01717. ಕವನ ಚೋರರಿಗೆ..


01717. ಕವನ ಚೋರರಿಗೆ..

___________________________

ಕವಿತೆ ಕದಿಯುವ ಕಳ್ಳ

ನಿನಗೆಂದೇ ಬರೆದ ಕವಿತೆ

ಕದ್ದು ಬಿಡು ಮನಸಾರೆ

ಸದ್ದು ಮಾಡದೆ ಕನಸಂತೆ ! ||

ಕದ್ದ ಮಾಲಾದರೇನು ಬಿಡು

ಘಮಘಮಿಸುತಿದೆ ಸುಗಂಧ

ಚಂದದ ಕೂಸ ಮುದ್ದಿಸಲು

ಯಾರಾದರೇನು ಎತ್ತಾಡಿಸೆ ||

ಕದಿಯುವುದಿಲ್ಲವೆ ಮನಸನು ?

ಬರೆಯುವುದಿಲ್ಲವೆ ಹೆಸರಲ್ಲಿ ?

ಮಾಡದಿರಲೇನಂತೆ ಒಲವ ಸಹಿ

ಕಡೆಗಣಿಸಿದರಾಯ್ತು ಕದ್ದ ಕಸಿವಿಸಿ ||

ಕದ್ದ ಮೇಲಧಿಕಾರ ಕದ್ದವನದೆ…

ಗಣಿಕೆ ತನ್ನವಳು ತೆತ್ತಷ್ಟು ಹೊತ್ತಿಗೆ

ಮನಸಾಕ್ಷಿ ಅತ್ಮಾಭಿಮಾನ ಸವಕಲು

ಕೆಟ್ಟರು ಸುಖಪಡಬೇಕು ಈ ಯುಗದೆ ||

ಕದ್ದವ ಕವಿತೆಗೆ ಕೊಡುವ ಪ್ರಚಾರ

ತನ್ನದೆ ಬಸಿರೆನುವಷ್ಟು ಕಕ್ಕುಲತೆ

ಸಾಕುತಾಯ್ತಂದೆಯೆನುವಭಿಮಾನ

ತನ್ನದೆ ಹೆಸರನಲ್ಲಿಕ್ಕುವ ಅಪ್ಯಾಯತೆ ||

ತೆರುವುದೇನವನೇನೆಂದೆಣಿಸದಿರಿ

ಕರ್ಮದ ಲೆಕ್ಕದಲೆಲ್ಲಾ ಸಂದಾಯ

ಅಪಮಾನ ಕೀಳರಿಮೆ ಕಾಡದವರ

ಕಾಡಲಿಹುದೇನೊ ಕಾಣದ ಕೈವಾಡ ||

ಕವನ ಚೋರರಿಗೊಂದು ನಮನ

ಅರಿವಿರಲಿಲ್ಲ ನಮದೇ ಮೌಲ್ಯ !

ಕದಿಯುವಷ್ಟು ಚಂದದ ಸರಕು

ಬರೆವ ನೈಪುಣ್ಯ ಗಳಿಸಿದ ಖುಷಿ ! ||

– ನಾಗೇಶ ಮೈಸೂರು

೧೦.೦೫.೨೦೧೮

(Picture credit / source: https://goo.gl/images/Akffa8)

01474. ಮಾನಿನಿ, ಮದಿರೆ, ಕವನ, ಗಾಯನ..


01474. ಮಾನಿನಿ, ಮದಿರೆ, ಕವನ, ಗಾಯನ..

_________________________________________

ಮಾನಿನಿ ಮದಿರೆ ಮಧುರ

ಕಾವ್ಯದ ಜತೆ ಗಾಯನ ಕುದುರೆ

ನವಿರೇಳುತ ಮತ್ತಲಿ ತೂಗಾಟ

ಮತ್ತವಳದೊ? ಮದಿರೆಯದೊ ? ||

ನುಡಿಸುತ ವಾದನ ಮದನಾರಿ

ಇಣುಕು ನೋಟದೆ ಕೆಣಕುವ ಸ್ವರ

ಮತ್ತಿನ ಕಣ್ಣವಳ ಸಖ್ಯ ಮತ್ತೇರಿಸಿದೆ

ತೇಲುವ ಕಣ್ಣಾಲಿ ತಡಕಾಡಿಸಿ ಪದವ ||

ಬಿಡು ಚಿಂತೆ ಖಾಲಿಯಾಗದು ಮದಿರೆ

ನೋಡಲ್ಲಿ ಸುರೆ ಕರೆವ ಗೋವಳ ಚಂದ್ರ

ತುಂಬಿಸಿ ಹರಿಸಿಹನಲ್ಲ ಅಮೃತ ಧಾರೆ !

ನೀರೆ ನೀರಾ ಮೊಗೆಯಲಿಲ್ಲವೆ ಅವಸರ ! ||

ನನಗಾತಂಕ ಮದಿರೆಯದಲ್ಲ ಚದುರೆ

ಕರಗಿ ಹೋಗೊ ಯೌವನ ಹಿಡಿವವರಾರೆ?

ತನುವಾಗಲಿ ಮದಿರೆ ತೊಟ್ಟಿಕ್ಕಲಿ ವಿಸ್ಮೃತಿ

ಹೀರುವ ಭಾವಗಳಾಗಲಿ ಮಧುರಾನುಭೂತಿ ||

ಹಾಡಿರುವುದು ನಾನೊ, ನೀನೊ ಇಲ್ಲಾ ಪರಿವೆ

ಯಾರಿಗೆ ಬೇಕು? ಮನ ಉಲ್ಲಾಸ ಲೋಕದಲಿರೆ

ಮೈ ಮರೆಯಲಿ ಮದಿರೆಯ ಕುಡಿಸು ನಿಸರ್ಗಕು

ತೂಗೊ ತೊಟ್ಟಿಲಲಿ ತೂಗಾಡಲೆಮ್ಮ ಹಸುಗೂಸು ||

– ನಾಗೇಶಮೈಸೂರು

(Nagesha Mn)

(ಈ ಅದ್ಭುತ ಚಿತ್ರ, ಮತ್ತಷ್ಟೇ ಮತ್ತೇರಿಸುವ ಕವನ ಗುಚ್ಚದ ಜೊತೆ ಕವಿ ರಾಜ್ ಆಚಾರ್ಯ ಅವರ ಪೋಸ್ಟಿನಲ್ಲಿ ರಾರಾಜಿಸುತ್ತಿತ್ತು . ಚಿತ್ರದ ಪ್ರಚೋದನೆ ಮತ್ತು ಪ್ರಲೋಭನೆಗೆ ಸೋತು ನಾನೂ ಒಂದಷ್ಟು ಸಾಲು ಗೀಚಿದ್ದರ ಫಲ ಈ ಕವಿತೆ. ಧನ್ಯವಾದಗಳು ರಾಜ್ ಆಚಾರ್ಯ ಸಾರ್!😍👌👍🙏😊)

00914. ಅನುಪಮ ಚೆಲುವಿಗೊಂದು ಕವನ


00914. ಅನುಪಮ ಚೆಲುವಿಗೊಂದು ಕವನ
_________________________________


ಕವಿ ಬಾಯ ಕಟ್ಟುವ ಅನುಪಮ ಸೌಂದರ್ಯ ನಿನದು
ಮಾತು ಬಾರದ ಮೂಕ ಕರುಣಾಜನಕ ಸ್ಥಿತಿ ನನದು
ಹೇಗೆ ವರ್ಣಿಪುದೊ ವದನ ಅಧರ ತನು ಅಣು ಚದರ
ಚದುರೊ ಚಂಚಲ ಮನಕೆ ನಿಲುಕದೊಂದು ಪೂರಾ ||

ನಖಶಿಖಾಂತದ ನೋಟ ಅಡಿಯಿಂದ ಮುಡಿಗೆ
ಶಿಲ್ಪಿ ಜಕ್ಕಣನೆ ಉಳಿಯನೆತ್ತಿ ಕೆತ್ತಿದ ಸೊಗ ಸೊಬಗೆ
ಶಿಲೆಯಾದರು ಸುಲಭ ಮುಗಿಯಿತೊಮ್ಮೆ ಕೆತ್ತಲು
ನೀನೆಂತು ಜೀವಲತೆ ಸುಸ್ಥಿರ ಕೆತ್ತಿ ಮುಗಿದ ಮೇಲೂ! ||

ಬ್ರಹ್ಮದೇವನ ಮಮತೆ ನಿನಗಿರಬೇಕು ಅಪಾರ
ಮರೆತುಹೋಗಿರಬೇಕವನಿಗೆ ದಿನನಿತ್ಯದ ವ್ಯಾಪಾರ
ಮಣ್ಣಿನ ಹದವ ತಿದ್ದಿ ತೀಡುತ ಮೈ ಮರೆತಾ ಗಳಿಗೆ
ಮಿಕ್ಕೆಲ್ಲವನ್ನು ಬದಿಗಿಟ್ಟು ನಿನ್ನ ಸೃಜಿಸಿದನೋ ಹೇಗೆ ? ||

ನಾಚಿದರು ಬೆದರಿದರು ಬೆಚ್ಚಿ ಅಪ್ಸರೆಯರ ಗುಂಪು
ದೇವಲೋಕದ ಸ್ಪರ್ಧೆಗ್ಯಾರೀ ಹೊಸ ಸುಂದರಿ ಕಂಪು ?
ಬೇಡಿದರೆಲ್ಲ ಒಮ್ಮೆಗೆ ಪಿತಾಮಹನೆ ಉಳಿಸೊ ನಮ್ಮ
ನಸುನಗೆ ನಕ್ಕ ಬ್ರಹ್ಮ ಭುವಿಗೆ ನಿನ್ನ ಕಳಿಸಿದನಮ್ಮ ||

ಮಿಕ್ಕೆಲ್ಲ ಬಿನ್ನಹ ಗಣನೆ ಪರಿಗಣನೆ ಬಿಡು ಅನುಮಾನ
ವರ್ಣನೆ ಮಾಡುವ ಯತ್ನವೆ ನಿನ್ನ ಸೌಂದರ್ಯಕಪಮಾನ
ಉಪಮೆಗಳಿಗುಪಮೆ ಉಪಮಾನವಾದವಳಿಲ್ಲಿ ನೀನು
ಅಂದವಧಿಗಮಿಸೊ ರೂಪಾಲಂಕಾರ ಶೋಧ-ನಿರತ ನಾನು ! ||


– ನಾಗೇಶ ಮೈಸೂರು
19.09.2016

(Pictures from internet / Facebook)

00787. ಬಲ್ಬು ರಚನೆ…


00787. ಬಲ್ಬು ರಚನೆ…
____________________________________

ಲೈಟ್ ಬಲ್ಬಿನ ರಚನೆ ಹೇಗಿರುತ್ತದೆಂದು ಮಗನಿಗೊಂದು ಕವನ ಕಟ್ಟಿ ವಿವರಿಸ ಹೊರಟಾಗಿನ ಪಾಡು ಇದು. ನಿಮಗೂ ಏನಾದರೂ ಉಪಯೋಗಕ್ಕೆ ಬಂದೀತಾ ನೋಡಿ 😜😊


ಬಲ್ಬು ರಚನೆ ಬಹು ಸರಳ ಮಗನೆ
ಹೊರ ಕಾಣೊ ಕವಚ ಗಾಜಿನ ಮನೆ
ಒಳಗೆಲ್ಲ ತುಂಬಿದೆ ನಿರ್ವಾತ ಗಮನೆ
ಆಮ್ಲಜನಕವೆ ಇರದ ವಾತಾವರಣೆ ||

ಹೃದಯ ಭಾಗವೆ ಫಿಲಮೆಂಟು ಕಂದ
ಟಂಗುಸ್ಟನ್ನ ಬಲು ಗಟ್ಟಿ ಲೋಹ ಬಂದ
ಹರಿದರೆ ಕರೆಂಟು ಈ ಫಿಲಮೆಂಟಿಂದ
ಹೊತ್ತಿ ಬೆಳಕು ಶಾಖ ಬರುವ ಅನಂದ ||

ಗಾಜಿನ ಬೊಡ್ಡೆ ಫಿಲಮೆಂಟು ಜೋಡಿಸೆ
ಲೋಹ ಟೊಪ್ಪಿಯ ಕ್ಯಾಪು ಒಂದಾಗಿಸೆ
ಎಳೆದೊಂದು ತಂತಿ ಟೊಪ್ಪಿತಳ ತನಕ
ಮತ್ತೊಂದೆಳೆಯಪ್ಪಿಸಿ ಹೊಟ್ಟೆಯ ಸಖ ||

ಫಿಲಮೆಂಟು ಗ್ಲಾಸ್ಬಲ್ಬು ಮೆಟಲ್ಕ್ಯಾಪು
ಕ್ಯಾಪಿನ ಟಿಪ್ಪು ಸೇರೆ ಬಲ್ಬಿನ ಸೂಪು
ನವಮಾದರಿ ಹೊಸ ಫ್ಲೋರೋಸೆಂಟು
ಶಕ್ತಿ ಖರ್ಚು ವೆಚ್ಚ ಉಳಿತಾಯ ಗಂಟು ||

– ನಾಗೇಶ ಮೈಸೂರು

(Picture source: http://images.clipartpanda.com/light-bulbs-4ibd7j5ig.jpeg)

00679. ಧುತ್ತನೆ ಮಳೆ – ಆಶಾವಾದ


00679. ಧುತ್ತನೆ ಮಳೆ – ಆಶಾವಾದ
__________________________________

[In nilume on 29.04.2016: ಮಳೆ ನಿಲ್ಲದ ಹಾಗೆ ಸುರಿಯುತ್ತಿರಬೇಕು ಒಂದೇ ಸಮನೆ – ಭಾವೋತ್ಕರ್ಷದ ಮುಸಲಧಾರೆಯ ಹಾಗೆ.. ಅದೇ ನನಗಿಷ್ಟ ..( ಪ್ರಕೋಪಕ್ಕೆಡೆಗೊಡದ ಹಾಗೆ ಅನ್ನುತ್ತಿದ್ದಾನೆ ಮರೆಯಿಂದ ಡೊಂಕುತಿಮ್ಮ 😜 )]

ಧುತ್ತನೆ ಆರಂಭವಾದ ಮಳೆಯೊಂದು ತೆರೆದಿಟ್ಟುಕೊಂಡ ಬಗೆಯನ್ನು ಚಿತ್ರಿಸುತ್ತಲೆ, ಅದು ಸತತವಾಗಿ, ನಿರಂತರವಾಗಿ ಸುರಿಯುತ್ತಲೆ ಇರಬೇಕೆಂದು ಬಯಸುತ್ತದೆ ಕವಿಮನ; ನಿಂತ ಮಳೆ ಪಿಚ್ಚನೆಯ ಭಾವದ ಪ್ರತಿನಿಧಿಯಾಗಿ ನೀರವತೆಯನ್ನು ತುಂಬುವ ವಿಕಲ್ಪವಾದರೆ, ಸತತ ಸುರಿಯುವ ಮಳೆ ಆಶಾವಾದ ಸಂಕೇತವಾಗಿ ಕಾಣುತ್ತದೆ ಕವಿಯ ಕಣ್ಣಿಗೆ. ಅದು ‘ಧೋ’ ಎಂದು ಸುರಿಯುತ್ತಿರುವ ತನಕ ಕವಿ ಮನ ಗರಿ ಬಿಚ್ಚಿದ ಹಕ್ಕಿ – ಇದು ಕೇವಲ ಒಂದು ಪಾರ್ಶ್ವದ ನೋಟವಾದರೂ (ಮಳೆಯ ವಿಕೋಪ ಮತ್ತೊಂದು ಪಾರ್ಶ್ವ). ಅದರ ಆಲಾಪದ ತುಣುಕು ಈ ಪದ್ಯ.

ಧುತ್ತನೆ ಮಳೆ…
_____________________

ಎಲ್ಲಿತ್ತೋ ಮೋಡ
ಕಪ್ಪನೆ ಕಾಡ
ಕವಿದು ಮುಗಿಲು ಬೆಟ್ಟ ಗುಡ್ಡ ..
ಕಲ್ಲೆತ್ತರ ಕಟ್ಟಡ;
ಸಂಜೆಗತ್ತಲಿನ ನಾಡ ||

ಧುತ್ತನೆ ಮಳೆರಾಯ
ಸುರಿದ ಪ್ರಾಯ
ತೊಳೆದಾಗಸ ಮೋಡ ಖೆಡ್ಡ..
ಗುಡಿ ಕಟ್ಟಡ ನಡ;
ಕವಿಸುತ ಕತ್ತಲ ಗೂಡ ||

ಮಳೆ ಸದ್ದು ಅವಿರತ
ಹಿನ್ನಲೆ ಸಂಗೀತ
ಮಿಂಚು ಗುಡುಗಿನ ಹಿಮ್ಮೇಳ..
ವಾದ್ಯಗೋಷ್ಠಿ ತಾಳ;
ಸುಸ್ತಾಗದ ನಿಸರ್ಗದ ಬಹಳ ||

ನಿಲಬಾರದು ಸುರಿತವಿದು
ನಿಲದೆ ಮಳೆ ಸದ್ದು
ಅವಿರತ ಸುರಿತ ಆಶಾವಾದ..
ನಿಂತರೆ ಪಿಚ್ಚೆನಿಸಿದ ;
ಸುರಿಯುತಲೇ ಜೀವಂತಿಕೆ ಸದಾ ||

– ನಾಗೇಶ ಮೈಸೂರು

(picture source : http://e2ua.com/WDF-1783423.html)

00668. ರಾಜ್ ಇಲ್ಲದ ಕನ್ನಡವೆಂತು ?


00668. ರಾಜ್ ಇಲ್ಲದ ಕನ್ನಡವೆಂತು ?
___________________________

ಏನಪ್ಪಾ ಗತಿ ಕನ್ನಡ ?
ನಿನ್ನ ಹೆಸರಿಲ್ಲದಿದ್ದರೆ ಅಡ್ಡ
ನುಂಗಿ ನೀರು ಕುಡಿದು ಸಕಲ
ಕನ್ನಡ ಹುಡುಕಿದರೂ ಸಿಗದ ಕಾಲ..

ಕಾಲಾಡಿಸಲು ಬಂದವರು
ಜೀವಕಾಲವಿಲ್ಲೇ ಕಳೆವ ಜನರು
ಕಲಿತಾಡಲಿ ಕನ್ನಡನುಡಿ ಬೆರೆಯುತ್ತೆ
ನೋಡಲಿ ಸಾಕು ಸಿನಿಮಾಗಳೆ ಕಲಿಸುತ್ತೆ..

ಮಕ್ಕಳು-ಮರಿಗು ರೀತಿ
ಜೀವನಮೌಲ್ಯದ ಪಾಠ ನೀತಿ
ಬೇಕಲ್ಲವೆ ಬದುಕಿನಡಿಪಾಯ ಸೂತ್ರ
ತೋರಿಸಿ ಸಾಕು ರಾಜಣ್ಣನ ಜೀವನ ಚೈತ್ರ..

ಜನುಮ ದಿನ ಬರಿ ನೆಪ
ನಿತ್ಯ ಸಿನಿಮ ಹಾಡಲಿ ಜಪ
ನೋಡಿ ಕನ್ನಡ ಟೀವಿ ಚಂದದಲಿ
ಚಂದನ ಸುಗಂಧ ಕಸ್ತೂರಿ ಹರಡಲಿ..

ಬೇಡಿನ್ನೇನು ಸ್ಮರಣೆ ನೆನಪು
ಕನ್ನಡ ಮಾತಾಡಿದರದೆ ಕಂಪು
ನಾಡುನುಡಿ ಉಳಿಸೆ ಜೊತೆಗೂಡೆ
ಜತೆಯಾಗಿ ಸದಾ ಕನ್ನಡ ರಾಜನ ಹಾಡೆ..

– ನಾಗೇಶ ಮೈಸೂರು

00666. ಹನುಮ-ಭುವನ


00666. ಹನುಮ-ಭುವನ
_________________

 

ಧಾರಿಣಿ ದಿನ ಸಂಭ್ರಮಣ
ಹನುಮೋತ್ಸವ ಸಮ್ಮಿಲನ
ಸಂಜೀವಿನಿ ಹೊತ್ತವನ ಗುಣ
ಪೃಥ್ವಿಯಲ್ಲು ಅನುರಣ ದಿನ ||

ಅಪರಿಮಿತವಿಹ ಸ್ವಾಮಿ ಭಕ್ತಿ
ಬಿಡದೆ ಜಪಿಸೋ ರಾಮನುಕ್ತಿ
ಅದೇ ಅಪಾರ ತಾಳ್ಮೆ ವಸುಧೆ
ಸಹನೆಯಿಂದ ಸಹಿಸೋ ಶ್ರದ್ಧೆ ||

ಬಿಡನಾರನು ದೂಷಿಸೆ ಪ್ರಭುವ
ಹವಣಿಸಿದವರ ಹಣಿಸೊ ಭಾವ
ಮೀರಿಸಿ ಇಳೆ ಪೊರೆದಿಹಳು
ಮನ್ನಿಸಿ ಮಕ್ಕಳ ಅಟ್ಟಹಾಸಗಳು ||

ಮಾತೆಗಿತ್ತ ಮಾತಿಗೆ ಮಾರುತಿ
ಪ್ರಭುವೆದುರೆ ಕದನದ ಕೀರ್ತಿ
ಅಂಥ ಮಾತೆಯರ ಮಾತೆ ಭೂಮಿ
ಅವಳನಳಿಸೊ ಮಾನವ ಕಾಮಿ ||

ಅಖಂಡ ಶ್ರದ್ಧೆ ಭಕ್ತಿ ಭಾವ ಗಡವ
ಹೃದಯದೊಳಗೆ ಬಚ್ಚಿಟ್ಟ ರೂಪವ
ಬಗೆದು ತೋರದಿದ್ದರೂ ಸರಿ ಮರುಳೆ
ಭುವಿಯುಳಿಸೆ ಕರುಣೆ ತೋರುವಳೆ ||

– ನಾಗೇಶ ಮೈಸೂರು

(Picture source: http://www.indianastrology.com/festival/2016/hanuman-jayanti-20)

00645. ನೋವಿನ ಹಾಳೆಯಲಿ ನಗೆಯ ಶಾಯಿ..


00645. ನೋವಿನ ಹಾಳೆಯಲಿ ನಗೆಯ ಶಾಯಿ..
_______________________________

   
(picture source from: http://quotesberry.com/)

ನಂಬಿಕೆಗಳೆನ್ನುವ ವಿಚಿತ್ರ ಎಷ್ಟು ತರದಲ್ಲಿ ಪ್ರಭಾವ ಬೀರುತ್ತದೆ ನೋಡಿ. ನಿಜವೋ ಸುಳ್ಳೊ – ವರ್ಷದುಡುಕಿನ ದಿನ ಇಡಿ ವರ್ಷದ ಮುನ್ನೋಟದ ಪ್ರತಿಬಿಂಬ ಅನ್ನುವ ಮಾತು ನನ್ನಲ್ಲಂತೂ ಅಚ್ಚೊತ್ತಿದಂತೆ ನೆಲೆಸಿಬಿಟ್ಟಿದೆ. ಅದು ನಿಜವಾಗಿದೆಯೋ ಇಲ್ಲವೋ ಅನ್ನುವುದನ್ನು ಯಾವತ್ತೂ ತಾಳೆ ನೋಡಿರದಿದ್ದರು ಈ ದಿನ ಮಾತ್ರ ಆ ಭಾವ ಕಾಡಿಯೇ ತೀರುತ್ತದೆ.

ಅಂತಹ ಒಂದು ಗಳಿಗೆಯಲ್ಲೇ ಅನಿಸಿದ್ದು : ಇವತ್ತೊಂದು ಒಳ್ಳೆ ಕವನ ಬರೆಯಬೇಕು – ಅಂತ. ಹಾಗೆ ಬರೆದರೆ ವರ್ಷವೆಲ್ಲ ಒಳ್ಳೆ ಕವನಗಳೇ ಬರುತ್ತೆ ಅನ್ನೋ ತರ್ಕ ! ‘ಹುಚ್ಚಲ್ಲ ಬೆಪ್ಪಲ್ಲ ಇದು ಶಿವಲೀಲೆ’ ಅಂದುಕೊಂಡಿರಾ ? ನನಗೂ ಹಾಗೆ ಅನಿಸಿತು. ಕವಿತೆ ಬರೆಯೋದೇನೊ ಸರಿ – ಯಾವಾಗಲಾದರು ಬರೆಯಬಹುದು – ಆದರೆ ಒಳ್ಳೆಯ ಕವಿತೆ ? ಬರೆಯೋವಾಗ ಯಾರಿಗೆ ತಾನೇ ಗೊತ್ತಿರುತ್ತೆ ? ಅದರಲ್ಲೂ ಬರೆದವರಿಗೆ ಎಲ್ಲಾ ಮುದ್ದು – ಓದೋ ಜನರು ಮಾತ್ರ ಎಳ್ಳೋ ಜಳ್ಳೊ ಹೇಳೋಕೆ ಸಾಧ್ಯ. ಅದೆಲ್ಲಾ ನೆನೆದು ನಗೂನು ಬಂತು..

ಆದರೆ ‘ಕವಿ ಪಿತ್ತ ಕಪಿ ಚಿತ್ತ’ ಅನ್ನೋ ಹಾಗೆ ಬರೀಬೇಕು ಅಂತ ಮನಸಿಗೆ ಬಂದ್ಮೇಲೆ ಬರೀದೆ ಇದ್ರೆ ತಿಂದನ್ನ ಅರಗಲ್ಲ. ಅದಕ್ಕೆ ಆಗಿದ್ದಾಗಲಿ ಅಂತ ಒಂದು ಹೊಸೆದೆ ಬಿಟ್ಟೆ ನೋಡಿ !

ಒಳ್ಳೇದೋ ಅಲ್ವೋ ತಲೆ ಕೆಡಿಸ್ಕೊಳ್ದೆ ಹಾಕೂ ಬಿಟ್ಟೆ ಓದೋರ ಮಡಿಲಿಗೆ ! ಇನ್ನು ‘ಮಾಡುವವನದಲ್ಲ ಹಾಡು ಹಾಡುವವನದು’😊

– ನಾಗೇಶ ಮೈಸೂರು

ನೋವಿನ್ಹಾಳೆಗೆ ನಗೆಯ ಶಾಯಿ ..
_______________________________

ನೋವಿನ್ಹಾಳೆಯಲಿ ನಗೆಯ ಶಾಯಿ
ಉಕ್ಕುಕ್ಕಿ ಬರುತಲದೆ ಮನಕೆ ಹಾಯಿ
ಮಾತಾಗಿ ಅರಳಿ ಹೂ ಹಣ್ಣು ಕಾಯಿ
ಮನಸಾಗಿ ಅರಳೆ ಕಟ್ಟಿ ನೋವ ಬಾಯಿ ||

ಯಾರಿಲ್ಲಿ ಶುದ್ಧ ? ಘನವೇತ್ತ ಪ್ರಬುದ್ಧ
ಎಲ್ಲರಡಿಯ ಬುಡದೆ ಕಾಡೊ ಪ್ರಕ್ಷುಬ್ದ
ಧರಿಸಿಲ್ಲವೇನು ಮುಖವಾಡ ತೊಗಲು
ನುಂಗಿತೆಲ್ಲ ನೋವ ಹೊಣೆ ಹೊತ್ತ ಹೆಗಲು || ನೋವಿ ||

ನಕ್ಕು ನಲಿದರೆಂದು ಮೋಸ ಹೋಗಲೆಂತು
ಮುಚ್ಚಿಟ್ಟ ಭಾವ ಬಿಚ್ಚೋತನಕ ಕಾಣಿಸದು
ತೆರೆತೆರೆಗಳಾಗಿ ಮರೆ ಮಾಡಿ ಬದುಕ ಪರಿ
ಸಜ್ಜನಿಕೆ ಸೌಜನ್ಯ ದಿರುಸಾಗಿ ವೇಷ ಬರಿ || ನೋವಿ ||

ನೋವಿಂದ ತಾನೇ ಬರುವಂತೆ ನೆತ್ತರು
ಹೆದರಿಸಿದ ಗಳಿಗೆ ದಾರಿಗ್ಹುಡುಕುವರು
ಮಾಯವಾಗೆ ಭೀತಿ ಬೀಳಬೇಕು ನೀರಿಗೆ
ಈಜುತಲೆ ಅಳ ತೇಲಿಸಲದೆ ಮುಳುಗೆ || ನೋವಿ ||

ಕಲಿತದ್ದೆಲ್ಲ ಸರಿತಪ್ಪುಗಳ ಸಮೀಕ್ಷೆ
ಆಗಲೆಂದೇ ತಾನೇ ಮಾಡುವ ಪರೀಕ್ಷೆ
ನೋವಲ್ಲೂ ನಕ್ಕವರು ಗೆದ್ದೇ ತೀರುವರು
ಗೆದ್ದಾಗ ವಿನಯದಲಿ ನೋವಿಗರ್ಪಿಸುವರು || ನೋವಿ ||

– ನಾಗೇಶ ಮೈಸೂರು

00605. ಇಂದಾದರು ಬಿಡಿ ಜಗವ…!


00605. ಇಂದಾದರು ಬಿಡಿ ಜಗವ…!
_______________________

(UNESCO identified March 21st as world poetry day – https://en.m.wikipedia.org/wiki/World_Poetry_Day. This poem is to celebrate the same – as a response to the call in 3K)


ಕವಿ, ಕವಿಯಿತ್ರಿಗಳಿಗೆಲ್ಲ
ಒಕ್ಕೊರಲ ಮನವಿ
ಬೇಡ ಬಿಟ್ಟುಬಿಡಿ ಇದೊಂದು ದಿನ..
ಕಾಡಬೇಡಿ ಬರೆದು ಮತ್ತವೇ ಕವನ !

ವಿಶ್ವ ಕವನ ದಿನವೆಂದು
ಜಾಗತಿಕ ಸಾರ್ವತ್ರಿಕ ರಜೆ
ಕೊಟ್ಟಿದೆ ಜಗದೆಲ್ಲ ಕವಿ ಜಾಣರಿಗೆ
ಕೊರೆಯದಿರಿದೊಂದು ದಿನ ತಪ್ಪಲಿ ಬೇಗೆ !

ನೋಡಿರಿ ಸುತ್ತಮುತ್ತ
ಇಂದೊಂದು ದಿನವಾದರೂ
ಜನಜಂಗುಳಿ ಜಾತ್ರೆ ಅಳುನಗು ಸುಖದುಃಖ
ಮಾಡಿರಿಂದಾದರು ಅಡಿಗೆಮನೆಯತ್ತ ಒಮ್ಮೆ ಮುಖ !

ಹೊರಟುಬಿಡಿ ಕೈಲ್ಹಿಡಿದು
ಚೀಲ ಮಾರುಕಟ್ಟೆ ದಿನಸಿಯಂಗಡಿ
ಕೊಳ್ಳಿ ಮರೆವಿಲ್ಲದೆ ಚೀಟಿ ಹಂಗಿಲ್ಲದೆ ಕೂಡ..
ಮನೆಯಾಕೆ ಬೆರಗಾಗಿ ನಕ್ಕು ಮೂಗಿಗೆ ಬೆರಳಿಡ !

ನಾನಂತು ಬರೆಯೆ ಕವನ
ಇಂದು ಬರೆದುದೂ ಬರಿ ಕಥನ !
ಓದದಿರಿ ಓದಿದರೂ ಆದಂತೆ ದೇವರ ಪೂಜೆ
ಮತ್ತೇನನು ಓದದಿರಿ ಇಂದು ಹಾಕಿಬಿಡಿ ಪೂರ್ತಿ ರಜೆ !

– ನಾಗೇಶ ಮೈಸೂರು

https://www.facebook.com/l.php?u=https%3A%2F%2Fen.wikipedia.org%2Fwiki%2FWorld_Poetry_Day&h=pAQFXksc7AQF3atJrH7ZlKfAjx_EVQq4XG0rnr6Vk9DjqtA&enc=AZP27LWM21VBtC3vMXzgX4c_03ZHWWaNlYCDtR795LEJ0M92eOwFw5BE-8ILEHDK2QBRPFI6dS8M4SRQKCCmlqOXGvA3v_s80mDo_f4_r5ntjwk8vrmbwr4ZXGp7-ZH1J4HPZGoJKQZRzaK0A1KPJieob8B3cysSX523hgvtbJKGjZCavT13Tz2bX01zdh4Dv4o&s=1

00511. ಪ್ರೇಮಾವತಾರ….


00511. ಪ್ರೇಮಾವತಾರ….
_______________________________

ಪ್ರೀತಿ ಪ್ರೇಮದ ಯಾವುದೊ ಮಜಲನ್ನು ದಿಟ್ಟಿಸಿದರು ಬರಿ ಅದೆ ಅವತಾರದ ವಿವಿಧ ಆಯಾಮಗಳು.. ಹುಚ್ಚೆಬ್ಬಿಸಿ ಕುಣಿಸೊ ಆನಂದ ಲಹರಿ, ರೊಚ್ಚಿಗೆಬ್ಬಿಸೊ ಕ್ರೋಧದ ನಗಾರಿ, ನೋವಿನ ಅಚ್ಚೆ ಹಾಕಿ ಮಿಡುಕಾಡಿಸೊ ಯಾತನೆಯ ದಾರಿ, ನಿರ್ಲಿಪ್ತತೆಯಲಿ ಕವಚದೊಳಕ್ಕೆ ಮುದುಡಿಸಿ ಅಂತರ್ಮುಖಿಯಾಗಿಸೊ ಸವಾರಿ – ಅಥವಾ ಇವೆಲ್ಲದರ ಮಿಶ್ರಣವನ್ನು ಗಳಿಗೆಗೊಂದರಂತೆ ಕಟ್ಟಿಕೊಡುತ ಸದಾ ಅನಿಶ್ಚಯತೆಯ ತೊಟ್ಟಿಲಲಿ ತೂಗಾಡಿಸಿ ದಿಗ್ಭ್ರಮೆ ಹಿಡಿಸುವ ಮಾಯಾಲಹರಿ. ಅದರ ಹಲವಾರು ಮುಖಗಳನ್ನು ಹಿಡಿದಿಡುವ ಸಂಧರ್ಭ, ಸಂಘಟನೆಗಳು ಅಸಂಖ್ಯಾತವಾದರು, ಮೂಲದ ತಪನೆಯ ಬೇರು ಮಾತ್ರ ಒಂದೆ. ಪ್ರೀತಿಯೆಂಬ ಸಂವೇದನೆಯ ಪ್ರಬಲ ಶಕ್ತಿಯನ್ನು ಎತ್ತಿ ತೋರಿದಷ್ಟೆ ಸಹಜವಾಗಿ ಅದರ ಆ ಶಕ್ತಿಯೆ ಕುಗ್ಗಿಸುವ ದೌರ್ಬಲ್ಯದ ಪ್ರತೀಕವಾಗುವ ವಿಪರ್ಯಾಸವಾದರು, ಅದೇ ಪ್ರೀತಿಯ ಜಗವನ್ನಾಳುವ ಮಾಯಶಕ್ತಿಯೆನ್ನುವುದಂತು ನಿಜ.

ಅಂತದ್ದೊಂದು ಆಯಾಮ, ಅವತಾರದ ಅಗಣಿತ ಸಂಗ್ರಹಕ್ಕೆ ಮತ್ತೊಂದು ಸೇರ್ಪಡೆ ಈ ಪ್ರೇಮ ಪದ 😊

ಸಹಿಸುತ್ತಾಳಷ್ಟೆ, ಸಹಿ ಮಾಡದ ಅವಳ ರೀತಿ
ಬಲವಂತಕೆ ನಟಿಸುತ, ನಿರಾಳ ಕೊಡದೆ ಪ್ರೀತಿ
ಅವನೆದೆಯಲ್ಲಿ ಮಿಡಿದು, ಕಾಡುತ ತಡಕಾಡಿಸಿ
ತುಂಬಿ ತುಳುಕಿದರು, ದೂರದೆ ನಿಂತ ಮನದರಸಿ ||

ಬರಿದೆ ಭೀತಿಯದಷ್ಟೆ, ಕಳೆದುಹೋಗುವ ಸಖ್ಯ
ಗೊತ್ತವನಿಗೆ ಬೇಕು ಭರ್ತಿ, ಪ್ರೀತಿಯ ಸಾಂಗತ್ಯ
ಕೊಡುವಾಸೆಗೆ ನೂರು, ಅಡೆತಡೆ ವಾಸ್ತವ ಗೋಡೆ
ಕೊಡಲಾರೆನೆಂದು ಕಳಚೇ, ಬಿಡದ ಮನದ ಗೂಡೆ ||

ಅವನದೇನೊ ಅವಸರ, ಕಳುವಾಗಿ ಕಾಲದ ಸಂಚಿ
ಹುಡುಕಾಟದ ಬಳ್ಳಿ, ತೊಡರಿದ್ದೆ ತಡವಾಗಿ ತರಚಿ
ಹುಟ್ಟಿದ ಕಾಲಕೆ, ತಪ್ಪಿನ ಆರೋಪ ವಿಧಿಗೆ ಶಾಪ
ಆದರು ಬಿಡದ ಮೋಹ, ಬಿಡದಲ್ಲ ಅವಳದೆ ಜಪ ||

ಮುನಿಸಿ ದಣಿಸಿ ಕಂಗೆಡಿಸಿ, ಓಗೊಟ್ಟ ಗಳಿಗೆಗಳು
ತೇಪೆ ಹಾಕಿದರೇನು, ಮೂಲ ಪ್ರೀತಿಗಲ್ಲಿಲ್ಲ ಒಕ್ಕಲು
ಬರಿ ಸಹಿಸುವ ಬಂಧ, ನಿಜ ಪ್ರೀತಿಯಾಗದ ನೋವು
ಒಂದು ಕೈ ಚಪ್ಪಾಳೆಯೆಲ್ಲಿ, ಚಿಟುಕಿಯದೆ ಕಲರವವು ||

ನೋಯಿಸೆ ಮನಬಾರದು, ನೋಯಿಸದೆ ಬಿಡದು ಪ್ರೀತಿ
ಪ್ರತಿ ಕ್ಷಣ ಮನ ವಿಹ್ವಲ, ಕೈತುತ್ತು ಬಾಯಿಗಿಲ್ಲದ ಮಿತಿ
ಪ್ರತಿ ನಿರೀಕ್ಷೆಗು ಸೋಲು, ಪರೀಕ್ಷೆಯಾಗಿ ಶೂನ್ಯದ ಪ್ರವರ
ಸಹಿಸಿ ನಟಿಸುವ ನೋವ, ತೆರವಾಗಿಸೊ ಸರಿಯವತಾರ ||

– ನಾಗೇಶ ಮೈಸೂರು

00480. ದಾಟಿಸಲೇಕದೆ ನೋವನು..?


00480. ದಾಟಿಸಲೇಕದೆ ನೋವನು..?
_______________________

  
(picture source: http://sufiuniversity.org/wp/wp-content/uploads/2013/04/broken-heart.jpg)

ಭೂತಕನ್ನಡಿಗಿಣುಕಿ
ನೋಡಲೆಲ್ಲೆಡೆ ಅಗೆದು
ಎಲ್ಲರ ಕನ್ನಡಿಯೂ ಚೂರು
ತುಣುಕಲದೆ ನೋವಿನ ಬಿಂಬ..

ಯಾರದೊ ಬೆನ್ನಲ್ಲಿ
ಏನೊ ಆಲಾಪದ ಸದ್ದು
ಹಿಡಿಯಹೋದ ಆರಾಧನೆ
ತಳ್ಳಿ ಹೋದ ಕತೆಗಳ ಯಾತನೆ..

ಅದೇ ಮಾಯಾಜಿಂಕೆ
ತಳ್ಳಿಸಿಕೊಂಡವರದದೆ ಕಥೆ
ಬೆನ್ನಿಗೆ ಬಿದ್ದವರ ತಳ್ಳುವರೇಕೊ ?
ತಿಂದ ನೋವನೆ ಬಡಿಸುವ ಸರದಿ…

ಯಾಕರಿವಾಗದಲ್ಲಿ
ತಡಕಾಡಿಸುವ ವೇದನೆ
ವಿಷಾದ ಖೇದ ಸಂಕಟ ಕೂಗಿ
ಅನಾಥವಾದರು ಬರದಲ್ಲ ಕರುಣೆ..

ಇದೇನು ಕಾಲದ ತಕ್ಕಡಿ ?
ತೂಗುಯ್ಯಾಲೆ ಏರುಪೇರಾಗಿ
ಬೇಕಿದ್ದಾಗ ಸಿಗದ ಚಿತ್ತದ ಮೊತ್ತ
ಬೇಡೆನಿಸಿದಾಗ ಕಾಲಡಿ ಸಿಕ್ಕಿ ಕಾಡುತ್ತ..

00479. ನೆಗಡಿ ಸಾರ್, ನೆಗಡಿ..


00479. ನೆಗಡಿ ಸಾರ್, ನೆಗಡಿ..
_______________________

(Published in Suragi – 28.01.2016 :http://surahonne.com/?p=10711)

  
(Picture source: https://en.m.wikipedia.org/wiki/File:Canine-nose.jpg)

ಮೂಗು ಕಟ್ಟಿ ಸೊಂಡಿಲ
ಭಾರ ಮುಖದ ಮೇಲಾ
ಯಾಕೆ ಬಂತೀ ನೆಗಡಿ ?
ಚಳಿರಾಯನೊಡನಾಡಿ.. ||

ಮಾತಾಡಿಕೊಂಡಂತೆ ಜೋಡಿ
ಸುರಕ್ಷೆಯ ಪದರ ಜರಡಿ
ಹಿಡಿದರು ಏರಿತೇ ಮಹಡಿ..!
ಶಿರದಿಂದುಂಗುಷ್ಠ ಗಡಿಬಿಡಿ ||

ಗಂಟಲಿತ್ತಲ್ಲಾ ನಿರಾಳ ..
ಕಂಬಿಯೊಳಗೇನ ತುರುಕಿದರಾ ?
ಕಟ್ಟಿಕೊಂಡಂತೆ ಗಷ್ಠ ಕಸಿವಿಸಿ
ದೊಡ್ಡಿ ಬಾಗಿಲಿಗೆ ಬೀಗ ಜಡಿಸಿ ||

ಉಗುಳ ನುಂಗಲಿಕ್ಕಿಲ್ಲ ಸರಾಗ
ಕೆಮ್ಮುತೆ ಉಗುಳಬಿಡದಾ ರೋಗ
ಮುಖದೆ ಮೂಗುಂಟೆ ಅನುಮಾನ
ಕಾಟಕೆ ತಾನಾದಂತೆ ಅವಸಾನ ||

ಬಿಸಿ ಕುಡಿದರು ಬಿರುಸೇಕೊ
ತಂಪು ಮುಟ್ಟಲೆ ಭೀತಿಯುಕ್ಕೊ
ಮುರಿದು ಕೂರಿಸಿತೆಲ್ಲಾ ಸೊಕ್ಕು
ಸೀನುತೆ ಬಾಲ ಮುದುಡಿದ ಬೆಕ್ಕು ||

00477. ನಮ್ಮ ಅಂಗಾಂಗಗಳ ಒಳನೋಟ..


00477. ನಮ್ಮ ಅಂಗಾಂಗಗಳ ಒಳನೋಟ..
_________________________________________

ಶಾಲೆಯಲಿದ್ದಾಗ ವಿಜ್ಞಾನದ ತರಗತಿಯಲ್ಲಿ ಅಂಗಾಂಗಗಳನ್ನೆಲ್ಲ ಚಿತ್ರಪಠದಲ್ಲಿ ತೋರಿಸಿ ವಿವರಿಸುತಿದ್ದರು ಟೀಚರುಗಳು.. ಆಗೆಲ್ಲ ಅದೆಷ್ಟು ಅರ್ಥವಾಗುತ್ತಿತ್ತೊ ಬಿಡುತ್ತಿತ್ತೊ. ಆ ಭಾಗಗಳ ಹೆಸರುಗಳಂತು ನೆನಪಿಡಲೆ ಆಗದಷ್ಟು ಕಠಿಣ.. ಆದರು ಆ ಚಿತ್ರಗಳ ಸಮಗ್ರ ರೂಪ ಮಾತ್ರ ಕಣ್ಣಿಗೆ ಕಟ್ಟಿಕೊಳ್ಳುತ್ತಿದ್ದುದು ನಿಜ – ಯಾವಾವುದೊ ಹೋಲಿಕೆಯ ರೂಪದಲ್ಲಿ. ಎಲೆಯಾಕಾರದ ಹೃದಯ, ಕೊಂಬೆಯಾಕಾರದ ಶ್ವಾಸಕೋಶ, ಅವರೆ ಬೀಜದಂತಹ ಮೂತ್ರಪಿಂಡ ಇತ್ಯಾದಿ. ಅವೆಲ್ಲವನ್ನು ಒಗ್ಗೂಡಿಸಿ ಬರೆದ ಅಂಗಾಂಗಗಳ ಸಮಷ್ಟಿತ ಕವನವಿದು.

  
picture source from wikipedia (https://en.m.wikipedia.org/wiki/File:View_of_Viscera_Page_82.jpg)

ಅಂಗಾಂಗದ ಚಿತ್ರಪಟ ನೋಟ
______________________________

ಪಂಜರದ ಗಿಣಿ ತೀಟೆ
ಮುಚ್ಚಿಟ್ಟ ಭದ್ರದ ಕೋಟೆ
ಅಸ್ತಿಪಂಜರ ಕಟ್ಟಿದ ಒಗಟೆ
ಶ್ವಾಸಕೋಶ ಹೃದಯ ಒಳಗಿಟ್ಟೆ ||

ಎಲೆಯಾಕಾರದ ತಟ್ಟೆ
ವಿಶಾಲ ಮನಸೇ ಚಪ್ಪಟ್ಟೆ
ಹೃದಯ ಮಾಡಿಹರೆ ನಿಪ್ಪಿಟ್ಟೆ
ನಿಜರೂಪ ಮುಷ್ಠಿಯ ಹಿಡಿತದಷ್ಟೇ ||

ಮರದ ಕೊಂಬೆ ಕವಲು
ಶ್ವಾಸಕೋಶದಲಿ ಅಮಲು
ಸರಾಗ ಉಸಿರಾಗುವ ಸೊಲ್ಲು
ನಿಂತ ದಿನವೆ ಜೀವದ ಶಿಕ್ಷೆ ಗಲ್ಲು ||

ಊದುಗೊಳಬೆ ನೇರ
ಕಡ್ಡಿಯ ಅನ್ನನಾಳ ದರ
ಆಹಾರ ಗಂಟಲಿಗಿಳಿಸೆ ಚಾರ
ಜಠರ ತಲುಪಿಸೊ ಅವತಾರ ತರ ||

ಪಿತ್ತಜನಕದ ಹುತ್ತ
ನೆತ್ತಿಗೇರಿಸುವ ಕ್ಷಣ ಪಿತ್ತ
ಕಲ್ಲು ಸೇರಿದರೆ ಕುಣಿಕುಣಿತ
ಹೊಟ್ಟೆನೋವಿಗೆ ತೆಗೆದೆಸೆವ ಪಿತ್ತ ||

ಅಣಬೆಯಾಕಾರ ಛತ್ರಿ
ಎಂಟು ಭಾಗಗಳ ಸಾವಿತ್ರಿ
ಪ್ರತಿ ಭಾಗಕು ಹೆಸರು ಖಾತ್ರಿ
ಕತ್ತರಿಸಿದರು ಬೆಳೆವ ಯಕೃತ್ತೆ ಬಿತ್ತ್ರಿ ||

ಕಾಳಿನಾಕಾರದ ಜೋಡಿ
ಮೂತ್ರಪಿಂಡದವಳ ಲೇವಡಿ
ಕೈಯ ಕೊಟ್ಟರಿವಳು ಕಾವಡಿ
ಮಧುಮೇಹ ಕಲ್ಲಾಗುವಳಿ ಲೌಡಿ ||

ಬಗಲಿನ ಚೀಲದ ತಟ್ಟೆ
ಪೀಪಿಯ ಜೋಳಿಗೆ ಹೊಟ್ಟೆ
ಜೀರ್ಣವಾಗದಿರೆ ಸರಿ ಒಗಟೆ
ಜನಿತರಿಂದ ಜರಠರ ಜಠರ ಕೆಟ್ಟೆ ||

ಕಟ್ಟು ಹಾಕಿದ ಟೀವಿ
ಉದ್ದದ ಕರುಳಿನ ಬಾವಿ
ಸಿಂಬಿ ಸುತ್ತಿಟ್ಟ ಹಾವೆ ನೀವಿ
ಸೆಟೆದು ಹೆಡೆಯೆತ್ತಿ ತುದಿ ಕೋವಿ ||

ಹೀಗೆಲ್ಲ ಅಂಗಾಂಗ ಸಂಗ
ಸೇರಿದ ಯಕ್ಷಗಾನ ಪ್ರಸಂಗ
ದೇಹವೊಂದರ ನಡೆಸೊ ಯಾಗ
ಸರ್ವಾಂತರ್ಯಾಮಿಯ ಅದ್ಭುತ ಜಗ ||

– ನಾಗೇಶ ಮೈಸೂರು

00476. ಸಹಜೀವನ ಸಹನ – ಸೊಳ್ಳೆ ನೊಣ ಪುರಾಣ..! (ಮಕ್ಕಳಿಗೆ)


00476. ಸಹಜೀವನ ಸಹನ – ಸೊಳ್ಳೆ ನೊಣ ಪುರಾಣ..!(ಮಕ್ಕಳಿಗೆ)

_______________________________________ 

  

(Picture source from : https://en.m.wikipedia.org/wiki/File:Aedes_aegypti_E-A-Goeldi_1905.jpg)

  
(Picture sourc from : https://en.m.wikipedia.org/wiki/File:Hooke-bluefly.jpg)

ಈ ಭೂಮಂಡಲದಲಿ ಎಲ್ಲಾದರೂ ಸರಿ, ಬಾಳ್ವೆ ನಡೆಸಲು ಬೇಕಾದ ಅತಿ ಕನಿಷ್ಟ ಅರ್ಹತೆಯೆಂದರೆ – ಸಹಜೀವನಕೆ ಹೊಂದಾಣಿಕೆಯಾಗಬಲ್ಲ ಸಹನೆ. ಈ ಸಹಜೀವನ ಮನುಜ – ಮನುಜ ಮಾತ್ರವಲ್ಲದೆ, ಪ್ರಾಣಿ, ಪಕ್ಷಿ, ಕ್ರಿಮಿ-ಕೀಟಗಳಲ್ಲು ಕಂಡುಬರುವ ಹಾಗೆ, ನಾಗರೀಕತೆಯ ಸೊಂಕಿನಿಂದಾಗಿ ಮನುಜ ಮತ್ತು ಗಿಡ,ಮರ, ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳ ನಡುವೆಯು ಇರಲೇಬೇಕಾದ ಅಗತ್ಯದ ಕುರಿತು ಆಡಿಕೊಳ್ಳುವ ಕವನ – ಈ ಪದ್ಯ.

ಈ ನವ ಜೀವನ
ಸಹಜೀವನ ಸಹನ
ಸಹನೆಯೆ ಜೀವನ ಗಾನ
ಕ್ರಿಮಿ ಕೀಟ ಜಂತು ಜತೆಗಾಹ್ವಾನ ||

ಸೊಳ್ಳೆ ನೊಣಗಳ ಕಾಟ
ಬೇಡವೆಂದರೂ ಬರುವಾ ನೆಂಟ
ಹೊತ್ತು ಬಾರೊ ರೋಗದ ತರಲೆ ಕಂಟಕ
ಸ್ವಚ್ಚವಿಡಬೇಕು ಮನೆ ಮಠ ಆಗೆ ನಿರಾತಂಕ ||

ನೆಲಗಿಲ ಶುದ್ಧ ಜಲ
ವರೆಸುತ ಕ್ರಿಮಿ ಕೀಟಗಳ
ಇಟ್ಟರೆ ಕನ್ನಡಿಯಂತೆ ಒಳಗೆ ಹೊರಗೆ
ಹತ್ತಿರ ಸುಳಿಯದ ಸೊಳ್ಳೆ ನೊಣಗಳೆ ಕೊರಗೆ ||

ಹೀಗೆಷ್ಟೋ ಸಹವಾಸಿಗಳು
ಬಾಡಿಗೆ ಕೊಡದ ಸಹವರ್ತಿಗಳು
ಸಮರಸ ಜೀವನದ ಪಾಠ ಕಲಿಸೊ ಐಗಳು
ಸಹಜೀವನ ಸಹನೆಗೆ ಅಡಿಪಾಯವಿಡುವ ಕೈಗಳು ||

—————————————————————–
ನಾಗೇಶ ಮೈಸೂರು

00471. ಧೂಮ-ಸಾಹಿತ್ಯ…!


00471. ಧೂಮ-ಸಾಹಿತ್ಯ…!
_____________________ 

  

ಭೂಮ್ಯಾಕಾಶಾಂತರ್ಗತ ಕವಲೆ
ನಾನಾಕಾರ ಹಾಹಾಕಾರ ತಿರುಳೆ
ದೇಹ ಹೋಮ ಕುಂಡವಾಗಿ
ಸಿಗರೇಟನು ಹಚ್ಚಿತೆ ಅಗ್ನಿ?

ಕೈ ಬಾಯಿಯ ಜುಗಲ್ ಬಂಧಿ
ಬಿಟ್ಟು ಬಿಡದೆಲ್ಲ ಸಂದಿ ಗೊಂದಿ
ಪುಸು ಪುಸು ಬುಸು ಬುಸು ಸರ್ಪ
ನುಗ್ಗಿದ ಕಡೆಯೆಲ್ಲಾ ಒಣ ದರ್ಪ..!

ಗುರುತ್ವವನೆ ಬೆಚ್ಚಿಸೊ ಬಯಲೆ
ನಾನಾ ನರ್ತನ ಮೇಲೇರಲೆ
ಪಿಶಾಚ ರೂಪ ಕರಿ ನೀಲ ಬಿಳುಪ
ಕಲಸಿದ್ದೆ ಹಗುರ ಕಾಡೆ ಮಾಲೆ!

ಕೆಮ್ಮಿದ್ದರು ದಮ್ಮಿರಬೇಕು ಪಕ್ಕ
ಶೈಲಿ ವಿನ್ಯಾಸಗಳ ರಂಗಿನ ಸುಖ
ಹೇಳಿದ ಮಾತ ಕೇಳದ ಸಂಸಾರ
ಸುಟ್ಟರು ವಿಧೇಯ ಇವನೊಂಥರ!

ಬೆಚ್ಚಗಿರಿಸುವನೊ ಕೊಚ್ಚುವನೊ
ಒತ್ತಡಗಳನಳಿಸುವ ಕೊರಮನೊ
ಹಂಗಿಗೆ ಬಿದ್ದರೆ ಅವನದೆ ರಾಜ್ಯ
ರಂಗಿಲ್ಲದ ಹೊಗೆಯಡಿ ದಾಸ್ಯ!

ಜತೆಗಾರರ ಜತೆ ಸಖ್ಯ ಸುಖ
ಕುಡಿತ ಕುಣಿತ ಜೊತೆ ಪಾನಕ
ಒಂದನೊಂದು ಸೇರಿಸುವ ಚೊಕ್ಕ
ಹೆಣ್ಣೊಂದು ಸಿಕ್ಕೆ ಮುಗಿಯಿತೆ ಲೆಕ್ಕ!

ಬರಿ ಕೂರಲಾಗದ ಚಡಪಡಿಕೆ ಗುದಿ
ಕೈ ಹಿಡಿಯಬೇಕೆ ಸಿಗರೇಟಿನ ತುದಿ
ಆರಂಭ ಶೋಕಿ ಸೇದಲಿರದಾ ಅಗತ್ಯ
ಸೇದಿಟ್ಟ ದೇಹ ಸಿಗರೇಟಿನ ಸಾಹಿತ್ಯ!

– ನಾಗೇಶ ಮೈಸೂರು
(ಶಾಸನ ವಿಧಿಸಿದ ಎಚ್ಚರಿಕೆ : ಧೂಮಪಾನ ಆರೋಗ್ಯಕ್ಕೆ ಹಾನಿಕರ)
(picture: A reproduction of a carving from the temple at Palenque, Mexico, depicting a Mayan priest smoking from a smoking tube – Picture and information courtesy from Wikipedia @ – https://en.m.wikipedia.org/wiki/File:Mayan_priest_smoking.jpg)
ನಾಗೇಶ ಮೈಸೂರು, Nagesha mysore, Kannada Poems, Singapore
ಲೇಖನ ವರ್ಗ (Category): ಕಾವ್ಯ ಮತ್ತು ಕವನ

00470. ಕುಡಿದ ಕವಿ ತೊದಲಾಟ…


00470. ಕುಡಿದ ಕವಿ ತೊದಲಾಟ…
_________________________

  
ಕುಡಿದು ಮರೆಯುವ ಸೊಗಸು
ಭ್ರಮೆ ಲೋಕದಡಿ ಗುಣುಗುಣಿಸು
ಮೈ ಮರೆಸೆಲ್ಲ ತರ ಮುನಿಸು
ತೊದಲು ಮಾತಾಗಿ ಸ್ಪುರಿಸು..

ಕವನೆ ತಾನೆ ಮತ್ತಿನ ಮದಿರೆ
ಜತೆ ನೀಡೆ ಬೇಡವೆ ಮದಿರೆ ?
ಗುಟುಕರಿಸೆ ಹನಿ ಮುಖ ಕಿವುಚಿ
ಹುಳಿ ಕಹಿ ಒಳಗೇನೊ ತಿರುಚಿ ..

ಹೊಕ್ಕಂತೇನೊ ಬಿಸಿ ಬುಗ್ಗೆ
ಉಕ್ಕಿದಂತೆ ಸುಡುಬೆಂಕಿ ನುಗ್ಗೆ
ಬೆಚ್ಚನೆಯಾಟದಲೇನೊ ಹಗುರ
ಹೂವಾಗಿ ಮೇಲೆದ್ದಂತೆಲ್ಲ ಭಾರ..

ಅದು ಭೌತ ಶಾಸ್ತ್ರದ ನಿಯಮ
ಎರಡಕಿಲ್ಲ ಒಂದೆ ತಾಣದ ಕರ್ಮ
ಒಳಗಿಳಿದಂತೆ ಮದಿರೆಯ ತಳ್ಳಾಟ
ಕವಿತೆಯಾಗಿ ಹೊರಬೀಳೊ ಕಳ್ಳಾಟ..

ಮದಿರೆಗು ಕಾವ್ಯಕು ಅವಿನಾಭಾವ
ನಂಟೇನೊ ಗಂಟು ಹಾಕಿ ಸುಶ್ರಾವ
ಬಿಸಿರಕ್ತಸ್ರಾವ ಹನಿಯಾಗುತ ಪದ
ಕೊರೆದೊ ಕುಡಿದೊ ನೀಡುತ ಮುದ..

00469. ಹನಿಯ ವ್ಯರ್ಥಾಲಾಪ..


00469. ಹನಿಯ ವ್ಯರ್ಥಾಲಾಪ..
_________________________ 

ಬೊಗಸೆ ಪ್ರೀತಿ ಕೇಳಲಿಲ್ಲ
ಬಯಸಿದ್ದು ತೊಟ್ಟಿಕ್ಕಿದ ಮಳೆಹನಿ
ತೊಟ್ಟು ತೊಟ್ಟೆ ಹನಿದು ನೆಲಕೆ
ಸೇರುವ ಹನಿಯೂ ದಕ್ಕದಲ್ಲ..

ಧಿಕ್ಕರಿಸಿ ಉದುರಿದ ಹನಿ ವ್ಯರ್ಥ
ನೆಲಕಚ್ಚುತ ಕೊಚ್ಚೆ ರಾಡಿ ಕೆಸರು
ಸಿಕ್ಕಷ್ಟನು ತೀರ್ಥವಾಗಿಸೆ ರಚ್ಚೆ
ಹಿಡಿದರು ಯಾಕೊ ಕರುಣೆಯಿಲ್ಲ..

ನೆನೆದು ಒದ್ದೆಯುಟ್ಟ ಬೆರಳು
ಚೆಲ್ಲಿದರು ಸೊಲ್ಲೆತ್ತದೆ ಮಿಂದಿವೆ
ಯಾಕೊ ಒಣಗಿದ ತುಟಿ ಹೃದಯ
ನೇವರಿಸೆ ಹಸ್ತಕದೇನೊ ಗೊಂದಲ..

ಎಷ್ಟು ಮಳೆಯಾದವೊ ರಾಡಿ
ಕೆರೆ ಕಾಲುವೆ ಹೊಳೆ ತುಂಬ
ಯಾಕಿಲ್ಲಿ ಅನಾವೃಷ್ಟಿ ಸೂಜಿ
ಕಾರಂಜಿಯಾಗದೆ ವ್ಯರ್ಥ ಚೆಲ್ಲಾಟ..

ಪಸೆಯಾರಿದ ನಾಲಿಗೆ ಕಾತರ
ಚೆಲ್ಲಿದ ಹನಿ ನೆಕ್ಕಲೂ ಅವಸರ
ದೂರ ಚಾಚಿದ ಬೊಗಸೆ ಹಸ್ತದೆ
ಹನಿಯಲೆಂತು ನಾಲಿಗೆಗೆ ನಿಲುಕದೆ..

– ನಾಗೇಶ ಮೈಸೂರು 

00338. ನೆಗಡಿಯದಿ ಭಾನಾಗಡಿ


00338. ನೆಗಡಿಯದಿ ಭಾನಾಗಡಿ
__________________________
(published in suragi: http://surahonne.com/?p=9009)

ಬಡವ ಸಿರಿವಂತನೆನ್ನುವ ಬೇಧವೆಣಿಸದೆ ಕಾಡುವ ನೆಗಡಿ ಯಾರಿಗೆ ತಾನೆ ಅಪರಿಚಿತ? ಬೇಡದ ಅತಿಥಿಯಾಗಿ ಬಂದು, ಬಲವಂತದಿಂದ ವಾರವಾದರು ತಳವೂರಿ ಕಾಡಿ ಕಂಗೆಡಿಸಿ ನಂತರವಷ್ಟೆ ಮರೆಯಾಗುವ ಇದರ ಪರಾಕ್ರಮದೆದುರು ಎಲ್ಲರೂ ದುರ್ಬಲರೆ. ಇದರ ಸಾಮರ್ಥ್ಯಕ್ಕೆ ಸೋತು, ಎದುರು ನಿಲ್ಲಲಾಗದಿದ್ದರು ಸರಿ ಕಡೆಗೆ ಕಥೆ, ಕವನ, ಪ್ರಬಂಧವಾದರು ಬರೆದು ಸೇಡು ತೀರಿಸಿಕೊಳ್ಳುತ್ತೇವೆಂದು ಹೊರಟ ಬರಹಗಾರರದೆಷ್ಟೊ..? ಏನೊ ಕಷಾಯ ಮಾಡಿ ಕುಡಿದು ಅದನ್ನು ನಿವಾರಿಸಿ ಜಯಿಸಿಬಿಡುವೆವೆಂದು ಹೊರಟವರು ಇನ್ನೆಷ್ಟೊ ? ಅಧುನಿಕ ವೈದ್ಯಕ್ಕೆ ಜಗ್ಗದಿರುವುದೆ? ಎಂದು ಹೊರಟವರೇನು ಕಮ್ಮಿಯಿಲ್ಲ…

click the link below to read the rest of the article: https://nageshamysore.wordpress.com/00338-%e0%b2%a8%e0%b3%86%e0%b2%97%e0%b2%a1%e0%b2%bf%e0%b2%af%e0%b2%a6%e0%b2%bf-%e0%b2%ad%e0%b2%be%e0%b2%a8%e0%b2%be%e0%b2%97%e0%b2%a1%e0%b2%bf/ 

thanks and best regards,
Nagesha Mysore

00315. ಚರಾಚರ ಸಜೀವ ಜಾಲ


00315. ಚರಾಚರ ಸಜೀವ ಜಾಲ
______________________

ಸುತ್ತ ಮುತ್ತಲ ಪರಿಸರದ ಜೀವಿಗಳನ್ನು ನೋಡಿದಾಗೆಲ್ಲ ಎದ್ದು ಕಾಣುವ ಒಂದು ಸಹಜ ಅಂಶ – ಸಜೀವ ವಸ್ತುಗಳಲ್ಲೆ ಚರವೆನ್ನಬಹುದಾದ ಚಲನಶೀಲ ಪ್ರಾಣಿಗಳ ಗುಂಪು ಒಂದೆಡೆಯಾದರೆ, ಹೋಲಿಕೆಯಲ್ಲಿ ಅಚರವೆನ್ನಬಹುದಾದ ಸಸ್ಯರಾಶಿಗಳ ಗುಂಪು ಮತ್ತೊಂದೆಡೆ. ಎರಡು ಸಜೀವಿಗಳೆ ಆದರೂ ಮೊದಲನೆಯದು ತಾನೆ ಬೇಕಾದಲ್ಲಿ ಚಲಿಸಬಹುದಾದ ಸಾಮರ್ಥ್ಯವಿರುವಂತದ್ದು; …(click the link below to read complete article)

https://nageshamysore.wordpress.com/00315-%e0%b2%9a%e0%b2%b0%e0%b2%be%e0%b2%9a%e0%b2%b0-%e0%b2%b8%e0%b2%9c%e0%b3%80%e0%b2%b5-%e0%b2%9c%e0%b2%be%e0%b2%b2/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com

00303. ಕೊಟ್ಟು ಪುರುಷ, ಪಡೆದು ಪ್ರಕೃತಿ..


00303. ಕೊಟ್ಟು ಪುರುಷ, ಪಡೆದು ಪ್ರಕೃತಿ..
___________________________

ಸೃಷ್ಟಿಯ ಅತ್ಯಮೋಘ, ಅದ್ಭುತ ಪರಿಕಲ್ಪನೆಯಲ್ಲಿ ಪ್ರಕೃತಿ-ಪುರುಷದ ಸಂವಾದಿ ಪಾತ್ರ ಆ ಸಮಷ್ಟಿತ ಸ್ಥಿತಿಯ ಅಭಿವ್ಯಕ್ತ, ಮೂರ್ತ ರೂಪವೆನ್ನಬಹುದು. ಅವೆರಡರ ಸರಸ-ಸಲ್ಲಾಪದ ಪರಿಯೆ ಜಗದ ಮೂರ್ತಾಮೂರ್ತ ರೂಪಗಳೆಲ್ಲದರ ಪ್ರಸ್ತಾರ-ವಿಸ್ತಾರಕ್ಕೆ ಕಾರಣಿಭೂತವಾದ ಕಾರಣ, ಅವುಗಳ ಕುರಿತಾದ ಅದಮ್ಯ ಕುತೂಹಲ, ಜೀವಕ್ಕೆ. ಅವೇನು, ಅವುಗಳ ಮೂಲ ಸ್ವರೂಪವೇನು? ಬದುಕಿನ ವಿಡಂಬನೆಯಲ್ಲಿ ಅವುಗಳು ವಹಿಸುವ ಪಾತ್ರವೆಂತದ್ದು? ……..(click the link below and scroll down the page to read the full article)…….

https://nageshamysore.wordpress.com/00303-%e0%b2%95%e0%b3%8a%e0%b2%9f%e0%b3%8d%e0%b2%9f%e0%b3%81-%e0%b2%aa%e0%b3%81%e0%b2%b0%e0%b3%81%e0%b2%b7-%e0%b2%aa%e0%b2%a1%e0%b3%86%e0%b2%a6%e0%b3%81-%e0%b2%aa%e0%b3%8d%e0%b2%b0%e0%b2%95%e0%b3%83/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com

00153. ಕಚ’ಗುಳಿಗೆ’ – ೦೬


00153. ಕಚ’ಗುಳಿಗೆ’ – ೦೬

ಈ ಕಂತಿನ ಚಿನಕುರುಳಿಗಳು : ಪ್ರೇಯಸಿ, ಭಾವ-ವಾಸ್ತವ, ಅಂಟು ರೋಗ, ಸಂದೇಹ, ಪವಿತ್ರ ಜಲ , ಹೊಗಳಿಕೆ. ಎಲ್ಲಾ ಬೇರೆ ಬೇರೆ ಥೀಮುಗಳ ಕಲಸುಮೇಲೋಗರ. ಟುಸ್ ಪಟಾಕಿಯೊ, ಇಲ್ಲ ಕುದುರೆ ಪಟಾಕಿಯೊ ನೋಡುವ (ಕಡೆಗೆ ಚಿನಕುರುಳಿಯಾದರೂ ಆದೀತಾ?) 🙂

https://nageshamysore.wordpress.com/00153-%e0%b2%95%e0%b2%9a%e0%b2%97%e0%b3%81%e0%b2%b3%e0%b2%bf%e0%b2%97%e0%b3%86-%e0%b3%a6%e0%b3%ac/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00133. ಚಿತ್ರಗುಪ್ತನಿಗೊಂದು ಸಲಹೆ (ಸರಿ ತಪ್ಪುಗಳ ಲೆಕ್ಕ)


00133. ಚಿತ್ರಗುಪ್ತನಿಗೊಂದು ಸಲಹೆ (ಸರಿ ತಪ್ಪುಗಳ ಲೆಕ್ಕ) (ಕಿರುಬರಹ + ಕವನ)

[ ಚಿತ್ರಗುಪ್ತ ವಾಗ್ವಾದದ ಉತ್ತರಾರ್ಧ ಭಾಗ]

ಅವಿರತದಲಿ ಎಲ್ಲರ ಪಾಪ ಪುಣ್ಯದ ಲೆಕ್ಕವಿಡುತ್ತ ಬಿಡುವಿಲ್ಲದೆ ದುಡಿವ ಚಿತ್ರಗುಪ್ತನಿಗೆ, ಎಲ್ಲವನ್ನು ಗಣಕೀಕರಿಸಿ ಅವನ ದೈನಂದಿನ ಕೆಲಸ ಸುಗಮ ಮಾಡಿಕೊಡುವ ಆಮಿಷ, ತನ್ಮೂಲಕ ಅವನಿಗೆ ಸಿಕ್ಕ ಬಿಡುವಲ್ಲಿ ಉಪಯೋಗಿಸದೆ ಬಿದ್ದಿರುವ ರಜೆಗಳನ್ನು ಉಪಯೋಗಿಸಿ ‘ಮಜಾ’ ಮಾಡುವಂತೆ ಸಲಹೆ, ಅತಿ ಕಡಿಮೆ ವೆಚ್ಚದಲ್ಲೆ ‘ಪ್ರಾಜೆಕ್ಟು’ ಮಾಡಿಕೊಡುವ ವಾಗ್ದಾನ – ಎಲ್ಲವು ಇಲ್ಲಿ ಚಾಣಾಕ್ಷ್ಯ ಸಲಹೆ ಸಂವಾದದ ರೂಪದಲ್ಲಿ ಅನಾವರಣಗೊಳ್ಳುತ್ತವೆ. ಕೊನೆಯಲ್ಲಿ ಅವು ಕೂಡ ಪಾಪದ ಲೆಕ್ಕದ ಮನ್ನಾಕ್ಕೆ ತಗುಲಿಕೊಳ್ಳುವ ತರ – ನಂಬಲಿ, ಬಿಡಲಿ – ನಮ್ಮಲ್ಲಿರುವ ಆ ಪಾಪದ ಭೀತಿಯ ಆಳವನ್ನು ಪ್ರತಿನಿಧಿಸುತ್ತದೆ.

https://nageshamysore.wordpress.com/00133-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%97%e0%b3%81%e0%b2%aa%e0%b3%8d%e0%b2%a4%e0%b2%a8%e0%b2%bf%e0%b2%97%e0%b3%8a%e0%b2%82%e0%b2%a6%e0%b3%81-%e0%b2%b8%e0%b2%b2%e0%b2%b9%e0%b3%86/

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ


______________________________________________________________________________

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ
______________________________________________________________________________

00140. ಶುಮಾಕರನೆಂಬ ವೇಗದ ವಿಪರ್ಯಾಸ (ಕಿರು ಬರಹ + ಕವನ)

00138. ಎರಡು ದೋಣಿಯ ಮೇಲೆ ಕಾಲಿಟ್ಟ ಬದುಕು…(ಅನುಭವ + ಕಿರು ಪ್ರಬಂಧ)

00139. ಕಾಲದ ಗಡಿಯಾರ . (ಕಿರು ಬರಹ + ಕವನ)

00137. ಮಳೆಯಾಗವ್ಳೆ ಚೌಡಿ.. (ಕಿರು ಬರಹ + ಕವನ)

00136. ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..(ಹೊಸದ ತಂದು ಹಳತ ಮರೆತುಬಿಡಿ..)

00135. ಸುದ್ದಿ ಮುಟ್ಟಿ ಮನ ಸೂತಕ…(ಕಳಚಿದ ಕೊಂಡಿ) (ಕಿರು ಬರಹ + ಕವನ)

00134. ದೇವರು ನಮಗೆ ಹಾಕಿದ ಟೋಪಿ (ಮಕ್ಕಳ ಪದ್ಯ) (ಕಿರು ಬರಹ + ಕವನ)

00133. ಚಿತ್ರಗುಪ್ತನಿಗೊಂದು ಸಲಹೆ (ಸರಿ ತಪ್ಪುಗಳ ಲೆಕ್ಕ) (ಕಿರು ಬರಹ + ಕವನ)

00132. ಅಂಗಜನ ಅಂಗದ ಸದ್ದು … (ಕಿರು ಬರಹ + ಕವನ)

00131. ಮಳೆಯಾಗುತ ಸಾಂಗತ್ಯ…. (ಕಿರು ಬರಹ + ಕವನ).

00130. ರಾಜರತ್ನಂ ನೆನಪಿಗೆ (ಕಿರು ಬರಹ + ಕವನ)

00129. ಪುಸ್ತಕ ವಿಮರ್ಶೆ: ಕಣ್ಣೀರಜ್ಜ ಮತ್ತು ಇತರ ಕಥೆಗಳು (ಪುಸ್ತಕ ವಿಮರ್ಶೆ)

00128. “ಬೀರ” ದೇವರು ಒಳಗಿಳಿದರೆ ಶುರು! (ಕಿರು ಬರಹ + ಕವನ)

00127. ಮುರಿದು ಬಿದ್ದ ಪಿಎಸ್ಪಿ (ಬರಹ + ಕವನ)

00126. ನೂರು ಶತಕಗಳ ಸರದಾರ (ಕಿರು ಬರಹ + ಕವನ)

00125. ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ (ಸರಳ ಕಾವ್ಯರೂಪದಲ್ಲಿ)

00124. ಈ ಕೆಮ್ಮೊಣಕೆಮ್ಮು… (ಕಿರು ಬರಹ + ಕವನ)

00123. ತುಳಸಿಗಿಂದು ಸಂಭ್ರಮ (ಕಿರು ಬರಹ + ಕವನ)

00122. ಈ ಸಂಪದ (ಕಿರು ಬರಹ + ಕವನ)

00121. ಮಂಗಳಗ್ರಹಕ್ಕೊಂದು ಗ್ರಹಕೊಂದು ಕಲ್ಲು (ಕಿರು ಬರಹ + ಕವನ)

00120. ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ? (ಕಿರು ಬರಹ + ಕವನ) (04.11.2013)

00119. ದೀಪೋತ್ಸಾಹಂ ಭುವಂಗತೆ.. (ಬರಹ + 2 ಕವನ) (02.11.2013)

00118. ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ (ಕವನ + ಕಿರು ಬರಹ) (01.11.2013)

00117. ಗುಜರಾತಿನ ಮೋಡಿ, ಪಟೇಲರ ಹಾಡಿ (ಕವನ + ಕಿರು ಬರಹ)

00116. ‘ಐ’ಗಳ ಪುರಾಣ – 03 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00115. ಮಂಡೋದರಿ, ನಿನಗ್ಯಾಕಿ ಪರಿ ಕಿರಿಕಿರಿ..? (ಕವನ + ಬರಹ) (WIP)

00114. 00114. ಸಮಾನಾಂತರ ಚಿಂತನಾ ಚಿತ್ತ (ಕವನ + ಕಿರು ಬರಹ)

00113. ಹಾಸ್ಯದಲೆ ಕೊಲ್ಲೆ ಪೂರ್ತಿ, ಸಿದ್ದಹಸ್ತ ನರಸಿಂಹಮೂರ್ತಿ (ಕವನ + ಕಿರು ಬರಹ)

00112. ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ….(ಕವನ + ಕಿರು ಬರಹ)

00111. ಖೈರುದ್ದೀನನಿಗೆ ಹಬ್ಬದ ಶುಭಾಶಯ ಹೇಳಿ…(ಕವನ + ಕಿರು ಬರಹ)

00110. ಸಿಂಗಪುರ್ ಈಸ್ ಏ ಫೈನ್ ಸಿಟಿ…(ಕವನ + ಕಿರು ಬರಹ)

00109. ಆಯುಧ ಪೂಜೆ, ವಿಜಯದಶಮಿ (2) (ಕವನ + ಕಿರು ಬರಹ)

00108. ಮಹಾಲಯ ಅಮಾವಾಸೆ (ಮಹಾನವಮಿ) (01) (ಕವನ + ಕಿರು ಬರಹ)

00107. ಪಾತ್ರಗಳೆ ರಾಯರಿಗೆ ಸಲ್ಲಿಸಿವೆ ವಂದನ ! (ಕವನ + ಕಿರು ಬರಹ)

00106. …..ನಿನ್ನ ನೆನಸುತ್ತೇನೆ ! (ಕವನ + ಕಿರು ಬರಹ)

00105. ಯಾರದು ಮುಂದಿನ ಪಾಳಿ? (ಕವನ + ಕಿರು ಬರಹ)

00104. ಕೂರ್ಮಾವತಾರ : ಸಾಮಾನ್ಯ ಪ್ರೇಕ್ಷಕನೊಬ್ಬನ ಅನುಭವ, ವಿಮರ್ಶೆಯ ಒಳನೋಟ (ಅನುಭವ + ವಿಮರ್ಶೆ + ಬರಹ)

00103. ಯಾರ ಗೆಲುವು – ‘ಛಿಧ್ರವೋ, ಸಮಗ್ರವೋ? (ಕವನ + ಕಿರು ಬರಹ)

00102. ಪಂಚ್ಲೈನ್ ‘ಪಂಚೆ’ ಸಿದ್ರಾಮಣ್ಣ.. (ಕವನ + ಕಿರು ಬರಹ)

00101. ಯಾರು..? (ಚಿಣ್ಣರ ಹಾಡು) (ಕವನ + ಕಿರು ಬರಹ)

00100. ನಮ್ಮ ಬಾಲ್ಯದ ‘ಶರ್ಲಾಕ್ ಹೋಂ’ “ಎನ್. ನರಸಿಂಹಯ್ಯ” ನೆನಪಲಿ ..(ಕವನ + ಕಿರು ಬರಹ)

00099. ಕೆಂಪೇಗೌಡರೆ ಬನ್ನಿ ಹೀಗೆ ……(ಕವನ + ಕಿರು ಬರಹ)

00098. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 02” (ಭಾಗ – 02) (ಹಾಸ್ಯಬರಹ + ಹರಟೆ + ವ್ಯಂಗ್ಯ)

00097. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 04” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00096. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 03” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00095. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 02” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00094. ‘ಐ’ಗಳ ಪುರಾಣ – 02 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00093. ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ…(ಕವನ + ಕಿರು ಬರಹ)

00092. ಗಜಾನನ ಗಜ-ಮೂಷಿಕಾಸುರ ಕಥೆ (ಕವನ + ಕಿರು ಬರಹ)

00091. ಹುಟ್ಟುಹಬ್ಬದ ನಮಸ್ತೆ..(ಪೂಚಂತೆ ಯಾರಂತೆ?) (ಕವನ + ಕಿರು ಬರಹ)

00090. ಅವರಿತ್ತ ಜೀವನ ಭಿಕ್ಷೆ (ಕವನ + ಕಿರು ಬರಹ)

00089. ಶ್ರಾವಣ (ಕವನ + ಕಿರು ಬರಹ)

00088. ಮಿನುಗುತಾರೆ, ಗುನುಗುತ್ತಾರೆ… (ಕವನ + ಕಿರು ಬರಹ)

00087. ಡಾಲರ ರೂಪಾಯಿ ಲೆಕ್ಕಾಚಾರ (ಕವನ + ಕಿರು ಬರಹ)

00086. ಗೋಕುಲದಲಿ ಅಷ್ಟಮಿ , ಗೋಕುಲಾಷ್ಟಮಿ.. (ಕವನ + ಕಿರು ಬರಹ)

00085. ಜಲಚಕ್ರ (ಕವನ + ಕಿರು ಬರಹ)

00084. ವರಮಹಾಲಕ್ಷ್ಮಿ ವ್ರತ (ಕವನ + ಕಿರು ಬರಹ)

00083. ಅಷ್ಟಲಕ್ಷ್ಮಿಯರ ವರ (ಕವನ + ಕಿರು ಬರಹ)

00082. ಭಾರತಿಮನ, ಭಾರತಿತನ! (ಕವನ)

00081. ಮತ್ತೊಂದು ಸ್ವಾತಂತ್ರದ ದಿನ…. (ಕವನ + ಕಿರು ಬರಹ)

00080. ನಿಯತಿಯ ಶಿರ (ಕವನ)

00079. ಬದಲಾಗಬೇಕಾಗಿದ್ದು ನಾವು-ನೀವಾ ಅಥವಾ ಈ ವ್ಯವಸ್ಥೆಯಾ? (ಚಿಂತನೆ + ಲೇಖನ + ವಾಸ್ತವ )

00078. ಕಟ್ಟುವ ಬನ್ನಿ ಕನ್ನಡ ಉಳಿಸಿ ಬೆಳೆಸುವ ಪೀಳಿಗೆ (ಚಿಂತನೆ + ಅಂಕಣ: ಚಿಂತಕರ ಚಾವಡಿ (ಕನ್ನಡ ಸಂಘ)+ ಲೇಖನ + ಸಿಂಚನ)

00077. ಮೋಡ ಚುಂಬನ..ಗಾಢಾಲಿಂಗನ.. (ಕವನ + ಕಿರು ಬರಹ)

00076. ಎರಡು ಆಷಾಡ ಗೀತೆಗಳು (ಕವನ + ಕಿರು ಬರಹ)

00075. ಪುಟ್ಟನ ಅಳಲು .. (ಕವನ + ಕಿರು ಬರಹ)

00074. ಕಲಿಯಲು ಎಲ್ಲಿದೆ ಬಿಡುವು? (ಕವನ + ಕಿರು ಬರಹ)

00073. ದೆವ್ವ ಭೂತದ ಭೀತಿ! (ಕವನ)

00072. ಆಧ್ಯಾತ್ಮಿಕ ಕರ ಬಾಡಿಗೆ ತರ..! (ಕವನ + ಕಿರು ಬರಹ)

00071. ಅಸಂಗತ..! (ಕವನ + ಕಿರು ಬರಹ)

00070. ಹೆಣ್ಮನದ ಹವಾಗುಣ….! (ಕವನ + ಕಿರು ಬರಹ)

00069. ಬಿಟ್ಟುಬಿಡಿ ಸಿಗರೇಟು…! (ಬಿಟ್ಟು ಬೀಡಿ ಸಿಗರೇಟು..) (ಕವನ + ವಾಸ್ತವ)

00068. ಚಿಲ್ಲರೆ ಅಂಗಡಿ ಕಾಕ , ರೀಟೇಲಲಿ ಅಕ್ಕಿ..! ( ಕವನ + ವಾಸ್ತವ)

00067. ಧೂಮಸ್ನಾನ….! (ಕವನ + ವಾಸ್ತವ)

00066. ಧೂಮ-ಸಾಹಿತ್ಯ…! (ಕವನ + ವಾಸ್ತವ)

00065. ಸರಿ ತಪ್ಪುಗಳ ಲೆಕ್ಕ (ಚಿತ್ರಗುಪ್ತ ವಾಗ್ವಾದ – ಪೂರ್ವಾರ್ಧ: ಲಘು ಹಾಸ್ಯದ ಧಾಟಿ) (ಕವನ + ಕಿರು ಬರಹ)

00064. ಗಂಗಾವತಾರಣ (ಗಂಗಾ + ಅವತಾರ + ರಣ) (ಕವನ + ಬರಹ + ವಾಸ್ತವ + ಪೌರಾಣಿಕ)

00063. ಗಂಗಾವತರಣ…! (ಕವನ + ಕಿರು ಬರಹ)

00062. ಪಾಂಚಾಲಿಯ ಹಾಡು (ಕವನ + ಕಿರು ಬರಹ)

00061. ಈ ಅಪ್ಪಗಳು (ಕವನ + ಕಿರು ಬರಹ)

00060. ಸಾವೆಂಬ ಸಕಲೇಶಪುರದಲ್ಲಿ….!

00059. ನಿರಂತರ ಕುಣಿತ! (ಕವನ)

00058. ಗುಂಪಿನೊಳಗವಿತಿದೆಯೆ ವರ್ಣ? (ಕವನ + ಕಿರು ಬರಹ)

00057. ಈ ದಿನ ತನು ಮನ ಭಾವ….! (ಕವನ)

00056. ಹಿತ್ತಲ ಗಿಡದ ಮದ್ದು (ಕವನ + ಕಿರು ಬರಹ)

00055. ಏಕಾಂತದ ಏಕಾಂತ…! (ಕವನ + ಕಿರು ಬರಹ)

00054. ಈ ಅಮ್ಮಗಳು (ಕವನ + ಕಿರು ಬರಹ)

00053. ಚುನಾವಣಾ ಫಲಿತಾಂಶ ! (ಕವನ)

00052. ಸೃಷ್ಟಿ ರಹಸ್ಯ..! (ಈ ಅಂಡ ಪಿಂಡ ಬ್ರಹ್ಮಾಂಡದ ಸಶೇಷ ಭಾಗ) (ಕವನ + ಕಿರು ಬರಹ)

00051. ಈ ಅಂಡ ಪಿಂಡ ಬ್ರಹ್ಮಾಂಡ …(ಕವನ + ಕಿರು ಬರಹ)

00050. ಈ ಏಪ್ರಿಲ್ಲಿಗೇಕೊ ಮುನಿಸು…(ಕವನ + ಕಿರು ಬರಹ)

00049. ಯುಗಾದಿಯಾಗಲಿ ಜಾಗತಿಕ…! (ಕವನ)

00048. ಒತ್ತಡಗಳ ಬೆತ್ತ ! (ಕವನ)

00047. ಸುಖಕಿರುವ ಅವಸರ….! (ಕವನ)

00046. ತ್ಸುನಾಮಿ ಹೊತ್ತಲಿ…(ಕವನ)

00045. ಗುಬ್ಬಣ್ಣನ ಸ್ವಗತಗಳು (ಚುಟುಕಗಳು)

00044. ಮುಗಿದರೆ ಇಹ ವ್ಯಾಪಾರ…..(ಕವನ)

00043. ಮಾತಿಗೊಬ್ಬರ ….(ಕವನ)

00042. ವಚನದಲ್ಲಿ ನಾಮಾಮೃತ ತುಂಬಿದ ವಚನಾಂಜಲಿ ಕಾರ್ಯಕ್ರಮ (ವರದಿ) (ಕನ್ನಡ ಸಂಘ + ವರದಿ + ಲೇಖನ)

00041. ‘ಕನ್ನಡ ಪ್ರಭ’ದ ಕಬ್ಬಿಗ ತೋಟದಲ್ಲರಳಿದ ಡಬ್ಲ್ಯು. ಬಿ. ಏಟ್ಸನ ಕವನ : ನನ್ನ ಮೊದಲ ಅನುವಾದದ ಯತ್ನ..(ಕವನ + ಬರಹ)

00040. ಆಗ್ನೇಯೇಷ್ಯಾದ ಹಣ್ಣಿನ ರಾಣಿ – ‘ಮಾಂಗಸ್ಟೀನ್’! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00039. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 01!” (ಹಾಸ್ಯಬರಹ + ಹರಟೆ + ವ್ಯಂಗ್ಯ)

00038 – ಹೊಸ (ಹಳೆ) ರುಚಿ: “ಹಸಿ-ಹುಳಿ” (ಹೊಸ ರುಚಿ + ಲಘು ಹಾಸ್ಯ)

00037 – ರುಚಿಗೆ ರಾಜಾ, ವಾಸನೆಯೆ ಗಾರ್ಬೇಜಾ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00036 – ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00035 – ಜುಟ್ಟಿನ ಬಟ್ಟೆ ಹೊದ್ದ ‘ಕೇಶೀರಾಜ’, ಮುತ್ತಿನ ಬಣ್ಣದ ‘ರಂಬೂತಾನ್’ ಹಣ್ಣೆ ಖನಿಜ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00034 – ವಿಷಾಪಹಾರಿ ‘ಡ್ರಾಗನ್ನಿನ ಕಣ್ಣು’, ಈ ರುಜಾಪಹಾರಿ ‘ಲೊಂಗನ್’ ಹಣ್ಣು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

033A – ಸಿಂಗಾಪುರದ “ಹಾವ್ ಪಾರ ವಿಲ್ಲಾ” ದೃಶ್ಯ ಕಲಾ ತೋಟ! (photos) (ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ)

033 – ಸಿಂಗಪುರದಲ್ಲಿನ ಚೀಣಿ ದೃಶ್ಯ ಕಾವ್ಯ “ಹಾವ್ ಪಾರ್ ವಿಲ್ಲಾ” ( ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ + ಲಘು ಹಾಸ್ಯ)

00032 – ಸಂಪತ್ತಿನ ಬೀಜ, ಸಸಿ ಮತ್ತು ವೃಕ್ಷಗಳ ನೀತಿ ಭೋಧಕ ಕಥೆ (ಆಧುನಿಕ ಪುರಾಣ ಕಥಾ ಕಾಲಕ್ಷೇಪ)! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00031 – ಅಪೂರ್ವ ಕವನದ ಕುರಿತು ಹಿರಿಯ ಕವಿಯೊಬ್ಬರ ಮಾತು (ಲೇಖನ + ಬರಹ + ಪ್ರಬಂಧ + ಕವನ + ವ್ಯಕ್ತಿತ್ವ )

00030 – ಪುಸ್ತಕ ವಿಮರ್ಶೆ: ಮಾವೋನ ಕೊನೆಯ ನರ್ತಕ (ಪುಸ್ತಕ ವಿಮರ್ಶೆ)

00029. ಇರುವೆ ಮತ್ತು ಒಂದು ತುಂಡು ರೊಟ್ಟಿಯ ಕಥೆ! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00028. ಸಿಂಗನ್ನಡಿಗರಿಂದ ಸಿಂಗನ್ನಡಿಗರಿಗಾಗಿ! – ಸಿಂಗಾರ ಉತ್ಸವ 2013 (ಕನ್ನಡ ಸಂಘ + ವರದಿ + ಲೇಖನ )

00027. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 02) (ಹಾಸ್ಯಬರಹ + ಹರಟೆ)

00026. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 01) (ಹಾಸ್ಯಬರಹ + ಹರಟೆ)

00025. ಸರಿಯಪ್ಪಾ ಸಾಕು ಬಿಡು ಕಲಿಸಿದ್ದು ಸುಗ್ಗಿ, ಉರು ಹೊಡೆದೇ ಕಲಿವೆ ನಾ ಕನ್ನಡದ ಮಗ್ಗಿ! ( ಲಘು ಹಾಸ್ಯ + ಕಥನ + ಅನುಭವ)

00024. ಜತೆ ನೀ ಕಾಡಿಗೆ , ಹೋಗಲಿಲ್ಲವೇಕೆ ಊರ್ಮಿಳೆ? (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00023. ಶೂರ್ಪನಖಿ, ಆಹಾ! ಎಂಥಾ ಸುಖಿ! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00022. ದುರಂತ ನಾಯಕಿ ಸೀತೆಯ ಬದುಕು………! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00021. ಶ್ರೀ ರಾಮನಿಗೇನಿತ್ತನಿವಾರ್ಯ….? (ಬರಹ + ಕವನ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00020. ಈ ದಿನ ಜನುಮದಿನಾ…..! (ಬರಹ + ಕವನ + ನೆನಪು + ಭಾವನೆ)

00019. ‘ಐ’ಗಳ ಪುರಾಣ – 01….’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00018. ಸಿಂಗಪೂರ ಸುತ್ತಾಟ, ಊಟ – ಸಿಕ್ಕಿತ ಕನಿಷ್ಟ ರೋಟಿ, ಪರಾಟ..? (ಪ್ರವಾಸದ ಅನುಭವ + ಕವನ + ಲಘು ಹಾಸ್ಯ )

00017. ಹುಡುಕೂ, ವರ್ಷದ್ಹುಡುಕು ..! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಲೇಖನ)

00016. ಅಂತರಂಗದಂತಃಪುರದ ಕದಪದ ಮನದನ್ನೆಯರು…! (ಬರಹ + ಕವನ + ಅನುಭವ + ಆಡಳಿತಾತ್ಮಕ + ಲಘು ಹಾಸ್ಯ)

00015 – ತರ ತರ ಋತು ಸಂವತ್ಸರ……ಹಳತೊಸತು ಮೇಳೈಸಿತೊ ಬೆರೆತು! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಕವನ)

00014 – ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ….! (ನೀಳ್ಗಾವ್ಯ + ಕಾವ್ಯ + ಪೌರಾಣಿಕ)

00013 – ಹಾರುತ ದೂರಾದೂರ…..! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00012. ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ! (ಆಡಳಿತಾತ್ಮಕ + ಮ್ಯಾನೇಜ್ಮೆಂಟು + ವ್ಯವಸ್ಥೆ + ವಾಸ್ತವ)

00011. ಲಘು ಪ್ರಬಂಧ: ನನ್ನ ಪ್ರಧಾನ ಸಂಪಾದಕ ಹುದ್ದೆ…! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00010. ವಿಮರ್ಶೆ : ಕವನ ಸಂಕಲನ: “ಅಂತರ ಹಾಗು ಇತರ ಕವನಗಳು” ಕವಿ: ವಸಂತ ಕುಲಕರ್ಣಿ

00009. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 01” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00008. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(03) (ಬರಹ + ವಿಡಂಬನೆ + ಲೇಖನ)

00007. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02) (ಬರಹ + ವಿಡಂಬನೆ + ಲೇಖನ)

00006. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(01) (ಬರಹ + ವಿಡಂಬನೆ + ಲೇಖನ)

00005. ಮೆಲ್ಲುಸಿರೆ ಸವಿಗಾನ….! (ಬರಹ + ಭಾವನೆ + ವಿಮರ್ಶೆ)

00004. ಗಮನೇಶ್ವರಿಯ ಗಮಕ, ವಯಸ್ಸಿನಾ ಮಯಕ…! (ಬರಹ + ಅನುಭವ)

00003. ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ? (ಲೇಖನ)

00002. ಏನಾಗಿದೀದಿನಗಳಿಗೆ? (ಲೇಖನ)

00001. ಮೊದಲ ಬ್ಲಾಗ್ – ಮನದಿಂಗಿತಗಳ ಸ್ವಗತ! (ಬರಹ + ಕವನ)