00280. ಕಥೆ: ಪರಿಭ್ರಮಣ..(67) (ಅಂತಿಮ ಕಂತು)


00280. ಕಥೆ: ಪರಿಭ್ರಮಣ..(67) (ಅಂತಿಮ ಕಂತು)
___________________________________

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, ಮೈಸೂರು, nageshamysore, Nagesha Mysore, nagesha

‘ ..ಆದರೆ, ಅದ್ಯಾವ ಸಂಸ್ಕಾರ ಪ್ರೇರಣೆಯೊ, ಅಥವಾ ಪದೇ ಪದೇ ಬಿಡದೆ ಎಚ್ಚರಿಸುತ್ತಿದ್ದ ನನ್ನ ಅಮ್ಮನ ಎಚ್ಚರಿಕೆಯ ನುಡಿಗಳೊ – ನಾನೆಂದು ಸಲಿಗೆಯ ಗಡಿಯಾಚೆಯ ಸ್ವೇಚ್ಛೆಯ ಬಲೆಗೆ ಬೀಳದಂತೆ ಎಚ್ಚರವಾಗಿದ್ದೆ… ಎಲ್ಲಾ ಕಡೆ ಓಡಾಡುತ್ತಿದ್ದೆವು, ಸಿನಿಮಾ ಪಾರ್ಕು ಎಂದೆಲ್ಲಾ ಸುತ್ತಾಡುತ್ತಿದ್ದೆವು ಎನ್ನುವುದು ನಿಜವಾದರು, ಅದು ಕೈ ಕೈ ಹಿಡಿದು ಒತ್ತಾಗಿ ಕೂರುವ ಮಟ್ಟಕ್ಕೆ ಬಿಟ್ಟರೆ ಅದಕ್ಕು ಮೀರಿದ ಹೆಚ್ಚಿನ ಒಡನಾಟಕ್ಕಿಳಿಯಲು ತಾವೀಯಲಿಲ್ಲ… ಅದೇನಕ್ಕು ಹೋಗಬಾರದು ಎನ್ನುವ ವಿವೇಚನೆಗಿಂತ ಮದುವೆಗೆ ಮೊದಲು ಏನು ಮಾಡಿದರು ನೈತಿಕವಾಗಿ ಸರಿಯಲ್ಲ ಎನ್ನುವ ಭಾವನೆಯೆ ಹೆಚ್ಚು ಪ್ರಬಲವಾಗಿತ್ತು.

( ಪರಿಭ್ರಮಣ..67ರ ಕೊಂಡಿ – https://nageshamysore.wordpress.com/00280-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-67-%e0%b2%85%e0%b2%82%e0%b2%a4%e0%b2%bf%e0%b2%ae-%e0%b2%95%e0%b2%82%e0%b2%a4%e0%b3%81/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00279. ಕಥೆ: ಪರಿಭ್ರಮಣ..(66) (ಅಂತಿಮ-ಪೂರ್ವ ಕಂತು)


00279. ಕಥೆ: ಪರಿಭ್ರಮಣ..(66) (ಅಂತಿಮ-ಪೂರ್ವ ಕಂತು)

ಸರಿಯಾಗಿ ಅದೆ ಹೊತ್ತಿನಲ್ಲಿ ಯಾವುದೋ ಯುದ್ಧ ಗೆದ್ದ ವಿಜಯೋತ್ಸಾಹದಲ್ಲಿ ಪೋನ್ ಕೆಳಗಿಡುತ್ತಿದ್ದ ಶ್ರೀನಿವಾಸ ಪ್ರಭು.. ಇಂಡೋನೇಶಿಯ ಸುಲಭದ ಪ್ರಾಜೆಕ್ಟಲ್ಲ ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು.. ಹೊರಗಿನ, ಒಳಗಿನ ಜನರೆಲ್ಲ ಸೇರಿ ಏಳೆಂಟು ಜನಗಳಾದರೂ ಬೇಕಾಗಿದ್ದ ಪ್ರಾಜೆಕ್ಟಿಗೆ ಇಬ್ಬರು ಮೂವರು ಸಾಕು ಎನ್ನುವ ಹೊಸ ಥಿಯರಿ ಉರುಳಿಸಿದ್ದ – ರೋಲ್ ಔಟ್ ಪ್ರಾಜೆಕ್ಟ್ ಎನ್ನುವ ನೆಪದಲ್ಲಿ.. ಆದರೆ ನೈಜದಲ್ಲಿ ಅದು ರೋಲೌಟ್ ಪ್ರಾಜೆಕ್ಟ್ ಆಗಿರಲೆ ಇಲ್ಲಾ ! ಅಲ್ಲಾವ ಟೆಂಪ್ಲೇಟ್ ಕೂಡಾ ಇರಲಿಲ್ಲ ‘ಕಾಪಿ – ಪೇಸ್ಟ್’ ತರಹದ ಸುಲಭದ ಕೆಲಸ ಮಾಡಲು. ಅದೆಲ್ಲಾದಕ್ಕೂ ಜತೆಯಾಗಿ ಐದಾರು ತಿಂಗಳಲ್ಲಿ ಮುಗಿಸಬೇಕೆಂದರೆ – ಅದನ್ನು ಮಾಡಹೊರಟವ ಸತ್ತಂತೆಯೆ ಲೆಕ್ಕ..! ಹೇಗಾದರೂ ಶ್ರೀನಾಥನನ್ನ ಇದಕ್ಕೆ ಸಿಕ್ಕಿಸಿಬಿಟ್ಟರಾಯ್ತು…….

( ಪರಿಭ್ರಮಣ..66ರ ಕೊಂಡಿ – https://nageshamysore.wordpress.com/00278-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-66/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00278. ಕಥೆ: ಪರಿಭ್ರಮಣ..(65)


00277. ಕಥೆ: ಪರಿಭ್ರಮಣ..(65)

ಹೀಗೆ ತನ್ನನುಭವದ ಪರಾಮರ್ಶೆಯಲ್ಲಿ, ತುಲನಾತ್ಮಕ ವಿಶ್ಲೇಷಣೆಯಲ್ಲಿ ಕಳೆದು ಹೋಗಿದ್ದ ಶ್ರೀನಾಥನಿಗೆ ಬಸ್ಸಿನ ಚಲನದಿಂದಾದ ಜೊಂಪಿನ ಮಂಪರು ಜತೆಗೆ ಸೇರಿಕೊಂಡು ತೂಕಡಿಸುವಂತಾಗಿ ಅವನ ಅರಿವಿಲ್ಲದೆಯೆ ನಿದಿರಾದೇವಿಯ ಮಡಿಲಿಗೆ ಜಾರಿಹೋಗಿದ್ದ. ಆ ನಿದಿರೆಯಲ್ಲೂ ಮನದಾಳದ ಆಧ್ಯಾತ್ಮವು ಸಂಪಾದಿಸಿಕೊಂಡಿದ್ದ ಪ್ರಶಾಂತ ಭಾವವೆ ಪ್ರಖರವಾಗಿ ಒಡಮೂಡಿ, ಯಾವುದೆ ತಾಕಲಾಟ, ತೊಳಲಾಟಗಳಿಲ್ಲದ ಸುಖಕರ ಪಯಣವನ್ನಾಗಿಸಿಬಿಟ್ಟಿತ್ತು. ಆ ಗಾಢತೆಯ ಪ್ರಭಾವದ ಮಂಪರಿನಿಂದ ಮತ್ತೆ ಹೊರಬಿದ್ದು ಪ್ರಾಪಂಚಿಕ ಜಗದ ಆವರಣಕ್ಕೆ ಮರಳಲು ಬಸ್ಸು ಬ್ಯಾಂಕಾಕಿನ ಬಸ್ ಸ್ಟ್ಯಾಂಡನ್ನು ತಲುಪಿ, ಬ್ರೇಕು ಹಾಕಿ ಪೂರ್ತಿ ನಿಲ್ಲಿಸಿದಾಗಷ್ಟೆ ಸಾಧ್ಯವಾಗಿತ್ತು. ತೆರೆಯಲೇ ಆಗದ ಭಾರವಾದ ಕಣ್ಣುಗಳನ್ನು ಬಲು ಕಷ್ಟದಿಂದ ತೆರೆಯುತ್ತ, ಆಕಳಿಸಿ ಮೈ ಮುರಿಯುತ್ತ ಮೇಲೆದ್ದ ಶ್ರೀನಾಥನಿಗೆ ಕೆಳಗಿಳಿಯುವ ಹೊತ್ತಲ್ಲಷ್ಟೆ ಅರಿವಾಗಿದ್ದು – ತಾನೆ ಬಸ್ಸಿನಿಂದಿಳಿಯುತಿರುವ ಕೊನೆಯ ಪ್ರಯಾಣಿಕ ಎಂದು. ತನ್ನ ಪುಟ್ಟ ಚೀಲವನ್ನು ಹೆಗಲಿಗೆರಿಸಿಕೊಂಡು ಅಲ್ಲೆ ಸಿಕ್ಕಿದ್ದ ಟ್ಯಾಕ್ಸಿಯನ್ನು ನಿಲ್ಲಿಸಿ ತನ್ನ ಸರ್ವೀಸ್ ಅಪಾರ್ಟ್ಮೆಂಟ್ ಸೇರಿಕೊಂಡಾಗ ಮತ್ತೆ ಏಕಾಂತದ, ಏಕಾಂಗಿತನದ ಗೂಡೊಳಕ್ಕೆ ಹೊಕ್ಕಿಕೊಳ್ಳುತ್ತಿರುವೆನೇನೊ ? ಎಂಬ ಅಳುಕಿನಿಂದಲೆ ಒಳಗೆ ಪ್ರವೇಶಿಸಿದರೂ, ಒಳ ನಡೆದು ದೀಪ ಹಾಕುತ್ತಿದ್ದಂತೆ ಏನೊ ಸಾತ್ವಿಕ ಭಾವ ತನ್ನ ಸುತ್ತಲೂ ಪಸರಿಸಿಕೊಂಡಿರುವುದರ ಅನುಭವವಾಗಿತ್ತು; ಆ ಗಳಿಗೆಯಲ್ಲಿ ಮೊದಲಿನ ಏಕಾಂಗಿತನದ ಭಾವ ಹತ್ತಿರ ಸುಳಿಯದೆ ಖೇದವೂ ಅಲ್ಲದ ಹರ್ಷವೂ ಅಲ್ಲದ ನಿರ್ಲಿಪ್ತಭಾವ ಮನೆ ಮಾಡಿಕೊಂಡಿರುವುದನ್ನು ಕಂಡು ಪೂರ್ತಿ ನಿರಾಳವಾಗಿತ್ತು ಶ್ರೀನಾಥನಿಗೆ. ಆ ಪ್ರಶಾಂತ ನಿರ್ಲಿಪ್ತತೆ ತಂದ ನಿರಾಳ ಭಾವದಲ್ಲೆ ಅಡಿಗೆ ಮನೆಯಲ್ಲಿದ್ದ ನೆಸ್ಟ್ ಲೆ ಥ್ರೀ-ಇನ್-ವನ್ ಕಾಫಿಯ ಸ್ಯಾಷೆ ಯನ್ನು ಕುದಿಯುವ ಬಿಸಿನೀರಿಗೆ ಬೆರೆಸಿ ‘ಕ್ಷಿಪ್ರ ಕಾಫಿ’ ತಯಾರಿಸಿ ಆ ಕಾಫಿ ಲೋಟವನ್ನು ಕೈಲಿಡಿದು ಬಾಲ್ಕನಿಗೆ ಬಂದು ನಿಂತ. ಆಗ ತಟ್ಟನೆ, ‘ಅರೆರೆ… ಬಹುದಿನಗಳ ನಂತರ ಈ ಬಾಲ್ಕನಿಗೆ ಬಂದು ನಿಂತಿದ್ದಲ್ಲವೆ ?’ ಎನಿಸಿತು. ……….

( ಪರಿಭ್ರಮಣ..65ರ ಕೊಂಡಿ – https://nageshamysore.wordpress.com/00276-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-64/)

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00276. ಕಥೆ: ಪರಿಭ್ರಮಣ..(64)


00276. ಕಥೆ: ಪರಿಭ್ರಮಣ..(64)

‘ಅದನ್ನು ಅರ್ಥೈಸಲು ತುಸು ಇನ್ನೂ ಆಳಕ್ಕಿಳಿಯಬೇಕಾಗುತ್ತದೆ ಕುನ್. ಶ್ರೀನಾಥ… ಅದು ಸೂಕ್ತವಾಗಿ ಅರ್ಥವಾಗಲಿಕ್ಕೆ, ಪೂರ್ವಾತ್ಯ ಮತ್ತು ಪಾಶ್ಚಿಮಾತ್ಯರ ಆಲೋಚನಾ ಕ್ರಮಗಳಲ್ಲಿ ಸಾಮಾನ್ಯವಾಗಿ ಎದ್ದು ಕಾಣುವ ವ್ಯತ್ಯಾಸಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ವಿವರಿಸುತ್ತೇನೆ… ಸೃಜನಶೀಲತೆಯ ವಿಷಯಕ್ಕೆ ಬಂದರೆ ಪೂರ್ವಾತ್ಯರು ಮತ್ತು ಪಾಶ್ಚಿಮಾತ್ಯರ ಚಿಂತನಾ ಕ್ರಮ ಒಂದೆ ರೀತಿ ಇರುವುದಿಲ್ಲ… ಉದಾಹರಣೆಗೆ ಪಾಶ್ಚಿಮಾತ್ಯರ ಅಧ್ಯಯನದಲ್ಲಿ ಯಾವುದನ್ನೆ ಸಂಶೋಧಿಸ ಹೊರಟರು, ಅವರು ಹಿಡಿಯುವ ಹಾದಿ ಪಕ್ಕಾ ನಿಖರತೆಯ ಹಾದಿ. ಅಲ್ಲಿ ಹತ್ತು ಸಾಧ್ಯತೆಯ ದಾರಿಗಳಿದ್ದರೆ ಪ್ರತಿಯೊಂದನ್ನು ಒಂದೊಂದಾಗಿ ಪರಾಮರ್ಶಿಸಿ, ಸೂಕ್ತವಾಗಿಲ್ಲದ್ದನ್ನು ತ್ಯಜಿಸಿ ಅಂತಿಮ ತೀರ್ಮಾನಕ್ಕೆ ತಲುಪುತ್ತಾರೆ. ಅದರ ಮುಂದಿನ ಹೆಜ್ಜೆಯೂ ಅದೇ ರೀತಿಯಲ್ಲಿ ಸಾಗುತ್ತದೆ, ಅಂತಿಮ ಪರಿಹಾರ ದೊರಕುವತನಕ… ಹೀಗೆ ಎಲ್ಲಕ್ಕು ನಿಖರ, ಖಚಿತ ಸಾಕ್ಷ್ಯವಿರಬೇಕು ಎನ್ನುವುದು ಅಲ್ಲಿಯ ಮೂಲತತ್ವ. ಅದೇ ನಮ್ಮ ಪೂರ್ವಾತ್ಯ ಸಂಸ್ಕೃತಿಯಲ್ಲಿ ನೋಡು – ಸಾಕ್ಷ್ಯಾಧಾರಿತದಷ್ಟೆ ಪ್ರಬಲವಾಗಿ, ನಂಬಿಕೆಗಳನ್ನು, ಪವಾಡ ಸದೃಶ್ಯತೆಯನ್ನು ಸುಲಭವಾಗಿ ನಂಬುತ್ತೇವೆ. ಎಲ್ಲವನ್ನು ಬರಿಯ ನಿಖರ ಸಾಕ್ಷ್ಯದಲ್ಲಿಯೆ ಸಾಧಿಸಿ ತೋರಿಸಬೇಕಿಲ್ಲ. ನಮ್ಮ ಎಷ್ಟೊ ನಂಬಿಕೆಯ ತರ್ಕಗಳು ಪಾಶ್ಚಿಮಾತ್ಯರ ದೃಷ್ಟಿಯಲ್ಲಿ ನಂಬಲರ್ಹ ತರ್ಕಗಳಾಗದೆ, ಮೂಢನಂಬಿಕೆಗಳಾಗಿ ತೋರಿಕೊಂಡರು ಅಚ್ಚರಿಯೇನಿಲ್ಲ..’…….

( ಪರಿಭ್ರಮಣ..64ರ ಕೊಂಡಿ – https://nageshamysore.wordpress.com/00276-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-64-2/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00275. ಕಥೆ: ಪರಿಭ್ರಮಣ..(63)


00275. ಕಥೆ: ಪರಿಭ್ರಮಣ..(63)

‘ನಿಜ ಹೇಳಬೇಕೆಂದರೆ ಅವೆರಡು ಸರಳ ಭೌತಿಕ ಕಾಯಕಗಳಲ್ಲೂ ಅಷ್ಟೊಂದು ಗಹನ ತತ್ವಸಿದ್ದಾಂತದ ಕಸುವು ತಳುಕು ಹಾಕಿಕೊಂಡಿರುತ್ತದೆಂದು ನಾನು ಖಂಡಿತ ಊಹಿಸಿರಲಿಲ್ಲ ಮಾಸ್ಟರ.. ನನಗದೊಂದು ರೀತಿಯ ಕಣ್ಣು ತೆರೆಸಿದ ಅನುಭವವೆಂದರೂ ತಪ್ಪಾಗಲಾರದು…’ ತನ್ನ ಕಸ ಗುಡಿಸಿದ ಮತ್ತು ಹೊಂಡಕ್ಕೆ ನೀರು ತುಂಬಿಸಿದ ಅನುಭವಗಳನ್ನು ನೆನೆಸಿಕೊಂಡು, ಮತ್ತೆ ಮೆಲುಕು ಹಾಕುತ್ತ ನುಡಿದ ಶ್ರೀನಾಥ.

‘ ಅದರಲ್ಲಿ ಅಚ್ಚರಿ ಪಡಲಾದರೂ ಏನಿದೆ ಕುನ್. ಶ್ರೀನಾಥ ? ನಿನಗರಿವಾದಂತೆ ಪ್ರತಿಯೊಂದು ಅಸ್ತಿತ್ವವೂ ಪಂಚಭೂತಗಳಿಂದಾದ ವಿವಿಧ ಸ್ವರೂಪಗಳೇ ತಾನೆ? ಅರ್ಥಾತ್ ಅವೆಲ್ಲವೂ ಶಕ್ತಿಯ ವಿವಿಧ ರೂಪಗಳೆ ಅಲ್ಲವೆ? ಆ ಶಕ್ತಿ ಪ್ರಕಟರೂಪದಲ್ಲಿರುವುದೊ, ಅಡಗಿಸಿಟ್ಟ ಜಡದೇಹಿಯಾಗಿ ಕೂತಿರುವುದೊ ಎನ್ನುವ ಅಪ್ರಸ್ತುತ ಜಿಜ್ಞಾಸೆಯನ್ನು ಬದಿಗಿಟ್ಟರೆ, ಒಟ್ಟಾರೆ ಅಲ್ಲಿ ಅಸ್ತಿತ್ವದಲ್ಲಿರುವ ಅಂತರ್ಗತ ಶಕ್ತಿಯಿರುವುದು ಖಚಿತವಾಗುವುದರಿಂದ, ಅದರ ಸಾಮರ್ಥ್ಯಕ್ಕೆ ಅಚ್ಚರಿ ಪಡುವಂತದ್ದೇನು ಇರುವುದಿಲ್ಲ…’ ಅವನ ಅನಿಸಿಕೆಯನ್ನೆ ತುಸು ತಾತ್ವಿಕ ಮಟ್ಟಕ್ಕೇರಿಸಲು ಯತ್ನಿಸುತ್ತ ನುಡಿದರು ಮಾಂಕ್. ಸಾಕೇತ್……

( ಪರಿಭ್ರಮಣ..63ರ ಕೊಂಡಿ – https://nageshamysore.wordpress.com/00275-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-63/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00274. ಕಥೆ: ಪರಿಭ್ರಮಣ..(62)


00274. ಕಥೆ: ಪರಿಭ್ರಮಣ..(62)

ಈ ಬಾರಿ ಮೊದಲಿನ ಹಾಗೆ ಹತ್ತತ್ತೆಜ್ಜೆಗೆ ಗುಪ್ಪೆ ಮಾಡಿ ಹಲವಾರು ಕಡೆ ಗುಡ್ಡೆ ಹಾಕುವ ಬದಲು, ಬರಿ ಆರಂಭದ, ಮಧ್ಯದ ಮತ್ತು ತುದಿಯ ಮೂರು ಕಡೆ ಮಾತ್ರ ಗುಡ್ಡೆ ಹಾಕಲು ನಿರ್ಧರಿಸಿ ಗಾಳಿಗೆ ಹಾರಲಾಗದಂತೆ ಅಡ್ಡವಿರುವ ಎಡೆ ಯಾವುದಾದರು ಇದೆಯೆ ಎಂದು ನೋಡಿದವನಿಗೆ, ಮೊದಲ ಎಡೆಗಂತು ಹೆಬ್ಬಾಗಿಲಿನ ಪಕ್ಕದ ಎತ್ತರದ ಗೋಡೆಯ ಬದಿಯೆ ಸೂಕ್ತ ಎನಿಸಿತು. ‘ಅಲ್ಲಿ ಎಷ್ಟೆ ಗಾಳಿ ಬೀಸಿದರು ಆ ಗೋಡೆಯ ತಡೆಯೆದುರು ಕುಗ್ಗಿ ಮಣಿಯಲೇಬೇಕು. ಆಗ ಅದರಡಿಯ ಗುಡ್ಡೆಯೂ ಅಷ್ಟಿಷ್ಟು ಅಲ್ಲಲ್ಲೆ ಹಾರಾಡಿದರು ಮತ್ತೆ ಹೆಕ್ಕಿದ ಹಾದಿಗೆ ಬೀಳಲು ಆಗದು… ಬೀಸುತ್ತಿರುವ ಗಾಳಿಯೂ, ಗೋಡೆಯ ಕಡೆಗೆ ಬೀಸುತ್ತಿರುವುದರಿಂದ ಅವು ಮತ್ತೆ ಮತ್ತೆ ಗೋಡೆಗೆ ಬಡಿದುಕೊಂಡು, ಅಲ್ಲೆ ಬೀಳಬೇಕೆ ಹೊರತು ಕಳೆದ ಬಾರಿಯಂತೆ ಚೆದುರಿ ಚೆಲ್ಲಾಪಿಲ್ಲಿಯಾಗಲಿಕ್ಕೆ ಸಾಧ್ಯವಿಲ್ಲ. ಇಲ್ಲಿ ಒಂದೆ ಒಂದು ತೊಡಕೆಂದರೆ ಕಸವನ್ನು ಸುಮಾರು ದೂರ ಗುಡಿಸಬೇಕು……

( ಪರಿಭ್ರಮಣ..62ರ ಕೊಂಡಿ – https://nageshamysore.wordpress.com/00274-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-62/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00273. ಕಥೆ: ಪರಿಭ್ರಮಣ..(61)


00273. ಕಥೆ: ಪರಿಭ್ರಮಣ..(61)

ಅಂದು ಕೂಡ ಎಂದಿನಂತೆ ಬೆಳಗಿನ ನಿತ್ಯದ ಕಾರ್ಯಕ್ರಮಗಳನ್ನೆಲ್ಲ ಮುಗಿಸಿ ಎಂಟೂವರೆಯಷ್ಟೊತ್ತಿಗೆ ಆ ದಿನದ ಆಹಾರವನ್ನು ಸೇವಿಸಿ ‘ಕುಟಿ’ಯತ್ತ ಹೆಜ್ಜೆ ಹಾಕುತ್ತಿದ್ದ ಶ್ರೀನಾಥ. ಮೂರು ದಿನಗಳಿಂದಲೂ ಬರಿಯ ಒಂದು ಹೊತ್ತಿನ ಆಹಾರ ಸೇವನೆಯಿಂದಾಗಿ ಬಳಲಿ ಕುಸಿದು ಹೋಗಬಹುದೇನೊ ಎಂದುಕೊಂಡಿದ್ದವನಿಗೆ ಅಚ್ಚರಿಯಾಗುವಂತೆ ಯಾವುದೊ ಹೇಳಲಾಗದ ಲವಲವಿಕೆ ಮೈ ತುಂಬಿಕೊಂಡಿದ್ದಂತೆ ಭಾಸವಾಗುತ್ತಿತ್ತು. ಆ ನಡೆವ ರೀತಿಯ ಸುಗಮತೆಯಲ್ಲೆ ಬಹುಶಃ ತುಸು ದೇಹದ ತೂಕವೂ ವರ್ಜ್ಯವಾಗಿರಬಹುದೆಂದು ಅನಿಸಲಿಕ್ಕೆ ಆರಂಭವಾಗಿದ್ದರೂ, ಅದಿನ್ನು ದೈಹಿಕವಾಗಿ ಗಮನೀಯ ಮಟ್ಟ ಮುಟ್ಟುವಷ್ಟು ಪ್ರಗತಿ, ಮೂರೆ ದಿನಗಳಲ್ಲಿ ಕಾಣಲು ಸಾಧ್ಯವಿಲ್ಲವೆಂಬ ಅಂಶವೂ ಮನವರಿಕೆಯಾಗಿ ಬಹುಶಃ ಆ ದಿಕ್ಕಿನತ್ತ ಸಾಗುತ್ತಿರುವ ಹಂತದಲ್ಲಿರಬಹುದೆಂದುಕೊಂಡು ಮುನ್ನಡೆದಿದ್ದವನಿಗೆ ಎಲ್ಲೊ ಓದಿದ್ದ ಮತ್ತೊಂದು ಅಂಶವೂ ನೆನಪಾಗಿತ್ತು… ಕೇವಲ ಆಹಾರ ಬಿಟ್ಟು ಉಪವಾಸ ಮಾಡಲಾರಂಭಿಸಿದ ಮಾತ್ರಕ್ಕೆ ದೇಹದ ತೂಕ ಏಕಾಏಕಿ ಕಡಿಮೆಯಾಗುವುದಿಲ್ಲ. ದೇಹದ ಜೈವಿಕ ಗಡಿಯಾರ ಹೊತ್ತಿಗೆ ಸರಿಯಾಗಿ ‘ಹಸಿವು’ ಎಂದು ಸೂಚನೆ ಕೊಡತೊಡಗಿದಂತೆ ಹೊಟ್ಟೆಯು ತಾಳ ಹಾಕುವುದು ಸಹಜ ಕ್ರಿಯೆಯಾದರು, ಅದಕ್ಕೆ ತಕ್ಷಣವೆ ಉಣ್ಣಲಿಡದಿದ್ದರೆ ತುಸು ಹೊತ್ತಿನ ನಂತರ ಆ ಹಸಿವೆ ಹಿಂಗಿ ಹೋದ ಅನುಭವವಾಗುವುದು ಮಾಮೂಲಿ ಪ್ರಕ್ರಿಯೆ. ಏಕೆಂದರೆ, ಯಾವಾಗ ಹೊರಗಿನಿಂದ ಬರಬೇಕಾದ ಆಹಾರ ಬರಲಿಲ್ಲವೊ, ಆಗ ದೇಹದಲ್ಲಿ ಶೇಖರವಾಗಿರುವ ಹೆಚ್ಚಿನ ಕೊಬ್ಬನ್ನೆ ಬಳಸಿಕೊಂಡು ಆ ಗಳಿಗೆಯ ಹಸಿವೆಯನ್ನು ತಾತ್ಕಾಲಿಕವಾಗಿ ಹಿಂಗಿಸಿ, ತನ್ನ ಚಟುವಟಿಕೆಗೆ ಬೇಕಾದ ಶಕ್ತಿಯನ್ನು ಒದಗಿಸಿಕೊಳ್ಳುತ್ತದೆ ಚಾಣಾಕ್ಷ ದೇಹದ ಕಾರ್ಖಾನೆ. ಇದೊಂದು ರೀತಿ, ಮರಿ ಹಾಕಿದ ಬೆಕ್ಕು ತನ್ನ ಮರಿಯನ್ನೆ ತಿಂದುಹಾಕುವ ಹಾಗೆ, ಶೇಖರಿತ ಕೊಬ್ಬಿನ ಕೋಶಗಳನ್ನೆ ತಿಂದುಹಾಕಿ, ಆ ಶಕ್ತಿಯಿಂದ ಮಿಕ್ಕ ಕೋಶಗಳ ನಿರ್ವಹಣೆಯ ಕಾರುಬಾರು ನಡೆಸಿದ ಹಾಗೆ. ಇದೆ ಪ್ರಕ್ರಿಯೆ ಸದಾ ಕಾಲ ಪದೇಪದೇ ನಡೆಯುತ್ತಿದ್ದರೆ, ಅದು ಅಸಿಡಿಟಿಯ ರೂಪವಾಗಿ ಗ್ಯಾಸ್ಟಿಕ್ಕಿನಂತಹ ತಲೆನೋವಿಗೆ ಕಾರಣವಾಗುತ್ತದೆನ್ನುವುದು ಬೇರೆ ವಿಷಯ. ಅದಕ್ಕೆ ಆ ಹಸಿವಿನ ಹೊತ್ತಲ್ಲಿ ಏನೂ ತಿನ್ನಲು ಅವಕಾಶವಿರದಿದ್ದರೆ, ಕೊಂಚ ನೀರಾದರೂ ಕುಡಿದು ಆ ಉರಿವ ಕೋಶಗಳನ್ನು ಶಮನಗೊಳಿಸುವುದುಚಿತ ಎನ್ನುತ್ತಾರೆ. ಆದರಿಲ್ಲಿ ದಿನಕ್ಕೊಂದೆ ಹೊತ್ತು ತಿನ್ನುವ ನಿರ್ಬಂಧವಿದ್ದರು ಯಾವುದೆ ರೀತಿಯ ತೊಡಕಾಗದಂತೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗಿತ್ತು. ‘ಪ್ರಾಯಶಃ ಭೌತಿಕ ಚಟುವಟಿಕೆಗಳಿಗಿಂತ ಹೆಚ್ಚು ಧ್ಯಾನದಂತಹ ಮಾನಸಿಕ ಕ್ರಿಯೆಗಳಲ್ಲಿ ತಲ್ಲೀನವಾಗಿದ್ದ ಕಾರಣ ದೇಹಕ್ಕೆ ಹೆಚ್ಚು ಬಾಹ್ಯಶಕ್ತಿಯ ಅಗತ್ಯ ಬೀಳಲಿಲ್ಲವೇನೊ’ ಎಂದುಕೊಳ್ಳುತ್ತಲೆ ‘ಕುಟಿ’ಯ ಮೆಟ್ಟಿಲು ಹತ್ತುತ್ತ ಮಾಂಕ್ ಸಾಕೇತರು ನೀಡಿದ್ದ ನಕ್ಷೆಯ ಪ್ರತಿಯನ್ನು ಕೈಗೆತ್ತಿಕೊಂಡ ಶ್ರೀನಾಥ. ….

( ಪರಿಭ್ರಮಣ..61ರ ಕೊಂಡಿ – https://nageshamysore.wordpress.com/00273-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-61/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com