00522. ಎಳೆ ಪ್ರಾಯದ ದಿನಗಳು…. (ಭಾಗ 02)


00522. ಎಳೆ ಪ್ರಾಯದ ದಿನಗಳು…. (ಭಾಗ 02)
—————————————————-

  
(Picture from – https://www.ric.edu/educationalstudies/images/youthDev.jpg)

ಕಾಲೇಜಿನ ಕನ್ಯೆಯರ್ಹಿಂದೆ
ಓಡಾಟ ತೆರೆಸಿದ ವಿಶ್ವ ಮುಗುದೆ
ಗೆಳೆಯ ಗೆಳತಿಯಾಗುತ ಮುಂದೆ
ಬೆಳೆಸಿದ ಫ್ರೌಡಿಮೆ ಕಾಡದೆ! ||

ಕಾಡಿ ಕೆಲಸದ ಹೆಣ್ಣೈಕಳ
ಮನೆ ಮುಸುರೆ-ಗಿಸುರೆ ತಿಕ್ಕುವವಳ
ಹಳ್ಳಿ ಭಾಷೆಗಣಕಿಸಿ ಕೋಪಕೆ ತಾಳ
ಮಿತಿ ಮಿರದಂತವಹೇಳ! ||

ಟೈಪಿಂಗು ಇನ್ಸ್ಟಿಟ್ಯೂಟಿನ
ಲಲನೆಯರನು ಕಲಿಯೆ ಹೋದನ
ಬೆರಳಚ್ಚುವಿಕೆಗೆ ಕಲಿತನ ಮರೆತನ
ಪ್ರೇಮಪತ್ರವನ್ನೆ ಬರೆದನ! ||

ಟ್ಯೂಶನ್ನಿನ ಫ್ಯಾಷನ್ನಿನಲಿಳಿ
ಪಾಠಕೆ ಬರಹ ತಾರುಣ್ಯ ಹಾವಳಿ
ಬಾವಲಿಯ ತರುಣಿ ದಂಡೆ ಬವಳಿ
ಭೂತಭವಿತ ಮರೆಸವಕಳಿ! ||

ಮಾಗಿದನುಭವ ವಯಸೆಂದೆ
ಸೇರ್ಯಾವುದೋ ಕೆಲಸದ ಮಂದೆ
ಅಲ್ಸಿಕ್ಕುವ ಮಾಗಿದ ಹೆಣ್ಣ್ಗಳ ಹಿಂದೆ
ಪಕ್ವವಾಗಿಸಿ ಮಾಗುವ ಹಂದೆ! ||

———————————————————————
ನಾಗೇಶ ಮೈಸೂರು
———————————————————————

00521. ಎಳೆ ಪ್ರಾಯದ ದಿನಗಳು…. (ಭಾಗ – 01)


00521. ಎಳೆ ಪ್ರಾಯದ ದಿನಗಳು…. (ಭಾಗ – 01)
_______________________________

  
(Picture source : Kannadamoviesinfo.wordpress.com)

ಹುಡುಗೈಕಳ ಕಾಡಿಸುತ
ರೊಚ್ಚಿಗೆಬ್ಬಿಸಿದ್ದೆ ಹುಸಿ ಛೇಡಿಸುತ
ಹುಡುಗಿಯರನೆ ಹಿಂಬಾಲಿಸುತ
ಕಾಲ ಕಳೆದ ಎಳೆ ಪ್ರಾಯ! ||

ಖಾಲಿ ಕೂತ ಗಳಿಗೆಗಳು
ಕಾಲೇಜು ಮನೆ ಚಹದಂಗಡಿಗಳು
ಕಾಲಯಾಪನೆ ಬಿಡುವ್ಹಗಲುಗಳು
ಅಕ್ಕಪಕ್ಕದ ಹಸುಗೂಸಲು! ||

ಸ್ಕೂಲ್ಹೋಗುವ ಮಕ್ಕಳಿಗೆ
ಚಾಕೊಲೇಟು ಕೊಡಿಸಿ ಮಾತಾಗೆ
ಕಾಡಿಸಿ ಛೇಡಿಸಿ ಅಳಿಸಿದ ಹಾಗೆ
ತಡಕಾಡಿ ಕಾಟ ಕೊಟ್ಟ ಬಗೆ! ||

ಚಹದಂಗಡಿ ಮಾಣಿ ಕಣಿ
ತಂದಿತ್ತ ಚಾ ಹಿಡಿದು ರೇಗಿಸಲಣಿ
ಶಾಲೆಗ್ಹೋಗದ ಬಾಲನ ಪುರವಣಿ
ಕಾಲೆಳೆದು ಹಾಸ್ಯದೇಣಿ! ||

ತುಂಡು ಸಮವಸ್ತ್ರ ತೊಟ್ಟು
ಗೆಳತಿಗೆ ಪಿಸುಗುಟ್ಟು ಗುಸುಗುಟ್ಟು
ಹೈಸ್ಕೂಲ್ಬೆಡಗಿಯದೇನಿದೆ ಸೊಟ್ಟು ?
ಹುಡುಕಲೆ ಹಿಂದೆ ಹೊರಟು! ||

———————————————————————
ನಾಗೇಶ ಮೈಸೂರು
———————————————————————

00506. ವಿರಹ…


00506. ವಿರಹ…
________________

ಪ್ರಾಯ / ವಿರಹದ ಸಹಸ್ರಾಕ್ಷನ ಕಬಂಧ ಬಾಹುವಿನಲಿ ಸಿಕ್ಕ ಜೀವದ ವಿಲವಿಲ ವದ್ದಾಟ ಮಾತಾಗಿ ಹೊರಬಿದ್ದ ತರಹ. ದೈಹಿಕ ಕಾಮನೆ, ಮಾನಸಿಕ ಭಾವನೆ ಹಾಗೂ ಇವೆರಡರ ನಡುವಿನ ಒದ್ದಾಟ, ತಲ್ಲಣ, ತುಮುಲಗಳ ಚಿತ್ರಣ..

ಬೆಂಕಿಯ ಅಲೆ ಮೈ ತಟ್ಟಿದೆ
ನಿಮಿರಿ ನಿಂತ ರೋಮ
ಪ್ರಜ್ವಲಿಸುವ ಸಲೆಯಾಗಿದೆ
ಒಡಲೊಳಗಿನ ಕಾಮ ||

ಒಳಗುಟ್ಟಿದೆ ಹೊರಗುಟ್ಟಿದೆ
ವೇದನೆ – ನಗು ಒಸಗೆ
ಒಣ ಮೌನದಲೇ ಘೀಳಿಟ್ಟಿದೆ
ಮರೆತ ಮನದ ಬೆಸುಗೆ… ||

ತುಟಿ ಮುತ್ತಿನ ಹನಿ ಹನಿಯಲಿ
ಬಿಸಿಯೇರಿದ ಬಯಕೆ
ಬಳಲಿ ಬೆಂದು ಬಿರುಕಾಗಿದೆ
ಕಾದು ನಿನ್ನಾ ಮನಕೆ…||

ಕೋಲಾಟದ ಬಡಿತಕ್ಕೆದೆ
ಏರಿಳಿದಿದೆ ಕಾವು
ಹದಿ ಹರೆಯಕೆ ಮುಪ್ಪಡರಿದೆ
ನೀನುಡಿಸಿದ ನೋವು…||

ನೆನಪಾಗದೆ ಬಿಸಿಯುಸಿರಲಿ
ಹೆದೆಯೇರಿದ ಇರುಳು
ಮತ್ತೇರಿಸಿ ಮನದಣಿಸಿದ
ಪರಿವಿಲ್ಲದ ಹಗಲೂ ? ||

ಸಾಕಾಗಿದೆ ಈ ವಿರಹದ
ದಳ್ಳುರಿಯಲಿ ನೋವು..
ಮರೆತೆಲ್ಲವ ಬರಬಾರದೇ
ನೀಗಿ ಮನದ ಬಾವು…||

– ನಾಗೇಶ ಮೈಸೂರು

00416. ಭಾವಕೊಂದು ಬಾವಿಕಟ್ಟೆ


00416. ಭಾವಕೊಂದು ಬಾವಿಕಟ್ಟೆ
_____________________

ಭಾವಕೊಂದು ಬಾವಿಕಟ್ಟೆ
ಹರಿಯಬಿಡದೆ ಕಾಪಿಟ್ಟೆ
ಕೆಸರು ಬಗ್ಗಡ ಬಿಡದಲ್ಲ
ಭಾವ ಹರಿಯದೆ ವಿಧಿಯಿಲ್ಲ ||

ಬಾವಿ ಕಟ್ಟೆ ಮಾತು
ಗೆಣೆಯನದೊ ಕೆಳೆಯದೊ
ರಾಟೆ ಹಗ್ಗ ಬಿಂದಿಗೆ ಭಾರ
ಎಳೆದದ್ದೆ ತಿಳಿಯಲಿಲ್ಲ..||

ಕೆರೆದಂಡೆಯ ಹಾಸುಗಲ್ಲಲಿ
ಸೀರೆ ಮೊಣಕಾಲಿಗೆತ್ತಿ ಕಟ್ಟೆ
ಬಟ್ಟೆ ಒಗೆವ ಲಯ ಕುಸುರಿ
ಸೀರೆ ನೀರಲರ್ಧ ನೀರೆಯಲರ್ಧ ||

ತುರುಬೆತ್ತಿ ಕಟ್ಟಿ ಸಿಂಬಿ
ಗೊಂಡೆಯ ತುದಿ ಜೋತಾಡಿ
ನೆತ್ತಿಯನೆತ್ತಿ ಹಿಡಿದ ಗಂಟದು
ಹುಡುಗಿ ಬೆಳೆದುಬಿಟ್ಟ ಬಗೆಯೇನು ? ||

ಬುಗ್ಗೆ ಬುಗ್ಗೆ ಉಕ್ಕುಕ್ಕಿ ಅಂತರಗಂಗೆ
ಚೆಲ್ಲಾಡುತಿಲ್ಲ ತುಂಬಿಲ್ಲಾ ತುಳುಕಿಲ್ಲ
ಅಲ್ಲೆಲ್ಲೊ ಹರಿದ ಹೊಳೆ ನೀರ್ಯಾಕೊ
ಬರಿ ಚೆಲ್ಲು ಚೆಲ್ಲು ನೀರೆ ಚಂಚಲ ಮನಸಾ ||

__________________________________
ನಾಗೇಶ ಮೈಸೂರು

00134. ದೇವರು ನಮಗೆ ಹಾಕಿದ ಟೋಪಿ


00134. ದೇವರು ನಮಗೆ ಹಾಕಿದ ಟೋಪಿ (ಮಕ್ಕಳ ಪದ್ಯ)
_____________________________________

ನಮ್ಮ ಸಾಮಾಜಿಕ ವಾತಾವರಣದಲ್ಲಿ, ಸ್ವಂತಿಕೆಗಿಂತ ಸಾಮೂಹಿಕತೆ ಹೆಚ್ಚಿನ ಪಾತ್ರ ವಹಿಸುತ್ತದೆ. ಹೀಗಾಗಿ ಸಣ್ಣ ಪುಟ್ಟ ನಿರ್ಧಾರದಿಂದ ಹಿಡಿದು, ದೊಡ್ಡ, ಮಹತ್ವದ ನಿರ್ಧಾರಗಳಿಗು ಅದೇ ಸೂತ್ರ ಕೆಲಸ ಮಾಡುತ್ತದೆ. ಅದರಲ್ಲೂ ಬಾಲ್ಯದಲ್ಲಂತೂ ವಯಸಿನ ಅಪ್ರಬುದ್ಧತೆಯ ಹೆಸರಿನಲ್ಲಿ ಎಲ್ಲಾ ನಿರ್ಧಾರಗಳನ್ನು ಹಿರಿಯರೆ ಕೈಗೊಳ್ಳುವುದೊ , ಅಥವಾ ಅವರ ಪ್ರಭಾವಲಯದ ಮಿತಿಯಿಂದ ಹೊರಬರದೆ ಅದಕ್ಕೆ ಪೂರಕವಾಗಿರುವಂತೆಯೆ ಮಕ್ಕಳು ನಿರ್ಧಾರ ತೆಗೆದುಕೊಳ್ಳುವುದೊ ಸಾಮಾನ್ಯವಾಗಿ ಕಂಡು ಬರುವ ಭಾವ. ಸರಿಯೋ ತಪ್ಪೊ ಎನ್ನುವ ಜಿಜ್ಞಾಸೆಯೊಂದು ಕಡೆಯಾದರೆ ಸಾಂದರ್ಭಿಕವಾಗಿ ಸರಿ ತಪ್ಪುಗಳ ತುಲನೆಯು ಬೇರೆ ಬೇರೆ ರೂಪ ತಾಳುವ ಅನಿವಾರ್ಯತೆಯ ಮತ್ತೊಂದು ಪರ್ಯಾಯ. ಕೊನೆಗೆಲ್ಲ ತಪ್ಪನ್ನು ದೇವರ ಮೇಳೆ ಆರೋಪಿಸಿ ಅವನಿಂದಲೆ ಎಲ್ಲಾ ಆದದ್ದು ಎಂದು ಅವನನ್ಬೆ ದೂಷಿಸುತ್ತಾ ಜಾಣತನದಿಂದ ಜಾರಿಕೊಳ್ಳುವ ಪರಿ. ಇದರ ಎರಡು ವಿಭಿನ್ನ ರೂಪಗಳನ್ನು (ಬಾಲ್ಯದ ಮತ್ತು ಪ್ರಾಯದ ಹೊದರಿನಲ್ಲಿ) ಬಿಂಬಿಸುವ ಜೋಡಿ ಕವನಗಳು – ದೇವರು ನಮಗೆ ಹಾಕಿದ ಟೋಪಿ….(ಮಿಕ್ಕಿದ್ದು ಕೊಂಡಿಯಲ್ಲಿ)

https://nageshamysore.wordpress.com/00134-%e0%b2%a6%e0%b3%87%e0%b2%b5%e0%b2%b0%e0%b3%81-%e0%b2%a8%e0%b2%ae%e0%b2%97%e0%b3%86-%e0%b2%b9%e0%b2%be%e0%b2%95%e0%b2%bf%e0%b2%a6-%e0%b2%ac%e0%b2%be%e0%b2%b2%e0%b3%8d%e0%b2%af%e0%b2%a6/

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು