00766. ಪರಿಸರ ಕಾಳಜಿ (ಮಕ್ಕಳಿಗೆ )


00766. ಪರಿಸರ ಕಾಳಜಿ (ಮಕ್ಕಳಿಗೆ )
____________________________

ವಿಶ್ವ ಪರಿಸರದ ದಿನದ ಪ್ರಯುಕ್ತ ಬಿಡುಗಡೆ ಮಾಡಿದ ಕೆಳಗಿನ ಸಂದೇಶಕ್ಕೆ ಇದೊಂದು ಪುಟ್ಟ ಕವನವನ್ನು ಸೇರಿಸುತ್ತಿದ್ದೇನೆ, ಮುಖ್ಯ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು..


ಪರಿಸರ, ಸರಸರ
ಕರಗಿಬಿಡುವ ಬೆಣ್ಣೆ ತರ
ಉಳಿಸೋದಲ್ಲಾ ವ್ಯಾಪಾರ
ಉಳಿಗಾಲವಿಲ್ಲ ಬರಿ ಮಾತಪಾರ…

ಬೆಳೆಸೆ ಬೇಕು ಸಂವತ್ಸರ
ಅಳಿಸೆ ಸಾಕು ದಿನ ವಾರ
ಮಾಡೊ ಕುಂಬಾರನಿಗೆ ವರುಷ
ಮುರಿಯೋ ದೊಣ್ಣೇಗೆರಡೆ ನಿಮಿಷ..

ಉಳಿಸೆ ಬೇಕು ಸರಳ ಜ್ಞಾನ
ತಿಳಿಸಬೇಕು ಬದುಕಿನ ವಿಜ್ಞಾನ
ಜತೆಗುಳಿಸಿ ಬೆಳೆಸೆ ಸಮತೋಲನ
ನಮ್ಮುಸಿರಿಗೂ ಪರಿಸರದಲೆ ಚರಣ..

ಬೀಜ ವೃಕ್ಷ ನ್ಯಾಯದಂತೆ
ಗಿಡ ನೆಟ್ಟರೆ ಮರವಾಗುವಂತೆ
ಬೆಳೆವ ಕುಡಿಗೆ ಕಲಿಸೆ ಬೆಳೆವ ಪಾಠ
ಗಿಡ ಮರ ಪರಿಸರದ ಜೊತೆಗೊಡನಾಟ..

ಪರಿಸರ ದಿನ ಬರಿ ನಾಂದಿ
ನಿತ್ಯ ಕಾಳಜಿಯಿರದಿರೆ ವ್ಯಾಧಿ
ಕಾದರೆ ಕಾಯುವ ಪರಿಸರ ಗೊತ್ತಾ
ಅದನರಿತೆ ಬದುಕಿದ್ದರು ನಮ್ಮಜ್ಜಿ ತಾತ..!

– ನಾಗೇಶ ಮೈಸೂರು