00994. ಸಪ್ತಮ ಜ್ಞಾನ ಸಂಗಮ


00994. ಸಪ್ತಮ ಜ್ಞಾನ ಸಂಗಮ

ನಮ್ಮ ಪುರಾತನ ಪುರಾಣಾದಿ ಸಂಭವಗಳಿಂದೆಲ್ಲಾ ಗಮನಿಸಿದರೆ ಪ್ರತಿ ಸಂಖ್ಯೆಗೂ ತನ್ನದೆ ಆದ ಮಹತ್ವವಿರುವುದು ಕಾಣುತ್ತದೆ. ಪ್ರತಿ ಸಂಸ್ಖೃತಿಯಲೂ ಇದರ ಪ್ರಭಾವವಿರುವುದು ಕಾಣುವುದಾದರೂ, ಭಾರತೀಯತೆಯಲ್ಲಿ ಇದರ ಬಳಕೆ ತುಸು ಹೆಚ್ಚೆ ಎನ್ನಬೇಕು. ಉದಾಹರಣೆಗೆ : ನವ (ಒಂಬತ್ತು) ದ ಪಥವ್ಹಿಡಿದು ಹೊರಟರೆ – ನವ ಧಾನ್ಯ, ನವ ರತ್ನ, ನವ ರಾತ್ರಿ..ಹೀಗೆ ಸಾಗುತ್ತದೆ. ಪಂಚಕದಲ್ಲೂ ಹೀಗೆ ಪಂಚ ಭೂತ, ಪಂಚಾಗ್ನಿ, ಪಂಚ ಕ್ರಿಯ, ಪಂಚಾವಸ್ಥೆಗಳು ಕಾಣ ಬರುತ್ತವೆ. ಇಲ್ಲಿ ಸಪ್ತದ ಕುರಿತು ಚಿಕ್ಕ ಸಂಕಲನ : ಸಪ್ತರ್ಷಿ, ಸಪ್ತನದಿಗಳಿಂದಿಡಿದು, ನಮ್ಮ ವಾರದ ಏಳು ದಿನಗಳವರೆಗೆ – ಕಟ್ಟಿಕೊಡುವ ಯತ್ನ.

ಸಪ್ತಮ ಜ್ಞಾನ ಸಂಗಮ
______________________


ಸಪ್ತರ್ಷಿಗಳೇಳು ಋಷಿ ಜನರ ಸತ್ಯ
ಮರೀಚೀ ಅತ್ರಿ ಅಂಗೀರಸ ಪುಲಸ್ತ್ಯ
ಪುಲಹ ಕ್ರತು ವಸಿಷ್ಠರ ಸಂಗಮಿಸೆ
ಏಳು ಪ್ರಖ್ಯಾತ ಋಷಿಗಳು ವರಸೆ ||

ಸಪ್ತಮಾತೃಕೆಯರ ದೇವಿ ಮಹಾತ್ಮೆ
ಬ್ರಾಹ್ಮಿ ಮಾಹೇಶ್ವರಿ ಕೌಮಾರಿ ಜಮೆ
ವೈಷ್ಣವಿ ವಾರಾಹಿ ಇಂದ್ರಾಣಿ ಗಣನೆ
ಜತೆಸೇರಿ ಚಾಮುಂಡಿ ರಕ್ಕಸ ದಮನೆ ||

ಸೌಂದರ್ಯದತಿಶಯರಾಶಿಗಪ್ಸರೆಗಳು
ರಂಭಾ ಮೇನಕೆ ತಿಲೋತ್ತಮ ನಗಲು
ವಾರಕಾಂತೆ ಶಬರಿ ಹಿಡಿಂಬಿ ಸರದಿಗೆ
ಸೈರಂಧ್ರಿ ಒಟ್ಟಿಗೆ ಸುರಸುಂದರಿ ಸುರಗೆ ||


ಸಪುತಾಂಬುಧಿ ಸಪ ್ತಸಾಗರಗಳೇಳು
ಲವಣ ಉಪ್ಪಿಗೆ, ಇಕ್ಷು ತಾಕಬ್ಬಿನ್ಹಾಲು
ಸುರಾ ಮದ್ಯದ ಪೂರ, ಕ್ಷೀರಕೆ ಹಾಲ
ದಧಿ ಮೊಸರು, ಸರ್ಪಿಸ್ತುಪ್ಪ, ನೀರ್ಜಲ ||

ದೇಹದಲ್ಲಿಯ ಸಪ್ತಧಾತುಗಳು ತಾವು
ರಸ ರಕ್ತ ಮಾಂಸ ಮಜ್ಜೆಗಳ ಫಲಿತವು
ಮೇದಸ್ಸು ಅಸ್ಥಿ ಶುಕ್ರಗಳೆಂಬವರ ಸೇರಿ
ಸಪ್ತ ಧಾತು ವೈಭವ ಹಿಡಿದ ಸರಿದಾರಿ ||

ಅಷ್ಟೇಕೆ ದೂರ ವಾರಗಳೇಳರ ಪ್ರಾಯ
ಭಾನು ಸೋಮ ಮಂಗಳರ ತಿಳಿಕಾಯ
ಬುಧ ಗುರು ಶುಕ್ರ ಗ್ರಹಗಳ ನೆನೆದೆಯ
ಶನಿವಾರ ಜತೆ ಸೇರಲು ಪೂರ್ಣಮಯ ||

– ನಾಗೇಶ ಮೈಸೂರು

(Picture : Creative Commons)

00794. ಕೈ ಕೊಡೊ ತ್ರಿಶಕ್ತಿಗಳು..


00794. ಕೈ ಕೊಡೊ ತ್ರಿಶಕ್ತಿಗಳು..
___________________________

ಹಾಳು ಕೈ ಕೊಡೊ ತ್ರಿಶಕ್ತಿಗಳು..


ನಾಚಿಕೆಯಾಗುತ್ತೆ
ತಲೆ ಕೆರಿಯೋಕೂ ಯಾಕೊ
ಗೊತ್ತಿಲ್ಲ ಅಂತ ಹೇಳೆದೆಂತೊ ?
ಅದೂ ನರೆತಿದೆ ತಲೆ, ಬಲಿತಿಲ್ಲ ಬುದ್ಧಿ..!

ಒಳಗಡೆ ಕುಬುಸದ ಮನಸ
ಅವನ್ಯಾವನೊ ರಭಸದೆ ಕುಂತವನೆ
ವಯಸೆ ಆಗದ ಎಳಸು ಜೀವ
ಮುಸಿಮುಸಿ ನಕ್ಕು ಕಾಡುವ ಚಿತ್ತ..

ಬಂದವರಾರೊ ಒಳಗ್ಹೊರಗೆ
ಹೋದವರಿನ್ಯಾರೊ ಹೊರಗೊಳಗೆ
ಇದ್ದರೊ ಹೋದರೊ ಗದ್ದಲದಲೆ
ಉರುಳಿದ್ದು ಕಾಲ – ಕಲಿಯಲೆ ಇಲ್ಲ ..!

ಸುತರಾಂ ಲೆಕ್ಕಕಿಡದ ಮಂದಿ
ಹಿಡಿದು ಜಾಡಿಸುತ ಜವಾಬ್ದಾರಿ
ಕಲಿಯೋದಲ್ಲ ಕಲಿಸೋ ಹೊತ್ತು ಅಂದರು..
ಚಾಟಿ ಬೀಸಿದರಾಗಲುಂಟೆ ಪಂಡಿತ ?

ಇತ್ತೆಲ್ಲೊ ಇಚ್ಛಾಶಕ್ತಿ
ಕಳೆದು ಕಾಲ ಜ್ಞಾನ ದಿಕ್ಕುಪಾಲು
ಕನಿಷ್ಠ ಆರಿಸಿ ಪೋಣಿಸಬೇಕಿದೆ, ಯಾಕೊ
ಉರಿದು ಬತ್ತಿಹೋಗಿದೆ ಕ್ರಿಯಾಶಕ್ತಿ..

– ನಾಗೇಶ ಮೈಸೂರು

(Picture source: http://worldartsme.com/mismatch-clipart.html#gal_post_65802_mismatch-clipart-1.jpg)

00488. ಸಪ್ತಮ ಜ್ಞಾನ ಸಂಗಮ (ಮಕ್ಕಳಿಗೆ)


00488. ಸಪ್ತಮ ಜ್ಞಾನ ಸಂಗಮ (ಮಕ್ಕಳಿಗೆ)
_______________________

೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭

ನಮ್ಮ ಪುರಾಣಾದಿ ಸಂಭವಗಳಿಂದೆಲ್ಲಾ ಗಮನಿಸಿದರೆ ಪ್ರತಿ ಸಂಖ್ಯೆಗೂ ತನ್ನದೆ ಆದ ಮಹತ್ವವಿರುವುದು ಕಾಣುತ್ತದೆ. ಪ್ರತಿ ಸಂಸ್ಖೃತಿಯಲೂ ಇದರ ಪ್ರಭಾವವಿರುವುದು ಕಾಣುವುದಾದರೂ, ಭಾರತೀಯತೆಯಲ್ಲಿ ಇದರ ಬಳಕೆ ತುಸು ಹೆಚ್ಚೆ ಎನ್ನಬೇಕು. ಉದಾಹರಣೆಗೆ : ನವ (ಒಂಬತ್ತು) ದ ಪಥವ್ಹಿಡಿದು ಹೊರಟರೆ – ನವಧಾನ್ಯ, ನವರತ್ನ, ನವರಾತ್ರಿ…. ಹೀಗೆ ಸಾಗುತ್ತದೆ. ಪಂಚಕದಲ್ಲೂ ಹೀಗೆ ಪಂಚಭೂತ, ಪಂಚಾಗ್ನಿ, ಪಂಚಕ್ರಿಯ, ಪಂಚಾವಸ್ಥೆಗಳು ಕಾಣ ಬರುತ್ತವೆ. ಇಲ್ಲಿ ಸಪ್ತದ ಕುರಿತು ಚಿಕ್ಕ ಸಂಕಲನ : ಸಪ್ತರ್ಷಿ, ಸಪ್ತನದಿಗಳಿಂದಿಡಿದು, ನಮ್ಮ ವಾರದ ಏಳು ದಿನಗಳವರೆಗೆ – ಕಟ್ಟಿಕೊಡುವ ಯತ್ನ.

೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭

ಸಪ್ತರ್ಷಿಗಳೇಳು ಋಷಿ ಜನರ ಸತ್ಯ
ಮರೀಚೀ ಅತ್ರಿ ಅಂಗೀರಸ ಪುಲಸ್ತ್ಯ
ಪುಲಹ ಕ್ರತು ವಸಿಷ್ಠರ ಸಂಗಮಿಸೆ
ಏಳು ಪ್ರಖ್ಯಾತ ಋಷಿಗಳು ವರಸೆ ||

ಸಪ್ತಮಾತೃಕೆಯರ ದೇವಿ ಮಹಾತ್ಮೆ
ಬ್ರಾಹ್ಮಿ ಮಾಹೇಶ್ವರಿ ಕೌಮಾರಿ ಜಮೆ
ವೈಷ್ಣವಿ ವಾರಾಹಿ ಇಂದ್ರಾಣಿ ಗಣನೆ
ಜತೆ ಸೇರಿ ಚಾಮುಂಡಿ ರಕ್ಕಸ ದಮನೆ ||

ಸೌಂದರ್ಯದತಿಶಯ ರಾಶಿಗಪ್ಸರೆಗಳು
ರಂಭಾ ಮೇನಕೆ ತಿಲೋತ್ತಮ ನಗಲು
ವಾರಕಾಂತೆ ಶಬರಿ ಹಿಡಿಂಬಿ ಸರದಿಗೆ
ಸೈರಂಧ್ರಿ ಒಟ್ಟಿಗೆ ಸುರಸುಂದರಿ ಸುರಗೆ ||

ಸಪುತಾಂಬುಧಿ ಸಪ್ತ ಸಾಗರಗಳೇಳು
ಲವಣ-ಉಪ್ಪಿಗೆ, ಇಕ್ಷು ತಾ ಕಬ್ಬಿನ್ಹಾಲು
ಸುರಾ-ಮದ್ಯದ ಪೂರ, ಕ್ಷೀರಕೆ-ಹಾಲ
ದಧಿ-ಮೊಸರು, ಸರ್ಪಿಸ್ತುಪ್ಪ, ನೀರ್ಜಲ ||

ದೇಹದಲ್ಲಿಯ ಸಪ್ತಧಾತುಗಳು ತಾವು
ರಸ ರಕ್ತ ಮಾಂಸ ಮಜ್ಜೆಗಳ ಫಲಿತವು
ಮೇದಸ್ಸು ಅಸ್ಥಿ ಶುಕ್ರಗಳೆಂಬವರ ಸೇರಿ
ಸಪ್ತ ಧಾತು ವೈಭವ ಹಿಡಿದ ಸರಿದಾರಿ ||

ಅಷ್ಟೇಕೆ ದೂರ ವಾರಗಳೇಳರ ಪ್ರಾಯ
ಭಾನು ಸೋಮ ಮಂಗಳರ ತಿಳಿಕಾಯ
ಬುಧ ಗುರು ಶುಕ್ರ ಗ್ರಹಗಳ ನೆನೆದೆಯ
ಶನಿವಾರ ಜತೆ ಸೇರಲು ಪೂರ್ಣಮಯ ||

– ನಾಗೇಶ ಮೈಸೂರು

00333: ಸಿಗರೇಟಿನ ವರ್ಣಾಶ್ರಮ..!


00333: ಸಿಗರೇಟಿನ ವರ್ಣಾಶ್ರಮ..!
______________________________

ನೋಡಬೇಕೆಂದು ಹೊರಟರೆ ಪ್ರಪಂಚದಲ್ಲಿ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ನಿಖರವಾಗಿ, ಸರ್ವಸಮ್ಮತವೆನಿಸುವಂತೆ ಗುರ್ತಿಸುವುದು ಕಷ್ಟ. ಯಾವ ಕ್ರಿಯೆಯ ಹಿನ್ನಲೆಯನ್ನೆ ನೋಡಲಿ ಅದರ ಕಾರ್ಯ-ಕಾರಣ ಸಮಷ್ಟಿತ ಸ್ಥಿತಿಯಲ್ಲಿ, ಪ್ರತಿಯೊಂದರ ಆಗುವಿಕೆಯನ್ನು ವಿವರಿಸಲು ಸಾಧ್ಯವಾಗುವುದರಿಂದ ಒಳಿತನ್ನಾಗಲಿ, ಕೆಡುಕನ್ನಾಗಲಿ ಸಂಧರ್ಭಕ್ಕೆ ತಕ್ಕ ಹಾಗೆ ಬಣ್ಣ ಹಾಕಿ ರೂಪಾಂತರಿಸಿಬಿಡಬಹುದು. ಅದೇ ರೀತಿಯಲ್ಲಿ ಬರಿ ಕೆಡುಕಿನದೆಂದೆ ಪರಿಭಾವಿಸುವ ವಿಷಯದಲ್ಲಿ ಒಳಿತಿನ ಮನೋಧರ್ಮವನ್ನು ಹುಡುಕುವುದು ಸಾಧ್ಯ; ಒಳಿತಿನಲ್ಲಿ ಕೆಡುಕನ್ನು ಸಹ

(click the link for the complete page: https://nageshamysore.wordpress.com/6422-2/)

Thanks and best regards,

Nagesha Mysore

00330. ಜ್ಞಾನ ಯಾನ, ಅನುಭವ ಘನ..!


00330. ಜ್ಞಾನ ಯಾನ, ಅನುಭವ ಘನ..!
_____________________________

ಪುಸ್ತಕ ಮಸ್ತಕಕೇರಿಸಿ
ಹೊತ್ತು ಮೆರೆಸಿದೆ ಸುತ್ತಿ
ಭಟ್ಟಿ ಇಳಿದೀತೆ ತಳಕೆ ?
ತಲೆಯೊಳಗಿನ ಬುಡಕೆ ||…..

(To read the full poem please click on this page link : https://nageshamysore.wordpress.com/00330-%e0%b2%9c%e0%b3%8d%e0%b2%9e%e0%b2%be%e0%b2%a8-%e0%b2%af%e0%b2%be%e0%b2%a8-%e0%b2%85%e0%b2%a8%e0%b3%81%e0%b2%ad%e0%b2%b5-%e0%b2%98%e0%b2%a8/)
Thanks and best regards,

Nagesha MN