00476. ಸಹಜೀವನ ಸಹನ – ಸೊಳ್ಳೆ ನೊಣ ಪುರಾಣ..! (ಮಕ್ಕಳಿಗೆ)


00476. ಸಹಜೀವನ ಸಹನ – ಸೊಳ್ಳೆ ನೊಣ ಪುರಾಣ..!(ಮಕ್ಕಳಿಗೆ)

_______________________________________ 

  

(Picture source from : https://en.m.wikipedia.org/wiki/File:Aedes_aegypti_E-A-Goeldi_1905.jpg)

  
(Picture sourc from : https://en.m.wikipedia.org/wiki/File:Hooke-bluefly.jpg)

ಈ ಭೂಮಂಡಲದಲಿ ಎಲ್ಲಾದರೂ ಸರಿ, ಬಾಳ್ವೆ ನಡೆಸಲು ಬೇಕಾದ ಅತಿ ಕನಿಷ್ಟ ಅರ್ಹತೆಯೆಂದರೆ – ಸಹಜೀವನಕೆ ಹೊಂದಾಣಿಕೆಯಾಗಬಲ್ಲ ಸಹನೆ. ಈ ಸಹಜೀವನ ಮನುಜ – ಮನುಜ ಮಾತ್ರವಲ್ಲದೆ, ಪ್ರಾಣಿ, ಪಕ್ಷಿ, ಕ್ರಿಮಿ-ಕೀಟಗಳಲ್ಲು ಕಂಡುಬರುವ ಹಾಗೆ, ನಾಗರೀಕತೆಯ ಸೊಂಕಿನಿಂದಾಗಿ ಮನುಜ ಮತ್ತು ಗಿಡ,ಮರ, ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳ ನಡುವೆಯು ಇರಲೇಬೇಕಾದ ಅಗತ್ಯದ ಕುರಿತು ಆಡಿಕೊಳ್ಳುವ ಕವನ – ಈ ಪದ್ಯ.

ಈ ನವ ಜೀವನ
ಸಹಜೀವನ ಸಹನ
ಸಹನೆಯೆ ಜೀವನ ಗಾನ
ಕ್ರಿಮಿ ಕೀಟ ಜಂತು ಜತೆಗಾಹ್ವಾನ ||

ಸೊಳ್ಳೆ ನೊಣಗಳ ಕಾಟ
ಬೇಡವೆಂದರೂ ಬರುವಾ ನೆಂಟ
ಹೊತ್ತು ಬಾರೊ ರೋಗದ ತರಲೆ ಕಂಟಕ
ಸ್ವಚ್ಚವಿಡಬೇಕು ಮನೆ ಮಠ ಆಗೆ ನಿರಾತಂಕ ||

ನೆಲಗಿಲ ಶುದ್ಧ ಜಲ
ವರೆಸುತ ಕ್ರಿಮಿ ಕೀಟಗಳ
ಇಟ್ಟರೆ ಕನ್ನಡಿಯಂತೆ ಒಳಗೆ ಹೊರಗೆ
ಹತ್ತಿರ ಸುಳಿಯದ ಸೊಳ್ಳೆ ನೊಣಗಳೆ ಕೊರಗೆ ||

ಹೀಗೆಷ್ಟೋ ಸಹವಾಸಿಗಳು
ಬಾಡಿಗೆ ಕೊಡದ ಸಹವರ್ತಿಗಳು
ಸಮರಸ ಜೀವನದ ಪಾಠ ಕಲಿಸೊ ಐಗಳು
ಸಹಜೀವನ ಸಹನೆಗೆ ಅಡಿಪಾಯವಿಡುವ ಕೈಗಳು ||

—————————————————————–
ನಾಗೇಶ ಮೈಸೂರು