01427. ನರ ಜೀವನ – ಪಶು ‘ಜೂ’ವನ


01427. ನರ ಜೀವನ – ಪಶು ‘ಜೂ’ವನ
____________________________


ಇದು ಜೀವನ
ಇದುವೆ ಜೂ-ವನ
ಪ್ರಾಣ ಪಂಜರದ ತಾಣ
ಪ್ರಾಣಿ ಪಂಜರದ ಸಂಕಲನ ||

ಜೀವದ ಪ್ರವೇಶ
ಪಂಜರದಲ್ಲಿ ವಾಸ
ಗರ್ಭದುಧ್ಭವ ಕಾಯ
ದರ ತೆತ್ತು ನೋಡುವೆಯ ||

ಅಂಕಣದ ತೊಗಲು
ಅಂಕೆಯಲಿಟ್ಟ ಬಾಳು
ಕಾಣದಾಡಿಸುವವನಾಟ
ಅವನಂತಾಡಿಸುವ ಕಪಟ ||

ಬೇಕಿರಲೊಂದು ನಿಲಯ
ಅವಕಿರಲೊಂದು ಮೃಗಾಲಯ
ಕಟ್ಟವನ ಬಂಧಿಸಲೊಂದು ಆಲಯ
ಬಿಡುಗಡೆಯ ಬಯಸುವಾ ಪಶು ಜೀವ ||

ಅವ ಸಂಸಾರ ಬಂಧನದಲಿಟ್ಟ
ಮನರಂಜನೆಗಿವ ಗೂಡಲಿ ಕೂಡಿಟ್ಟ
ತೆಗಳುತದೆ ಮಾಯೆಯ ಹೆಸರಲಿ ನರನೆ
ಪಶು ಬಂಧನವನಾನಂದಿಸುವೆ ಸರಿಸಮನೆ ||


– ನಾಗೇಶ ಮೈಸೂರು
(Nagesha Mn)

(Picture source : http://thezilla.com/zoo-humans-caged-animals-roam-free/)