01139. ಸುಮ್ನೆ ‘ಗಾಲಿಬ್’ಗೊಂದು ಹ್ಯಾಂಡ್ ಶೇಕ್…(೨)


01139. ಸುಮ್ನೆ ‘ಗಾಲಿಬ್’ಗೊಂದು ಹ್ಯಾಂಡ್ ಶೇಕ್…(೨)

ದಿಲ್- ಎ- ನಾದಾನ್ ತುಝೆ ಹುಆ ಕ್ಯಾ ಹೈ
ಆಖಿರ್ ಇಸ್ ದರ್ದ್ ಕಿ ದವಾ ಕ್ಯಾ ಹೈ

– ಮಿರ್ಜಾ ಗಾಲಿಬ್

ಕನ್ನಡದಲ್ಲಿ ನನ್ನ ಯತ್ನ..
________________________

ಹುಡುಗಾಟದ ಹೃದಯ ನಿನಗೆ ಏನಾಗಿದೆ
ಮಸಲಾ ಈ ಬೇನೆಗೆ ಮದ್ದಾದರೂ ಏನಿದೆ

– ನಾಗೇಶ ಮೈಸೂರು

ನನ್ನ ಯತ್ನಕ್ಕೆ ಸ್ಫೂರ್ತಿ ನೀಡಿದ ಲಕ್ಷ್ಮೀಕಾಂತ ಇಟ್ನಾಳರ ಯತ್ನ
_________________________________________________

ಎಲೆ ಮರುಳ ಮನಸೆ ಏನಾಗಿದೆ ನಿನಗೆ
ಈ ಬೇಗೆಗೆ ಮದ್ದಾದರೂ ಏನು ಹೇಳೆನಗೆ

– Lakshmikanth Itnal

01138. ಸುಮ್ನೆ ‘ಗಾಲಿಬ್’ಗೊಂದು ಹ್ಯಾಂಡ್ ಶೇಕ್…😬


01138. ಸುಮ್ನೆ ‘ಗಾಲಿಬ್’ಗೊಂದು ಹ್ಯಾಂಡ್ ಶೇಕ್…😬

ಖೈದ್-ಎ-ಹಯಾತ್-ಓ-ಬಂದ್-ಎ-ಗಮ್, ಅಸಲ್ ಮೆ ದೋನೊ ಏಕ್ ಹೈ
ಮೌತ್ ಸೆ ಪಹಲೆ ಆದ್ಮಿ ಗಮ್ ಸೆ ನಿಜಾತ್ ಪಾಎ ಕ್ಯೂ ?

– ಮಿರ್ಜಾ ಗಾಲಿಬ್


ಕನ್ನಡದಲ್ಲಿ ನನ್ನ ಯತ್ನ..

ಬದುಕ-ಬಂದೀಖಾನೆ-ದುಃಖದ-ಖೈದು, ನಿಜಕ್ಕು ಎರಡೂ ಒಂದೆ
ಸಾವಿಗೆ ಮುನ್ನ ಮನುಜ ದುಃಖದ ಕೈಯಿಂದ ಪಾರಾಗಿದ್ದೆಂದು ?

– ನಾಗೇಶ ಮೈಸೂರು

(Picture: Wikipedia)