ಮಾಡಿ, ತೀರಾ ಮಸಾಲೆಯಿಲ್ಲದ ಸೈಡ್ ಡಿಶ್ ಜತೆಗೆ ಮ್ಯಾಂಗೊ ಲಸ್ಸಿಯನ್ನು ಸೇರಿಸಿದ್ದ….

https://nageshamysore.wordpress.com/0017x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-10/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00176. ಕಥೆ: ಪರಿಭ್ರಮಣ..(09)


00176. ಕಥೆ: ಪರಿಭ್ರಮಣ..(09)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

ಕಥೆ: ಪರಿಭ್ರಮಣ..(09)
_______________

(ಪರಿಭ್ರಮಣ..(08)ರ ಕೊಂಡಿ – https://nageshamysore.wordpress.com/00168-2/ )

ಸುವರ್ಣಕ್ಕೆ ಹತ್ತಿರದ ಪದ ಸುವನ್ನ . ಸುವನ್ನ ಎಂದರೆ ಬಂಗಾರ ಎಂದೆ ಅರ್ಥ ಥಾಯ್ ನಲ್ಲಿ ಕೂಡ. ಬಂಗಾರದ ಮೋಹ ಜಗತ್ತಿನ ಎಲ್ಲಾ ದೇಶಗಳ ಸಾಮಾನ್ಯ ಕಥೆಯೆಂದು ಕಾಣುತ್ತದೆ. ಅದಕ್ಕೆಂದೊ ಏನೊ ಇಲ್ಲಿಯೂ ಹೆಣ್ಣುಮಕ್ಕಳ ಹೆಸರಲ್ಲೆ ಬಂಗಾರವಿದೆ, ನಮ್ಮ ಬಂಗಾರಮ್ಮ, ಸುವರ್ಣ, ಚಿನ್ನಮ್ಮಗಳ ಹಾಗೆ . ಶ್ರೀನಾಥ ಕಂಡ ಸ್ತ್ರೀ ನಾಮಗಳಲ್ಲಿ….

https://nageshamysore.wordpress.com/0017x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-09/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00173. ಕಥೆ: ಪರಿಭ್ರಮಣ..(08)


_______________________________________________________________________________

00173. ಕಥೆ: ಪರಿಭ್ರಮಣ..(08)

ಆ ವಾಕಿಂಗ್ ಸ್ಟ್ರೀಟಿನ ನಡುವಿನ ಭಾಗಕ್ಕೆ ಹಾಗೆ ಅಡ್ಡಾಡುತ್ತ ಬಂದ ಹಾಗೆ , ನಿರೀಕ್ಷೆಯಂತೆ ಅಲ್ಲೊಂದು ದೊಡ್ಡ ವೇದಿಕೆ. ಹಿನ್ನಲೆಯಲ್ಲಿ ಅಗಾಧ ಹೂ ರಾಶಿ ಮತ್ತಿತರ ಅಲಂಕಾರದ ನಡುವೆ ವಿರಾಜಿಸುತ್ತಿರುವ ರಾಜ ರಾಣಿಯ ದೊಡ್ಡ ಚಿತ್ರ ಪಠಗಳು…ಅದರ ಮುಂದೆಯೆ ದೊಡ್ಡ ಸ್ಟೇಜು – ಅಲ್ಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದೆಂದು ಕಾಣುತ್ತದೆ, ಮುಂದಿನ………

https://nageshamysore.wordpress.com/0017x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-08/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00172. ಕಥೆ: ಪರಿಭ್ರಮಣ..(07)


00172. ಕಥೆ: ಪರಿಭ್ರಮಣ..(07)

(ಪರಿಭ್ರಮಣ..(06)ರ ಕೊಂಡಿ – https://nageshamysore.wordpress.com/00168-2/)

ಭಾಗ 03. ಅಧಃಪತನ :
________________

ಶ್ರೀನಾಥನಿಗೆ ಆಗೀಗೊಮ್ಮೆ ಎಂಥದೊ ಕಳವಳ, ದುಗುಡ ಆಗಲಾರಂಭವಾಗಿತ್ತು – ತಾನೇನೊ ಬದಲಾಗಿಹೋಗುತ್ತಿರುವೆನಲ್ಲಾ? ಎಂದು. ವರ್ಷಗಳ ಹಿಂದಿನ ಸಾತ್ವಿಕ ಸನ್ನಡತೆಯ ಶ್ರೀನಾಥನಲ್ಲಿ ಮತ್ತು ಈಗಿನ ವಿಪರೀತದ ಚಿಂತನೆಯ ಶ್ರೀನಾಥನಲ್ಲಿ ಅಜಗಜಾಂತರವೆನಿಸಿ ಆ ಭೀತಿ ಇನ್ನೂ ಆಳಕ್ಕೆ ದೂಡುತ್ತಿತ್ತು. ಮತ್ತೊಂದೆಡೆ ತನಗೆ ತಾನೆ ಸಮಾಧಾನಿಸಿಕೊಳ್ಳುತ್ತ, ‘ಅಪ್ಪ ಹಾಕಿದ ಆಲದ ಮರವೆಂದು…. https://nageshamysore.wordpress.com/0017x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-07/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00170. ಕಥೆ: ಪರಿಭ್ರಮಣ..(06)


00170. ಕಥೆ: ಪರಿಭ್ರಮಣ..(06)

(ಪರಿಭ್ರಮಣ..(05)ರ ಕೊಂಡಿ – https://nageshamysore.wordpress.com/00167-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-05/ )

ಪ್ರಾಜೆಕ್ಟಿಗೆಂದೊ ಅಥವಾ ಮತ್ತಾವುದೊ ನಿಗದಿತ ಅವಧಿಯ ಕೆಲಸದ ನಿಮಿತ್ತ ವಿದೇಶಗಳ ವಿಮಾನ ಹತ್ತಿದವರು ಮೊದಲು ಗಮನಿಸಬೇಕಾದ ಅಂಶವೆಂದರೆ ಹೆಲ್ತ್ ಇನ್ಶೂರೆನ್ಸ್. ಅದಿರದಿದ್ದರೆ ಆ ದೇಶಗಳಲ್ಲಿ ಸಣ್ಣ ಪುಟ್ಟ ಕಾಯಿಲೆ ಬಿದ್ದರೂ ತೆರಬೇಕಾದ ಮೊತ್ತ ಕಣ್ಣು ಕಣ್ಣು ಬಿಡುವಂತೆ ಮಾಡುವುದರಿಂದ ಪ್ರತಿಯೊಬ್ಬರು ಮೊದಲು ಮಾಡಿಸಿಕೊಂಡಿರಬೇಕಾದ ವ್ಯವಸ್ಥೆ ಇದು…..https://nageshamysore.wordpress.com/00168-2/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00167. ಕಥೆ: ಪರಿಭ್ರಮಣ..(05)


00167. ಕಥೆ: ಪರಿಭ್ರಮಣ..(05)

ಅವಳ ಮಾತಿಗೂ ಉತ್ತರಿಸದೆ ಚಿಂತನೆಯಲ್ಲಿ ತಲ್ಲೀನನಾದಂತೆ ಕುಳಿತವನ ಕಂಡು, ಅದೇ ತರುಣಿ – ‘ಡು ಯು ಲೈಕ್ ಮೀ ? ದೆನ್ ಶೀ ವಿಲ್ ಗೊ..’ ಎಂದಾಗ, ತಾನೂ ಈಗಾಗಲೆ ಬೇಡವೆಂದು ನಿರಾಕರಿಸಿದ್ದೆ ಎಂದು ಹೇಳಿ ಅವರನ್ನು ಹಿಂದೆ ಕಳಿಸುವ ಮನಸಾಗದೆ, ಇಬ್ಬರು ಅಪ್ರತಿಮ ಸುಂದರಿಯರ ನಡುವೆ ಇವಳಾದರೂ ತುಸು ಇಂಗ್ಲೀಷು ಮಾತಾಡುತ್ತಾಳಲ್ಲ ಎನಿಸಿ, ‘ಹೂಂ’ ಎನ್ನುವಂತೆ….

https://nageshamysore.wordpress.com/00167-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-05/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00166. ಕಥೆ: ಪರಿಭ್ರಮಣ..(04)


00166. ಕಥೆ: ಪರಿಭ್ರಮಣ..(04)

ಅತ್ತಕಡೆ ರಿಂಗಾಗುತ್ತಿರುವ ಸದ್ದಿನ ನಡುವೆಯೆ ಕಣ್ಣು ‘5000’ ಬಾತ್ ಎಂದಿದ್ದರ ಮೇಲೆ ಓಡಾಡುತ್ತ ‘ಅಬ್ಬಾ! ಅಷ್ಟು ದುಬಾರಿಯೆ’ ಅಂದುಕೊಳ್ಳುತ್ತಲೆ, ಮತ್ತೊಂದೆಡೆ ‘ಅಯ್ಯೊ…ನಾನೇನೂ ಮಾಡುತ್ತಿದ್ದೇನೆ? ಹೀಗೆ ಮಾಡುವುದಕ್ಕೆ ಅದೆಲ್ಲಿಂದ ಧೈರ್ಯ ಬರುತ್ತಿದೆ, ನನಗೆ? ಮೊದಲೆ ನೂರಾರು ತರಹ ರೋಗ, ರುಜಿನಗಳ ಹೆಸರು ಹೇಳಿ ಹೆದರಿಸುತ್ತಾರೆ..ನಾನು ಗೂಳಿಯ ಹಾಗೆ ನುಗ್ಗುತ್ತ, ಹಿಂದೆ ಮುಂದೆ ಆಲೋಚಿಸದೆ, ಯಾರಾರನ್ನೊ ಕರೆಸಲು ಹೋಗುತ್ತಿರುವೆನಲ್ಲ..’ ಎಂಬ ಗಾಬರಿ……

https://nageshamysore.wordpress.com/00165-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-04/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00164. ಕಥೆ: ಪರಿಭ್ರಮಣ..(03)


00164. ಕಥೆ: ಪರಿಭ್ರಮಣ..(03)

(ಪರಿಭ್ರಮಣ..(02)ರ ಕೊಂಡಿ) – https://nageshamysore.wordpress.com/00163-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-02/ )

ಭಾಗ 02. ಆಕ್ರಮಣ :
________________

ಅಷ್ಟೊತ್ತಿನವರೆಗೂ ಸುರಿಯುತ್ತಲೆ ಇದ್ದ ಧಾರಾಕಾರ ಮಳೆಯ ಜತೆಗೆ ಬೀಸುತ್ತಿದ್ದ ತಂಗಾಳಿಯೂ ಸೇರಿ ಬಿಸಿ ಬಾಣಲೆಯಲಿಟ್ಟಂತಿದ್ದ ಮೈಯಿಂದ ಹರಿಯುತ್ತಿದ್ದ ಬೆವರಿನ ಪದರವೆಲ್ಲಾ ಆವಿಯಾದಂತೆ ಸರಿದು ಹೋಗಿ ವಾತಾವಾರಣ ಈಗ ಹೆಚ್ಚು ಸಹನೀಯವಾಗಿ ತಂಪಾಗಿತ್ತು. ಮಳೆಯ ಸದ್ದಿನೊಂದಿಗೆ ಸುತ್ತ ಕಣ್ಣಾಡಿಸುತ್ತಲೆ ನೋಡಿದ ಶ್ರೀನಾಥನಿಗೆ ಅಲ್ಲಲ್ಲಿ ಚದುರಿದಂತೆ ನಿಂತಿದ್ದ ಹತ್ತಾರು ಜನರನ್ನು ಬಿಟ್ಟರೆ ಹೆಚ್ಚು ಜನರೇನೂ ಕಾಣಲಿಲ್ಲ……

https://nageshamysore.wordpress.com/00164-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-03/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00163. ಕಥೆ: ಪರಿಭ್ರಮಣ..(02)


00163. ಕಥೆ: ಪರಿಭ್ರಮಣ..(02)

(ಮುಂದುವರೆದದ್ದು)
ಸುತ್ತಲೂ ನಿಂತವರನ್ನೆ ನೋಡಿದ ಶ್ರೀನಾಥನಿಗೆ, ಇಂದು ಆಫೀಸಿಲ್ಲದ ಕಾರಣ ಬರಿಯ ಗಂಡು ಮುಖಗಳೆ ಹೆಚ್ಚಾಗಿ ಕಂಡವು. ಬಹುಶಃ ಅದೆ ಕಾರಣಕ್ಕೊ ಏನೊ ಗುಂಪೂ ಕೂಡಾ ವಾರದ ದಿನದ ಹಾಗೆ ದೊಡ್ಡದಿರಲಿಲ್ಲ. ಅವರೆಲ್ಲಾ ಅಲ್ಲೆ ಸುತ್ತ ಮುತ್ತಲಲ್ಲಿ ಕೆಲಸ ಮಾಡುವ ಕೆಲಸಗಾರರೊ, ಅಥವಾ ಟ್ರೈನು ಹಿಡಿಯಲು ಬಂದವರೊ ಇದ್ದಂತೆ ಕಂಡಿತು….

https://nageshamysore.wordpress.com/00163-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-02/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00162. ಕಥೆ: ಪರಿಭ್ರಮಣ..(01)


00162. ಕಥೆ: ಪರಿಭ್ರಮಣ..(01)

ಭಾಗ 01. ಅವರೋಹಣ…
________________

ಬ್ಯಾಂಕಾಕಿನ ನಡು ಮಧ್ಯಾಹ್ನದ ಬಿಸಿಲಿಗೆ ಮುಖದ ಮೇಲಿಂದ ಜಾರಲ್ಹವಣಿಸುತ್ತಿದ್ದ ಬೆವರಿನ ಹನಿಗಳನ್ನು ಒರೆಸಲು, ಬಲದ ಕೈಯಲಿದ್ದ ಕಿರು ಬ್ರೀಫ್ಕೇಸನ್ನು ಎಡಗೈಗೆ ವರ್ಗಾಯಿಸಿ ಪ್ಯಾಂಟಿನ ಜೇಬಿನಿಂದ ಕರವಸ್ತ್ರ ತೆಗೆದ ಶ್ರೀನಾಥ. ಒಂದು ಸುತ್ತು ಒರೆಸುತ್ತಿದ್ದಂತೆ ಎಲ್ಲೊ ಅಡಗಿದ್ದ ಸೈನಿಕರಂತೆ ಪುಳುಪುಳನೆ ಬರಲ್ಹವಣಿಸುತ್ತಿದ್ದ ಹೊಸ ಬೆವರ ಧಾರೆಯನ್ನು ಮೂಲದಲೆ ತಡೆಗಟ್ಟಲು ಸಮೀಪದ ಅಂಗಡಿಯ ನೆರಳೊಂದರ ಪಕ್ಕ ನಿಂತು, ಬ್ರೀಫ್ ಕೇಸನ್ನು ಕೆಳಗಿರಿಸಿದ…..

https://nageshamysore.wordpress.com/00162-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com